ಕುಂದಾಪುರ,ನ.25; ಕೆಲವು ದಿನಗಳ ಹಿಂದೆ ಕುಂದಾಪುರ ಹೋಲಿ ರೋಜರಿ ಕಿಂಡರ್ ಗಾರ್ಟನ್ ಶಾಲೆಯಲ್ಲಿ ಶಿಕ್ಷಕ ರಕ್ಷಕ ಮತ್ತು ವಿದ್ಯಾರ್ಥಿಗಳ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಹೋಲಿ ರೋಜರಿ ಚರ್ಚಿನ ಪ್ರಧಾನ ಧರ್ಮಗುರು ಅ|ವಂ|ಸ್ಟ್ಯಾನಿ ವಹಿಸಿ ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳ ರಕ್ಷಕರಿಗೆ ತಿಳುವಳಿಕೆ ನೀಡಿದರು. ಸಣ್ಣ ಮಕ್ಕಳ ಪಾಲನೆ ಬಗ್ಗೆ ಡಾ|ಸೋನಿ ಡಿಕೋಸ್ತಾ “ಮಕ್ಕಳು ಚಿಕ್ಕರಿರುವಾಗಲೇ ಉತ್ತಮ ಸಂಸ್ಕಾರವನ್ನು ಕಲಿಸುವುದು, ಮಗುವಿಗೆ ಅರಿವಿನ ಶಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸುವುದು, ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ಪ್ರಯತ್ನ ಪಡುವುದು, […]
ಕುಂದಾಪುರ,ನ.28: 452 ವರ್ಷಗಳ ಐತಿಹಾಸಿಕ ಚರಿತ್ರೆಯುಳ್ಳ ಹೋಲಿ ರೋಜರಿ ಮಾತಾ ಇಗರ್ಜಿಯ ವಾರ್ಷಿಕ ಮಹಾ ಹಬ್ಬವು ನ. 23 ರಂದು ‘ಆತನು ಎನು ಹೇಳುತಾನೊ, ನೀವು ಹಾಗೆ ಮಾಡಿರಿ” ಮೇರಿ ಮಾತೆ ಯೇಸುವಿಗೆ ತನ್ನ ಪ್ರಥಮ ಅದ್ಬುತವನ್ನು ಮಾಡಲು ಪ್ರೇರೆಪಿಸಿದ ಮಾತುಗಳನ್ನು ಮಹಾ ಉತ್ಸವದ ಧ್ಯೇಯ ವಾಕ್ಯವನ್ನು ಅಳವಡಿಸಿಕೊಂಡು ಮಹಾಉತ್ಸವವನ್ನು ಸಡಗರ ಸಂಭ್ರಮದ ಜೊತೆ ಭಕ್ತಿಪೂರ್ವಕವಾಗಿ ಆಚರಿಸಲಾಯಿತು.ಹಬ್ಬದ ಮಹಾ ಬಲಿದಾನದ ನೇತ್ರತ್ವವನ್ನು ವಹಿಸಿದ ಮಂಗಳೂರು ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕರಾದ ವಂ|ವಿಲ್ಫ್ರೆಡ್ ಪ್ರಕಾಶ್ ಡಿಸೋಜಾ “ಹಲವು […]
ಕುಂದಾಪುರ,ನ.23: ಕುಂದಾಪುರ ರೊಜಾರಿ ಮಾತೆ ಇಗರ್ಜಿಯ ತೆರಾಲಿ ಜಾತ್ರೆಯು ನ 22 ದಂದು ದೇವರ ದೇವರ ವಾಕ್ಯದ ಪೂಜಾ ವಿಧಿಯಿಂದ ಆರಂಭ ಗೊಂಡಿತು. ಸಂಜೆ ರೋಜರಿ ಮಾತೆಯ ಪಲ್ಲಕ್ಕಿಯ ಮೆರವಣಿಗೆ ಬಹಳ ವಿಜ್ರಂಭಣೆಯಿಂದ ನೆಡೆಸಿದ ತರುವಾಯ ಈ ಈ ಪೂಜಾ ವಿಧಿಯನ್ನು ಬೈಂದೂರು ಇಗರ್ಜಿಯ ವಂ|ಫಾ| ವಿನ್ಸೆಂಟ್ ಕುವೆಲ್ಲೊ ನಡೆಸಿಕೊಟ್ಟು “ಉತ್ತಮ ಮತ್ತು ಸಂತೋಷಭರಿತ ಜೀವನಕ್ಕೆ ದೇವರ ವಾಕ್ಯದ ಪ್ರೇರಣೆ ಅಗತ್ಯ” ಎಂಬ ಧ್ಯೇಯ ವಾಕ್ಯದೊಂದಿಗೆ, ದೇವರ ವಾಕ್ಯಗಳ ಸಂಭ್ರಮ ನಡೆಯಿತು. ಪುಸ್ತಕಗಳಲ್ಲಿ ಅತೀ ಉತ್ತಮ ,ಜ್ನಾನ […]
ಕುಂದಾಪುರ,ನ.21: ಉಡುಪಿ ಧರ್ಮ ಪ್ರಾಂತ್ಯದಲ್ಲೆ ಅಂತ್ಯಂತ ಪುರಾತನವಾದ “ಪವಿತ್ರ ರೋಜರಿ ಮಾತಾ” ಕುಂದಾಪುರದ ಇಗರ್ಜಿಯಲ್ಲಿ ಕ್ರಿಸ್ತ ರಾಜನ ಹಬ್ಬದಂದು, ತೆರಾಲಿ ಹಬ್ಬದ ಅಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ನೆಡೆಯುವ “ಕೊಂಪ್ರಿ ಆಯ್ತಾರ್” ಭ್ರಾತತ್ವ ಬಾಂಧವ್ಯ ದಿನವನ್ನು “ಪ್ರಭು ಯೇಸುವಿನ ದಯೆ ನಮಗೆಲ್ಲರಿಗೂ ಪ್ರೇರಣೆ” ಎಂಬ ಧ್ಯೇಯದೊಂದಿಗೆ, ಪವಿತ್ರ ಬಲಿದಾನ ಮತ್ತು ಪರಮ ಪ್ರಸಾದದ ಆರಾಧನೆ ನ.20 ರಂದು ನೆಡೆಯಿತು.ಪವಿತ್ರ ರೋಜರಿ ಮಾತಾ ದೇವಾಲಯಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿದ ತರುವಾಯ ಅಪಾರ ಭಕ್ತಾದಿ ಜನ ಮತ್ತು ಅನೇಕ ಧರ್ಮ ಭಗಿನಿಯರೊಡನೆ […]
