ಉಡುಪಿ: ಉಡುಪಿಯ ನೇಜಾರಿನಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ಉಡುಪಿ ಪೊಲೀಸರು ಬೆಳಗಾವಿ ಪೊಲೀಸರ ಸಹಕಾರದಿಂದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿಯ ಕುಡುಚಿಯಲ್ಲಿ ಬಂಧಿಸಿದ ಉಡುಪಿ ಪೊಲೀಸರು ಪ್ರವೀಣ್ ಅರುಣ್ ಚೌಗಲೆ ಎಂಬಾತನನ್ನು ಬಂಧಿಸಿದ್ದಾರೆ. ಈತ ಮಂಗಳೂರು ಏರ್ ಏರ್ಪೋರ್ಟ್ ಸೆಕ್ಯೂರಿಟಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸಿಆರ್ ಪಿಎಫ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆರೋಪಿ ಮಹಾರಾಷ್ಟ್ರ ಸಾಂಗ್ಲಿ ಮೂಲದವನಾಗಿದ್ದಾನೆ ಎನ್ನಲಾಗಿದೆ. ಕುಡಚಿಯಲ್ಲಿರುವ […]
ಉಡುಪಿ: ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ ನೆಜಾರಿನ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಉಡುಪಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಆರೋಪಿಯನ್ನು ಉಡುಪಿ ಡಿವೈಎಸ್ಪಿ ದಿನಕರ್ ಪಿ. ನೇತೃತ್ವದ ತಂಡ ಕೇರಳದ ಕೊಟ್ಟಾಯಂನಲ್ಲಿ ವಶಕ್ಕೆ ಪಡೆಯುವ ಸಾಧ್ಯತೆ ಇದೆಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ. ಸೇಜಾರು ತೃಪ್ತಿ ಲೇಔಟ್ನಲ್ಲಿ ರವಿವಾರ ನಡೆದ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸಿಸಿಟಿವಿ ಜಾಡು ಹಿಡಿದು ತನಿಖೆಯನ್ನು ಚುರುಕುಗೊಳಿಸಿದ್ದರು. ಕೊಲೆಗೈದ ಬಳಿಕ ಹಂತಕ […]
ಕುಂದಾಪುರದ ವಿಠಲವಾಡಿಯ “ಡೌನ್ ಟೌನ್” ನ ಪಂಚಗಂಗಾವಳಿ ತೀರದಲ್ಲಿ ದೀಪಾವಳಿಯ ದಿನ ಭಾನುವಾರ ಮುಂಜಾನೆ ಶಾಸ್ತ್ರೀಯ ಭಾವ ಸಂಗೀತ ಲಹರಿ ಕಾರ್ಯಕ್ರಮ ಸಂಗೀತ ಪ್ರಿಯರಿಗೆ ಆನಂದ ಉಂಟು ಮಾಡಿತು. ಸಂಗೀತ ಭಾರತಿ ಟ್ರಸ್ಟ್ ಕುಂದಾಪುರ ಹಾಗೂ ಗೋರಕ್ಷಾ ಗೋಕುಲಧಾಮ ಟ್ರಸ್ಟ್ ಕೋಟೇಶ್ವರದ ಜಂಟಿ ಆಶ್ರಯದಲ್ಲಿ ಡೌನ್ ಟೌನ್ ನದಿ ತೀರದಲ್ಲಿ ಅಭಿವೃದ್ಧಿ ಪಡಿಸಿದ ಹಸಿರು ಉದ್ಯಾನವನದಲ್ಲಿ, ಖ್ಯಾತ ಸಂಗೀತಗಾರ ಸಿದ್ಧಾರ್ಥ ಬೆಳ್ಮಣ್ಣು ಶುಶ್ರಾವ್ಯವಾಗಿ ಹಾಡಿದರು. ಈ ಶಾಸ್ತ್ರೀಯ ಸಂಗೀತ, ಭಕ್ತಿ ಸಂಗೀತ ಕಾರ್ಯಕ್ರಮದಲ್ಲಿ ಹಾರ್ಮೋನಿಯಂನಲ್ಲಿ ಪ್ರಸಾದ್ ಕಾಮತ್ […]
ಚಿತ್ರಗಳು ಎರವಲು ಉಡುಪಿ: ನೇಜಾರಿನಲ್ಲಿ ನಡೆದ ನಾಲ್ವರ ಭೀಕರ ಕೊಲೆ ಪ್ರಕರಣದ ಮ್ರತರ ಅಂತಿಮ ಸಂಸ್ಕಾರ ಇಂದು ಕೋಡಿಬೆಂಗ್ರೆ ಜಾಮೀಯಾ ಮಸೀದಿಯ ದಫನ ಭೂಮಿಯಲ್ಲಿ ನಡೆಯಿತು.ಇದಕ್ಕೂ ಮೊದಲು ಮ್ರತ ದೇಹಗಳ ಪೋಸ್ಟ್ ಮಾರ್ಟಮ್ ನೆಡೆಸಿ ಮ್ರತ ದೇಹಗಳನ್ನು ಸಂಬಂಧ ಪಟ್ಟವರಿಗೆ ಹಸ್ತಾಂತರಿಸಲಾಯಿತು. ಮ್ರತ ಶರೀರಗಳನ್ನು ನೇಜಾರಿನ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಯಿತು, ದರ್ಶನ ಪಡೆದ ನಂತರ ನಾಲ್ಕು ಮೃತದೇಹವನ್ನು ಕೋಡಿಬೆಂಗ್ರೆ ಮಸೀದಿಗೆ ಸಾಗಿಸಿ ಜನಾಝ ನಮಾಝ್ ನಿರ್ವಹಿಸಲಾಯಿತು. ನಮಾಝಿನಲ್ಲಿ ಸಾವಿರಾರು ಜನ ಪಾಲ್ಗೊಂಡರು. ನಂತರ ಸಮೀಪದ ದಫನ ಭೂಮಿಯಲ್ಲಿ […]
ಕೋಲಾರ : ಹಲವಾರು ವರ್ಷಗಳಿಂದ ಕೋಲಾರ ಜಿಲ್ಲೆಯ ಜನತೆಗೆ ಕುಡಿಯುವ ನೀರನ್ನು ಪೂರೈಸುವ ಮಹತ್ವದ ಯೋಜನೆಯಾದ ಯರಗೊಳ್ ಯೋಜನೆಗೆ ಇಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರು ಚಾಲನೆ ನೀಡಿದರು. ನಂತರ ಸಭಿಕರನ್ನುದ್ದೇಶಿ ಮಾತನಾಡಿದ ಅವರು ಕೆ ಸಿ ವ್ಯಾಲಿ, ಹೆಚ್ ಎನ್ ವ್ಯಾಲಿ,ಎತ್ತಿನ ಹೊಳೆ ಸೇರಿದಂತೆ ರಾಜ್ಯದ ಎಲ್ಲ ಕುಡಿಯುವ ನೀರಿನ ಯೋಜನೆಗಳನ್ನು ಈ ಸರ್ಕಾರದ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದರು.ಮುಂದಿನ ದಿನಗಳಲ್ಲಿ ಯರಗೊಳ್ ಜಲಾಶಯದ ಕುಡಿಯುವ ನೀರನ್ನು ಕೆ. ಜಿ. ಎಫ್ ತಾಲ್ಲೂಕಿಗೂ ವಿಸ್ತರಣೆ ಮಾಡಲು ಚಿಂತಿಸಲಾಗುತ್ತಿದೆ. […]
ಬಸ್ರೂರು, ಇಲ್ಲಿನ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಪಿಠೋಪಕರಣಗಳ ಕೊಡುಗೆಯನ್ನು ದಿ.ನಾರಯಣ ಶೆಟ್ಟಿ ಕೊಳ್ಕೆಬೈಲ್ ಸ್ಮರ್ಣಾರ್ಥ ಅವರ ಪುತ್ರರಾದ ಅನಿಲ್ ಪ್ರಸಾದ್ ಶೆಟ್ಟಿ ಮತ್ತು ಶಿವ ಪ್ರಸಾದ್ ಶೆಟ್ಟಿ ಇವರುಗಳು ನೀಡಿದ 80 ಸಾವಿರ ರೂ. ಮೌಲ್ಯದ ಪಿಠೋಪಕರಣಗಳನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಬೇಳೂರು ದಿನಕರ ಶೆಟ್ಟಿಯವರು ಶಾಲೆಗೆ ಹಸ್ತಾಂತರಿಸಿದರು.ದಾನಿಗಳಾದ ಅನಿಲ್ ಪ್ರಸಾದ್ ಶೆಟ್ಟಿಯವರನ್ನು ಶಾಲೆಯ ಪರವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಾ.ಪಂ. ಮಾಜಿ ಉಪಾಧ್ಯಕ್ಷ ಬಿ.ರಾಮ್ ಕಿಶನ್ ಹೆಗ್ಡೆ, ಗ್ರಾ.ಪಂ. ಸದಸ್ಯೆಯರಾದ ಇಂದಿರಾ ಪೂಜಾರಿ, ಮಾಲತಿ […]
ಬೆಂಗಳೂರು : ಬೈಂದೂರು ಮೂಲದ ಉದ್ಯಮಿಯೊಬ್ಬರಿಗೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಢದಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ 5 ಕೋಟಿ ರೂ ವಂಚಿಸಿದ ಪ್ರಕರಣ ಸಂಬಂಧಿಸಿದಂತೆ ಹಿಂದುತ್ವವಾದಿ ಭಾಷಣಗಾರ್ತಿ , ಕುಂದಾಪುರದ ಚೈತ್ರಾ ಮತ್ತು ಅವಳ ತಂಡದ ವಿರುದ್ಧ 68 ಸಾಕ್ಷಿಗಳು ಕಲೆ ಹಾಕಿ 800 ಪುಟಗಳ ಚಾರ್ಜ್ ಶೀಟ್ ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಿಸಿಬಿ ಪೊಲೀಸರು ಬುಧವಾರ ನಗರದ 3ನೇ ಎಸಿಎಂಎಂ ಕೋರ್ಟ್ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. 75 ಸಾಕ್ಷಿದಾರರ ಹೇಳಿಕೆಗಳನ್ನು ದಾಖಲಿಸಿರುವ ಚಾರ್ಜ್ಶೀಟ್ ಅನ್ನು ನ್ಯಾಯಾಲಯಕ್ಕೆ […]
ಹಾಸನ, ನ.9: ಹಾಸನ ಬಿಇಒ ಕಚೇರಿ ಅಧೀಕ್ಷಕರೊಬ್ಬರು ‘ನಾನು ಭ್ರಷ್ಟನಲ್ಲ, ಲಂಚ ಸ್ವೀಕರಿಸುವುದಿಲ್ಲ’ ಎಂದು ತನ್ನ ಟೇಬಲ್ ಮೇಲೆ ಬೋರ್ಡ್ ಹಾಕಿರುವ ದೃಶ್ಯದ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಹಾಸನ ಬಿಇಒ ಕಚೇರಿಯ ಅಧೀಕ್ಷರಾಗಿರುವ ಡಿ.ಎಸ್.ಲೋಕೇಶ್ ತಮ್ಮ ಟೇಬಲ್ ಮೇಲೆ ‘ನಾನು ಭ್ರಷ್ಟನಲ್ಲ, ಇಲ್ಲಿ ಲಂಚ ಸ್ವೀಕರಿಸುವುದಿಲ್ಲ’ ಎನ್ನುವ ಬೋರ್ಡ್ ಹಾಕಿರುವುದು ಗಮನ ಸೆಳೆದಿದೆ. ಲೋಕೇಶ್ ಅವರು ತಮ್ಮ ಪ್ರಾಮಾಣಿಕತೆ ಹಾಗೂ ದಕ್ಷತೆಯ ಕಾರಣಕ್ಕೆ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಸನ ಸಂಸದರಾಗಿದ್ದ ಅವಧಿಯಲ್ಲಿ ಅವರ ಕಚೇರಿಯ ಆಪ್ತ […]
ಬೆಂಗಳೂರು: ಬೆಂಗಳೂರಿನ ನೆಲಗದರನಹಳ್ಳಿಯಲ್ಲಿರುವ ಶ್ರೀಪೇಂಟ್ಸ್ ಕಾರ್ಟಾನೆಯಲ್ಲಿ ಬಣ್ಣ ಬೆರೆಸುವ ಪೇಂಟ್ ಮಿಕ್ಸರ್ಗೆ ಸಿಲುಕಿ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಮಹಿಳೆ ಶ್ವೇತಾ(33) ಎಂದು ತಿಳಿದು ಬಂದಿದೆ. ಬೆಂಗಳೂರಿನ ನೆಲಗದರನಹಳ್ಳಿಯಲ್ಲಿರುವ ಶ್ರೀಪೇಂಟ್ಸ್ ಽ ಕೆಮಿಕಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು, ಮಲ್ಲತ್ತಹಳ್ಳಿಯಲ್ಲಿ ವಾಸ ಮಾಡುತಿದ್ದ ಶ್ವೇತಾ, ಬುಧವಾರ ದಿವಸ ಶ್ರೀಪೇಂಟ್ಸ್ ಫ್ಯಾಕ್ಟರಿಯಲ್ಲಿ ಡ್ಯೂಟಿಯಲ್ಲಿದ್ದು ಬಣ್ಣ ಬೆರೆಸುವ ಗ್ರೈಂಡರ್ ನಲ್ಲಿ ಜಡೆ ಸಿಲುಕಿದ ಪರಿಣಾಮ ಶ್ವೇತಾಳ ತಲೆ ಸೆಳೆದುಕೊಂಡಿದೆ, ಪರಿಣಾಮ ತಲೆ ಕತ್ತರಿಸಿ ಹೋಗಿ ಶ್ವೇತಾ ಮೃತಪಟ್ಟಿದ್ದಾರೆ ಎಂದು ತಿಳಿದು […]