ಮಂಗಳೂರು: ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ರಜೆಯನ್ನು ಕಡಿತ ಗೊಳಿಸದಂತೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಅಧ್ಯಕ್ಷರಾದ ಆಲ್ವಿನ್ ಡಿ ಸೋಜರಿಂದ ಕುಲಪತಿಗಳಿಗೆ ಮನವಿ.
ಕಳೆದ 150 ವರ್ಷಗಳಿಂದ ಮದ್ರಾಸ್ ವಿಶ್ವವಿದ್ಯಾನಿಲಯದ ಕಾಲದಿಂದಲೂ ಕರಾವಳಿ ಕರ್ನಾಟಕದ ವಿಶ್ವಸಂಸ್ಥೆಗಳು ಕ್ರಿಸ್ಮಸ್ ಮತ್ತು ಹೊಸ ವರ್ಷದ ಕಾಲದ ರಜೆ ಸವಲತ್ತನ್ನು ಅನುಭವಿಸಿವೆ. ಆದರೆ ಈ ವರ್ಷ ಈ ರಜೆಯನ್ನು ಕಡಿತಗೊಳಿಸದಂತೆ ಮಾಜಿ MLC ಐವನ್ ಡಿ ಸೋಜರವರ ಮುಂದಾಳತ್ವದಲ್ಲಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಅಧ್ಯಕ್ಷರಾದ ಆಲ್ವಿನ್ ಡಿ ಸೋಜರವರು ಮಂಗಳೂರು ಕುಲಪತಿಯರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚೆ ನಡೆಸಿ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶದಿಂದ ಮನವಿಯನ್ನು ಸಲ್ಲಿಸಿರುತ್ತಾರೆ. ಈ ಸಂದರ್ಭದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಮಾಜಿ PRO ಮಾರ್ಸೆಲ್ ಮೊಂತೆರೋ ಹಾಗೂ ಕಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಖಜಾಂಜಿ ಫ್ರಾನ್ಸಿಸ್ ಮೊಂತೇರೊರವರು ಹಾಜರಿದ್ದರು.