ಮಂಗಳೂರು: ಸೇಂಟ್ ಆಗ್ನೆಸ್ ಪಿ ಯು ಕಾಲೇಜು ತಮ್ಮ ಮೈದಾನದಲ್ಲಿ ಸಂಭ್ರಮದ ಕಾಲೇಜು ದಿನವನ್ನು ಆಚರಿಸಿತು.
ಕಾರ್ಯಕ್ರಮಕ್ಕೆ ನಿಟ್ಟೆ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ ಎನ್ ವಿನಯಹೆಗ್ಡೆ ಮುಖ್ಯ ಅತಿಥಿಗಳಾಗಿದ್ದು, ಸಭೆಯನ್ನುದ್ದೇಶಿಸಿ ಅವರು ಮಾತನಾಡಿ “ಸೇಂಟ್ ಆಗ್ನೆಸ್ ಸಂಸ್ಥೆಗಳು ಮಂಗಳೂರಿನ ಸಂಪೂರ್ಣ ಜನಸಂಖ್ಯೆಗೆ ಸೇರಿವೆ. ಸೇಂಟ್ ಆಗ್ನೆಸ್ ಒಂದು ಖ್ಯಾತಿ ಪಡೆದ ಸಂಸ್ಥೆಯಾಗಿದ್ದು, ಅಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ. ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಮಾತ್ರ ಉತ್ತಮ ಸಾಧನೆ ಮಾಡದೆ ಉತ್ತಮ ಗುಣವನ್ನು ಬೆಳೆಸಿಕೊಳ್ಳಬೇಕು ಮತ್ತು ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು” ಎಂದು ಅವರು ಹೇಳಿದರು. “ಶಿಕ್ಷಣವು ನಿಂತ ಪ್ರಕ್ರಿಯೆಯಲ್ಲ. ಕಾಲ ಬದಲಾದಂತೆ ಬದಲಾಗಬೇಕು.ಅದು ಸೇಂಟ್ ಆಗ್ನೆಸ್ ಸಂಸ್ಥೆಯಲ್ಲಿ ಆಗುತ್ತದೆ. ಅದು ವಿದ್ಯಾರ್ಥಿಗಳಿಗೆ ಉತ್ತಮ ಜ್ಞಾನವನ್ನು ನೀಡುತ್ತದೆ” ಎಂದರು
ಈ ಸಂದರ್ಭದಲ್ಲಿ ರಾಷ್ಟ್ರಮಟ್ಟದ ಆಟಗಾರರನ್ನು, ಪ್ರತಿಭಾನ್ವಿತ ವಿದ್ಯಾರ್ಥಿಗಳು ಮತ್ತು ವರ್ಷದ ಅತ್ಯುತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳನ್ನು ಗಣ್ಯರು ಸನ್ಮಾನಿಸಿದರು.
ಸೇಂಟ್ ಆಗ್ನೆಸ್ ಸಂಸ್ಥೆಗಳ ಜಂಟಿ ಕಾರ್ಯದರ್ಶಿ ಡಾ.ಸಿಸ್ಟರ್ ಲಿಡಿಯಾ ಫೆರ್ನಾಂಡಿಸ್ ಎ.ಸಿ. ಗೌರವ ಅತಿಥಿಗಳಾಗಿದ್ದರು. ಪ್ರಾಂಶುಪಾಲರಾದ ಸಿಸ್ಟರ್.ನೋರಿನ್ ಡಿಸೋಜಾ ಎ.ಸಿ, ಉಪ ಪ್ರಾಂಶುಪಾಲರಾದ ಸಿಸ್ಟರ್ ಜಾನೆಟ್ ಸಿಕ್ವೇರಾ ಎ.ಸಿ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಮತಿ ಆಶಾ ಸಂಜೀವನ, ಕಾರ್ಯದರ್ಶಿ ಅವಿನಾಶ್ ಕೃಷ್ಣ ಕುಮಾರ್ ಉಪಸ್ಥಿತರಿದ್ದರು.
ಸಿಸ್ಟರ್ ನೊರಿನ್ ಡಿಸೋಜಾ ಸ್ವಾಗತವನ್ನು ಕೋರಿದರು.ಕಾರ್ಯಕ್ರಮದ ಸಂಯೋಜಕಿ ಶ್ರೀಮತಿ ಜೇಷ್ಮಾ ಡಿಸೋಜಾ ಸಂಚಾಲಕರು ಕೃತಜ್ಞತೆ ಸಲ್ಲಿಸಿದರು. ಮತ್ತು ಶ್ರೀ ಜೋಯಲ್ ಫೆರ್ನಾಂಡಿಸ್ ಕಾರ್ಯಕ್ರಮವನ್ನು ನಿರೂಪಿಸಿದರು.
ಔಪಚಾರಿಕ ಕಾರ್ಯಕ್ರಮದ ನಂತರ ವೈವಿಧ್ಯಮಯ ಕಲಾ ಪ್ರಕಾರಗಳು, ಸಂಗೀತ ಹಾಡುಗಳು, ನ್ರತ್ಯಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನೆಡದವು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ನೈಟಿಂಗೇಲ್ ಲತಾಮಂಗೇಶ್ಕರ್ ಅವರಿಗೆ ಗೌರವ ಸಲ್ಲಿಸಾಲಾಯಿತು. ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಮತ್ತು ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಓತ್ತಿ ಹೇಳುವ ಇಂಗ್ಲಿಷ್ ಕೋಷ್ಟಕ ‘ಒನ್ ಅರ್ಥ್’ ಕಾರ್ಯಕ್ರಮಗಳು ಗಮನ ಸೆಳೆದವು. ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಕಾಲೇಜು ವಿದ್ಯಾಥಿ ಸಂಘದ ಅಧ್ಯಕ್ಷೆ ಕತೀಜ ಝಮಿಯಾ ಪಿ.ಯು. ಹಾಗೂ ಉಪಾಧ್ಯಕ್ಷೆ ಅನ್ವಿಕಾ ಮಿರಾಂದ ನಿರೂ