JANANUDI.COM NETWORK

ಕುಂದಾಪುರ, ಮಾ. 25: “ಜೀವನದಲ್ಲಿ ಸಾಧಕರ ಆಗಬೇಕಾದರೆ ಪ್ರತಿ ಸಂದರ್ಭದಲ್ಲಿ ಜ್ಞಾನವನ್ನು ವೃದ್ಧಿಸುವ ಮನೋಭಾವನೆ ಇರಬೇಕು. ಸಾಧನೆಗೆ ಮಿತಿ ಇಲ್ಲ.ಜೀವನದಲ್ಲಿ ಗಳಿಸಿದ ಸಂಪತ್ತಿನ ಕೆಲವೊಂದು ಭಾಗ ಸಮಾಜದ ಅಗತ್ಯಕ್ಕೆ ನೀಡುವುದು ಪ್ರತಿವೊಬ್ಬರ ಕರ್ತವ್ಯ” ಎಂದು ನೇತನ್ ಕರ್ವಾಲೋ ಖ್ಯಾತ ಸಂವಹನ ಸಲಹೆಗಾರರು ಹೇಳಿದರು.
ಇಲ್ಲಿನ ಸೈಂಟ್ ಮೇರಿಸ್ ಸಭಾಂಗಣದಲ್ಲಿ ಭಾನುವಾರ 24 ರಂದು ನಡೆದ ಕಥೋಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಪ್ರತಿಭಾ ಪುರಸ್ಕಾರ ಮತ್ತು” ಸಾಧನ್ ಚರಿತ್ರಾ”ಪುಸ್ತಕದ ಅನಾವರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಥೋಲಿಕ್ ಸಭಾ ಕುಂದಾಪುರ ವಲಯ ಸಮಿತಿಯ ಆಧ್ಯಾತ್ಮಿಕ ನಿರ್ದೇಶಕರಾದ ಕುಂದಾಪು ಚರ್ಚಿನ ಪ್ರಧಾನ ಧರ್ಮಗುರುಗಳಾದ ಅತಿ ವಂದನೀಯ ಸ್ಟ್ಯಾನಿ ತಾವ್ರೊ ಕಾರ್ಯಕ್ರಮವನ್ನು ಉದ್ಘಾಟಿಸಿ ” ಮಕ್ಕಳ ಪ್ರತಿಭೆಯನ್ನು ಗುರುತಿಸಿ ಸ್ಪೂರ್ತಿಯನ್ನು ನೀಡುವುದು ಹೆತ್ತವರ ಜವಾಬ್ದಾರಿ” ಎಂದರು.
ಕಥೋಲಿಕ್ ಸಭಾ ವಲಯ ಕುಂದಾಪುರ ಸಮಿತಿಯ ಪೂರ್ವಾಧ್ಯಕ್ಷೆ ಮೇಬಲ್ ಡಿಸೋಜ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಯಾಗಿ ಮೇರಿ ಡಿಸೋಜ ಅಧ್ಯಕ್ಷರು ಕ್ಯಾಥಲಿಕ್ ಸಭಾ ಜಿಲ್ಲಾ ಸಮಿತಿ, ವಿನೋದ್ ಕ್ರಾಸ್ಟೊ ಅಧ್ಯಕ್ಷರು ಶೆವೂಟ್ ಪ್ರತಿಷ್ಠಾನ, “ಸಾಧನ ಚರಿತ್ರಾ” ಪುಸ್ತಕದ ಸಂಚಾಲಕರಾದ ಎಲ್ ರೋಯ್ ಕಿರಣ ಕ್ರಾಸ್ಟೊ ,ವಲೇರಿಯನ್ ಮಿನೇಜಸ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿಕಂಪ್ಯೂಟರ್ ವಿಜ್ಞಾನ ಪದವಿಯಲ್ಲಿ ಮೂರನೇ ರೇಂಕ್ ಪಡೆದ ಬೈಂದೂರಿನ ಸೊಲಿಟಾ ರೊಡ್ರಿಗಸ್ ಅವರಿಗೆ ಮತ್ತು ಸಾಧನೆ ಗೈದ ಇತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಹಾಗೇ ಚರಿತ್ರೆ ಪುಸ್ತಕ ರಚಿಸಲು ಶ್ರಮಿಸಿದ ಎಲ್ ರೋಯ್ ಕಿರಣ ಕ್ರಾಸ್ಟೊ ಅವರನ್ನು ಗೌರವಿಸಲಾಯಿತು.
ಪ್ರಸ್ತುತ ಅಧ್ಯಕ್ಷೆಯಾದ ಶಾಂತಿ ಪಿರೇರಾ ಸ್ವಾಗತಿಸಿ ,ಕಾರ್ಯದರ್ಶಿ ಡೈನಾ ಸೇರಾವೂ ವಂದಿಸಿ, ರೇನಿಟಾ ಬಾರ್ನಸ್ ಕಾರ್ಯಕ್ರಮವನ್ನು ನಿರೂಪಿಸಿದರು.












