ಕುಂದಾಪುರ,ನ.23: ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ತೆರಾಲಿ ಜಾತ್ರೆಯು ನ 22 ದಂದು ದೇವರ ದೇವರ ವಾಕ್ಯದ ಪೂಜಾ ವಿಧಿಯಿಂದ ಆರಂಭ ಗೊಂಡಿತು. ಸಂಜೆ ರೋಜರಿ ಮಾತೆಯ ಪಲ್ಲಕ್ಕಿಯ ಮೆರವಣಿಗೆ ಬಹಳ ವಿಜ್ರಂಭಣೆಯಿಂದ ನೆಡೆಸಿದ ತರುವಾಯ ಈ
ಈ ಪೂಜಾ ವಿಧಿಯನ್ನು ಬೈಂದೂರು ಇಗರ್ಜಿಯ ವಂ|ಫಾ| ವಿನ್ಸೆಂಟ್ ಕುವೆಲ್ಲೊ ನಡೆಸಿಕೊಟ್ಟು “ಉತ್ತಮ ಮತ್ತು ಸಂತೋಷಭರಿತ ಜೀವನಕ್ಕೆ ದೇವರ ವಾಕ್ಯದ ಪ್ರೇರಣೆ ಅಗತ್ಯ” ಎಂಬ ಧ್ಯೇಯ ವಾಕ್ಯದೊಂದಿಗೆ, ದೇವರ ವಾಕ್ಯಗಳ ಸಂಭ್ರಮ ನಡೆಯಿತು. ಪುಸ್ತಕಗಳಲ್ಲಿ ಅತೀ ಉತ್ತಮ ,ಜ್ನಾನ ಮತ್ತು ಸಂತೋಷ ನೀಡುವ ಪುಸ್ತಕ ಅಂದರೆ ದೇವರ ವಾಕ್ಯಗಳು ತುಂಬಿರುವ ಬೈಬಲ್ ಪುಸ್ತಕ. ಮೇರಿ ಮಾತೆ ಯೇಸುವಿನ ವಾಕ್ಯಗಳನ್ನು ಕೇಳಲು ಅವರ ಪಾದ ಥಳದಲ್ಲಿ ಇರುತಿದ್ದಳು, ಅದರಿಂದ ಅವಳು ಸಂತೋಷಭರಿತಳಾಗಿದ್ದಳು. ಮೇರಿ ಮಾತೆಯ ಹಾಗೆ ನಡೆದು, ನಾವು ಸಂತೋಷ ಭರಿತರಾಗೋಣ, ಬೈಬಲನಲ್ಲಿ ನಮಗೆ ನಮ್ಮ ಜೀವಿತದಲ್ಲಿ ಅಗತ್ಯವಿರುವ ಎಲ್ಲಾ ಸಂಗತಿಗಳು ಇವೆ ಉತ್ತಮ ಸಂದೇಶಗಳಿವೆ, ಬೈಬಲ್ ಪುಸ್ತಕ ಜ್ನಾದ ಭಂಡಾರ, ಬೈಬಲಿನ ಎರಡು ಕವರ್ ಪುಟಗಳ ನಡುವೆ ಇರುವ ಪುಟಗಳಲ್ಲಿ ಇಡೀ ವಿಶ್ವಕ್ಕೆ ವಿಮುಕ್ತಿಗೊಳಿಸುವ ಶಕ್ತಿಯಿದೆ ಎಂದು ಅಮೇರಿಕಾದ ಮಾಜಿ ಅಧ್ಯಕ್ಷ ರೊನಾಲ್ಡ್ ರೇಗನ್ ಹೇಳಿದ್ದಾರೆ, ಅತ್ಯಂತ ಕೆಟ್ಟ ಜನರು ಕೂಡ ದೇವರ ವಾಕ್ಯಗಳಿಂದ ಪ್ರೇರಣೆ ಪಡೆದು ಪರಿವರ್ತನೆಗೊಂಡಿದ್ದಾರೆ. ಅಗರ್ಭ ಶ್ರೀಮಂತರು ತಮ್ಮ ಆಸ್ತಿ ಪಾಸ್ತಿ ದಾನ ಮಾಡಿ, ತ್ಯಜಿಸಿ ಯೇಸು ಕ್ರಿಸ್ತರನ್ನು ಹಿಂಬಾಲಿಸಿ ಸಂತರಾಗಿದ್ದಾರೆ, ಹರಿಯುವ ನೀರಿನ ಸಮೀಪ ಇರುವ ಮರಗಳು, ಹಸಿರಾಗಿದ್ದು ಅವು ಎಂದಿಗೂ ಬಾಡುವುದಿಲ್ಲ, ಹಾಗೆ ದೇವರ ವಾಕ್ಯ ಆಲಿಸಿ ಪಾಲಿಸುವರು ಎಂದಿಗೂ ಬಾಡದೆ, ಅವರು ಸಂತೋಷ ಭರಿತರಾಗುತ್ತಾರೆ” ಎಂದು ಅವರು ಸಂದೇಶ ನೀಡಿದರು.
ಕುಂದಾಪುರ ಇಗರ್ಜಿಯ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ, ಸಹಾಯಕ ಧರ್ಮಗುರು ವಂ| ಅಶ್ವಿನ್ ಆರಾನ್ಹಾ, ಮತ್ತು ಸಂತ ಜುಜೆ ವಾಜ್ ಇವರಿಗೆ ಸಮರ್ಪಿಲ್ಪಟ್ಟ ಕುಂದಾಪುರ ವಲಯದ, ಎಲ್ಲಾ ಇಗರ್ಜಿಗಳ ಧರ್ಮಗುರುಗಳು, ಕಟ್ಖರೆ ಬಾಲ ಯೇಸು ಆಶ್ರಮದ ಧರ್ಮಗುರುಗಳು, ಡಾನ್ ಬಾಸ್ಕೊ ಸಂಸ್ಥೆಯ ಹಾಗೂ ಅತಿಥಿ ಧರ್ಮಗುರುಗಳು ಈ ಪೂಜಾವಿಧಿಯಲ್ಲಿ ಪಾಲ್ಗೊಂಡರು.
ಇಗರ್ಜಿಯ ಪಾಲನ ಮಂಡಳಿಯ ಉಪಾಧ್ಯಕ್ಷ ಲುವಿಸ್ ಫೆರ್ನಾಂಡಿಸ್. ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಪಾಲನ ಮಂಡಳಿ ಸದಸ್ಯರು, ಗುರಿಕಾರರು, ಧರ್ಮ ಭಗಿನಿಯರು ಉಪಸ್ಥಿತರಿದ್ದರು. ಈ ಜಾತ್ರೆಗೆ ಕ್ರೈಸ್ತ ಬಾಂಧವರಲ್ಲದೆ, ಜಾತಿ ಧರ್ಮ ಭೇದ ಭಾವ ಮರೆತು ಬಹು ಸಂಖ್ಯೆಯಲ್ಲಿ ಜನರು ಭಾಗವಹಿಸಿ ಭಾವೈಕತೆ ಮೆರೆದರು.