ಫಂಗಸ್ ಗೆ ಗೋವಿನ ಮೂತ್ರ ಮತ್ತು ಸೆಗಣಿ ಕಾರಣ – ಕೋವಿಡ್ ಮುಂಚೂಣಿ ತಜ್ಞರ ಸಂಶೋಧನೆ

JANANUDI.COM NETWORK

ನವದೆಹಲಿ.ಮೇ.25: ನಮ್ಮ ದೇಶದ ಕೆಲವು ಜನರು ಗೋವಿನ ಸೆಗಣಿ ಅಥವಾ ಮೂತ್ರವನ್ನು ತಮ್ಮ ದೇಹದ ಮೇಲೆ ಲೇಪಿಸುವುದರ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಕೋವಿಡ್ ರೋಗಕ್ಕೆ “ಹಸುವಿನ ಸೆಗಣಿ ಚಿಕಿತ್ಸೆ” ಎಂದು ನಂಬಿಸಿ ಸೋಂಕನ್ನು ತಡೆಗಟ್ಟಲು ಅಥವಾ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿ ಜನರು ಮೈಗೆ ಸೆಗಣಿ ಮತ್ತು ಗೋಮೂತ್ರ ಲೇಪಿಸಿಕೊಳ್ಳುತ್ತಾರೆ. ಇದು “ಕಪ್ಪು ಶಿಲೀಂಧ್ರ”(ಫಂಗಸ್) ಅಥವಾ ಮ್ಯೂಕಾರ್ಮೈಕೋಸಿಸ್ ರೋಗಗಳು ಬರಲಿಕ್ಕೆ ಕಾರಣವಾಗಬಹುದು, ಇದು ಕೋವಿಡ್ ಚಿಕಿತ್ಸೆಯ ಸಂದರ್ಭದಲ್ಲಿ ಸ್ಟೀರಾಯ್ಡ್ಗಳನ್ನು ನೀಡಿ ಚೇತರಿಸಿಕೊಂಡ ಕೆಲವು ರೋಗಿಗಳಲ್ಲಿ ಇದು ಕಂಡು ಬಂದಿದೆ ಎಂದು ವೈದ್ಯರು ಹೇಳುತ್ತಾರೆ.
ಗುಜರಾತ್ನಲ್ಲಿ ಕೆಲವು ಜನರು ವಾರಕ್ಕೊಮ್ಮೆ ಹಸುವಿನ ಸಗಣಿ ಮತ್ತು ಮೂತ್ರವನ್ನು ತಮ್ಮ ದೇಹಕ್ಕೆ ಲೇಪಿಸಿಕೊಳ್ಳುತ್ತಾರೆ. ತಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಿ ಹೀಗೆ ಮಾಡುತ್ತಾರೆ. ಮ್ಯೂಕೋರ್ಮೈಕೋಸಿಸ್ ಪ್ರಕರಣಗಳನ್ನು ವರದಿ ಮಾಡುತ್ತಿರುವ ರಾಜ್ಯಗಳಲ್ಲಿ ಗುಜರಾತ್ ಕೂಡ ಸೇರಿದೆ, ವಿಶೇಷವಾಗಿ ಮಧುಮೇಹ ಹೊಂದಿರುವ ಜನರಲ್ಲಿ ಇದು ಹೆಚ್ಚು ಕಂಡುಬಂದಿದೆ. ಮಹಾರಾಷ್ಟ್ರ, ದೆಹಲಿ, ಹರಿಯಾಣ ಕರ್ನಾಟಕ ಮತ್ತು ಒಡಿಶಾದಲ್ಲಿಯೂ ಪ್ರಕರಣಗಳನ್ನು ಪತ್ತೆಹಚ್ಚಲಾಗಿದೆ.
ಮೇ 13 ರಂದು ಮಾಡಿದ ಟ್ವೀಟ್ನಲ್ಲಿ, ಕೋವಿಡ್ -19 ಬಗ್ಗೆ ಮುಂಚೂಣಿ ತಜ್ಞರ ಪಟ್ಟಿಯಲ್ಲಿದ್ದ ಯುಎಸ್ ಮೂಲದ ಡಾ. ಫಹೀಮ್ ಯೂನಸ್, ಗೋವಿನ ಸಗಣಿ ‘ಕೋವಿಡ್ ಔಷಧ’ ಆಗಿ ಬಳಸುವುದರಿಂದ ಮಾರಕ ಕಪ್ಪು ಶಿಲೀಂಧ್ರ ರೋಗ (ಮ್ಯೂಕಾರ್ಮೈಕೋಸಿಸ್) ಉಂಟಾಗಬಹುದು ಎಂದು ಹೇಳಿದ್ದರು
ಅಮೆರಿಕದ ಉನ್ನತ ಆರೋಗ್ಯ ಸಂಸ್ಥೆಯಾದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ (ಸಿಡಿಸಿ) ಮತ್ತು ಪ್ರಿವೆನ್ಷನ್ನ ವೆಬ್ಸೈಟ್ನ ಲಿಂಕ್ ಹಂಚಿಕೊಳ್ಳುತ್ತಾ, ಮ್ಯೂಕೋರ್ಮೈಸೆಟ್ಗಳು ಅಂದರೆ ಶಿಲೀಂದ್ರಗಳು ಪ್ರಾಣಿಗಳ ಸೆಗಣಿಗಳಲ್ಲಿ ಇರುವುದನ್ನು ಹೇಳಿದ್ದಾರೆ. ಅದಕ್ಕಾಗಿ ಯುಎಸ್ ಎ ಸೆಗಣಿಯನ್ನು ಪ್ರತಿಬಂದಿಸಿದೆ, ಕೆಲವೇ ದಿನಗಳ ಹಿಂದೆ ಭಾರತೀಯನೊಬ್ಬ.ಸೆಗಣಿ ತೆಗೆದುಕೊಂಡು ಹೋಗಿ ಏರ್ ಪೊರ್ಟ್ ಪೊಲೀಸರ ಕೈಗೆ ಸಿಕ್ಕಿಬಿದ್ದದ್ದು,ಬಹಳ ವೈರಲ್ ಆಗಿತ್ತು.