Photo: Richard Dsouza
ಉಡುಪಿ: ಅ.8: ನಮ್ಮ ಸಮುದಾಯದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸರಕಾರಿ ಸೇವೆಯತ್ತ ಆಸಕ್ತಿ ತೋರಬೇಕು. ನಮ್ಮಲ್ಲಿ ಡಾಕ್ಟರ್ ಎಂಜಿನಿಯರ್ ಮತ್ತು ಇತರ ಕ್ಷೇತ್ರಗಳಲ್ಲಿ ಇದ್ದಾರೆ, ಆದರೆ ಸರಕಾರಿ ಸೇವೆಯ ಕ್ಷೇತ್ರದಲ್ಲಿ ಬಹಳ ವಿರಳ ಅದರಲ್ಲಿ ನಮ್ಮ ಮಕ್ಕಳ ಆಸಕ್ತಿ ಹೆಚ್ಚಬೇಕು. ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತಿ ವಂ|ಡಾ| ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು. ಅಂಬಾಗಿಲಿನಲ್ಲಿರುವ ಧರ್ಮಪ್ರಾಂತ್ಯದ ಪಾಲನಾ ಕೇಂದ್ರ ಅನುಗ್ರಹದಲ್ಲಿ ಕಥೊಲಿಕ್ ಸಭಾ ಉಡುಪಿ ಪ್ರದೇಶ್ ಹಾಗೂ ಮುಂಬೈ ಜಾನ್ ಡಿಸಿಲ್ವಾ ಫೌಂಡೇಶನ್ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಾತನಾಡಿದರು. ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ಅತೀ ಹೆಚ್ಚಿನ ಪರಿಶ್ರಮ ಪಟ್ಟು ಶಿಕ್ಷಣದಲ್ಲಿ ಸಾಧನೆ ತೋರಿದ್ದಲ್ಲಿ ಮುಂದಿನ ಜೀವನದಲ್ಲಿ ಉನ್ನತ ಸ್ಥಾನ ಗಳಿಸಬಹುದಾಗಿದೆ, ಶಿಕ್ಷಣ ಕ್ಷೇತ್ರ ವಿಸ್ತಾರವಾಗಿದ್ದು ಹೊಸ ಹೊಸ ಪ್ರಯೋಗಗಳಿಗೆ ಇಂದಿನ ವಿದ್ಯಾರ್ಥಿ ಸಮುದಾಯ ಆಸಕ್ತಿಯನ್ನು ತೋರಿದಾಗ ಉನ್ನತ ಸ್ಥಾನ ಲಭಿಸಲು ಸಾಧ್ಯವಿದೆ. ಸಮುದಾಯದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸರಕಾರಿ ಸೇವೆಯತ್ತ ಆಸಕ್ತಿ ತೋರಬೇಕು. ಸಮಾಜದಲ್ಲಿ ಹಲವಾರು ಅವಕಾಶಗಳಿದ್ದು ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆಯಬೇಕಾಗಿದೆ. .
ಭಾರತ ಸರಕಾರದ ಅಂಚೆ ಇಲಾಖಾ ಮಂಡಳಿಯ ಮಾಜಿ ಸದಸ್ಯ ನಿವೃತ್ತ ಸದಸ್ಯ ಡಾ| ಚಾರ್ಲ್ಸ್ ಲೋಬೊ ದಿಕ್ಸೂಚಿ ಭಾಷಣ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಇಂದಿನ ಮಕ್ಕಳು ಹೆಚ್ಚು ಹೆಚ್ಚು ಎದುರಿಸುವತ್ತ ಗಮನ ಹರಿಸಬೇಕು. ಕ್ರೈಸ್ತ ಸಮುದಾಯ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಸರಕಾರಿ ಹುದ್ದೆಗಳತ್ತ ಆಸಕ್ತಿ ತೋರಬೇಕು ಇದಕ್ಕಾಗಿ ಹೆತ್ತವರ ಕರ್ತವ್ಯ ಹೆಚ್ಚಿದೆ, ಹೆತ್ತವರು ಅವರಲ್ಲಿ ಪ್ರೇರಣೆ ತುಂಬಬೇಕು, ಈ ವಿಶಯದಲ್ಲಿ ಪ್ರಾಥಮಿಕ ಹಂತದಲ್ಲಿಯೇ ಪ್ರಯತ್ನ ಮಾಡಿದಾಗ ಉತ್ತಮ ಫಲಿತಾಂಶ ಪಡೆಯಲು ಸಾಧ್ಯವಿದೆ ಎಂದರು.
