
ಕನ್ಯಾಕುಮಾರಿಯಲ್ಲಿನ ಸಮುದ್ರದಲ್ಲಿ ಮುಳುಗಿ ಐವರು ಮೆಡಿಕಲ್ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಮದುವೆ ಸಮಾರಂಭಕ್ಕೆ ಬಂದತ್ತಹ ಸಮುದ್ರ ತೀರಕ್ಕೆ ಐವರು ವಿದ್ಯಾರ್ಥಿಗಳು ತೆರಳಿದ್ದರು. ಇದೇ ವೇಳೆ, ಲೆಮುರ್ ಬೀಚ್‌ನಲ್ಲಿ ಈಜಾಡುವಾಗ ಐವರೂ ನೀರುಪಾಲಾಗಿದ್ದಾರೆ. ಐವರಲ್ಲಿ ಇಬ್ಬರು ಯುವತಿಯರಿದ್ದರು ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಐವರೂ ತಿರುಚಿರಪಳ್ಳಿಯಲ್ಲಿರುವ ಎಸ್ ಆರ್ ಎಂ ಮೆಡಿಕಲ್ ಕಾಲೇಜಿನವರು ಎಂದು ಮಾಹಿತಿ ಲಭ್ಯವಾಗಿದೆ. ಮೃತರನ್ನು ತಂಜಾವೂರಿನ ಚಾರುಕವಿ, ನೇಯ್‌ವೇಲಿಯ ಗಾಯತ್ರಿ, ಕನ್ಯಾಕುಮಾರಿಯ ಸರ್ವದರ್ಶಿತ್, ದಿಂಡಿಗಲ್‌ನ ಪ್ರವೀಣ್ ಸ್ಯಾಮ್ ಹಾಗೂ ಆಂಧ್ರಪ್ರದೇಶದ ವೆಂಕಟೇಶ್ ಎಂಬುದಾಗಿ ಗುರುತಿಸಲಾಗಿದೆ. ಒಟ್ಟು […]

ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಮಾಜಿ ಸಚಿವ ರೇವಣ್ಣ ಅವರನ್ನುಎಸ್‌ಐಟಿ ಅಧಿಕಾರಿಗಳು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರವರ ನಿವಾಸದಿಂದಲೇ ಬಂಧಿಸಿರುವ ಅಧಿಕಾರಿಗಳು ಎಸ್‌ಐಟಿ ಕಚೇರಿಗೆ.ಕರೆದುಕೊಂಡು ಹೋಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರೇವಣ್ಣ ಅವರು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ.ನ್ಯಾಯಾಲಯದಲ್ಲಿ ಅರ್ಜಿ ವಜಾಗೊಂಡ ಬೆನ್ನಲ್ಲೇ ಎಸ್‌ಐಟಿ ಅಧಿಕಾರಿಗಳು ರೇವಣ್ಣ ಅವರನ್ನು ಬಂಧಿಸಿದ್ದಾರೆ. ಇಂದು ರಾತ್ರಿ ಅಥವಾನಾಳೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ. ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಚ್ ಡಿ ರೇವಣ್ಣಗೆ ಸಂಕಷ್ಟ […]

ಬಾಗಲಕೋಟೆ: ಕೇಂದ್ರ ಸರ್ಕಾರ ರಾಜ್ಯಕ್ಕೆ ಘೋಷಿಸಿರುವ ಬರಪರಿಹಾರ ರಾಜ್ಯ ಸರ್ಕಾರ ಸಲ್ಲಿಸಿದ ಮನವಿಯ ಕಾಲು ಭಾಗವೂ ಇಲ್ಲ ಎಂದುಸಿಎಂ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಗಲಕೋಟೆಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿದ ಮೇಲೆ ಈಗ ಕೇಂದ್ರ ಸರ್ಕಾರ 3,464 ಕೋಟಿ ರೂ. ಬರ ಪರಿಹಾರ ನೀಡುತ್ತಿದೆ. ಇದು ಬಹಳ ಕಡಿಮೆ ಪ್ರಮಾಣದ ಪರಿಹಾರ. ನಾವು ಕೇಳಿದ್ದು 18,172ಕೋಟಿ ರೂಪಾಯಿ. ಕೇಂದ್ರ ನೀಡುತ್ತಿರುವುದು ಕೇವಲ 3,464 ಕೋಟಿ ರೂ. […]

