
ಬೆಂಗಳೂರು: ತಾಯಿ ಮಗಳ ನಡುವೆ ನಡೆದ ಜಗಳ ವಿಕೋಪಕ್ಕೆ ತಿರುಗಿ, ತಾಯಿ ಹಾಗೂ ಮಗಳು ಪರಸ್ಪರ ಚೂರಿಯಿಂದ್ ಇರಿದುಕೊಂಡ ಘಟನೆ ಬನಶಂಕರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಗಳು ಸಾಹಿತಿ (18) ತಾಯಿಯಿಂದಲೇ ಕೊಲೆಯಾದವಳು ಸಾಹಿತಿ ಪಿಯುಸಿ ಚೆನ್ನಾಗಿಯೇ ಓದುತ್ತಿದ್ದಳು. ಆದರೆ ಇತ್ತೀಚೆಗೆ ನಡೆದ ಪಿಯುಸಿ ಪರೀಕ್ಷೆಯಲ್ಲಿ. ಎರಡು ವಿಷಯಕ್ಕೆ ಸಾಹಿತಿ ಹಾಜರಾಗಲಿಲ್ಲ ಹೀಗಾಗಿ ಫಲಿತಾಂಶ ಫೇಲ್ ಅಂತಾ ಬಂದಿದೆ. ಇದರಿಂದ ಮಗಳನ್ನು ಓದಿಸುತ್ತಿದ್ದ ಪದ್ಮಜಾ ಮಗಳು ಒಳ್ಳೆ ಮಾರ್ಕ್ ತೆಗೆಯಬೇಕು ಅಂತಾ ಆಸೆ ಪಟ್ಟಿದ್ದರು. ಆದ್ರೆ […]

ಕುಂದಾಪುರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜು ಮೂಡ್ಲಕಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇದೇ ಮೇ ತಿಂಗಳ 1 ಮತ್ತು 2 ರಂದು ರಾಜ್ಯಮಟ್ಟದ ಎರಡು ದಿನಗಳ ಸಾಂಸ್ಕೃತಿಕ, ತಾಂತ್ರಿಕ ಮತ್ತು ಮ್ಯಾನೇಜ್ಮೆಂಟ್ ಸ್ಪರ್ಧಾಕೂಟ ಸಾವಿಷ್ಕಾರ್ ನಡೆಯಲಿದೆ. ಈ ಒಂದು ಕಾರ್ಯಕ್ರಮದಲ್ಲಿ 20 ಕ್ಕೂ ಅಧಿಕ ಅಧಿಕ ಸ್ಪರ್ಧೆಗಳು ನಡೆಯಲಿದ್ದು ಸುಮಾರು 30 ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ತಮ್ಮ ಕೌಶಲ್ಯಥೆಯನ್ನು ತೋರಿಸಲಿದ್ದಾರೆ. ಎಲ್ಲಾ ಸ್ಪರ್ಧೆಯ ವಿಜೇತರಿಗೆ ನಗದು ಬಹುಮಾನದ ಜೊತೆಗೆ ಸರ್ಟಿಫಿಕೇಟ್ ಕೂಡ ಸಿಗಲಿದೆ.ಕಾರ್ಯಕ್ರಮದ ರಂಗು ಏರಿಸಲು ಎರಡೂ ದಿನ, ಪ್ರಮುಖ […]

