

ಕುಂದಾಪುರದ ಮೆ| ಟಿ. ಎನ್. ಪ್ರಭು ಎಂಡ್ ಕೋ. ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆಯಲ್ಲಿ ತರಬೇತು ಪಡೆದ ಚೈತ್ರಾ ದಿನಕರ ಪ್ರಭು ಮೇ ತಿಂಗಳಲ್ಲಿ ನಡೆದ ಸಿ. ಎ. ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದು ಸಿ. ಎ. ಪದವಿ ಪಡೆದಿದ್ದಾರೆ.
ಇವರು ಭಟ್ಕಳ ಬೆಂಗ್ರೆಯ ಶಿರಾಲಿ ಮಾವಿನಕಟ್ಟೆ ನಿವಾಸಿಯಾಗಿದ್ದು, ದಿನಕರ ಪ್ರಭು ಮತ್ತು ದೀಪಾ ಡಿ. ಪ್ರಭು ಅವರ ಪುತ್ರಿ.