ಮೂಡುಬಿದಿರೆ : ಸಾಸಿವೆ, ಕೊತ್ತಂಬರಿ, ಹುರುಳಿ, ರಾಗಿ ಸೇರಿದಂತೆ ಹಸಿ ಮತ್ತು ಒಣ ಅಡಿಕೆಯಿಂದ ವಿಶಿಷ್ಟ ತಿರುಗುವ ಕ್ರಿಸ್ಮಸ್ ನಕ್ಷತ್ರವನ್ನು ಶಿರ್ತಾಡಿಯ ಲೈಫ್ ಸೇವಾ ಸಂಸ್ಥೆಯವರು ನಿರ್ಮಿಸಿದ್ದಾರೆ.
ಈ ನಕ್ಷತ್ರವನ್ನು ಶಿರ್ತಾಡಿಯ ಮೌಂಟ್ ಕಾರ್ಮೆಲ್ ಚರ್ಚ್ ನ ಆವರಣದಲ್ಲಿ ಕ್ರಿಸ್ಮಸ್ ಪ್ರಯುಕ್ತ ಡಿ.23 ರಿಂದ ಜ.5 ರವರೆಗೆ ಪ್ರದರ್ಶನಕ್ಕೆ ಇರಿಸಲಾಗುತ್ತದೆ.
ಈ ನಕ್ಷತ್ರವು 120 ಕೆಜಿ ತೂಕ, 12 ಅಡಿ ಎತ್ತರ, 11 ಅಡಿ ಅಗಲವಿದ್ದು, ನಕ್ಷತ್ರದ ಮಧ್ಯಭಾಗದಲ್ಲಿ ಏಸುಕ್ರಿಸ್ತನ ಹುಟ್ಟನ್ನು ಬಿಂಬಿಸುವ ಬೈಹುಲ್ಲಿನ ಮೇಲ್ಛಾವಣಿ ಹೊಂದಿರುವ ಆಕರ್ಷಕ ಗೋದಳಿಯನ್ನು ಅಳವಡಿಸಲಾಗಿದೆ.
ಈ ನಕ್ಷತ್ರವು ಚಲಿಸುವ ಮಾದರಿಯಲ್ಲಿ ರಚಿಸಲಾಗಿದ್ದು, ಇದಕ್ಕಾಗಿ 1 ಹೆಚ್ ಪಿ ಮೋಟಾರ್ ಹಾಗೂ ವಾಹನದ ಹೌಸಿಂಗ್ ಅನ್ನು ಅಳವಡಿಸಲಾಗಿದೆ.
ನಿರಂತರ 3 ವಾರಗಳ ಕಾಲ ಸಂಸ್ಥೆಯ ಮುಖ್ಯಸ್ಥ ಪ್ರಸನ್ನ ಜೋಯೆಲ್ ಸಿಕ್ವೇರಾ ಈ ನಕ್ಷತ್ರವನ್ನು ತಯಾರಿಸುವಲ್ಲಿ ಶ್ರಮಿಸಿದ್ದಾರೆ. ಇವರ ಜೊತೆಗೆ ಸಂಸ್ಥೆಯ ಸದಸ್ಯರಾದ ನವೀನ್ ಶೆಟ್ಟಿ ಶಿರ್ತಾಡಿ, ಸಿಪ್ರಿಯಾನ್ ಡಿಸೋಜಾ ಶಿರ್ತಾಡಿ, ರಮೇಶ್ ಶೆಟ್ಟಿ ಮಂಗಳೂರು, ನಾಗರಾಜ್ ಅಲಂಗಾರು ಸಹಕರಿಸಿದ್ದಾರೆ.
ವಿಶೇಷತೆ :
ಸಂಸ್ಥೆಯು ಕಳೆದ 10 ವರ್ಷಗಳಿಂದ ಬೃಹತ್ ಗಾತ್ರದ ನಕ್ಷತ್ರ ತಯಾರಿಕೆಯಲ್ಲಿ ತೊಡಗಿಕೊಂಡಿದ್ದು, ವರ್ಷಂಪ್ರತಿ ವಿಶಿಷ್ಟ ಬಗೆಯ ವಸ್ತುಗಳನ್ನು ಬಳಸಿ ನಕ್ಷತ್ರ ತಯಾರಿಸುತ್ತಿದೆ.
ಈ ಬಾರಿಯ ನಕ್ಷತ್ರಕ್ಕೆ 10 ವಿವಿಧ ಬಗೆಯ ವಸ್ತುಗಳನ್ನು ಬಳಸಲಾಗಿದೆ.