ರಾಯಚೂರು: ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಬಿಸಲಿನ ತಾಪಕ್ಕೆ ನಿರ್ಜಲೀಕರಣ ಉಂಟಾಗಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಇಬ್ಬರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಯಚೂರು ತಾಲೂಕಿನ ಚಿಕ್ಕಸುಗೂರು ಗ್ರಾಮದ ಹುಸೇನಮ್ಮ ಹಾಗೂ ಮಾರುತಿ ದಂಪತಿ ಮಕ್ಕಳಾದ ಆರತಿ (9) ಹಾಗೂ ಪ್ರಿಯಾಂಕಾ (7) ಮೃತ ದುರ್ದೈವಿಗಳು.ಪುತ್ರ ಲಕ್ಕಪ್ಪ (5)ಗೆ ರಿಮ್ಸ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗೂ ಮಾರುತಿ ತಂದೆ ಲಕ್ಷ್ಮಣ ಅವರನ್ನೂ ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಂಗಳೂರು : ಬರ ಪರಿಹಾರ ನಿಧಿ ಬಿಡುಗಡೆ ವೇಳೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಹಲವು ಸಚಿವರು ಮತ್ತು ಶಾಸಕರೊಂದಿಗೆ ಭಾನುವಾರ ಇಲ್ಲಿ ಧರಣಿ ನಡೆಸಿದರು. ಶೂನ್ಯತೆ ಮತ್ತು ವಂಚನೆಯ ಪ್ರತೀಕವಾದ ‘ಚೊಂಬು’ ಎಂಬ ದುಂಡನೆಯ ನೀರಿನ ಮಡಕೆಯನ್ನು ಹಿಡಿದುಕೊಂಡ ನಾಯಕರು, ಕಳೆದ ಹಲವು ದಶಕಗಳಲ್ಲಿ ಕಂಡರಿಯದಂತಹ ತೀವ್ರ ಬರ ಎದುರಿಸಲು ಸೂಕ್ತ ಪರಿಹಾರ ಬಿಡುಗಡೆ ಮಾಡದೆ ಕರ್ನಾಟಕಕ್ಕೆ ‘ಮೋಸ’ ಮಾಡಿದೆ ಎಂದು ಆರೋಪಿಸಿದರು. […]

ಬೆಂಗಳೂರು :ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಅವರು ಮಾಹಿತಿ ನೀಡಿದ್ದು, ಹಾಸನ ಜಿಲ್ಲೆಯಲ್ಲಿ ಅಶ್ಲೀಲ ವೀಡಿಯೋ ತುಣುಕುಗಳು ಹರಿದಾಡುತ್ತಿವೆ. ಮೇಲ್ನೋಟಕ್ಕೆ ಮಹಿಳೆಯರ ಮೇಲೆ ಹಾಸನ ಸಂಸದರು ಲೈಂಗಿಕ ದೌರ್ಜನ್ಯ ಎಸಗಿರುವುದು ಕಂಡು ಬರುತ್ತಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್ಐಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ. […]

ಚಾಮರಾಜನಗರ : ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಇಂಡಿಗನತ್ನ ಗ್ರಾಮದಲ್ಲಿ ಮತದಾನ ಮಾಡುವ ವಿಚಾರಕ್ಕೆಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ಗಲಾಚೆಯಾಗಿದೆ ಮತಗಟ್ಟೆಯೇ ಧ್ವಂಸಗೊಂಡ ಅಹಿತಕರ ಘಟನೆ ಸಂಭವಿಸಿದೆ.ಮೂಲಸೌಕರ್ಯ ಒದಗಿಸುವವರೆಗೆ ಮತದಾನ ಮಾಡುವುದಿಲ್ಲ ಎಂದಿದ್ದರೂ ಕೆಲ ಗ್ರಾಮಸ್ಥರನ್ನು ಮತದಾನಕ್ಕೆ ಕರೆತಂದಿದ್ದು ಇದರಿಂದರೊಚ್ಚಿಗೆದ್ದ ಗ್ರಾಮಸ್ಥರು ಮತಕೇಂದ್ರದ ಮೇಲೆ ದಾಳಿ ಮಾಡಿದ್ದಾರೆ. ಹಾಡಿಯ ಜನರನ್ನು ಮನವೊಲಿಸಿ ಕರೆತಂದು ಮತದಾನ ಮಾಡಿಸಲು ಅಧಿಕಾರಿಗಳು ಮತಗಟ್ಟೆಗೆ ಕರೆದುಕೊಂಡು ಬಂದಿದ್ದರು.ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಇಂಡಿಗನತ್ತ ಗ್ರಾಮದ ಮತಗಟ್ಟಿಯನ್ನು ಸುತ್ತುವರಿದು ಮೂಲಸೌಕರ್ಯ ಕಲ್ಪಿಸುವವರಗೆ ಮತದಾನಮಾಡಬೇಡಿ ಎಂದು ಗ್ರಾಮಸ್ಸರು […]

ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ಹೊಟ್ಟೆಪ್ಪನಹಳ್ಳಿ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯದಲ್ಲಿದ್ದ ಮಹಿಳಾ ಸಿಬ್ಬಂದಿ ಲೋ ಬಿಪಿಯಿಂದ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ. ಘಟನೆ ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.ಮೃತ ಮಹಿಳೆ ಚಳ್ಳಕೆರೆ ಪಟ್ಟಣದ ವಿಠಲ ನಗರದ ಯಶೋಧಮ್ಮ (55) ಎಂದು ತಿಳಿದು ಬಂದಿದೆ. ಯಶೋದಮ್ಮ ಅವರು ಲೋ ಬಿಪಿಯಿಂದಾಗಿ ಅಸ್ವಸ್ಥಗೊಂಡಿದ್ದರು. ಇವರನ್ನು ಕೂಡಲೆ ಚಳ್ಳಕೆರೆ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು, ಆದರೆ ದಾರಿ ಮಧ್ಯದಲ್ಲೇ ಮೃತಪಟ್ಟರು.ಚಳ್ಳಕೆರೆ ಆಸ್ಪತ್ರೆಗೆ ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ.

ಕುಂದಾಪುರ, ಎ.26 ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕುಂದಾಪುರ ನಗರದಲ್ಲಿ ಬೆಳಿಗ್ಗೆ ಬೆಳಿಗ್ಗೆಯೆ ಮತದಾನ ಮಾಡಲು ಮತದಾರರು ಆಗಮಿಸಿ ಮತ ಚಲಾಯಿಸಲು ಆರಂಭಿಸಿದರು. ಕುಂದಾಪುರ ನಗರದ ಹ್ರದಯ ಭಾಗದಲ್ಲಿರುವ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಮತ ಕಟ್ಟೆಯಲ್ಲಿ ಬೆಳಿಗ್ಗೆಯೆ ಬಿರುಸಿನ ಮತದಾನ ನಡೆಯಿತು. ಅಲ್ಲಲ್ಲಿ ಸಾಂಪ್ರಾದಯಕ ಮತಕಟ್ಟೆಗಳನ್ನು ನಿರ್ಮಿಸಲಾಗಿದ್ದು, ಆಕರ್ಷಣೆಗೆ ಒಳಗಾಗಿದ್ದವು. ಕುಂದಾಪುರ ಸಂತ ಮೇರಿಸ್ ಶಿಕ್ಷಣ ಸಂಸ್ಥೆಗಳ ಅವರಣದಲ್ಲಿ, ಹಿಂದು ಶಾಲೆಯಲ್ಲಿ, ಇನ್ನಿತರ ಶಾಲೆಗಳಲ್ಲಿ ಸಾಂಪ್ರಾದಾಯಿಕ ಮತ ಕಟ್ಟೆಗಳನ್ನು ನಿರ್ಮಿಸಲಾಗಿದ್ದು ಜನಾಕರ್ಷಣೆಗೆ ಒಳಾಗಾದವು. […]

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಏಪ್ರಿಲ್ 26ರಂದು ಮೊದಲ ಹಂತದ ಮತದಾನ ನಡೆಯಲಿದೆ. ಅಂದು ಎಲ್ಲ ಕಾರ್ಮಿಕರು, ಅರ್ಹ ಮತದಾರರು ಮತದಾನ ಮಾಡುವ ಸಲುವಾಗಿ ಸಾರ್ವತ್ರಿಕ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ ಮಾಡಿದೆ. ಈ ಬಗ್ಗೆ ಕಾರ್ಮಿಕ ಆಯುಕ್ತರು ಆದೇಶವನ್ನು ಹೊರಡಿಸಿದ್ದು, ಏಪ್ರಿಲ್ 26ರ ಶುಕ್ರವಾರ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಹಾಗೂ ಮೇ 07ರ ಮಂಗಳವಾರ ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಕಾರ್ಮಿಕರು ಸಹ ಮತದಾನ ಮಾಡಬೇಕಿದೆ. […]