ಕೋಲಾರ., ಆ. 3 : ಕೋಲಾರ ತಾಲ್ಲೂಕು, ನರಸಾಪುರ ಸಮೀಪದ ನಾಗಲಾಪುರ ಗ್ರಾಮದ ಶ್ರೀಮದ್ ವೀರಧರ್ಮ ಸಿಂಹಾಸನ ಸಂಸ್ಥಾನ ಮಠದ ಶ್ರೀಗಳಿಂದ 12ನೇ ವರ್ಷದ ಶ್ರಾವಣ ಶಿವಸಂಜೆ ಶಿವಾನುಭವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಶ್ರೀಮದ್ ರಂಬಾಪುರಿ ಪೀಠದ ನಾಗಲಾಪುರ ವೀರಧರ್ಮ ಸಿಂಹಾಸನ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರ ಸಾನ್ನಿದ್ಯದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಲೋಕಕಲ್ಯಾಣಾರ್ಥವಾಗಿ ಕ್ರೋಧಿನಾಮ ಸಂವತ್ಸರ ಶ್ರಾವಣ ಮಾಸದ ಮನೆ ಮನೆಗಳಲ್ಲಿ ಶ್ರಾವಣ ಶಿವಸಂಜೆ, ಮಹಾ ಶಿವಪೂಜೆ ಶಿವಾನುಭವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಶ್ರಾವಣ ಮಾಸದ ಪ್ರಥಮ ದಿನವಾದ ಆ.5 ರ ಸೋಮವಾರದಂದು ಸಂಜೆ 5 ಗಂಟೆಗೆ ಕೋಲಾರದ ಅರಳೇಪೇಟೆಯಲ್ಲಿನ ಶ್ರೀ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಇಷ್ಟಲಿಂಗ ಶಿವಪೂಜೆ ಯೊಂದಿಗೆ ಪ್ರಾರಂಭೋತ್ಸವ ನಡೆಯುವುದು, ಅದೇ ರೀತಿ ಶ್ರಾವಣ ಮಾಸದ ಕೊನೆಯ ದಿನವಾದ ಸೆ.1 ರಂದು ಭಾನುವಾರ ಸಂಜೆ ನಾಗಲಾಪುರ ಮಠದಲ್ಲಿ ಶ್ರಾವಣ ಶಿವಸಂಜೆಯ ಸಮಾರೋಪ ಸಮಾರಂಭವು ಇಷ್ಟಲಿಂಗ ಮಹಾಪೂಜೆಯೊಂದಿಗೆ ನಡೆಯುವುದು.
ಆ.5 ರಿಂದ ಸೆ.1ರ ತನಕ ತಿಂಗಳು ಪೂರ್ತಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವಿವಿದೆಡೆಗಳಲ್ಲಿ ಮನೆ ಮನೆಗಳಲ್ಲಿ ಶ್ರಾವಣ ಶಿವಪೂಜೆ ಶಿವಾನುಭವ ಕಾರ್ಯಕ್ರಮವನ್ನು ನಾಗಲಾಪುರ ಮಠಾಧ್ಯಕ್ಷರಾದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರ ಸಾನ್ನಿದ್ಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರಾವಣ ಶಿವಸಂಜೆ ಶಿವಾನುಭವ ಕಾರ್ಯಕ್ರಮ ಯಶಸ್ವಿಗೊಳಿಸಲು ಹಾಗೂ ಭಗವಂತಹ ಕೃಪೆಗೆ ಪಾತ್ರರಾಗಲು ಶ್ರೀಮದ್ ನಾಗಲಾಪುರ ವೀರಧರ್ಮ ಸಿಂಹಾಸನ ಸಂಸ್ಥಾನ ಮಠದ ಪ್ರಕಟಣೆಯಲ್ಲಿ ಕೋರಲಾಗಿದೆ.