ಕುಂದಾಪುರ,ನ.29: ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ತೆರಾಲಿ ಜಾತ್ರೆಯು ನ 28 ದಂದು ದೇವರ ದೇವರ ವಾಕ್ಯದ ಪೂಜಾ ವಿಧಿಯಿಂದ ಆರಂಭ ಗೊಂಡಿತು. ಸಂಜೆ ರೋಜರಿ ಮಾತೆಯ ಪಲ್ಲಕ್ಕಿಯ ಮೆರವಣಿಗೆ ಬಹಳ ವಿಜ್ರಂಭಣೆಯಿಂದ ನಡೆಯಿತು.
ಈ ಪೂಜಾ ವಿಧಿಯನ್ನು ಬಸ್ರೂರು ಇಗರ್ಜಿಯ ಸಹಾಯಕ ಧರ್ಮಗುರಿ ವಂ|ಫಾ|ಅಶ್ವಿನ್ ಡಿಸಿಲ್ವಾ ನಡೆಸಿಕೊಟ್ಟು “ದೇವರು ಅಬ್ರಾಮ್ ಜಾಕೊಬ್ ರಂತೆ ಹಲವಾರು ಮುಖಂಡರನ್ನು ಆರಿಸಿಕೊಳ್ಳುತ್ತಾ, ತಮ್ಮ ದೇವ ವಾಕ್ಯದ ಮಹತ್ವವನ್ನು ತಿಳಿಸುತ್ತಾ ಇದ್ದಾರೆ, ಮೇರಿ ಮಾತೆ ದೇವರ ವಾಕ್ಯವನ್ನು ವಿನಮ್ರವಾಗಿ ನಡೆಸಿಕೊಟ್ಟ ಮಾತೆ, ರೋಜರಿ ಮಾತೆಗೆ ಸಮರ್ಪಿಸಲ್ಪಟ್ಟ ಈ ಇಗರ್ಜಿಯಲ್ಲಿ ಅಪಾರ ಭಕ್ತಿಯ ವಾತವರಣ ಕೂಡಿದೆ. ಯೇಸುವಿನ ತಾಯಿ ಮೇರಿ ಮಾತೆ ನಮಗೆ ಕಲಿಸಿಕೊಟ್ಟ ರೋಜರಿ ಜಪಮಣಿಯ ಪ್ರಾರ್ಥನೆಯಲ್ಲಿ ಬಹಳ ಶಕ್ತಿ ಇದೆ. ಇದನ್ನು ಪಠಿಸುವುದರಿಂದ ಅನೇಕ ಚಮತ್ಕಾರಗಳು ನಡೆಯುತ್ತವೆ, ರೋಜರಿ ಜಪಮಾಲಾ ಪ್ರಾಥನೆಯಿಂದ ನಮ್ಮಲ್ಲಿ ಒಂದು ಕುಟುಂಬದ ವಾತಾವರಣ ಉಂಟಾಗುತ್ತದೆ. ನಮ್ಮ ಹಿರಿಯರು ಈ ರೋಜರಿ ಜಪವನ್ನು ಬಹಳ ಭಕ್ತಿಯಿಂದ ಜಪಿಸುತ್ತಾರೆ, ಇದನ್ನು ನಾನು ನಮ್ಮ ಹಿರಿಯರಲ್ಲಿ ಕಂಡು ನಾನು ಕೂಡ ಬಹಳ ಪ್ರಭಾವಿತನಾಗಿದ್ದೇನೆ. ಯಾವ ಸಂದರ್ಭದಲ್ಲೂ ನಾವು ದೇವರನು ಮರೆಯಬಾರದು, ದೇವರ ವಾಕ್ಯಗಳನ್ನು ಜ್ಞಾಪಿಸಿಕೊಳ್ಳುತ್ತಾ ಉತ್ತಮ ಜೀವನವನ್ನು ಸಾರಬೇಕು” ಎಂದು ಸಂದೇಶ ನೀಡಿದರು.
ಕುಂದಾಪುರ ಇಗರ್ಜಿಯ ಪ್ರಧಾನ ಧರ್ಮಗುರುಗಳಾದ ಅ|ವಂ|ಸ್ಟ್ಯಾನಿ ತಾವ್ರೊ, ಸಹಾಯಕ ಧರ್ಮಗುರು ವಂ| ಅಶ್ವಿನ್ ಆರಾನ್ನಾ ಮತ್ತು ಸಂತ ಜುಜೆ ವಾಜ್ ಇವರಿಗೆ ಸಮರ್ಪಿಲ್ಪಟ್ಟ ಕುಂದಾಪುರ ವಲಯದ, ಎಲ್ಲಾ ಇಗರ್ಜಿಗಳ ಧರ್ಮಗುರುಗಳು, ಕಟ್ಖರೆ ಬಾಲ ಯೇಸು ಆಶ್ರಮದ ಧರ್ಮಗುರುಗಳು, ಡಾನ್ ಬಾಸ್ಕೊ ಸಂಸ್ಥೆಯ ಧರ್ಮಗುರುಗಳು, ಹಾಗೂ ಅತಿಥಿ ಧರ್ಮಗುರುಗಳು ಈ ಪೂಜಾವಿಧಿಯಲ್ಲಿ ಪಾಲ್ಗೊಂಡರು.
ಇಗರ್ಜಿಯ ಪಾಲನ ಮಂಡಳಿಯ ಉಪಾಧ್ಯಕ್ಷೆ ಲುವಿಸ್ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಯೋಜಕಿ ಪ್ರೇಮಾ ಡಿಕುನ್ಹಾ, ಪಾಲನ ಮಂಡಳಿ ಸದಸ್ಯರು, ಗುರಿಕಾರರು, ಧರ್ಮ ಭಗಿನಿಯರು ಉಪಸ್ಥಿತರಿದ್ದರು. ಈ ಜಾತ್ರೆಗೆ ಕ್ರೈಸ್ತ ಬಾಂಧವರಲ್ಲದೆ, ಜಾತಿ ಧರ್ಮ ಭೇದ ಭಾವ ಮರೆತು ಬಹು ಸಂಖ್ಯೆಯಲ್ಲಿ ಜನರು ಆಗಮಿಸಿ ಭಾವೈಕತೆ ಮೆರೆದರು.