ಕೋಲಾರ:- ದೇಶವನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಲು ಶ್ರಮಿಸಿದ ಮಹನೀಯರ ತ್ಯಾಗ,ಬಲಿದಾನ ಮಾಡಿದ್ದಾರೆ ಅವರ ತ್ಯಾಗ ವ್ಯರ್ಥವಾಗದಂತೆ ನಾವೆಲ್ಲಾ ದೇಶದ ಘನತೆ ಹೆಚ್ಚಿಸೋಣ, ದೇಶಕ್ಕಾಗಿ ನಾವು ಎಂದು ಸಾರೋಣ ಎಂದು ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಎಸ್‍ಡಿಎಂಸಿ ಅಧ್ಯಕ್ಷ ಎ.ಮಹೇಂದ್ರ ಕರೆ ನೀಡಿದರು.
ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿದ ನಂತರ ಮಾತನಾಡಿದ ಅವರು, ಗಾಂಧೀಜಿ,ಪಟೇಲ್,ನೆಹರು,ತಿಲಕ್,ನೇತಾಜಿ,ಅಜಾದ್,ಭಗತ್‍ಸಿಂಗ್ ಮತ್ತಿತರ ಸಾವಿರಾರು ಮಂದಿ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ್ದಾರೆ, ಅವರ ತ್ಯಾಗ,ಬಲಿದಾನದಿಂದ ನಾವಿಂದು ಸಂಭ್ರಮಿಸುತ್ತಿದ್ದೇವೆ ಎಂದರು.
ಪರಕೀಯರ ದಾಳಿಯಿಂದ ಬಿಡುಗಡೆಯಾದ ಈ ದಿನವನ್ನು ನಾವು ಸಂಭ್ರಮದಿಂದ ಆಚರಿಸುತ್ತಿದ್ದೇವೆ, 77 ವರ್ಷಗಳಲ್ಲಿ ನಮ್ಮ ದೇಶ ಅನೇಕ ರೀತಿಯಲ್ಲಿ ಸಾಧನೆ ಮಾಡಿದೆ, ಮೋದಿಯವರು ಬಂದ ಮೇಲೆ ದೇಶ ಇಂದು ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿದೆ ಎಂದರು.
ಕಾಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯ ಶಿಕ್ಷಕಿ ಸಿದ್ದೇಶ್ವರಿ, ನಮ್ಮ ರಾಷ್ಟ್ರಧ್ವಜಕ್ಕೆ ಗೌರವ ನೀಡಬೇಕು, ಮಕ್ಕಳು 77ನೇ ವರ್ಷದ ಸ್ವಾತಂತ್ರ್ಯ ಸಂಭ್ರಮವನ್ನು ಕಲಿಕೆಯಲ್ಲಿ ಸಾಧನೆ ಮಾಡುವ ಸಂಕಲ್ಪದೊಂದಿಗೆ ಆಚರಿಸಬೇಕು, ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಿ, ಸಮಾಜಕ್ಕೆ ಹೊರೆಯಾಗದೇ ಆಸ್ತಿಯಾಗಿ ಎಂದು ಕಿವಿಮಾತು ಹೇಳಿದರು.
ಗ್ರಾ.ಪಂ ಮಾಜಿ ಸದಸ್ಯ ಎ.ಶ್ರೀಧರ್ ಮಾತನಾಡಿ, ಸ್ವಾತಂತ್ರ್ಯ ಪಡೆದದ್ದರ ಹಿಂದೆ ನೂರಾರು ವರ್ಷಗಳ ಹೋರಾಟವಿದೆ, ಅವರ ಹೋರಾಟ ಇಂದು ಫಲ ನೀಡಿದೆ, ನಾವೆಲ್ಲಾ ಖುಷಿಯಿಂದ ಇದ್ದೇವೆ, ಈ ದೇಶದ ಘನತೆಗೆ ಕುತ್ತು ಬಾರದಂತೆ ನಾವು ನಡೆದುಕೊಳ್ಳಬೇಕಾಗಿದೆ, ವಿದ್ಯಾರ್ಥಿಗಳು ದೇಶಕ್ಕಾಗಿ ನಾವು ಎಂದು ಸಂಕಲ್ಪ ಮಾಡಬೇಕು, ಅನೇಕ ಮಹನೀಯರ ತ್ಯಾಗ,ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ಬಂದಿದೆ, ಅದನ್ನು ಉಳಿಸಿಕೊಳ್ಳೋಣ, ಉತ್ತಮ ಶಿಕ್ಷಣ ಪಡೆದು ದೇಶಪ್ರೇಮ ಬೆಳೆಸಿಕೊಳ್ಳೋಣ ಎಂದರು.
ಶಿಕ್ಷಕರಾದ ಎಂ.ಆರ್.ಗೋಪಾಲಕೃಷ್ಣ ಹಾಗೂ ವೆಂಕಟರೆಡ್ಡಿ ಮಾತನಾಡಿ, ನಾವು ಓದಿ ದೇಶಕ್ಕಾಗಿ ಕೆಲಸ ಮಾಡುವ ಪ್ರತಿಜ್ಞೆ ಮಾಡಬೇಕು ದುಶ್ಚಟಗಳಿಂದ ದೂರವಾಗಿ ಉತ್ತಮ ಸಮಾಜ ನಿರ್ಮಿಸುವ ಹೊಣೆ ನಮ್ಮಮೇಲಿದೆ ಹಿರಿಯರು ತಂದುಕೊಟ್ಟಿರುವ ಸ್ವಾತಂತ್ರ್ಯದ ಹಿಂದೆ ಇರುವ ಹೋರಾಟದ ಕುರಿತು ಮಕ್ಕಳಿಗೆ ತಿಳಿಸಿಕೊಟ್ಟರು.
