ಕೋಲಾರ,ಅ.07: ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ತನ್ನ ಸದಸ್ಯರ ಕ್ಷೇಮಾಭಿವೃದ್ಧಿಗಾಗಿ ಸ್ಥಾಪಿಸಿರುವ ಪತ್ರಕರ್ತರ ಕಲ್ಯಾಣ ನಿಧಿಗೆ ಕರ್ನಾಟಕ ಸರ್ಕಾರವು 25 ಲಕ್ಷ ರೂ ಅನುದಾನ ಬಿಡುಗಡೆ ಮಾಡಿ ನವಂಬರ್ 7 ರಂದು ಅಧಿಕೃತ ಆದೇಶ ಹೊರಡಿಸಿದೆ. ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ 2022 ರಲ್ಲಿ ಬಿ.ವಿ.ಗೋಪಿನಾಥ್ ಅಧ್ಯಕ್ಷರಾದ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಪತ್ರಕರ್ತರ ಆಪತ್ಕಾಲಕ್ಕೆ ನೆರವಾಗುವ ಸಲುವಾಗಿ 1 ಕೋಟಿ ರೂಗಳ ಕ್ಷೇಮಾಭಿವೃದ್ಧಿ ನಿಧಿಯನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಪ್ರಕಟಿಸಿದ್ದರು. ಇದುವರೆಗೂ ಸಂಘವು […]
ಶ್ರೀನಿವಾಸಪುರ : ಕಸಬಾ ರೇಷ್ಮೆ ಬೆಳಗಾರರ ಹಾಗೂ ರೈತ ಸೇವಾ ಸಹಕಾರ ಸಂಘದ ಅಧ್ಯಕ್ಷ ಅಯ್ಯಪ್ಪ ನಿಧನದಿ೦ದ ತೆರವಾದ ಖಾಲಿಯಾಗಿರುವ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ನ.೭ ರ ಗುರುವಾರ ನಿಗಧಿಯಾಗಿತ್ತು ಆದರೆ ನಿಗಧಿತ ಸಮಯಕ್ಕೆ ಯಾರು ನಾಮಪತ್ರ ಸಲ್ಲಿಸಿದ ಕಾರಣ ಚುನಾವಣೆಯ ಪಕ್ರಿಯೆಯನ್ನು ಇಲಾಖೆಯ ಸೂಚನೆಯಂತೆ ಮುಂದೂಡಲಾಗಿದೆ ಎಂದು ಚುನಾವಣಾಧಿಕಾರಿ ಎಂ.ಐ ಅಬೀದ್ ಹುಸೇನ್ ಮಾಹಿತಿ ನೀಡಿದರು.
ಮಂಗಳೂರು, ನ.7: ಬಿಕರ್ನಕಟ್ಟೆ ಜಂಕ್ಷನ್ನಲ್ಲಿ ಸ್ಟಾನ್ಲಿ ಬಂಟ್ವಾಳ ಮತ್ತು ಲಿಯೋ ರಾಣಿಪುರ ಮಾಲೀಕತ್ವದ ಮತ್ತು ನಿರ್ವಹಣೆಯ ನವೀಕೃತ ಅನ್ವಿತಾ ಫೋಟೋಗ್ರಫಿ ಮತ್ತು ಆನ್ಸಿತಾ ವಿಡಿಯೋಗ್ರಫಿ ಸ್ಟುಡಿಯೋ ಮತ್ತು ಯುನಿವರ್ಸಲ್ ಮೆಲೋಡೀಸ್ ಆಡಿಯೋ ವಿಷುಯಲ್ ಸ್ಟುಡಿಯೋ ಉದ್ಘಾಟನೆಗೊಂಡಿತು.ಅನ್ವಿತಾ ಫೋಟೋಗ್ರಫಿ & ಅನ್ಸಿತಾ ವಿಡಿಯೋಗ್ರಫಿ ಸ್ಟುಡಿಯೋವನ್ನು ಅನಿವಾಸಿ ಭಾರತೀಯ ಉದ್ಯಮಿ ಮತ್ತು ಸಾಮಾಜಿಕ ಚಿಂತಕ ಮೈಕೆಲ್ ಡಿಸೋಜಾ ಅವರು ಉದ್ಘಾಟಿಸಿದರೆ, ಯುನಿವರ್ಸಲ್ ಮೆಲೋಡೀಸ್ ಆಡಿಯೋ ವಿಷುಯಲ್ ಸ್ಟುಡಿಯೋವನ್ನು ಎನ್ಆರ್ಐ ಉದ್ಯಮಿ ಮತ್ತು ಸಾಮಾಜಿಕ ಚಿಂತಕ ಜೇಮ್ಸ್ ಮೆಂಡೋನ್ಕಾ ಉದ್ಘಾಟಿಸಿದರು. ಉದ್ಘಾಟನೆಯ […]
ಕುಂದಾಪುರ, ಡಾ. ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಎನ್.ಸಿ.ಸಿ ಘಟಕದ ವತಿಯಿಂದ ಪರಿಸರ ಮತ್ತು ಮಣ್ಣಿನ ಸಂರಕ್ಷಣೆ ಹಾಗೂ ಗಿಡಗಳನ್ನು ನೆಡುವ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಯೋಜಿಸಲಾದ ‘ ಗ್ರೋ ಗ್ರೀನ್’ ಕಾರ್ಯಕ್ರಮ ಕುಂದಾಪುರದ ಆರ್. ಎನ್.ಶೆಟ್ಟಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಿತು. ಆರ್. ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ನವೀನ ಕುಮಾರ ಶೆಟ್ಟಿಯವರು ಸಸ್ಯಸಂಕುಲವನ್ನು ಉಳಿಸಿ ಬೆಳೆಸಿ ಆರೋಗ್ಯಕರ ವಾತಾವರಣ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಕರೆ ನೀಡಿ ಕಾರ್ಯಕ್ರಮಕ್ಕೆ […]
ಉದ್ಯಾವರ : ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ನೇತೃತ್ವದಲ್ಲಿ ಲಯನ್ಸ್ ಜಿಲ್ಲೆ 317Cಯ ಲಯನ್ ದಂಪತಿಗಳಿಗೆ ವಿನೂತನ ರೀತಿಯ ಆದರ್ಶ ದಂಪತಿ ಸ್ಪರ್ಧೆ ಉದ್ಯಾವರ ಚರ್ಚ್ ವಠಾರದಲ್ಲಿ ನವಂಬರ್ 24 ಆದಿತ್ಯವಾರದಂದು ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ ಎಚ್’ಪಿಆರ್ ಫಿಲಂಸ್ ಪ್ರಾಯೋಜಿತ ಆದರ್ಶ ದಂಪತಿ ಸ್ಪರ್ಧೆಯ ಪೋಸ್ಟರ್ ಅನ್ನು ಎಚ್’ಪಿಆರ್ ಫಿಲಂಸ್ ಮುಖ್ಯಸ್ಥ ಮತ್ತು ಎಲ್’ಸಿಯಫ್ ಕೋಆರ್ಡಿನೇಟರ್ ಲಯನ್ ಹರಿಪ್ರಸಾದ್ ರೈ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉದ್ಯಮಿ ಡಾ. ಶೇಕ್ ವಹಿದ್ ಉಡುಪಿ, […]
ಕೋಲಾರ: ಸಿಕ್ಕ ಅವಕಾಶವನ್ನು ಬಳಸಿಕೊಂಡು ಅಗಾಧ ಸಾಧನೆ ಮಾಡುವ ಮೂಲಕ ಪ್ರಶಸ್ತಿಗೆ ಭಾಜನರಾಗಬೇಕೆ ವಿನಹಃ ಪ್ರಶಸ್ತಿಗಳನ್ನು ಹುಡುಕಿಕೊಂಡು ಹೋಗಬಾರದು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ತಿಳಿಸಿದರು. ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೋಲಾರದ ಅಂತರಗಂಗೆ ರಸ್ತೆಯಲ್ಲಿರುವ ಪತ್ರಕರ್ತರ ಭವನದಲ್ಲಿ ಸೋಮವಾರ 2024-25ನೇ ಸಾಲಿನ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಬಿ.ಎಲ್.ರಾಜೇಂದ್ರಸಿಂಹ ಹಾಗೂ ಕೆ.ಬಿ.ಜಗದೀಶ್ ಮತ್ತು ಬಿ.ಆರ್ಮುಗಂ ಪ್ರಶಸ್ತಿಗೆ ಭಾಜನರಾದ ಸಿ.ಎ.ಮುರಳಿಧರರಾವ್ ಅವರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, […]
ಕುಂದಾಪುರ (ನ. 04) : ಬಿ. ಎಂ ಸುಕುಮಾರ ಶೆಟ್ಟಿಯವರ ನೇತೃತ್ವದ ಕುಂದಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕುಂದಾಪುರ ಎಜುಕೇಶನ್ ಸೊಸೈಟಿ ಪ್ರವರ್ತಿತ ಹಲ್ಸನಾಡು ಮಾದಪ್ಪಯ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ 3ನೇ ತರಗತಿಯ ವಿದ್ಯಾರ್ಥಿನಿ ಛಾಯಾ ವಿಶ್ವನಾಥ್ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ. ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನಮಠ ಚಿತ್ರದುರ್ಗದಲ್ಲಿ ನಡೆದ 19ನೇ ಕರ್ನಾಟಕ ರಾಜ್ಯಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ […]
ಕುಂದಾಪುರ : 69ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಕನ್ನಡಭಿಮಾನ ಡಾ| ರಾಜ್ ಸಂಘಟನೆಯ ಅಧ್ಯಕ್ಷ ರತ್ನಾಕರ್ ಪೂಜಾರಿ ಅವರು ದೀಪ ಪ್ರಜ್ವಲನೆ ಮಾಡಿ ಚಾಲನೆ ನೀಡುವ ಮೂಲಕ ಕುಂದಾಪುರದ ಹೊಸ ಬಸ್ ನಿಲ್ದಾಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಹಿರಿಯ ವಕೀಲರಾದ ಶಿರಿಯಾರ ಮುದ್ದಣ್ಣ ಶೆಟ್ಟಿಯವರು ಕನ್ನಡ ಧ್ವಜಾರೋಹಣ ಮಾಡಿದರು ಸಂಘದ ದುಂಡಿರಾಜ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಿರಿಯ ಪತ್ರಕರ್ತ ಮಝರ್ ಕುಂದಾಪುರ ಕನ್ನಡ ರಾಜ್ಯೋತ್ಸವ ಮತ್ತು ರಾಜ್ ಸಂಘಟನೆಯ ಅವಿನಾಭಾವ ಸಂಬಂಧದ ಬಗ್ಗೆ ಹೇಳಿದರು. ಕಾರ್ಯದರ್ಶಿ ಸುನಿಲ್ ಖಾರ್ವಿ […]
ಸೇಂಟ್ ಜೋಸೆಫ್ಸ್ ಇಂಡಿಯನ್ ಪ್ರೌಢಶಾಲೆಯಲ್ಲಿ 2024-25ರ ಶೈಕ್ಷಣಿಕ ಸಾಲಿನ 120 ನೇಯ ವಾರ್ಷಿಕ ಕ್ರೀಡೋತ್ಸವವನ್ನು ಅಕ್ಟೋಬರ್ 30 ರಂದು ಆಚರಿಸಲಾಯಿತು. ಕ್ರೀಡಾಕೂಟವು ಚರ್ತುವರ್ಣಧಾರಿಗಳಾದ ಬಾಬಾ ,ಲೊಯೋಲಾ, ನೆಹರು, ಟಾಗೋರ್ ಎಂದು ನಾಮಾಂಕಿತಗೊಂಡ ಪ್ರೌಢಶಾಲಾ ವಿದ್ಯಾರ್ಥಿಗಳ ತಂಡಗಳು ಹಾಗು ಎನ್.ಸಿ ಸಿ , ಭಾರತ್ ಸ್ಕೌಟ್ಸ್, ಮತ್ತುಹಿಂದೂಸ್ಥಾನ ಸ್ಕೌಟ್ಸ್, ನೇವಲ್ ಮತ್ತು ಏರ್ ವಿಂಗ್ ಇವರ ಆಕರ್ಷಕ ಪಥ ಸಂಚಲನದ ಮೂಲಕ ಈ ವರ್ಣರಂಜಿತ ಕಾರ್ಯಕ್ರಮವು ಅದ್ಧೂರಿಯಾಗಿ ಆರಂಭವಾಯಿತು . ಈ ವಿಶೇಷ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ […]