
ಹಾಸನ : ಜಿಲ್ಲೆಯ ಆಲೂರು ತಾಲೂಕಿನ ಈಶ್ವರಹಳ್ಳಿ ಕೂಡಿಗೆ ಬಳಿ ಕಾರು ಹಾಗೂ ಟಿಪ್ಪರ್ ಮಧ್ಯೆ ಭೀಕರ ರಸ್ತೆ ಅಪಘಾತವಾಗಿಸಂಭವಿಸಿ ನಾಲ್ವರು ಸ್ಥಳದಲ್ಲೇ ಸಾವಿಗೀಡಾದ ಭೀಕರ ಘಟನೆ ನೆಡೆದಿದೆ. ಈ ಅಪಘಾತದಲ್ಲಿ ಇನ್ನು ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಮೃತರು ಹಾಸನ ತಾಲೂಕು ಕುಪ್ಪಳಿ ಗ್ರಾಮದ ಚೇತನ್, ಗುಡ್ಡೇನಹಳ್ಳಿಯ ಅಶೋಕ್, ತಟ್ಟಿಕೆರೆಯ ಪುರುಷೋತ್ತಮ, ಆಲೂರು ತಾಲೂಕಿನಚಿಗಳೂರಿನ ದಿನೇಶ್ ಎಂದು ತಿಳಿದುಬಂದಿದೆ. ಟಿಪ್ಪರ್ ಹಾಸನದಿಂದ ಸಕಲೇಶಪುರಕ್ಕೆ ತೆರಳುತ್ತಿದ್ದು, ಇನ್ನೊವಾ ಕಾರು ಸಕಲೇಶಪುರದಿಂದ ಹಾಸನಕ್ಕೆ ತೆರೆಳುತಿತ್ತು. ಇವೆರೇಡು […]

ಬೆಂಗಳೂರು, ಜು.22: ರಾಜ್ಯದ ಹಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಐದು ದಿನಗಳ ಕಾಲ ರಾಜ್ಯದ ಕೆಲವು ಜಿಲ್ಲೆಗಳಲ್ಲಿ. ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ವಿಶೇಷವಾಗಿ ರಾಜ್ಯದ ಕರಾವಳಿ ಜಿಲ್ಲೆಗಳು ಮತ್ತು ಉತ್ತರ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ, ಮುಂದಿನ ಐದು ದಿನಗಳವರೆಗೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ,ಉಡುಪಿ ಮತ್ತು ಉತ್ತರ ಕನ್ನಡ, ಜಿಲ್ಲೆಗಳಲ್ಲಿ ಬಲವಾದ ಗಾಳಿಯೊಂದಿಗೆ ಭಾರೀ ಮಳೆಯಾಗಲಿದೆಯೆಂದು ತಿಳಿಸಿ, ಈ ಮೂರು […]
ಇಂಫಾಲ: ಮಣಿಪುರ ರಾಜ್ಯದ ಕಾ೦ಗ್ಪೋಷಿ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆ ಗೊಳಿಸಿ ಅನಾಗರಿಕ ರೀತಿಯಲ್ಲಿ ಮರವಣಿಗೆ ಮಾಡಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆಗೆ ಒತ್ತಾಯಿಸಿ ಸಾವಿರಾರು ಆದಿವಾಸಿ ಮಹಿಳೆಯರು ಮತ್ತು ಪುರುಷರು ಭಾರಿ ಮಳೆಯ ನಡುವೆಯೂ ಪ್ರತಿಭಟನೆ ನಡೆಸಿದ ಸುದ್ದಿ ಪ್ರಸಾರ ಆಗಿದೆ. ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ ಆಯೋಜಿಸಿದ್ದ ಬೃಹತ್ ರೇಲಿಯಲ್ಲಿ ಸಾವಿರಾರು ಪುರುಷರು ಮತ್ತು ಮಹಿಳೆಯರು ಹೆಚ್ಚಾಗಿ ಯುವಕರು ಭಾಗವಹಿಸಿ ಬ್ಯಾನರ್ ಮತ್ತು ಫಲಕಗಳನ್ನು ಹಿಡಿದು, ಕಪ್ಪು ಉಡುಪು ಧರಿಸಿ ಪ್ರತಿಭಟಿಸಿದರು. ಪ್ರತ್ಯೇಕ ಆಡಳಿತಕ್ಕಾಗಿ […]