1 ಕೆಜಿ ಸಾಸಿವೆ, 1 ಕೆಜಿ ಕೊತ್ತಂಬರಿ, 1 ಕೆಜಿ ಹುರುಳಿ, 1 ಕೆಜಿ ರಾಗಿ, 2 ಕೆಜಿ ನೆಲಗಡಲೆ, 20 ಕೆಜಿ ಹಸಿ ಅಡಿಕೆ, 2 ಕೆಜಿ ಒಣ ಅಡಿಕೆ, ಮೋಟಾರ್, ವಾಹನದ ಹೌಸಿಂಗ್, ಮರದ ತುಂಡುಗಳನ್ನು ಬಳಸಿ ನಿರ್ಮಿಸಿರುವ ಈ ನಕ್ಷತ್ರವು ವಿದ್ಯುತ್ ಚಾಲಿತವಾಗಿ ತಿರುಗುತ್ತ, ದೀಪಗಳಿಂದ ಅಲಂಕೃತಗೊಳಿಸಿ ಆಕರ್ಷಣೀಯವೆನಿಸಿದೆ.
ಸೌಹಾರ್ದತೆಯ ಪಾಠ
ಕೋಮು ಸೌಹಾರ್ದತೆಯ ಮೂಲ ಉದ್ದೇಶದಿಂದ ಈ ನಕ್ಷತ್ರವನ್ನು ಸರ್ವಧರ್ಮೀಯರ ಸಹಕಾರದಿಂದ ನಿರ್ಮಿಸಲಾಗಿದೆ. ಪರಸ್ಪರ ಶಾಂತಿ, ನೆಮ್ಮದಿ ಅಗತ್ಯವನ್ನು ಇದು ಸಾರಿ ಹೇಳುತ್ತದೆ.
– ಪ್ರಸನ್ನ ಜೋಯೆಲ್ ಸಿಕ್ವೇರಾ, ಲೈಫ್ ಸೇವಾ ಸಂಸ್ಥೆ.
ವಿಶೇಷತೆ : ಸಂಸ್ಥೆಯು ಕಳೆದ 10 ವರ್ಷಗಳಿಂದ ಬೃಹತ್ ಗಾತ್ರದ ನಕ್ಷತ್ರ ತಯಾರಿಕೆಯಲ್ಲಿ ತೊಡಗಿಕೊಂಡಿದ್ದು, ವರ್ಷಂಪ್ರತಿ ವಿಶಿಷ್ಟ ಬಗೆಯ ವಸ್ತುಗಳನ್ನು ಬಳಸಿ ನಕ್ಷತ್ರ ತಯಾರಿಸುತ್ತಿದೆ.
ಈ ಬಾರಿಯ ನಕ್ಷತ್ರಕ್ಕೆ 10 ವಿವಿಧ ಬಗೆಯ ವಸ್ತುಗಳನ್ನು ಬಳಸಲಾಗಿದೆ.
1 ಕೆಜಿ ಸಾಸಿವೆ, 1 ಕೆಜಿ ಕೊತ್ತಂಬರಿ, 1 ಕೆಜಿ ಹುರುಳಿ, 1 ಕೆಜಿ ರಾಗಿ, 2 ಕೆಜಿ ನೆಲಗಡಲೆ, 20 ಕೆಜಿ ಹಸಿ ಅಡಿಕೆ, 2 ಕೆಜಿ ಒಣ ಅಡಿಕೆ, ಮೋಟಾರ್, ವಾಹನದ ಹೌಸಿಂಗ್, ಮರದ ತುಂಡುಗಳನ್ನು ಬಳಸಿ ನಿರ್ಮಿಸಿರುವ ಈ ನಕ್ಷತ್ರವು ವಿದ್ಯುತ್ ಚಾಲಿತವಾಗಿ ತಿರುಗುತ್ತ, ದೀಪಗಳಿಂದ ಅಲಂಕೃತಗೊಳಿಸಿ ಆಕರ್ಷಣೀಯವೆನಿಸಿಸೌಹಾರಕೋಮು ಸೌಹಾರ್ದತೆಯ ಮೂಲ ಉದ್ದೇಶದಿಂದ ಈ ನಕ್ಷತ್ರವನ್ನು ಸರ್ವಧರ್ಮೀಯರ ಸಹಕಾರದಿಂದ ನಿರ್ಮಿಸಲಾಗಿದೆ. ಪರಸ್ಪರ ಶಾಂತಿ, ನೆಮ್ಮದಿ ಅಗತ್ಯವನ್ನು ಇದು ಸಾರಿ ಹೇಳುತ್ತದೆ.