JANANUDI.COM NETWORK
ಮುಂಬೈ: ಮಹಾರಾಷ್ಟ್ರದ ಬಾರಾಮತಿಯ ಚಾ ಮಾರಾಟಗಾರನೊಬ್ಬ, ಪ್ರಧಾನಿ ನರೇಂದ್ರ ಮೋದಿಗೆ ಗಡ್ಡ ತೆಗೆಯುವುದಕ್ಕೆ 100 ರೂಪಾಯಿನ್ನು ಮನಿ ಒರ್ಡರ್ ಮೂಲಕ ಕಳಿಸಿಕೊಟ್ಟು, ಸಂದೇಶ ಪತ್ರವನ್ನು ಬರೆದಿದ್ದಾರೆ.
ಕಳೆದ ಒಂದೂವರೆ ವರ್ಷದದಿಂದ ಕೊರೋನಾ, ಲಾಕ್ ಡೌನ್ ನಿಂದ ದೇಶದ ಅಸಂಘಟಿತ ವಲಯ ತೀವ್ರವಾಗಿ ಕುಸಿತ ಗೊಂಡಿದೆ. ಇದರಿಂದ ತೀವ್ರವಾಗಿ ಬೇಸತ್ತ ಚಾ ವ್ಯಾಪಾರಿ ಪ್ರಧಾನಿ ಗಡ್ಡ ಬೆಳೆಸಿದ್ದಕ್ಕೆ ಅನಿಲ್ ಮೋರೆ, ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಅವರ ಸಂದೇಶ ಈ ರೀತಿ ಇದೆ “ಏನನ್ನಾದರೂ ಬೆಳೆಸುವುದಾದರೆ ದೇಶದ ಜನತೆಗೆ ಉದ್ಯೋಗದ ಅವಕಾಶಗಳನ್ನು ಬೆಳೆಸಿ, ಲಸಿಕೆಯನ್ನು ಹೆಚ್ಚಿಸಿ, ಈಗಿರುವ ವೈದ್ಯಕೀಯ ಸೌಲಭ್ಯಗಳನ್ನು ಬೆಳೆಸಿ” ಎಂದು ಪತ್ರದಲ್ಲಿ ಬರೆದಿದ್ದಾರೆ.
ಕಳೆದ 2 ಲಾಕ್ ಡೌನ್ ಗಳ ದೇಶೆಯಿಂದ ಕಂಗೆಟ್ಟಿರುವ ಜನತೆಯ ಸಮಸ್ಯೆಗಳು ವಾರಣೆಯಾಗುವುದನ್ನು ಪ್ರಧಾನಿ ಮೋದಿ ಖಾತ್ರಿಪಡಿಸಿಕೊಳ್ಳಬೇಕು ಎಂದು ಚಾ ಮಾರಾಟಗಾರ ಅನಿಲ್ ಮೋರೆ ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿಗಳ ಹುದ್ದೆ ದೇಶದ ಅತ್ಯುನ್ನತ ಹುದ್ದೆಯಾಗಿದೆ. ಪ್ರಧಾನಿಗಳ ಬಗ್ಗೆ ಅವರ ಆಡಳಿತದ ಬಗ್ಗೆ ಗೌರವವಿದೆ. ನನ್ನ ಉಳಿತಾಯದ ಹಣದಿಂದ 100 ರೂಪಾಯಿಗಳನ್ನು ನಾನು ಅವರಿಗೆ ಗಡ್ಡ ತೆಗೆಸಿಕೊಳ್ಳುವುದಕ್ಕಾಗಿ ಕಳಿಸುತ್ತಿದ್ದೇನೆ. ಅವರು ಅತ್ಯುನ್ನತ ನಾಯಕ ಅವರಿಗೆ ಅವಮಾನ ಮಾಡುವುದು ನನ್ನ ಉದ್ದೇಶವಲ್ಲ. ದೇಶದ ಬಡ ಜನತೆ ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಅವರ ಗಮನ ಸೆಳೆಯುವುದಕ್ಕಾಗಿ ಈ ರೀತಿ ಮಾಡಿದ್ದೇನೆ” ಎಂದು ಅನಿಲ್ ಮೋರೆ ತಿಳಿಸಿದ್ದಾರೆ.
ಅಲ್ಲದೆ ಕೋವಿಡ್-19 ನಿಂದ ಕುಟುಂಬ ಸದಸ್ಯರನ್ನು ಕಳೆದುಕೊಂಡಿರುವವರಿಗೆ 5 ಲಕ್ಷ ರೂಪಾಯಿ ಹಾಗೂ ಲಾಕ್ ಡೌನ್ ನಿಂದ ಸಂಕಷ್ಟ ಎದುರಿಸುತ್ತಿರುವವರಿಗೆ 30,000 ರೂಪಾಯಿಗಳನ್ನು ನೀಡುವುದಕ್ಕೆ ಪ್ರಧಾನಿಗಳಿಗೆ ಪತ್ರದ ಮೂಲಕ ಒತ್ತಾಯ ಮಾಡಿದ್ದೇನೆ’ ಎಂದು ಕೂಡ ಅನಿಲ್ ಮೋರೆ ಹೇಳಿದ್ದಾರೆ.