ಶಿವಮೊಗ್ಗ, ಜುಲೈ 26, 2024: ಶಿಕಾರಿಪುರದ ಸೇಂಟ್ ಥೆರೇಸಾ ಆಫ್ ಚೈಲ್ಡ್ ಜೀಸಸ್ ಚರ್ಚ್‌ನ ಪ್ಯಾರಿಷ್ ಧರ್ಮಗುರು ರೆ.ಫಾ.ಅಂಥೋನಿ ಪೀಟರ್ ಅವರ ಅಂತ್ಯಕ್ರಿಯೆಯು ಇಂದು ಶಿವಮೊಗ್ಗದ ಸೇಕ್ರೆಡ್ ಹಾರ್ಟ್ ಕ್ಯಾಥೆಡ್ರಲ್‌ನಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ನಡೆಯಿತು. ಆಂಟನಿ ಪೀಟರ್ ಅವರು ಮಂಗಳವಾರ ಜುಲೈ 23 ರಂದು ಮಧ್ಯಾಹ್ನ ತಮ್ಮ ಪ್ಯಾರಿಷ್ ಶಿಕಾರಿಪುರಕ್ಕೆ ಹೋಗುವ ಮಾರ್ಗದಲ್ಲಿ ಚಿನ್ನಿಕಟ್ಟೆಯಲ್ಲಿ ರಸ್ತೆ ಅಪಘಾತಕ್ಕೊಳಗಾದರು. ಅವರು ಶಿವಮೊಗ್ಗದಿಂದ ಪ್ರಯಾಣಿಸುತ್ತಿದ್ದರು. ಆವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಅವರ ಪಾರ್ಥಿವ ಶರೀರವನ್ನು ಬೆಳಗ್ಗೆ 7 ಗಂಟೆಗೆ […]
ಶ್ರೀನಿವಾಸಪುರ ತಾಲ್ಲೂಕಿನ ಅಡ್ಡಗಲ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಶಾಲೆಗೆ ಕಂಪ್ಯೂಟರ್ ಕೊಡುಗೆ ನೀಡಿದ ಶಿಕ್ಷಕಿ ಪದ್ಮಾವತಮ್ಮ ಅವರನ್ನು ಸನ್ಮಾನಿಸಲಾಯಿತು.
ಶಿವಮೊಗ್ಗ: ಮದುವೆಯಾಗುವಂತೆ ಪೀಡಿಸುತ್ತಿದ್ದಳೆಂದು ಪ್ರಿಯತಮೆ ಮೇಲೆ ಹಲ್ಲೆ ನಡೆಸಿ ಪ್ರಿಯಕರ ಹತ್ಯೆಗೂ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಯುವತಿ ಸೌಮ್ಯ ಕೊಲೆಯಾದವಳು. ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಯುವಕ ಸೃಜನ್ ಕೊಲೆ ಮಾಡಿದ ಆರೋಪಿ. ಇವರಿಬ್ಬರು ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆಯಾಗುವಂತೆ ಯುವತಿಯಿಂದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಪ್ರಿಯಕರ ಕೊಲೆ ಮಾಡಿದ್ದಾನೆಂದು ತಿಳಿದುಬಂದಿದೆ. ತೀರ್ಥಹಳ್ಳಿಯಲ್ಲಿ ಫೈನಾನ್ಸ್ವೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ ಕೊಪ್ಪಗೆ ಹಣ ವಸೂಲಿಗೆ ಹೋಗುತ್ತಿದ್ದ. ಯುವತಿ ನರ್ಸಿಂಗ್ ವ್ಯಾಸಂಗ […]
ಬೆಂಗಳೂರು: ಮಹಿಳಾ ಪೇಯಿಂಗ್ ಗೆಸ್ಟ್ ಒಂದಕ್ಕೆ ತಡರಾತ್ರಿ ಯುವಕನೊಬ್ಬ 11.10ರ ಸುಮಾರಿಗೆ ಪಿ.ಜಿ ಒಳಗೆ ನುಗ್ಗಿ ಯುವತಿಯ ಕತ್ತು ಕೊಯ್ದು ಹತ್ಯೆ ಮಾಡಿರುವ ಘಟನೆ ಮಂಗಳವಾರ ತಡರಾತ್ರಿ ಕೋರಮಂಗಲದ ವಿ.ಆರ್.ಲೇಔಟ್‌ನಲ್ಲಿ ನಡೆದಿದೆ. ಬಿಹಾರ ಮೂಲದ ಕೃತಿ ಕುಮಾರಿ (24) ಕೊಲೆಯಾದ ಯುವತಿ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೃತಿ ಕುಮಾರಿ ಕೆಲಸ ಮಾಡುತ್ತಿದ್ದರು. ಚಾಕು ಹಿಡಿದು ಪಿ.ಜಿಯೊಳಗೆ ನುಗ್ಗಿದ ಆರೋಪಿ, 3ನೇ ಮಹಡಿಯಲ್ಲಿನ ರೂಮಿನ ಸಮೀಪದಲ್ಲೇ ಯುವತಿ ಮೇಲೆ ಚಾಕುವಿನಿಂದ ಕತ್ತು ಕೊಯ್ದು ಕೊಲೆಗೈದು ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ […]
ಕೋಟ, ಜು. 22: ಮಣೂರು-ಪಡುಕರೆ ಭಾಗದಲ್ಲಿ ಈ ಬಾರಿ ಕಡಲ್ಕೊರೆತ ತೀವ್ರಗೊಂಡಿದ್ದರಿಂದ ಮೀನುಗಾರಿಕೆ ಇಲಾಖೆ ಎಂಜಿನಿಯರ್ ಡಯಾಸ್ ಹಾಗೂ ಮಾಜಿ ಸಚಿವ. ಜಯಪ್ರಕಾಶ್ ಹೆಗ್ಡೆ ಸ್ಟಳಕ್ಕೆ ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿದ್ದಾರೆ. ಇಲ್ಲಿನ. ಜಿ.ಎ. ಕಾಂಚನ್ ರಸ್ತೆ ಹಾಗೂ ಲಿಲ್ಲಿ ಫೆರ್ನಾಂಡಿಸ್ ರಸ್ತೆಯಲ್ಲಿ ಸುಮಾರು 300 ಮೀಟರ್‌ನಷ್ಟುಸ್ಥಳದಲ್ಲಿ ಶಾಸ್ವತ ತಡೆಗೋಡೆ ಇಲ್ಲ, ಹಾಗಾಗಿ ಪ್ರತಿ ವರ್ಷ ಇಲ್ಲೆ ಸಮಸ್ಯೆ ಎದುರಾಗುತ್ತದೆ. ಕಳೆದ ಮಳೆಗಾಲದಲ್ಲಿ ತೀವ್ರವಾದ ಕಡಲ್ಕೊರೆತ ಉಂಟಾಗಿತ್ತು. ಕಡಲ ಅಲೆಗಳ ಹೊಡೆತಕ್ಕೆ ಇಲ್ಲಿನ ಸಂಪರ್ಕ ರಸ್ತೆ ಕಡಿತವಾಗುವ […]
ಬೆಂಗಳೂರು, ಜು.23-ಕಾರ್ಕಳ ಥೀಮ್ ಪಾರ್ಕ್ ಹಗರಣ ನಕಲಿ ಪರಶುರಾಮ ಮೂರ್ತಿ ಪ್ರತಿಷ್ಠಾಪನೆ ಹಿಂದು ಧರ್ಮದೇವರನ್ನು ಅವಮಾನ ಮಾಡಿದ ಹಾಗೂ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿರುವ ಮಾಜಿ ಸಚಿವ ಹಾಗೂ ಶಾಸಕರಾದ ಪಿ ಸುನೀಲ್ ಕುಮಾರ್ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಕೆಪಿಸಿಸಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಉಡುಪಿ ಜಿಲ್ಲಾ ಉಸ್ತುವಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ನೇತ್ರತದಲ್ಲಿ ನಗರದ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರ ಪ್ರತಿಭಟನೆಯಲ್ಲಿ ಪರಶುರಾಮ ಥೀಮ್ ಪಾರ್ಕ್ ಹಗರಣದ […]
ಶಿಕಾರಿಪುರ: ಭೀಕರ ಅಪಘಾತವೊಂದರಲ್ಲಿ ಫಾದರ್ ಆಂತೋನಿ ಪೀಟರ್ ಸಾವನ್ನಪ್ಪಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಅವರು ಸಾವನ್ನಪ್ಪಿದ್ದಾರೆ.ದಾವಣಗೆರೆ ಜಿಲ್ಲೆ ಸವಳಂಗ ಬಳಿಯ ಚಿನ್ನಿಕಟ್ಟೆಯ ಬಳಿ ಇಯೊನ್ ಕಾರು ಮತ್ತು KSRTC ಬಸ್ ನಡುವೆ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ಕ್ರೈಸ್ತಧರ್ಮದ ಗುರುಗಳು ಸಾವನ್ನಪ್ಪಿದ್ದಾರೆ.ಇಂದು ಮೂರುವರೆ ಹೊತ್ತಿಗೆ ಗಂಟೆಗೆ ನಡೆದಿದೆ. ಹಾನಗಲ್ ನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ KSRTC ಬಸ್ ಮತ್ತು ಶಿವಮೊಗ್ಗದಿಂದ ಹೊರಟಿದ್ದ ಇಯೊನ್ ವಾಹನಗಳ ನಡುವೆ ಡಿಕ್ಕಿ ಯಾಗಿದೆ. ಶಿಕಾರಿಪುರದ ಸೇಂಟ್ ಥೆರೆಸಾ ಲಿಟ್ಲ್ […]
ಕೋಟೇಶ್ವರದ ಹವ್ಯಾಸಿ ಚಿತ್ರ ಕಲಾವಿದೆ ಶ್ರೀಮತಿ ಸಪ್ರಸನ್ನ ನಕ್ಕತ್ತಾಯರವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ “ಸಂಚಯ” ಅನಾವರಣಗೊಳ್ಳಲಿದೆ. ಅಕ್ರಾಲಿಕ್ ವರ್ಣದಲ್ಲಿ ಕ್ಯಾನ್ವಾಸ್ ಮೇಲೆ ಪರಿಸರದ ಪ್ರಾಣಿ ಪಕ್ಷಿಗಳ ಬೆಸುಗೆಯ ರೇಖೆ, ನೈಜ್ಯ ಚಿತ್ರಣ, ಮಧುಬನಿ ಮತ್ತು ಗೋಂಡ್ ಶೈಲಿಯಲ್ಲಿ ರೂಪುಗೊಂಡ 100 ಕ್ಕೂ ಅಧಿಕ ಕಲಾಕೃತಿಗಳಲ್ಲಿ ಮೂಡಿ ಬಂದಿದೆ. ದಿನಾಂಕ 27.07.2024 ಶನಿವಾರ ಬೆಳಿಗ್ಗೆ 10.00ಕ್ಕೆ ಕುಂದಾಪುರದ ತ್ರಿವರ್ಣ ಕಲಾ ಗ್ಯಾಲರಿಯಲ್ಲಿ ಮಂಗಳೂರಿನ ಚಿತ್ರ ಕಲಾವಿದ ಮತ್ತು ಪರಿಸರ ತಜ್ಞ ಶ್ರೀ ದಿನೇಶ್ ಹೊಳ್ಳ ಉದ್ಘಾಟಿಸಲಿದ್ದಾರೆ. ಅತಿಥಿ ಅಭ್ಯಾಗತರಾಗಿ […]
ಮಳೆಯ ಅವಂತಾರದಿಂದ ರಾಷ್ಟ್ರೀಯ ಹೆದ್ದಾರಿ- 75ರ ಶಿರಾಡಿ ಘಾಟಿ ಮಾರ್ಗದಲ್ಲಿ ವಾಹನಗಳ ಸಂಚಾರ ಪುನರಾರಂಭವಾಗಿದೆ. ಶಿರಾಡಿ ಘಾಟಿ ಮಾರ್ಗದಲ್ಲಿ ಎಲ್ಲ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ದಿನದ 24 ತಾಸು ಕೂಡ ವಾಹನ ಸಂಚಾರ ಸೋಮವಾರದಿಂದಲೇ ಆರಂಭವಾಗಿದೆ. ಭಾರೀ ಮಳೆಗೆ ಮಣ್ಣು ಕುಸಿತ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಸಂಪಾಜೆ-ಮಡಿಕೇರಿ ನಡುವೆ ರಾತ್ರಿ ಹೇರಲಾಗಿದ್ದ ನಿರ್ಬಂಧ ಸೋಮವಾರ ಬೆಳಗ್ಗೆ ಮುಕ್ತಾಯಗೊಂಡಿದ್ದು, ಸೋಮವಾರ ರಾತ್ರಿ ಮತ್ತೆ ಸಂಚಾರ ಪುನರಾರಂಭಗೊಂಡಿದೆ. ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ 275ರ ಕರ್ತೋಜಿ ಎಂಬಲ್ಲಿ ಭೂಕುಸಿತವಾಗುವ […]