ಶಿಕ್ಷಕರುಹಾಗೂ ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಅಧ್ಯಕ್ಷರ ಬೀಲ್ಕೋಡುಗೆ ಸಮಾರಂಭ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ ಸರ್ಕಾರಿ ಸೇವೆಯ ನಂತರ ನಿವೃತ್ತಿ ಜೀವನ ಸುಖ, ಶಾಂತಿ, ನೆಮ್ಮದಿ,
ಸಂತೋಷದ ಕ್ಷಣಗಳನ್ನು ತರವಂತಾಗಲಿ ಎಂದು ಪಿಎಲ್‍ಡಿ ಬ್ಯಾಂಕ್
ಅಧ್ಯಕ್ಷ ದಿಂಬಾಲ ಆಶೋಕ್ ತಿಳಿಸಿದರು.ತಾಲ್ಲೂಕಿನ ರೋಣೂರು ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಅವರಣದಲ್ಲಿ ಹೆಚ್.ಆರ್. ರಮೇಶ್‍ರೆಡ್ಡಿ ದೈಹಿಕ ಶಿಕ್ಷಕರುಹಾಗೂ ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘ ಅಧ್ಯಕ್ಷರ ಬೀಲ್ಕೋಡುಗೆ ಸಮಾರಂಭ ಹಾಗೂ ಶಿಕ್ಷಕರ ದಿನಾಚಾರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಆಶೋಕ್ ಅತ್ಮೀಯ ಸ್ನೇಹಿತರು ನಮ್ಮ ಹಿರಿಯರಾದ ರಮೇಶ್‍ರೆಡ್ಡಿಯವರಿಗೆ ದೇವರುಆಯೋ ಆರೋಗ್ಯ ಭಾಗ್ಯ ನೀಡಿ ಅವರ ನಿವೃತ್ತಿ ಜೀವನ ಸುಖವಾಗಿ ಇರಲಿ ಎಂದು ಆಶಿಸಿದರು. ರೋಣೂರು ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ ಆರ್.ಎನ್.ಚಂದ್ರಶೇಖರ್ ಮಾತನಾಡಿ ಶಿಕ್ಷಕರ ಸೇವೆ ಪವಿತ್ರವಾದದ್ದು ಶಿಕ್ಷಕರಾಗಿ ಉತ್ತಮ ಸೇವೆ ಸಲ್ಲಿಸುವ ಜೊತೆಗೆ ಗ್ರಾಮದ ಈ ಮಾದರಿ ಶಾಲೆಯನ್ನು ಹೊಸರೂಪ ನೀಡಿ ಸಾಕಷ್ಟು ಶ್ರಮಿಸಿದ್ದಾರೆ.

ಅವರ ವಿಶ್ರಾಂತಿ ಜೀವನ ಸುಖಮಯವಾಗಿರಲಿ ಯಾವುದೇ ಸಮಯದಲ್ಲಿ ಇಂತಹ ಕೆಲಸ ಆಗಬೇಕೆಂದರೆ ಅದಕ್ಕೆ ಯಾವುದೇ ಮಾತನ್ನು ಹೇಳದೆ ನಮ್ಮ ಒಟ್ಟಿಗೆ ಸಹಕರಿಸುತ್ತಿದ್ದರು. ಅವರ ಸೇವೆ ಅನ್ಯೊನ್ಯವಾಗಿದೆ. ಇನ್ನಷ್ಟು ಸಮಾಜ ಸೇವೆಯಲ್ಲಿ ತೊಡಗಲಿ ಅವರ ಕುಟುಂಬಕ್ಕೆ ದೇವರು ಒಳ್ಳೆಯದು ಮಾಡಲಿ ಎಂದು ಹೇಳಿದರು. ಇ ಓ ಎಸ್ ಅನಂದ್ ಮಾತನಾಡಿ ಸರ್ಕಾರಿ ನೌಕರಿಗೆ ಸೇರಿದ ಮೇಲೆ ನಿವೃತ್ತಿ ಆಗುವುದು ಪ್ರತಿಯೊಬ್ಬರು ಸಹಜ ಇದರ ಮಧ್ಯೆ ಅವರ ಸಾದನೆ ಅವರು ಸಮಾಜಕ್ಕೆ ನೀಡಿದ ಕೊಡಿಗೆಗಳು ಇಂದು ನೆನೆಸಿಕೊಳ್ಳುತ್ತಾರೆ. ಶಿಕ್ಷಕರು ಸೇವಾ ಅವಧಿಯಲ್ಲಿ ಅವರು ಮಾಡಿರುವ ಕೆಲಸಗಳು ಮುಂದಿನ ಪೀಳಿಗೆಗೂ ನನೆಸಿಕೊಳ್ಳುತ್ತಾರೆ. ಶಿಕ್ಷಕರ ವೃತ್ತಿ ಸಾಮಾಜಿಕ ಬದಲಾವಣೆ ತರುವಂತಹ ಹುದ್ದೆ ಆಗಿದೆ. ಈ ಸೇವೆ ಸಿಗುವುದು ತುಂಬ ಅದೃಷ್ಟವಂತರಿಗೆ ಪ್ರತಿಯೊಬ್ಬರು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ವೃತ್ತಿಗೌರವ ಎತ್ತಹಿಡಿಯಬೇಕು.

