ಗುಲ್ಬರ್ಗಾಃ ಸಪ್ಟೆಂಬರ್ 8ನೇ ತಾರೀಖಿನಂದು ಗುಲ್ಬರ್ಗಾ ಧರ್ಮ ಕ್ಷೇತ್ರದ ಆರೋಗ್ಯ ಮಾತೆ ದೇವಾಲಯ ಮರಿಯಾಶ್ರಮ ಜಲಸಂಗೀಯಲ್ಲಿ ಮಾತೆ ಮರಿಯಮ್ಮನವರ ಜಯಂತಿಯನ್ನು ಆಚರಿಸಲಾಯಿತು. ಈ ಒಂದು ಆಚರಣೆ ನವೀನ ಪ್ರಾರ್ಥನೆಯೊಂದಿಗೆ ಹಾಗೂ ಮೆರವಣಿಗೆಯೊಂದಿಗೆ ಪ್ರಾರಂಭವಾಯಿತು ತದನಂತರ ಆಡಂಬರದ ದಿವ್ಯವಲಿ ಪೂಜೆ ಗುಲ್ಬರ್ಗ ಧರ್ಮ ಕ್ಷೇತ್ರದ ಧರ್ಮಾದ್ಯಕ್ಷರಾದ ಪರಮಪೂಜ್ಯ ರಾಬರ್ಟ್ ಮೈಕಲ್ ಮಿರಂಡರವರು ದಿವ್ಯಬಲಿ ಪೂಜೆಯನ್ನು ಅರ್ಪಿಸಿ ದೇವರ ವಾಕ್ಯವನ್ನು ಭಕ್ತಾದಿಗಳಿಗೆ ಮನಮುಟ್ಟುವ ಹಾಗೆ ಬೋಧಿಸಿದರು ಈ ಒಂದು ಹಬ್ಬದ ವಿಶೇಷತೆ ಏನೆಂದರೆ . ಮಾತೆ ಮರಿಯಳ ಜಯಂತಿ, ಹೆಣ್ಣು ಮಕ್ಕಳ ದಿನಾ ಹಾಗೂ ಹೊಸ ಬೆಳೆಗಳ ಆಶೀರ್ವಚನ. ಈ ಒಂದು ವಿಶೇಷತೆಯ ಬಗ್ಗೆ ಧರ್ಮಾದ್ಯಕ್ಷರು ಎಲ್ಲ ಭಕ್ತಾದಿಗಳಿಗೆ ತಿಳಿಸಿದರು, ಕೇಂದ್ರದ ಗುರುಗಳಾದ ಫಾದರ್ ವಿನ್ಸೆಂಟ್ ತೋರಸ್, ಫಾದರ್ ಸಚಿನ್ ಕ್ರಿಸ್ಟಿ, ಡಿಕನ್ ಫ್ರಾನ್ಸಿಸ್ ಹಾಗೂ ಅನೇಕ ಕನ್ಯಾ ಭಗಿನಿಯರು, ಅನೇಕ ಭಕ್ತಾದಿಗಳು ಹಾಜರಿದ್ದರು. ದಿವ್ಯ ಬಲಿ ಪೂಜೆ ನಂತರ ಬೈಬಲ್ ರಸಪ್ರಶ್ನೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಬಹುಮಾನವನ್ನು ಧರ್ಮಾದ್ಯಕ್ಷರು ವಿತರಿಸಿದರು.
ತದನಂತರ ಎಲ್ಲ ಭಕ್ತಾದಿಗಳಿಗೆ ಸಹಭೋಜನವನ್ನು ಏರ್ಪಡಿಸಲಾಗಿತ್ತು, ಸಹ ಭೋಜನದ ನಂತರ ಎಲ್ಲರಿಗೂ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು ಇದರಲ್ಲಿ ಗೆದ್ದವರಿಗೆ ಬಹುಮಾನವನ್ನು ಕೂಡ ವಿತರಿಸಲಾಯಿತು.