5ಸಾವಿರ ನೆರವಿತ್ತ ಯೋಧರ ಕುಟುಂಬ
ಇದೇ ಸಂದರ್ಭದಲ್ಲಿ ಭಾರತೀಯ ಸೇನೆಯ ಯೋಧ ಆನಂದ್ ತಮ್ಮ ತಾಯಿ ಆಂಜಿನಮ್ಮ ಅವರ ನೆನಪಿನಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಸಾಧನೆ ಮಾಡಿದ ಶಾಲೆಯ ವಿದ್ಯಾರ್ಥಿ ಕೆ.ಆರ್.ರಾಘವೇಂದ್ರ ಅವರಿಗೆ 5 ಸಾವಿರ ರೂ ನಗದು,ನೆನೆಪಿನ ಕಾಣಿಕೆಯ ಪುರಸ್ಕಾರ ನೀಡಿ ಸನ್ಮಾನಿಸಿದರು. ಮೂರ್ತಿ ಮಕ್ಕಳಿಗೆ ಪ್ರೇರಣೆಯ ಮಾತುಗಳನ್ನಾಡಿದರು. ಇವರೊಂದಿಗೆ ಸಹೋದರರಾದ ಶಂಕರ್,ಆನಂದ್,ಶೇಖರ್, ಅಶೋಕ್, ಗೋವಿಂದರಾಜು, ಎಸ್‍ಡಿಎಂಸಿ ಸದಸ್ಯ ರಾಮಚಂದ್ರಪ್ಪ ಜೊತೆಯಾದರು.
ಮಕ್ಕಳಿಗೆ ಗ್ರಾ.ಪಂ ಶುಭಾಷಯ
ಗ್ರಾ.ಪಂ ಅಧ್ಯಕ್ಷೆ ರೇಣುಕಾಂಭ ಮುನಿರಾಜು, ಸದಸ್ಯರಾದ ನಾರಾಯಣಸ್ವಾಮಿ, ಎಸ್‍ಡಿಎಂಸಿ ಉಪಾಧ್ಯಕ್ಷೆ ಲಕ್ಷ್ಮಿ, ಮಾಜಿ ಅಧ್ಯಕ್ಷರಾದ ಮುಳ್ಳಹಳ್ಳಿ ಮಂಜುನಾಥ್, ಮುನಿರಾಜು, ಮುನಿಯಪ್ಪ, ಮುಖಂಡ ನಾರಾಯಣಶೆಟ್ಟಿ,ಎಸ್‍ಡಿಎಂಸಿ ಸದಸ್ಯ ವೆಂಕಟಾಚಲಪತಿ ಮಕ್ಕಳಿಗೆ ಶುಭ ಕೋರಿದರು.
ಎಸ್‍ಡಿಎಂಸಿ ಅಧ್ಯಕ್ಷ ಎ.ಮಹೇಂದ್ರ ತಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದು ಅವರ ನೆನಪಿನಲ್ಲಿ ಮಕ್ಕಳಿಗೆ ಲಡ್ಡು ವಿತರಿಸಿದರು. ಎಸ್‍ಡಿಎಂಸಿ ಸದಸ್ಯ ರಾಘವೇಂದ್ರ ಮಕ್ಕಳಿಗೆ ಸಿಹಿ ಹಾಗೂ ಪೆನ್ ವಿತರಿಸಿದರು.
ಶಾಲಾ ಮಕ್ಕಳು ನಡೆಸಿಕೊಟ್ಟ ಸಾಂಸ್ಕøತಿಕ ಕಾರ್ಯಕ್ರಮಗಳು ಮನಸೋರೆಗೊಂಡವು. ಗ್ರಾ.ಪಂ ಗ್ರಂಥಾಲಯದ ಅಜಯ್ ನಡೆಸಿಕೊಟ್ಟಿದ್ದ ಸಣ್ಣ ಕಥೆ ಬರೆಯುವ ಸ್ಪರ್ಧೆಯಲ್ಲಿ ವಿಜೇತರಾದ ಭವಿಷ್,ಅಮೂಲ್ಯ, ಶೈಲಜಾ ಕ್ರಮವಾಗಿ ಪ್ರಥಮ,ದ್ವಿತೀಯ,ತೃತೀಯ ಬಹುಮಾನ ಪಡೆದಿದ್ದು, ಅವರಿಗೆ ನಗದು ಪುರಸ್ಕಾರವನ್ನು ಗ್ರಾ.ಪಂ ಅಧ್ಯಕ್ಷೆ ರೇಣುಕಾಂಭ ವಿತರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಪಂ ಕಾರ್ಯದರ್ಶಿ ಪ್ರಮೀಳಾ, ಮುಖಂಡರಾದ ಮುರಳಿ, ಪ್ರಕಾಶ್,ಸಚಿನ್, ಸತೀಶ್,ಹರ್ಷವಧನ್, ಶಿಕ್ಷಕರಾದ ಭವಾನಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಶ್ವೇತಾ, ಸುಗುಣಾ, ಫರೀದಾ, ಶ್ರೀನಿವಾಸಲು,ರಮಾದೇವಿ, ಡಿ.ಚಂದ್ರಶೇಖರ್ ಮತ್ತಿತರರಿದ್ದರು.
ಚಿತ್ರಶೀರ್ಷಿಕೆ:(ಫೊಟೊ-16ಕೋಲಾರ8):ಕೋಲಾರ ತಾಲ್ಲೂಕು ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಎಸ್‍ಡಿಎಂಸಿ ಅಧ್ಯಕ್ಷ ಎ.ಮಹೇಂದ್ರ ನೆರವೇರಿಸಿ ಧ್ವಜವಂದನೆ ಸಲ್ಲಿಸಿದರು.