ದೆಹಲಿ : ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ್ದರೂ ಕೂಡ ಕೇಂದ್ರ ಸರ್ಕಾರ ಇನ್ನೂ ಬರ ಪರಿಹಾರ ಘೋಷಣೆ ಮಾಡಿಲ್ಲ. ಹೀಗಾಗಿ ಬರ ಪರಿಹಾರ ಕೊಡಿಸುವಂತೆ ಸುಪ್ರೀಂ ಕೋರ್ಟ್ನಲ್ಲಿ ಆರ್ಟಿಕಲ್ 32ರ ಅಡಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟ ಸರ್ಕಾರ ರಿಟ್ ಅರ್ಜಿ ಸಲ್ಲಿಸಿದೆ. ಇಂದು (ಏ.22) ಸುಪ್ರೀಂಕೋರ್ಟ್ ಅರ್ಜಿ ವಿಚಾರಣೆ ನಡೆಸಿತು. ಸುಪ್ರೀಂಕೋರ್ಟ್ನ ನ್ಯಾ.ಬಿ.ಆರ್.ಗವಾಯಿ ನೇತೃತ್ವದ ದ್ವಿಸದಸ್ಯ ಪೀಠ ಇಂದು (ಏ.22) ಅರ್ಜಿ ವಿಚಾರಣೆ ನಡೆಸಿತು. ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್ ವೆಂಕಟರಮಣಿ ವಾದ ಮಂಡಿಸಿದರು. […]

ಗಾಂಧಿನಗರ: ಬಿಸಿಲಿನ ತಾಪಕ್ಕೆ ಬೇಸತ್ತು ಗುಜರಾತಿನ ವಡೋದರಾ ಸಂಚಾರಿ ಪೊಲೀಸರು ಎಸಿ ಹೆಲ್ಮೆಟ್‌ನ್ನು ಕಂಡುಕೊಂಡಿದ್ದಾರೆ.. ಗುಜರಾತ್ ಪೊಲೀಸ್ ಇಲಾಖೆ ಸಂಚಾರಿ ಪೊಲೀಸರಿಗೆ ವಿಶೇಷ ಹವಾನಿಯಂತ್ರಿತ ಹೆಲ್ಮೆಟ್ ಗಳನ್ನು ಪರಿಚಯಿಸಿದೆ. ಈ ಹೆಲ್ಮೆಟ್ 40-42 ಡಿಗ್ರಿ ಸೆಲ್ಸಿಯಸ್‌ನ ಗರಿಷ್ಠ ತಾಪಮಾನದಲ್ಲಿ ಬಿಸಿಲಿನಲ್ಲಿ ಕಾರ್ಯನಿರ್ವಹಿಸುವ ಸಂಚಾರಿ ಪೊಲೀಸರಿಗೆ ತಣ್ಣನೆಯ ಅನುಭವ ನೀಡಲಿದೆ. ಈ ಹೆಲ್ಮೆಟ್ ಗಳನ್ನು ವಿಶೇಷವಾಗಿ ತಯಾರಿಸಲಾಗಿದೆ. ಸೂರ್ಯನ ಬೆಳಕಿನಿಂದ ಕಣ್ಣುಗಳನ್ನು ರಕ್ಷಿಸಲು ಮುಖವಾಡ ಮತ್ತು ಇದಕ್ಕೆ ಚಾರ್ಜಿಂಗ್ ವ್ಯವಸ್ಥೆ ಇದ್ದು. ಪೂರ್ಣ ಚಾರ್ಜ್‌ನಲ್ಲಿ ಈ ಹೆಲ್ಕೆಟ್‌ಗಳು 8 […]

