ಕುಂದಾಪುರ,ಸೆ.8: ರೋಜಾರಿ ಅಮ್ಮನವರ ಇಗರ್ಜಿಯಲ್ಲಿ ಮಾತೆ ಮೇರಿಯ “ಮೊಂತಿ ಫೆಸ್ತ್” ಹುಟ್ಟು ಹಬ್ಬವನ್ನು ಬಹಳ ಶ್ರದ್ದಾಭಕ್ತಿ ಗೌರವ ಹಾಗೂ ವಿಜ್ರಂಭಣೆಯಿಂದ ಆಚರಿಸಲಾಯಿತು. ಚಿಕ್ಕ ಮಕ್ಕಳು ಬಾಲಾ ಮೇರಿ ಮಾತೆಗೆ ಪುಷ್ಪಗಳನ್ನು ಅರ್ಪಿಸುವ ಮೂಲಕ ಹಬ್ಬಕ್ಕೆ ಚಾಲನೆಯನ್ನು ನೀಡಿದರು. ನಂತರ ಹೊಸ ತೆನೆಯನ್ನು ಸಹಾಯಕ ಧರ್ಮಗುರು ವಂ| ಅಶ್ವಿನ್ ಆರಾನ್ಹಾ ಆಶಿರ್ವದಿಸಿ ಪವಿತ್ರ ಬಲಿದಾನವನ್ನು ಅರ್ಪಿಸಿ ಸಂದೇಶ ನೀಡಿದರು.
‘ಮೇರಿ ಮಾತೆ ಎಸುವಿನ ತಾಯಿ, ನಮ್ಮನ್ನು ಪಾಪಗಳಿಂದ ವಿಮುಕ್ತಿಗೊಳಿಸಲು ಹುಟಬೇಕಾಗಿದ್ದ ಯೇಸುವಿನ ಜನನಕ್ಕೆ ಯೋಗ್ಯಳಾದ ಮೇರಿ ಮಾತೆಯನ್ನು ದೇವನು ಆರಿಸಿದ್ದನು, ಮೇರಿ ಮಾತೆಯಿಂದ ನಮಗೆ ಯೇಸುವಿನ ಸಮೀಪಕ್ಕೆ ಹೋಗಲು ಸುಲಭವಾಗುತ್ತದೆ. ಮೇರಿ ಮಾತೆ ನಮಗೆ ಯೇಸು ಕ್ರಿಸ್ತರು ತೋರಿಸಿದ ದಾರಿಯನ್ನು ನಮಗೆ ತೋರಿಸುತ್ತಾರೆ. ಮೇರಿ ಮತೆ ಮತ್ತು ಸಂತ ಜೋಸೆಫರಿಗೆ ಕಷ್ಟ ಸಂಕಶ್ಟಗಳು ಬರಲಿಲ್ಲವೆ? ಬಂದಿದೆ, ಆದರೆ ಅವೆಲ್ಲವನ್ನು ಅವರು ಸಹಿಸಿಕೊಂಡು ದೇವರ ಆಣತಿಯಂತೆ ವಿಧೇಯರಾಗಿ ಜೀವಿಸಿ ಪುಣ್ಯವಂತರಾದದು. ಅವರು ತಮ್ಮ ಕುಟುಂಬವನ್ನು ಪವಿತ್ರ ಕುಟುಂಬವನ್ನಾಗಿ ಮಾಡಿದರು. ಅದರಂತೆ ನಾವು ನಮ್ಮ ಕುಟುಂಬವನ್ನು ಪವಿತ್ರ ಕುಟುಂಬಗಳನ್ನಾಗಿ ಪರಿವರ್ತಿಸಬೆಕು. ಇದು ಕುಟುಂಬದ ಹಬ್ಬ. ಇಂದು ನಾವು ಮೇರಿ ಮಾತೆಯ ಹಬ್ಬವನ್ನು ಬೆಳೆಗಳ ಹಬ್ಬವೆಂದು ಕೂಡ ಆಚರಿಸುತ್ತೇವೆ, ದೇವರು ನಮಗೆ ಪ್ರಕ್ರತಿ ಮುಖಾಂತರ ನಾನಾ ವಿಧಗಳಿಂದ ಪೋಷಿಸುತ್ತಾ ಬಂದಿದ್ದಾನೆ, ಅದಕ್ಕೆ ನಮಗೆ ಬೆಳೆಗಳನ್ನು ದಯಪಾಲಿಸಿದಕ್ಕಾಗಿ ಕ್ರತ್ನಜ್ನತೆಯನ್ನು ಸಲ್ಲಿಸುವ ಹಬ್ಬ. ಜೊತೆಗೆ ಈ ಹಬ್ಬವನ್ನು ಹೆಣ್ಣಿಗೆ ಸಮರ್ಪಿಸಿದ್ದೇವೆ, ಕಾರಣ ಮೇರಿ ಮಾತೆ ಪಾಪ ಕಳಂಕಿತಳು, ಮೇರಿ ಮಾತೆ ಎಲ್ಲರಿಗೂ ಆದರ್ಶೆ, ಅವಳ ಆದರ್ಶವನ್ನು ನಮ್ಮ ಹೆಣ್ಣು ಮಕ್ಕಳು ಪಾಲಿಸಬೇಕು” ಎಂದು ಅವರು ಸಂದೇಶ ನೀಡಿದರು.
ಚರ್ಚಿನ ಪ್ರಧಾನ ಧರ್ಮಗುರು ಅ|ವಂ| ಸ್ಟ್ಯಾನಿ ತಾವ್ರೊ ಹಬ್ಬದ ಶುಭಾಶಯಗಳನ್ನು ಕೋರಿ ವಂದನಾರ್ಪಣೆ ಮಾಡಿದರು. ಬೆಳಾಂಬೆಳ್ಳಗ್ಗೆಯಿಂದ ಮಳೆಯ ಆರ್ಭಟ ಜೋರಾಗಿತ್ತು, ಆದರೆ ಮಳೆಯನ್ನು ಲೆಕ್ಕಿಸದೆ, ಬ್ಯಾಂಡು ವಾದ್ಯಗಳ ಜೊತೆ ಗುರಿಕಾರರು ಹೊಸ ತೆನೆಗಳನ್ನು ಹಿಡಿದುಕೊಂಡು, ಭಕ್ತಾಧಿಗಳೊಂದಿಗೆ, ಬ್ಯಾಂಡು ಗಾಯನದೊಂದಿಗೆ ಬಾಲ ಮೇರಿ ಮಾತೆಯ ಮೂರ್ತಿಯನ್ನು ಭಕ್ತಿ ಶ್ರದ್ದಾಪೂರ್ವಕವಾಗಿ ಇಗರ್ಜಿಯಿಂದ ಮೆರವಣಿಗೆ ಹೊರಟು ಪುನ: ತಿರುಗಿ ಚರ್ಚಿನೊಳಗೆ ತಂದು, ಎಲ್ಲಾ ಕುಟುಂಬದವರಿಗೆ ತೆನೆಗಳನ್ನು ಹಂಚಲಾಯಿತು.ಮಕ್ಕಳಿಗೆ ಕಬ್ಬುಗಳನ್ನು ಹಂಚಲಾಯಿತು.