ಮಂಗಳೂರು: 2023 ರ ಜುಲೈ 16 ರಂದು “ಉತ್ತರಿಕೆಯ ಹಬ್ಬ”ವೆಂದು ಕರೆಯಲ್ಪಡುವ ಕಾರ್ಮೆಲ್ ಮಾತೆಯ ಹಬ್ಬವನ್ನು ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ಕಾರ್ಮೆಲ್ ಸಭೆಯ ಗುರುಗಳು ಬಹಳ ವಿಜೃಂಭಣೆಯಿಂದ ಆಚರಿಸಿದರು. ಉತ್ತರಿಕೆಯ ಹಬ್ಬ ಹಾಗು ಕಾರ್ಮೆಲ್ ಮಾತೆಯ ಹಬ್ಬದ ಗೌರವಾರ್ಥವಾಗಿ ಪುಣ್ಯಕ್ಷೇತ್ರದಲ್ಲಿ 9 ದಿನಗಳ ನೊವೇನವನ್ನು ನಡೆಸಲಾಯಿತು. ಈ 9 ದಿನಗಳಲ್ಲಿ, ಕಾರ್ಮೆಲ್ ಸಭೆಯ ಗುರುಗಳು ಆಧ್ಯಾತ್ಮಿಕ ಸುಧಾರಣೆಗಾಗಿ ಮತ್ತು ಹಬ್ಬಕ್ಕೆ ಸಿದ್ಧತೆಗಾಗಿ ವಿವಿಧ ವಿಷಯಗಳ ಕುರಿತು ಪ್ರಭೋದನೆಯನ್ನು ನೀಡಿದರು. ಜುಲೈ 16 ಹಬ್ಬದ ದಿನದಂದು, ಧರ್ಮಗುರು ಫಾ. ರಿಚರ್ಡ್ […]
ಶಿರ್ವ : ” ರಾಷ್ಟ್ರೀಯ ಸೇವಾ ಯೋಜನೆಯು ವಿಧ್ಯಾರ್ಥಿಗಳಲ್ಲಿ ಸೇವೆಯ ಮೂಲಕ ಸಮಾಜದ ಬಗ್ಗೆ ಅರಿವು ಮೂಡಿಸುತ್ತದೆ. ಎನ್ ಎಸ್ ಎಸ್ ಮೂಲಕ ಸ್ವಯಂ ಸೇವಕರ ವ್ಯಕ್ತಿತ್ವ ವಿಕಸನವಾಗುತ್ತದೆ.ಇಲ್ಲಿ ವಿಧ್ಯಾರ್ಥಿಗಳು ಯಾವುದೇ ಫಲಾಪೇಕ್ಷೆ ಇಲ್ಲದೆ ಸಮಾಜ ಸೇವೆ ಸಲ್ಲಿಸುತ್ತಾರೆ. ಇದು ಮುಂದೆ ಸಾರ್ಥಕ ಜೀವನ ನಡೆಸಲು ಪ್ರೆರಣೆ ಯಾಗುತ್ತದೆ” ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಸೇವಾ ಯೋಜನೆಯ ಮಂಗಳೂರು ವಿಭಾಗದ ಸಂಯೋಜನಾಧಿಕಾರಿ ಸವಿತಾ ಎರ್ಮಾಳ್ ಹೇಳಿದರು. ಅವರು ಶ್ರೀರ್ವ ಸಂತ ಮೇರಿ ಪದವಿ ಪೂರ್ವ […]
ಮಂಗಳೂರು; ‘ಪರಿಸರ ವಾರ’ ಎಂಬುದು ವಿದ್ಯಾರ್ಥಿಗಳಿಗೆ ನಮ್ಮ ಪರಿಸರವನ್ನು ಕಲಿಯಲು ಮತ್ತು ಅರ್ಥಮಾಡಿಕೊಳ್ಳಲು ಒಂದು ಅಸಾಧಾರಣ ಅವಕಾಶವಾಗಿದೆ. ನಮ್ಮ ಜೀವನದಲ್ಲಿ ಮರಗಳು ಮತ್ತು ಕಾಡುಗಳ ಮಹತ್ವದ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಸೇಂಟ್ ಆಗ್ನೆಸ್ ಪಿಯು ಕಾಲೇಜು ‘ಪರಿಸರ ವಾರ’ವನ್ನು ಆಚರಿಸಿತು. ಇದರ ದೃಷ್ಟಿಯಿಂದ, ಜೀವಶಾಸ್ತ್ರ ವಿಭಾಗವು ಈ ಕೆಳಗಿನ ಚಟುವಟಿಕೆಗಳನ್ನು ಆಯೋಜಿಸಿದೆ.