ಕುಂದಾಪುರ: ನ.18; ದಿನಾಂಕ 14.11.2022 ರಂದು ಹೋಲಿ ರೋಸರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಯಿತು. ಶಾಲೆಯ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರಿಂದ ನೆಹರುರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವವನ್ನು ಸಲ್ಲಿಸಲಾಯಿತು. ಮತ್ತು ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆಯ ಮಹತ್ವವನ್ನು ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ತೆರೆಜ್ ಶಾಂತಿ ಎ.ಸಿ ತಿಳಿಸಿದರು. ಬೋಧಕ ಹಾಗೂ ಬೋಧಕೇತರ ವರ್ಗದವರಿಂದ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆ ಏರ್ಪಡಿಸಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ನೀಡಿ ಶಾಲಾ […]
ಕುಂದಾಪುರ, ಕುಂದಾಪುರ ವಲಯ ಮಟ್ಟದ ಕ್ರೀಡಾಕೂಟವು ದಿನಾಂಕ 15 ಮತ್ತು 16ನೇ ನವೆಂಬರ್ 2022ರಲ್ಲಿ ಮದರ್ ತೆರೇಸಾ ಮೆಮೋರಿಯಲ್ ಆಂಗ್ಲ ಮಾಧ್ಯಮ ಶಾಲೆ ಶಂಕರನಾರಾಯಣದಲ್ಲಿ ನಡೆದ ಆಡೋಟದಲ್ಲಿ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಪದಕಗಳನ್ನು ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಅಂಕಿತಾ ವಿ ಶೇಟ್ ಪ್ರೌಢ ಶಾಲಾ ವಿಭಾಗದ ಹ್ಯಾಮರ್ ಎಸೆತ ಸ್ಪರ್ಧೆಯಲ್ಲಿ ಹೋಲಿ ರೋಜರಿ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿಯ ಅಂಕಿತಾ ವಿ ಶೇಟ್ ಪ್ರಥಮ ಸ್ಥಾನ ಗಳಿಸಿ ಕಾರ್ಕಳದಲ್ಲಿ […]
ಕುಂದಾಪುರ, ನ.13: ಕಥೊಲಿಕ್ ಸಭಾ ಕುಂದಾಪುರ ಘಟಕದಿಂದ ಅರೋಗ್ಯ ಕಾರ್ಡ್ ನೋಂದಾವಣೆ ಮಾಡಿದ ಆರೋಗ್ಯ ಕಾರ್ಡುಗಳ ವಿತರಣ ಕಾರ್ಯಕ್ರಮ ನ.13 ರಂದು ಕುಂದಾಪುರ ಚರ್ಚ್ ಆವರಣದಲ್ಲಿ ನಡೆಯಿತು. ಕಥೊಲಿಕ್ ಸಭಾ ಕುಂದಾಪುರ ಘಟಕದ ಕಾರ್ಯಕರ್ತರು ಸ್ಥಳದಲ್ಲೆ ಒನ್ ಲೈನಿನ ಮೂಲಕ, ಅಭಾ ಕಾರ್ಡ್, ಇ ಶ್ರಮ ಕಾರ್ಡಗಳ ನೋಂದಣಿಯ ಸೇವೆಯನ್ನು ಮಾಡಿದ್ದರು. ಕುಂದಾಪುರ ಕಥೊಲಿಕ್ ಸಭಾ ಘಟಕದ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ ಕಥೊಲಿಕ್ ಸಭಾ ಕುಂದಾಪುರ ಘಟಕದ ಅಧ್ಯಾತ್ಮಿಕ ನಿರ್ದೇಶಕರಾದ ಅ|ವಂ|ಸ್ಟ್ಯಾನಿ ತಾವ್ರೊಇವರಿಗೆಆರೋಗ್ಯ ಕಾರ್ಡನ್ನು ಹಸ್ತಾಂತರಿಸುವ ಮೂಲಕ […]