

ಮಂಗಳೂರು;ಇಂದಿಲ್ಲಿ ಶನಿವಾರ ಸಂಜೆ ಸುಮಾರು 6.00 ಗಂಟೆ ವೇಳೆಗೆ ಮಂಗಳೂರು ಪದುವ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ರೆಡ್ಮಿಕ್ಸ್ ಕಾಂಕ್ರೀಟ್ ಸಾಗಿಸುವ ಟ್ರಕ್ನ ನಿರ್ಲಕ್ಷ್ಯದಿಂದಾಗಿ, ಮಾರ್ಗದಲ್ಲಿ ಕಾಂಕ್ರೀಟ್ ಚೆಲ್ಲಿದ್ದರಿಂದ ದ್ವಿಚಕ್ರ ವಾಹನವೊಂದು ಜಾರಿ ರಸ್ತೆಗೆ ಅಪ್ಪಳಿಸಿತು. ಆದ್ದರಿಂದ ಉಳಿದ ವಾಹನಗಳ ಸಂಚಾರಕೆಜೆ ಅಡ್ಡಿಯಾಯಿತು.
ಇದನ್ನು ಗಮನಿಸಿದ ಸ್ಥಾನಿಯವಾಗಿ ಧರ್ಮಾರ್ಥ ಸೇವೆ ನೀಡುತ್ತಿರುವ ಟ್ರಾಫಿಕ್ ವಾರ್ಡನ್ ಫ್ರಾನ್ಸಿಸ್ ಮ್ಯಾಕ್ಸಿಮ್ ಮೊರಾಸ್ ತಕ್ಷಣವೇ ಎಚ್ಚರ ವಹಿಸಿ ಪೊರಕೆಯೊಂದನ್ನು ತಂದು ರಸ್ತೆಯನ್ನು ಸ್ವಚ್ಛಗೊಳಿಸಿ ತನ್ನ ಪ್ರಾಮಾಣಿಕ ಸೇವೆಗಾಗಿ ಸಾರ್ವಜನಿಕರ ಪ್ರಶಂಗೆ ಪಾತ್ರರಾದರು.

