

ಕುಂದಾಪುರ, ಆ.13: ಕುಂದಾಪುರ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ತಾವ್ರೊ ಇವರ 75 ನೇ ಹುಟ್ಟು ಹಬ್ಬ ಸನಿಹದಲ್ಲಿರುವಾಗ ಕುಂದಾಪುರ ಕಥೊಲಿಕ್ ಸ್ತ್ರೀ ಸಂಘಟನೆ ಮತ್ತು ಸ್ತ್ರೀ ಸ್ವಸಹಾಯ ಸಂಘಗಳಿಂದ ಚರ್ಚ್ ಸಭಾಭವನದಲ್ಲಿ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಲಾಯಿತು.
ಸಹಾಯಕ ಧರ್ಮಗುರು ವಂ| ಅಶ್ವಿನ್ ಆರಾನ್ನಾ ಫಾ||ಸ್ಟ್ಯಾನಿ ತಾವ್ರೊ ಅವರಿಗೆ ಶುಭ ಕೋರುತ್ತಾ ‘ನಮಗೆ ಧರ್ಮಗುರುಗಳಿಗೆ ಯಾಜಕೀ ದೀಕ್ಷೆ ಪಡೆದದ್ದು ಅದು ಶಾಸ್ವತವಾಗಿರುತ್ತೆ, ಆದರೆ ಚರ್ಚಗಳಲ್ಲಿ ಅಧಿಕ್ರತ ಸೇವೆ ಮಾಡಲಿಕ್ಕೆ ಆಗುವುದಿಲ್ಲ. ವಯಸ್ಸಿನ ದೆಸೆಯಿಂದ ನಿವ್ರತ್ತಿ ದೊರಕುತ್ತದೆ. ಆದರೆ ನಮ್ಮ ಧರ್ಮಗುರುಗಳು ವಯಸ್ಸಾದರೂ, ಅವರಲ್ಲಿ ಯುವಕರಂತೆ ಉತ್ಸಾಹ ಇದೆ, ಎಷ್ಟೊಂದು ಚರ್ಚಗಳಲ್ಲಿ ಧರ್ಮಗುರುಗಳಾಗಿ, ಹಲವಾರು ವಲಯ ಪ್ರಧಾನರಾಗಿ, ಧರ್ಮಪ್ರಾಂತ್ಯದ ಸಲಹೆಗಾರರಾಗಿ ಸೇವೆ ನೀಡಿದ ಅವರಲ್ಲಿ ಅನುಭವದ ಭಂಡಾರವೇ ಇದೆ” ಎಂದು ತಿಳಿಸಿದರು.

ಇತ್ತೀಚೆಗೆ ಚಾರ್ಟೆಟ್ ಅಕೌಂಟೆಡ್ ಪದವಿಯನ್ನು ಗಳಿಸಿದ ಸ್ತ್ರೀ ಸಂಘಟನೇಯ ಮಾಜಿ ಅಧ್ಯಕ್ಷೆ ವಿನಯಾ ಡಿಕೋಸ್ತಾ, ಕುಂದಾಪುರ ಕಥೊಲಿಕ್ ಸಭೆಯ ಮಾಜಿ ಅಧ್ಯಕ್ಷ ಬರ್ನಾಡ್ ಡಿಕೋಸ್ತಾ ಇವರ ಪುತ್ರ ಪ್ರತಿಭಾನ್ವಿತ ವಿನಾರ್ಡ್ ಡಿಕೋಸ್ತಾ ಇವರಿಗೆ ಸ್ತ್ರೀ ಸಂಘಟನೇಯ ಪರವಾಗಿ ಫಾ|ಸ್ಟ್ಯಾನಿ, ಫಾ|ಅಶ್ವಿನ್ ಮತ್ತು ಇತರರು ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ವಿನಾರ್ಡ್ “ನನ್ನ ಕಲಿಕೆಯ ಸಂದರ್ಭದಲ್ಲಿ ನಿಮ್ಮಲ್ಲಿ ಹಲವರು ಪೆÇ್ರೀತ್ಸಾಹ ಉತೇಜನ ನೀಡಿದ್ದಿರಿ, ಇವತ್ತು ನನ್ನ ಗುರಿ ಸಾಧಿಸಿದಕ್ಕೆ ನನಗೆ ಸನ್ಮಾನ ಮಾಡಿದ್ದಕ್ಕೆ ಎಲ್ಲರಿಗೂ ಕ್ರತÅಜ್ಞತೆ ಸಲ್ಲಿಸಿದರು.
ಹುಟ್ಟು ಹಬ್ಬ ಆಚರಿಸಿ ಶುಭ ಹಾರೈಸಿದಕ್ಕೆ ಫಾ|ಸ್ಟ್ಯಾನಿ ತಾವ್ರೊ ‘ನಿಮ್ಮೆಲ್ಲರ ಪ್ರೀತಿ ನನಗೆ ಅತೀವ ಸಂತೋಷ ತಂದಿದೆ, ಪ್ರಾಯ ಆಗಿದೆಯೆಂದು ವ್ಯಥೆ ಸಲ್ಲದು, ನಾವು ಪ್ರಾಯವನ್ನು ಚಿಂತಿಸುವುದಲ್ಲ, ನಮಗೆ ಶಕ್ತಿ ಇರುವವರೆಗೆ ನಾವು ಕಾರ್ಯ ಪ್ರವತ್ತಿಯಲ್ಲಿ ತೊಡಗಿಸಿಕೊಳ್ಳಬೇಕು. ಸ್ತ್ರೀ ಸಂಘಟನೆ ನಮ್ಮ ಚರ್ಚಿಗಾಗಿ ಉತ್ತಮ ಸೇವೆ ನೀಡುತ್ತಾ ಇದೆ’ ಎಂದು ಶ್ಲಾಘಿಸಿದರು. ಸ್ತ್ರೀ ಸಂಘಟನೇಯ ಸಚೇತಕಿ ಸಿಸ್ಟರ್ ಆಶಾ , ಪಾಲನ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ ಉಪಸ್ತಿತರಿದ್ದರು.
ಸ್ತ್ರೀ ಸಂಘಟನೇಯ ಅಧ್ಯಕ್ಷೆ ಜೂಲಿಯೆಟ್ ಪಾಯ್ಸ್ ಸ್ವಾಗತಿಸಿದರು. ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾ ಶುಭ ಹಾರೈಸಿ ಧನ್ಯವಾದಗಳನ್ನು ಸಮರ್ಪಿಸಿದರು. ಶಾಂತಿರಾಣಿ ಬರೆಟ್ಟೊ ನಿರೂಪಿಸಿದರು.