ಮುಂಬೈ ಜಾನ್ ಡಿಸಿಲ್ವಾ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಉಡುಪಿ ಧರ್ಮಪ್ರಾಂತ್ಯ ವ್ಯಾಪ್ತಿಯ 53 ಚರ್ಚುಗಳಲ್ಲಿ ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ, ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾ ನೀಡಲಾಯಿತು. ಅಲ್ಲದೆ ವೀಶೆಷ ಸಾಧನೆ ಮಾಡಿದ ಪಿಎಚ್ ಡಿ ಪದವಿ ಪಡೆದ ಡಾ|ಸಿಂಡ್ರೆಲ್ಲಾ ಗೊನ್ಸಾಲ್ವಿಸ್ ಮತ್ತು ಚಾರ್ಟೆಡ್ ಅಕೌಂಟ್ ಪದವಿ ಪಡೆದ ವಿನಾರ್ಡ್ ಜೋಸೇಫ್ ಡಿಕೊಸ್ತಾ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷರಾದ ಸಂತೋಷ್ ಕರ್ನೆಲಿಯೋ ವಹಿಸಿ ಹಲವಾರು ವರ್ಷಗಳಿಂದ ಈ ಕಾರ್ಯಕ್ರಮದಲಕ್ಕೆ ಸಹಾಯ ಧನ ನೀಡುವ ಜಾನ್ ಡಿಸಿಲ್ವಾ ಫೌಂಡೇಶನ್ ಅಧ್ಯಕ್ಷ ಜಾನ್ ಗ್ಲ್ಯಾಡಿಸ್ ಡಿಸಿಲ್ವಾ ಅವರಿಗೆ ಹ್ರತ್ಪೂರ್ವಕ ಧನ್ಯವಾದಗಳನ್ನು ನೀಡಿದರು.
ಜಾನ್ ಡಿಸಿಲ್ವಾ ಫೌಂಡೇಶನ್ ಅಧ್ಯಕ್ಷ ಜಾನ್ ಮಾತನಾಡಿ ನಮ್ಮ ಸಮುದಾಯದವರು ಎಲ್ಲಾ ಕ್ಷೇತ್ರಗಳಲ್ಲಿ ಸೇವೆ ನೀಡಬೇಕು, ಅದರಲ್ಲಿಯೂ ಈಗ ರಕ್ಷಣ ವಿಭಾಗದಲ್ಲಿ ಕೊರತೆ ಕಾಣುತ್ತೀದೆ ಅದರಲ್ಲಿಯೂ ಆಸಕ್ತಿವಹಿಸಬೇಕು’ ಎಂದರು. ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಆಧ್ಯಾತ್ಮಿಕ ನಿರ್ದೇಶಕ, ಧರ್ಮಪ್ರಾಂತ್ಯದ ಶ್ರೇಷ್ಠಗುರು ಮೊನ್ಷಿಂಜ್ಞೊರ್ ಫರ್ಡಿನಾಂಡ್ ಗೊನ್ಸಾಲ್ವಿಸ್ “ಇವತ್ತು ಸಾಧನೆ ಮಾಡಿ ಸನ್ಮಾನ ಪಡೆದ ಸಿಂಡ್ರೆಲಾ ಮತ್ತು ವಿನಾರ್ಡ್ ಇಬ್ಬರೂ ನನಗೆ ತಿಳಿದಿರುವರು, ಅವರು ನಿರಂತರ ಕಲಿತು ಸಾಧನೆ ಮಾಡಿದವರು, ಅವರಂತೆ ಇವತ್ತು ವಿದ್ಯಾರ್ಥಿ ಪುರಸ್ಕಾರ ಪಡೆದ ಮಕ್ಕಳು ಪ್ರಯತ್ನಿಸಬೇಕು” ತಿಳಿಸಿದರು.
ನಿಯೋಜಿತ ಅಧ್ಯಕ್ಷರಾದ ರೊನಾಲ್ಡ್ ಆಲ್ಮೇಡಾ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಮಾಜಿ ಅಧ್ಯಕ್ಷರಾದ ವಲೇರಿಯನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಂಚಾಲಕರಾದ ಡಾ| ಜೆರಾಲ್ಡ್ ಪಿಂಟೊ ಸ್ವಾಗತಿಸಿ, ಕಾರ್ಯದರ್ಶಿ ಒಲಿವೀಯಾ ಡಿಮೆಲ್ಲೊ ವಂದಿಸಿದರು. ಲೆರಿಸ್ಸಾ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.