JANANUDI.COM NETWORK
ಕುಂದಾಪುರ,ಜ.17: ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಆಶ್ರಯದಲ್ಲಿ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ್, ಪ್ರಸಾದ್ ನೇತ್ರಾಲಯ ಉಡುಪಿ, ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಂಧತ್ವ ನಿವಾರಣ ವಿಭಾಗ ಉಡುಪಿ, ಇವರ ಸಂಯೋಕತ್ವದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಮತ್ತು ಆಯುರ್ವೇದ ಸೌಂದರ್ಯ ಮಾಹಿತಿ ಹಾಗೂ ತಪಾಸಣೆ ಶಿಬಿರವು ಭಾನುವಾರ (ಜ.17) ಕುಂದಾಪುರ ಸಂತ ಮೇರಿಸ್ ಪಿ.ಯು.ಕಾಲೇಜ್ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಕುಂದಾಪುರ ವಲಯ ಪ್ರಧಾನ ಧರ್ಮಗುರು, ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಅಧ್ಯಾತ್ಮಿಕ ನಿರ್ದೇಶಕ ಅ|ವಂ|ಸ್ಟ್ಯಾನಿ ತಾವ್ರೊ ‘ಭಾಹ್ಯ ಬೆಳಕು ಎಷ್ಟೊ ಮುಖ್ಯವೊ ಅಷ್ಟೆ ಅಂತರ್ಯದ ಬೆಳಕು ಅಷ್ಟೆ ಮುಖ್ಯ, ಸೌಂದರ್ಯ ಹೆಚ್ಚಿಸಿಕೊಳ್ಳುವುದರ ಜೊತೆಗೆ ಅಂತರಾತ್ಮದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದು ಮುಖ್ಯ. ನೀವು ಸಮಾಜದ ಬೆಳಕಾಗಬೇಕು ಎಂದು ಯೇಸು ಸ್ವಾಮಿ ಹೇಳಿದ್ದು ನೆನಪಿಸಿಕೊಂಡು ನಾವು ಹಾಗೆ ನಡೆಯೋಣ, ಹಾಗೇಯೆ ಇಂತಹ ಶಿಬಿರಗಳಿಂದ ನಾವು ಆರೋಗ್ಯ ಭರಿತರಾಗಿ, ಸೌಂದರ್ಯ ಭರಿತರಾಗಿಯೂ ಇರಲು ಪ್ರಯತ್ನಿಸೋಣ. ಈ ಶಿಬಿರದಿಂದ ‘ಆರೋಗ್ಯ ದೀಪ ಎಲ್ಲರ ಮನೆಯಲ್ಲಿ ಬೆಳಗಲಿ’ಎಂದು ಅವರು ಹಾರೈಸಿದರು.
ಕುಂದಾಪುರ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಎಸ್.ಜಯಕರ ಶೆಟ್ಟಿ ‘ಕಥೊಲಿಕ್ ಸಭಾದ ಜೊತೆಗೆ ಹಲವಾರು ವರ್ಷಗಳಿಂದ ಹಲವಾರು ಜನ ಪರ ಕಾರ್ಯಕ್ರಮಗಳನ್ನು ಹಂಚಿಕೊಂಡಿದ್ದೆವೆ. ನಮ್ಮಿಂದ ಆಗುವ ಸಹಾಯವನ್ನು ಮಾಡುತ್ತೇವೆ. ಕನ್ನಡಕ ಅಗತ್ಯ ಇದ್ದವರಿಗೆ ರೆಡ್ ಕ್ರಾಸ್ ಸಂಸ್ಥೆ ಉಚಿತ ಕನ್ನಡಕಗಳನ್ನು ನೀಡುತ್ತದೆ’ ಎಂದು ಅವರು ಶುಭ ಹಾರೈಸಿದರು. ಪ್ರಸಾದ್ ನೇತ್ರಲಾಯದ ಡಾ|ಸುಧಾ ರಾಣಿ ಕಣ್ಣಿನ ರಕ್ಷಣೆ, ಚಿಕಿತ್ಸೆ, ಕಣ್ಣಿನ ಪ್ರಾಮುಖ್ಯತೆ ಬಗ್ಗೆ ವಿವರಿಸಿದರು. ಡಾ|ಸ್ವಾತಿ ಜಿ.ಶೇಟ್ ಆಯುರ್ವೇದದಿಂದ ಹೇಗೆ ಸೌಂದರ್ಯ ಹೆಚ್ಚಿಸಬಹುದು, ಕಣ್ಣಿನ ದ್ರಷ್ಟಿ ಹೆಚ್ಚಿಸಲು, ಕಣ್ಣು ಆರೋಗ್ಯದಿಂದಿರಲು ಅಕ್ಶಿತರ್ಪಣ, ಕೂದಲಿನ ಅಭ್ಯಂಜನದ ಬಗ್ಗೆ ವಿವರಿಸಿ ಚಿಕಿತ್ಸಾ ಪ್ರಾತ್ಯಾಕ್ಷಿಕೆ ಮೂಲಕ ಮಾಡಿತೋರಿಸಿದರು. ಪ್ರಸಾದ್ ನೇತ್ರಾಲಯದ ವೈದ್ಯಕೀಯ ತಂಡ ಕಣ್ಣುಗಳ ತಪಾಸಣೆ ಮಾಡಿತು.
ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಅಧ್ಯಕ್ಷೆ ಮೇಬಲ್ ಡಿಸೋಜಾ ಅಧ್ಯಕ್ಷಿಯ ಭಾಷಣದಲ್ಲಿ ‘ಕಥೊಲಿಕ್ ಸಭಾ 30 ವರ್ಷಗಳಿಂದ ಜನ ಪರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿವೆ ಈ ಶಿಬಿರದಲ್ಲಿ ಹಲವಾರು ಜನರು ಪ್ರಯೋಜನ ಪಡೆಯುವಂತಾಗಿದ್ದು, ಇದು ಮುಂದಕ್ಕೂ ಮುಂದುವರೆಯಲಿದೆ’ ಎಂದರು.
ವೇದಿಕೆಯಲ್ಲಿ ಕಥೊಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಹೇರಿಕ್ ಗೊನ್ಸಾಲ್ವಿಸ್, ನಿಯೋಜಿತ ಅಧ್ಯಕ್ಷೆ ಶಾಂತಿ ಪಿರೇರಾ, ರೆಡ್ ಕ್ರಾಸ್ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಿಬಿರದ ಸಂಚಾಲಕರಾದ ಡಾ|ಸೋನಿ ಡಿಕೋಸ್ತಾ ಪ್ರಸ್ತಾವಿಸಿ ಸ್ವಾಗತಿಸಿದರು. ಕ. ಸ. ಕುಂ. ವ. ಸಮಿತಿ ಕಾರ್ಯದರ್ಶಿ ಪ್ರೇಮಾ ಡಿಕುನ್ಹಾ ವಂದಿಸಿದರು, ಸರಕಾರಿ ಸವಲತ್ತು ಸಂಚಾಲಕ ವಿನೋದ್ ಕ್ರಾಸ್ಟೊ ಕಾರ್ಯಕ್ರಮ ನಿರೂಪಿಸಿದರು.