ಕನ್ನಡಾಭಿಮಾನಿ ಡಾ.ರಾಜ್ ಸಂಘಟನೆ ವತಿಯಿಂದ ಸಂಭ್ರಮದ ರಾಜ್ಯೋತ್ಸವ

ಕುಂದಾಪುರ :ಕನ್ನಡಾಭಿಮಾನಿ ಡಾ. ರಾಜ್ ಕುಮಾರ್ ಸಂಘಟನೆ ಇದರ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಹೊಸ ಬಸ್ ನಿಲ್ದಾಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ದೀಪ ಬೆಳಗಿಸುವುದರ ಮೂಲಕ ಹಿರಿಯ ನ್ಯಾಯವಾದಿ ಶಿರಿಯಾರ ಮುದ್ದಣ್ಣ ಶೆಟ್ಟಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು
ನಾಡ ಧ್ವಜ ಧ್ವಜಾರೋಹಣ ವನ್ನು ಮಾನ್ಯ ಠಾಣಾಧಿಕಾರಿ ವಿನಯ್ ಕೊಲ೯ಪಾಡಿ ಅವರು ನೆರವೇರಿಸಿ ಶುಭಾಶಯ ಕೋರಿದರು.

ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ರತ್ನಾಕರ ಪೂಜಾರಿ ವಹಿಸಿದ್ದರು. ಅತಿಥಿಗಳಾಗಿ ಗಾಳಿ ಮಾಧವ ಖಾರ್ವಿ, ಪ್ರಭಾಕರ ಖಾರ್ವಿ ಸೂರಜ್ ಭಟ್ ಆಗಮಿಸಿದ್ದರು. ಪ್ರಣಮ್ಯ ಡಿ ಪೂಜಾರಿ,ಹಾಗೂ ಪ್ರಥಮೇಶ್ ಡಿ ಪೂಜಾರಿ ಪ್ರಾರ್ಥನೆ ಗೈದರು .ಪ್ರಾಸ್ತಾವಿಕ ನುಡಿ ಯನ್ನು ಹೆಚ್.ಡುಂಢಿರಾಜ್ ಪೂಜಾರಿ ವಾಚಿಸಿದರು. ಆಗಸ್ಟಿನ್ ಡಿಸೋಜ ಹಾಗೂ ಶ್ರೀಧರ್ ಗಾಣಿಗ ಅವರ ಮುಂದಾಳತ್ವದಲ್ಲಿ ಸಾಮೂಹಿಕವಾಗಿ ನಾಡ ಗೀತೆ ಹಾಡಲಾಯಿತು.

ಸಂಘದ ಗಾಳಿ ಸಚಿನ್ ಖಾರ್ವಿ, ಕಿಶನ್ ಖಾವಿ೯, ವಿಘ್ನೇಶ್ ಖಾವಿ೯, ನವೀನ್ ಕುಮಾರ್,ನಾಗರಾಜ್ ಮೊವಾಡಿ, ಶಿವರಾಜ್ ಖಾರ್ವಿ, ಲಕ್ಷ್ಮೀನಾರಾಯಣ ಆಚಾರ್ಯ, ದಯಾ ನಾಯಕ್ ಮುಂತಾದವರು ಪಾಲ್ಗೊಂಡಿದ್ದರು.
ನಿರೂಪಣೆಯನ್ನು ಹುಸೇನ್ ಹೈಕಾಡಿ , ಧನ್ಯವಾದಗಳನ್ನು ಪತ್ರಕರ್ತ ಮಝರ್ ಕುಂದಾಪುರ ಅರ್ಪಿಸಿದರು.