ಗಂಗೊಳ್ಳಿ, ಡಿ.4: ಉಡುಪಿ ಧರ್ಮಪ್ರಾಂತ್ಯದ ಪುರಾತನ ಚರ್ಚಗಳೊಂದಾದ ಗಂಗೊಳ್ಳಿ ಕೊಸೆಸಾಂವ್ ಮಾತಾ ಇಗರ್ಜಿಯ ವಾರ್ಷಿಕ ಹಬ್ಬದ ಪ್ರಯುಕ್ತ ಗಂಗೊಳ್ಳಿಯಲ್ಲಿ ಭಾತೃತ್ವದ ಭಾನುವಾರ – ಪರಮ ಪ್ರಸಾದದ ಆರಾಧನೆ ಮತ್ತು ಮೆರವಣಿಗೆ ಪರಮ ಪ್ರಸಾದದ ಆರಾಧನೆ ಡಿಸೆಂಬರ್ 3 ರಂದು ವಿಜ್ರಂಭಣೆಯಿಂದ ನಡೆಯಿತು.
ಪರಮಪ್ರಸಾದವನ್ನು ಚರ್ಚ್ ರಸ್ತೆಯಲ್ಲಿ ಬ್ಯಾಂಡು ವಾದ್ಯಾ, ದೀಪಲಂಕ್ರತದೊಂದಿಗೆ ಮೆರವಣಿಗೆ ಮಾಡಲಾಯಿತು. ಭಾತೃತ್ವದ ಭಾನುವಾರವದ ಬಲಿದಾನವನ್ನು ಅರ್ಪಿಸಿ, ಪರಮ ಪ್ರಸಾದದ ಆರಾಧನೆಯ ಆರಾಧನೆಯ ಪ್ರಾರ್ಥನಾ ವಿಧಿಯನ್ನು ಉಡುಪಿಯ ಧರ್ಮಗುರು ವಂ|ರೋಯ್ ಲೋಬೊ ನಡೆಸಿಕೊಟ್ಟು “ಪರಮ ಪ್ರಸಾದವು, ಒಗ್ಗಟ್ಟಿನ ಸಂಕೇತವಾಗಿದೆ, ಯೇಸು ಕ್ರಿಸ್ತರು ಈ ಸಂಸ್ಕಾರವನ್ನು ಸ್ಥಾಪಿಸಿದ್ದರು., ಅಂದಿನಿಂದ ಇಂದಿನವರೆಗೆ ಪವಿತ್ರ ಸಭೆಯು ನಿರಂತರವಾಗಿ ಅದನ್ನು ಸಂಭ್ರಮಿಸುತ್ತಾ ಬಂದಿದೆ. ಎರಡನೆ, ಈ ಸಂಸ್ಕಾರ ಕ್ರೈಸ್ತರ ಜೀವನದ ಅಡಿಪಾಯ ಮತ್ತು ಶಿಖರವಾಗಿದೆ ಎಂದು ಎರಡನೇ ವೆಟಿಕನ್ ಸಭೆ ನಮಗೆ ತಿಳಿಸುತ್ತದೆ, ನಾವು ಇಂದು ಒಟ್ಟಾಗಿ ಸೇರಿದ್ದೆವೆಯಾದರೆ ಅದಕ್ಕೆ ಕಾರಣ ಪರಮಪ್ರಸಾದದ ಸಂಸ್ಕಾರ, ನಾವು ಪ್ರೀತಿಯಿಂದ ಮತ್ತು ಕ್ಷಮೆಯ ಮೂಲಕ ಜೀವಿಸುತ್ತಿದ್ದರೆ ಅದಕ್ಕೆ ಕಾರಣ ಇದೇ ಪರಮಪ್ರಸಾದದ ಸಂಸ್ಕಾರ ಕಾರಣ, ಎಲ್ಲಿ ಒಳ್ಳೆದು ಮಾಡುತಾರೋ ಅಲ್ಲಿ ಒಗ್ಗಟು ಇರುತ್ತದೆ, ಸಮೂದಾಯಕ್ಕೆ ಯಾರೊಬ್ಬರು ಕೆಟ್ಟದು ಮಾಡಿದಲ್ಲಿ, ವಿನಾಶಕಾರಿ ಆಕ್ರಮಣ, ಬಾಂಬ್ ಸ್ಫೋಟ ಇಂತಹುದೆಲ್ಲಾ ಮಾಡಿ ಜೀವ ಹಾನಿ ಆದಾವಾಗ, ಮಡಿದವರಿಗೆ, ಸ್ವರ್ಗ ಲಭಿಸುತ್ತದೆ, ಅವರಿಗೋಸ್ಕರ ಎಲ್ಲರೂ ಪ್ರಾರ್ಥಿಸುತ್ತಾರೆ ಮಾತ್ರವಲ್ಲ ಒಗ್ಗಟ್ಟಿಲ್ಲದೆ ಚದುರಿ ಹೋದವರೆಲ್ಲಾ ಪುನರ್ ಸಂಘಟೀರಾಗುತ್ತಾರೆ, ಅಂದರೆ ಕೆಟ್ಟದು ಮಾಡಿದ್ದರ ಪರಿಣಾಮ ಒಳ್ಳೆದು ಕೂಡ ಆಗುತ್ತದೆ, ಆದರಿಂದ ನಮ್ಮ ಸಮೂದಾಯದಲ್ಲಿ ಒಳ್ಳೆಯವರು ಇದ್ದಾರೆ ಕೆಟ್ಟವರು ಇದ್ದಾರೆ, ಆದರೆ ಕೆಟ್ಟವರನ್ನು ಕ್ಷಮಿಸಿ ಪ್ರೀತಿಯಿಂದ ಜೀವಿಸೋಣ’ ಎಂದು ಸಂದೇಶ ನೀಡಿದರು.
ಚರ್ಚಿನ ಧರ್ಮಗುರು ವಂ|ತೋಮಸ್ ರೋಶನ್ ಡಿಸೋಜಾ, ಪ್ರಾರ್ಥನಾ ವಿಧಿಯಲ್ಲಿ ಭಾಗಿಯಾಗಿ ಧನ್ಯವಾದಗಳನ್ನು ಅರ್ಪಿಸಿದರು. ದೇವರ ವಾಕ್ಯದ ಸಂಭ್ರಮ ಪರಮ ಪ್ರಸಾದದ ಆರಾಧನೆಯ ಫೊಷಕತ್ವವನ್ನು ವಹಿಸಿಕೊಂಡ ಪ್ರಕೃತಿ ಮತ್ತು ಅಲ್ಟನ್ ರೆಬೇರೊ, ಹಾಗೂ ಕುಟುಂಬಸ್ಥರಾದ, ಸುನೀತಾ ಉಪೇಂದ್ರ, ಅಲನ್ಸ್ಟೈನ್ ರೆಬೇರೊ, ಪ್ರಜ್ವಲ್, ಜಾಕ್ಲೀನ್, ತಿಮೊತಿ ರೊಡ್ರಿಗಸ್, ಧರ್ಮಭಗಿನಿಯರು, ಚರ್ಚಿನ ಉಪಾಧ್ಯಕ್ಷ ಅಲ್ವಿನ್ ಕ್ರಾಸ್ತಾ, ಕಾರ್ಯದರ್ಶಿ ಗ್ಲೋರಿಯಾ ಡಿಸೋಜಾ, 20 ಆಯೋಗಗಳ ಸಂಯೋಜಕಿ ರೆನಿಟಾ ಬಾರ್ನೆಸ್, ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.