ಕೋಟೆಶ್ವರ, ಮಾ.11 : ಕೋಟೆಶ್ವರ ಸಂತ ಅಂತೋನಿ ಚರ್ಚಿನ ಧರ್ಮಗುರು ವಂ|ಸಿರಿಲ್ ಮಿನೆಜೆಸ್ ಇವರ 75 ನೇ ಹುಟ್ಟು ಹಬ್ಬದ ಸಂಭ್ರಮವನ್ನು ಕೋಟೆಶ್ವರ ಚರ್ಚಿನ ವಿಶ್ವಾಸಿಗಳು, ಅವರು ಹುಟ್ಟಿದ ದಿನವೇ, ಮಾರ್ಚ್ 10 ರಂದು ಸಂಜೆ ಆಚರಣೆಯನ್ನು ಚರ್ಚಿನಲ್ಲಿ ಆಚರಿಸಿದರು.
ಮೊದಲಿಗೆ ಧರ್ಮಗುರು ವಂ|ಸಿರಿಲ್ ಮಿನೆಜೆಸ್ ಅವರು ದೇವರಿಗೆ ಕ್ರತಜ್ಞತಾ ಪೂರ್ವಕ ಬಲಿದಾನವನ್ನು ಅರ್ಪಿಸಿದರು. ಈ ಸಂದರ್ಭದಲ್ಲಿ ಕಟ್ಕಕೆರೆ ಬಾಲ ಯೇಸುವಿನ ಆಶ್ರಮದ ಮುಖ್ಯಸ್ಥರಾದ ವಂ|ಅಲ್ವಿನ್ ಸೀಕ್ವೆರಾ ತಮ್ಮ ಸಂದೇಶದಲ್ಲಿ “ವಂ|ಸಿರಿಲ್ ಮಿನೆಜೆಸ್ ಅವರು ಜೀವನದಲ್ಲಿ ಸುದಿರ್ಘ ಪಯಣ ಮಾಡಿದ್ದಾರೆ, ದೇವರು ಅವರಿಗೆ 75 ವರ್ಷದ ಜಿವಿತವನ್ನು ಅನುಗ್ರಹಿಸಿದ್ದಾರೆ. ಇಂದು ಅವರ ಹುಟ್ಟು ಹಬ್ಬದ ಅಮ್ರತ್ಸೋವನ್ನು ಆಚರಿಸುತ್ತಿದ್ದೆವೆ, ಅವರು ಬೆಳೆದು ಬರುತ್ತಾ, ತಮ್ಮ ಜೀವನ ನನ್ನದಲ್ಲ ಎಂದು ತಿಳಿದುಬಂದು ಅವರು ತಮ್ಮ ಜೀವನವನ್ನು ಯೇಸು ಕ್ರಿಸ್ತರಿಗೆ ಅರ್ಪಿಸಲಿಕ್ಕಾಗಿ, ಯಾಜಕರಾಗಲು ಬಯಸಿ ಬಹಳ ಹಿಂದೆ ಅವರು ಯಾಜಕಿ ದೀಕ್ಷೆ ಪಡೆದು, ಇಂದು ಅವರು ಒರ್ವ ಉತ್ತಮ ಧರ್ಮಗುರುಗಳಾಗಿ ಹೆಸರು ಪಡೆದಿದ್ದಾರೆ. ಅವರು ತಮ್ಮ ಧರ್ಮಗುರುಗಳ ಜೀವನದಲ್ಲಿ ಇತರರ ಬಗ್ಗೆ ಚಿಂತಿಸುವುದು, ಕಾಳಜಿ ವಹಿಸುವುದು ಹೆಚ್ಚಾಗಿತ್ತು. ಎಲ್ಲಾ ವೇಳೆ ಅವರು ಇತರರಿಗೆ ಒಳಿತಾಗಲು ಪ್ರಯತ್ನಿಸಿದರು. ಅವರ ಜೀವನ ತಾಳ್ಮೆ, ನಯ ವಿನಯಗಳಿಂದ ಕೂಡಿದ್ದು ಅವರ ಜೀವನ ನಮಗೆ ಒಂದು ಪ್ರೇರಣೆಯಾಗಿದೆ” ಎಂದು ಸಂದೇಶ ನೀಡಿ “ಮುಂದೆ ದೇವರು ಇನ್ನೂ ಹೆಚ್ಚು ಅಯರಾರೋಗ್ಯ ನೀಡಲಿ” ಎಂದು ಶುಭ ಹಾರೈಸಿದರು.
ಹುಟ್ಟು ಹಬ್ಬದ ಆಚರಣೆಯ ವೇಳೆ ವಂ|ಸಿರಿಲ್ ಮಿನೆಜೆಸ್ “ತಮಗೆ ಇಷ್ಟು ಪ್ರೀತಿ ಕಾಳಜಿ ವಹಿಸಿ ನನ್ನ 75 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿದಕ್ಕೆ ಚರ್ಚಿನ ಜನತೆಗೆ, ಪಾಲನ ಮಂಡಳಿಗೆ, ಹುಟ್ಟು ಹಬ್ಬದ ಕ್ರತಜ್ಞಪೂರ್ವಕ ಬಲಿದಾನದಲ್ಲಿ ಮತ್ತು ಕಾರ್ಯಕ್ರಮದಲ್ಲಿ ಭಾಗಿಯಾದ ಫಾ|ಆಲ್ವಿನ್ ಸಿಕ್ವೇರಾ, ಫಾ| ದೀಪ್ ಫೆರ್ನಾಡಿಸ್ ಫಾ|ಫ್ರಾನ್ಸಿಸ್ ಸೋಜಾ, ಪಾಲನಮಂಡಳಿ ಉಪಾಧ್ಯಕ್ಷ ತಿಯೋದೊರ್ ಡಿಮೆಲ್ಲೊ, ಕೋಟೆಶ್ವರ ಸಂತ ಆಂತೋನಿ ವ್ರದ್ದಾಶ್ರಮದ ಮುಖ್ಯಸ್ಥೆ ಸಿಸ್ಟರ್ ಅವಿತಾ ಮೊಂತೇರೊ ಇವರಿಗೆ ಮತ್ತು ತಮ್ಮ ಹುಟ್ಟುಹಬ್ಬ ಆಚರಣೆಗೆ ಸಹಕರಿಸಿದವರಿಗೆಲ್ಲ ಕ್ರತಜ್ಞತೆ ಸಲ್ಲಿಸಿದರು.
ಚರ್ಚಿನ ಆಯೋಗಗಳ ಸಂಚಾಲಕಿ ವಿವೀಟಾ ಡಿಆಲ್ಮೇಡಾ, ಫಾ|ಸಿರಿಲ್ ಮಿನೆಜೆಸ್ ಇವರ ಪರಿಚಯ ನೀಡಿದರು. ಪಾಲನಮಂಡಳಿ ಕಾರ್ಯದರ್ಶಿ ಮರಿಯಾ ಮಸ್ಕರೇನ್ಹಸ್ ಧನ್ಯವಾದಗಳನ್ನು ಅರ್ಪಿಸಿದರು. ಸದಸ್ಯೆ ವೀಣಾ ಡಿಮೆಲ್ಲೊ ಕಾರ್ಯಕ್ರಮ ನಿರೂಪಿಸಿದರು.