ಶ್ರೀನಿವಾಸಪುರ: ರೈತರು ಹಾಗೂ ವಿವಿಧ ಯೋಜನೆಗಳ ಪಿಂಚಣಿದಾರರು ಕಂದಾಯ ಹಾಗೂ ಪಿಂಚಣಿ ಅದಾಲತ್ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು.ತಾಲ್ಲೂಕಿನ ರೋಣೂರಿನ ನಾಡ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಂದಾಯ ಹಾಗೂ ಪಿಂಚಣಿ ಅದಾಲತ್ಗೆ ಚಾಲನೆ ನೀಡಿ ಮಾತನಾಡಿ, ಕೃಷಿಕರು ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳು ತಾಲ್ಲೂಕು ಕಚೇರಿಗೆ ಬರುವುದನ್ನು ತಪ್ಪಿಸಲು ಹೋಬಳಿ ಕೇಂದ್ರದಲ್ಲಿ ಅದಾಲತ್ ನಡೆಸಲಾಗುತ್ತಿದೆ ಎಂದು ಹೇಳಿದರು.ಅದಾಲತ್ನಲ್ಲಿ ಪಹಣಿ ಕಾಲಂ ನಂಬರ್ 3 ಮತ್ತು 9 ತಿದ್ದುಪಡಿಗೆ ಸಂಬಂಧಿಸಿದಂತೆ 9 ಪ್ರಕರಣಗಳು, […]

(ಚಿತ್ರ ಸಾಂದರ್ಭಿಕ) ಬೆಂಗಳೂರು: ಕಾರು ಚಲಾಯಿಸುತ್ತೀರುವಾಗಲೂ ಗಂಡ-ಹೆಂಡತಿ ಜಗಳಕ್ಕೆ ಕಾದು, ಕಾರು ಪಲ್ಟಿಯಾದ ಘಟನೆ ಬೆಂಗಳೂರು ನಗರದ ಹಲಸೂರು ಗೇಟ್ ಪೊಲೀಸ್ ಠಾಣೆಯ ಬಳಿ ತಡರಾತ್ರಿ ಘಟನೆ ನಡೆದಿದೆ. ಗಂಡ ಹೆಂಡತಿ ಮಾರುಕಟ್ಟೆ ಕಡೆಯಿಂದ ಐ 20 ಕಾರಿನಲ್ಲಿ ಬರುತ್ತಿರುವಾಗ ಗಂಡ ಹೆಂಡತಿ ನಡುವೆ ಜಗಳವಾಗಿದೆ.. ಕಾರಿನಲ್ಲಿ ಪತಿ- ನಡೆದಿದೆ. ಇದರಿಂದ ತಾಳ್ಮೆ ಕಳೆದುಕೊಂಡ ಪತ್ನಿ ದಿಢೀರನೇ ಕಾರಿನ ಸ್ಟೇರಿಂಗ್ ಎಳೆದ ಪರಿಣಾಮ ಕಾರು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಈ ಅವಘಡದಿಂದ ದಂಪತಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ […]