ಬಂಗಾರಪೇಟೆ, ನ.20, ರಾಜ್ಯದ ಬರ ನಿರ್ವಹಣೆಗೆ ಕೇಂದ್ರ ಸರ್ಕಾರ 25 ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿ ಕುಡಿಯುವ ನೀರು ಜಾನುವಾರುಗಳಿಗೆ ಮೇವು ಬೆಳೆ ಪರಿಹಾರ ವಿತರಣೆ ಮಾಡುವಂತೆ ಮಾನ್ಯ ಪ್ರಧಾನ ಮಂತ್ರಿಗಳನ್ನು ಒತ್ತಾಯಿಸಿ ನ.25 ರ ಶನಿವಾರ ಒಣ ಮೇವು , ಜಾನುವಾರುಗಳ ಸಮೇತ ರೈಲ್ವೆ ನಿಲ್ದಾಣ ಮುತ್ತಿಗೆ ಹಾಕಲು ಅರಣ್ಯ ಉದ್ಯಾನವನದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.
ಗ್ಯಾರಂಟಿಗಳ ಅನುಕಂಪದ ಮೇಲೆ ಅಧಿಕಾರಕ್ಕೆ ಬಂದಿರುವ ರಾಜ್ಯ ಸರ್ಕಾರ ರಾಜ್ಯದ 224 ತಾಲ್ಲೂಕುಗಳನ್ನು ಬರ ಪೀಡಿತವೆಂದು ಘೋಷಣೆ ಮಾಡಿ ಬರ ನಿರ್ವಹಣೆಗೆ ಅನುದಾನಕ್ಕಾಗಿ ಕೇಂದ್ರ ಸರ್ಕಾರದ ಮೇಲೆ ಮುಖ ಮಾಡಿ ರಾತ್ರಿ ವೇಳೆ ಕಾಣುವ ನಕ್ಷತ್ರಗಳನ್ನು ಹಗಲು ವೇಳೆ ಸೂರ್ಯನ ಬೆಳಕಿನಲ್ಲಿ ಬರದಿಂದ ತತ್ತರಿಸಿರುವ ರೈತರಿಗೆ ಚಂದಮಾಮ ತೋರಿಸುತ್ತಿದ್ದಾರೆಂದು ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಸರ್ಕಾರಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಬಿಂಗಿ ರೋಗದಿಂದ ಟೊಮೊಟೊ ನಷ್ಟ ಕಳಪೆ ಬಿತ್ತನೆ ಬೀಜದಿಂದ ಆಲೂಗಡ್ಡೆ ನಷ್ಟ, ಕಾಡಾನೆಗಳಿಂದ ರಾಗಿ ಬೆಳೆ ನಷ್ಟ ಸರ್ಕಾರವನ್ನು ನಂಬಿರುವ ರೈತರಿಗೆ ಪರಿಹಾರದ ನಷ್ಟವಾಗಿದೆ ಎಂದು ಸಭೆಯಲ್ಲಿ ವ್ಯಂಗ್ಯವಾಡಿದರು .
ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಬರದಿಂದ ತತ್ತರಿಸಿರುವ ರೈತ ಕೂಲಿ ಕಾರ್ಮಿಕರ ರಕ್ಷಣೆ ಮಾಡಬೇಕಾದ ಸರ್ಕಾರ ಕುಂಭದ್ರೋಣ ನಿದ್ರೆಯಲ್ಲಿದೆ. ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಮೇಲೆ ಆರೋಪ ಮಾಡಿಕೊಂಡು ರಾಜ್ಯದ ಜನರ ದಿಕ್ಕು ತಪ್ಪಿಸುವ ಮೂಲಕ ನೊಂದಿರುವ ಜನಸಾಮಾನ್ಯರನ್ನು ಮತ್ತಷ್ಟು ನೋಯಿಸುತ್ತಿದ್ದಾರೆಂದು ಆರೋಪ ಮಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ದುಡಿಯುವ ಕೈಗೆ ನರೇಗಾದಲ್ಲಿ 250 ದಿನ ಮಾನವದಿನಗಳನ್ನು ನೀಡುವ ಜೊತೆಗೆ ಜಾನುವಾರುಗಳ ರಕ್ಷಣೆಗೆ ಪ್ರತಿ ಪಂಚಾಯಿತಿಗೊಂದು ಗೋಶಾಲೆ ತೆರೆದು ಮೇವು ನೀರು ಒದಗಿಸಬೇಕು ಬರದಿಂದ ನಷ್ಟವಾಗಿರುವ ಪ್ರತಿ ಎಕರೆಗೆ ಕನಿಷ್ಠ 25 ಸಾವಿರ ಬೆಳೆ ಪರಿಹಾರ ವಿತರಣೆ ಮಾಡಲು ಕೇಂದ್ರ ಸರ್ಕಾರ 25 ಸಾವಿರ ಕೋಟಿ ಅನುದಾನ ಬಿಡುಗಡೆಗಾಗಿ ನ.25 ರ ಶನಿವಾರ ಜಾನುವಾರುಗಳ ಸಮೇತ ರೈಲ್ವೆ ನಿಲ್ದಾಣ ಮುತ್ತಿಗೆ ಹಾಕಿ ಕೂಲಿ ಕಾರ್ಮಿಕರ ರಕ್ಷಣೆ ಮಾಡುವಂತೆ ಮಾನ್ಯ ಪ್ರಧಾನ ಮಂತ್ರಿಗಳನ್ನು ಒತ್ತಾಯ ಮಾಡುವ ನಿರ್ಧಾರವನ್ನು ಸಭೆಯಲ್ಲಿ ತಿರ್ಮಾನಿಸಲಾಯಿತು.
ಸಭೆಯಲ್ಲಿ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ತಾ.ಅ ಕದರಿನತ್ತ ಅಪ್ಪೋಜಿರಾವ್, ಲಕ್ಷಣ್, ಗೋವಿಂದಪ್ಪ, ಕಿರಣ್, ಚಾಂದ್ಪಾಷ, ಮುನಿಕೃಷ್ಣ, ವಿಶ್ವ, ರಾಮಸಾಗರ ವೇಣು, ಸುರೇಶ್ಬಾಬು, ಶೈಲಜ, ರಾಧಮ್ಮ, ನಾಗರತ್ನ , ಚೌಡಮ್ಮ, ಸುಗುಣ, ಮುಂತಾದವರಿದ್ದರು.