‘ಕಥೊಲಿಕ್‌ ಸಭಾ ಮಂಗ್ಳುರ್ ಪ್ರದೇಶ್ (ರಿ) ಸಂಘಟನೆ, ದ. ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದು – ಅಧ್ಯಕ್ಷರಿಂದ ಪ್ರಶಸ್ತಿ ಸ್ವೀಕಾರ

ಮಂಗಳೂರು: 2023ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಸಂಘ ಸಂಸ್ಥೆ ವಿಭಾಗದಿಂದ ಕಥೋಲಿಕ ಕ್ರೈಸ್ತ ಸಂಘಟನೆಯಾದ ‘ಕಥೊಲಿಕ್‌ ಸಭಾ ಮಂಗ್ಳುರ್ ಪ್ರದೇಶ್ (ರಿ)ಆಯ್ಕೆಯಾಗಿದೆ.
44 ವರ್ಷಗಳ ಇತಿಹಾಸ ಹೊಂದಿರುವ ಕಥೊಲಿಕ್‌ ಸಭಾ ಮಂಗ್ಳುರ್ ಪ್ರದೇಶ್ (ರಿ) ಧರ್ಮಕ್ಷೇತ್ರದಾದ್ಯಂತ ಒಟ್ಟು 111 ಘಟಕಗಳನ್ನು ಹೊಂದಿದೆ. 1979ರಲ್ಲಿ ಕೇಂದ್ರದ ಮಾಜಿ ಸಚಿವ ದಿ. ಆಸ್ಕರ್‌ ಫೆರ್ನಾಂಡಿಸ್ ರವರ ಮುಂದಾಳತ್ವದಲ್ಲಿ ಈ ಸಂಘಟನೆಯು ಆರಂಭಗೊಂಡಿತು. ಅವರೇ ಮೊದಲ ಸ್ಥಾಪಕ ಅಧ್ಯಕ್ಷರಾಗಿ ನೇತೃತ್ವ ವಹಿಸಿಕೊಂಡರು. ಸಾಮಾಜಿಕ ಹಾಗೂ ಧಾರ್ಮಿಕ ಕಳಕಳಿ ಹೊಂದಿರುವ ಈ ಸಂಘಟನೆಯು ಮಂಗಳೂರು ಮತ್ತು ಉಡುಪಿ ಪ್ರಾಂತ್ಯದಲ್ಲಿ ಸಕ್ರಿಯವಾಗಿದೆ. ಸದ್ಯ ಕಥೊಲಿಕ್‌ ಸಭಾ ಮಂಗ್ಳುರ್ ಪ್ರದೇಶ್ (ರಿ) ಇದರ ಕೇಂದ್ರೀಯ ಅಧ್ಯಕ್ಷರಾಗಿ ಆಲ್ವಿನ್‌ ಜೆರೋಮ್‌ ಡಿಸೋಜ ಪಾನೀರ್‌ ಅವರು ಕಾರ್ಯನಿರ್ವಹಿಸುತ್ತಿದ್ದು, ವಂ. ಫಾ.ಜೆ.ಬಿ ಸಲ್ಡಾನ್ಹಾ ಅವರು ಆಧ್ಯಾತ್ಮಿಕ ನಿರ್ದೇಶಕರಾಗಿದ್ದಾರೆ
.

ಇಂದು ಮಂಗಳೂರಿನಲ್ಲಿ ನೆಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ‘ಕಥೊಲಿಕ್‌ ಸಭಾ ಮಂಗ್ಳುರ್ ಪ್ರದೇಶ್ (ರಿ) ಇದರ ಅಧ್ಯಕ್ಷರಾದ ಆಲ್ವಿನ್‌ ಜೆರೋಮ್‌ ಡಿಸೋಜ ಪಾನೀರ್‌ ಅವರು ಗಣ್ಯರಿಂದ ಸ್ವೀಕರಿಸಿದ್ದಾರೆ.