ಹುಟ್ಟು ಉಚಿತ ಸಾವು ಖಚಿತ ಇದರ ಮಧ್ಯ ನಾವು ಏನನ್ನಾ ಒಂದು ಸಾದನೆ ಮಾಡಿ ಮುಂದಿನ ಪೀಳಿಗೆಗೆ ಅದು ಸ್ಪೂರ್ತಿಯಾಗಬೇಕು. ರಮೇಶ್‍ರೆಡ್ಡಿ ಉತ್ತಮಸೇವೆಯನ್ನು ಸಲ್ಲಿಸಿ ಇಂದು ನಿವೃತ್ತಿಯಾಗುತ್ತಿದ್ದಾರೆ. ಅವರ ಜೀವನ ಸುಂದರವಾಗಿರಲಿ ಎಂದು ತಿಳಿಸಿದರು. ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಬಂಗವಾದಿ ನಾಗರಾಜ್ ಮಾತನಾಡಿ ದೈಹಿಕ ಶಿಕ್ಷಕರಾಗಿ, ತಾಲ್ಲೂಕು ಅಧ್ಯಕ್ಷರಾಗಿ ಇಂದು ನಿವೃತ್ತಿ ಆಗುತ್ತಿರುವ ರಮೇಶ್‍ರೆಡ್ಡಿ ಉತ್ತಮ ವ್ಯಕ್ತಿತ್ವ ಗುಣಗಳನ್ನು ಹೊಂದುರವ ಇವರು ತಾಲ್ಲೂಕು ನೌಕರರ ಸಂಘಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಅವರು ಹತ್ತಿರ ಇಂತಹ ಸಹಾಯ ಆಗಬೇಕು ಅಂದಾಗ ಯಾವುದಕ್ಕೆ ಅಡ್ಡಿ ಹೇಳದೆ ನಾನು ಇದ್ದೀನಿ ಎಂಬ ದೈರ್ಯವನ್ನು ಹೇಳುತ್ತಿದ್ದರು. ಇಂದು ನಿವೃತ್ತಿ ಆಗುತ್ತಿರುವ ಇವರಿಗೆ ಭಗವಂತ ಒಳ್ಳೆಯದು ಮಾಡಲಿ ಎಂದರು.

ಇದೇ ಸಂದರ್ಭದಲ್ಲಿ ಮುಖಂಡರಾದ ಕೆ.ಕೆ. ಮಂಜುನಾಥ್, ನಾಗದೇನಹಳ್ಳಿ ಎನ್. ಆರ್. ಚಂದ್ರಶೇಖರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಸುಲೋಚನ, ಸರ್ಕಾರಿ ನೌಕರ ¸ಂಘದ ಗೌರವಾಧ್ಯಕ್ಷ, ಹೊದಲಿ ಎನ್. ಶ್ರೀನಿವಾಸಯ್ಯ, ನೌಕರ ಸಂಘದ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎನ್. ಬೈಯ್ಯಾರೆಡ್ಡಿ, ಮಾಜಿ ಅಧ್ಯಕ್ಷ ಗೌನಿಪಲ್ಲಿ ರವಿ ಕುಮಾರ್, ಶಿಕ್ಷಕರಾದ ರಾಮಕೃಷ್ಣಾರೆಡ್ಡಿ, ಕೆ.ಶ್ರೀನಿವಾಸ್, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಂದೀಶ್, ಪ್ರತಾಪ್, ಹೆಚ್.ವಿ. ತಿಪ್ಪಾರೆಡ್ಡಿ, ಪುರಸಬೆ ಸದಸ್ಯ ಅನಿಸ್ ಅಹಮದ್, ಗ್ರಾಮದ ಹಿರಿಯ ಮುಖಂಡ ರಾಮಣ್ಣ, ಚೇತನ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟಸ್ವಾಮಿ, ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಹೆಚ್.ವಿ. ಆಶೋಕ್ ಕುಮಾರ್, ಶಾಲೆಯ ಸಿಬ್ಬಂದಿ ಇನ್ನಿತರರು ಹಾಜರಿದ್ದರು.