ಜೈಪುರ: ಜೈಪುರದ ಪಿಂಕ್ ಸಿಟಿ ಆಫ್ ಭಾರತ್‌ನಲ್ಲಿ ತಾ. 17 ರಂದು ನಡೆದ ಪ್ರತಿಷ್ಠಿತ ಮಿಸ್ ಟೀನ್ ಯೂನಿವರ್ಸ್ ಇಂಡಿಯಾ- 2024 ಸ್ಪರ್ಧೆಯ ಮಿನುಗುವ ತಾರೆಯಾಗಿ ಕೊಡಗು ಜಿಲ್ಲೆಯ ಕ್ಯಾರಿಸಾ ಬೋಪಣ್ಣ ಅವರು ಹೊರಹೊಮ್ಮಿದ್ದಾರೆ. ಕ್ಯಾರಿಸಾ ಬೋಪಣ್ಣ ಅವರು ಕಿಗ್ಗಾಲು ಗ್ರಾಮದ ಅಮ್ಮಟಂಡ ಬೋಪಣ್ಣ ಮತ್ತು ಅಮ್ಮಟಂಡ ಶಕುಂತಲಾ ಬೋಪಣ್ಣ ದಂಪತಿಯ ಪುತ್ರಿಯಾಗಿದ್ದಾರೆ.

ವಾರಾಣಾಸಿ: ಮಂಗಳಮುಖಿಯರ ಹಕ್ಕುಗಳ ಬಗ್ಗೆ ಸರ್ಕಾರ ಹಾಗೂ ರಾಜಕೀಯ ಪಕ್ಷಗಳ ಗಮನ ಸೆಳೆಯುವ ಪ್ರಯತ್ನವಾಗಿ, ನಿರ್ಮೋಹಿ ಅಖಾಡದ ಮಂಗಳಮುಖಿ ಮಹಾಮಂಡಲೇಶ್ವರ ಹೇಮಂಗಿ ಸಖಿ ವಾರಾಣಾಸಿ ಲೋಕಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಖಿಲ ಭಾರತ ಹಿಂದೂ ಮಹಾಸಭಾ (ಎಬಿಎಚ್ಎಂ) ಟಿಕೆಟ್ ನಲ್ಲಿ ಕಣಕ್ಕೆ ಇಳಿದಿದ್ದಾರೆ.“ಮೋದಿಯವರು ಬೇಟಿ ಬಚಾವೋ, ಬೇಟಿ ಪಡಾವೊ ಅಭಿಯಾನ ಆರಂಭಿಸಿರುವುದು ಒಳ್ಳೆಯದು. ಆದರೆ ಮಾಂಸ ಮಾರಾಟ ದಂಧೆ ಅಥವಾ ಭಿಕ್ಷಾಟನೆಯಲ್ಲಿ ತೊಡಗಿರುವ ಕಿನ್ನಾರ್ ಗಳ ಬಗ್ಗೆ ಅಭಿಯಾನ ನಡೆಸುವುದನ್ನು ಯಾರೂ ಯೋಚಿಸಿಲ್ಲ” ಎಂದು […]

ನವದೆಹಲಿ : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಘೋಷಿಸಿ ಕರ್ನಾಟಕದಲ್ಲಿ ಅಧಿಕ ಬಹುಮತದೊಂದಿಗೆ ಕರ್ನಾಟಕದಲ್ಲಿ ಕಾಂಗ್ರೆಸ್ ಸುಭಧ್ರ ಸರಕಾರ ರಚಿಸಿತ್ತು. ಕರ್ನಾಟಕದಲ್ಲಿ ಗ್ಯಾರಂಟಿ ಘೋಷಣೆಯಾದ ಹಿನ್ನೆಲೆಯಲ್ಲಿ ಹಲವಾರು ರಾಜ್ಯಗಳಲ್ಲಿ ಗ್ಯಾರಂಟಿಗಳೇ ಪ್ರಮುಖ ಅಸ್ತ್ರವಾಗಿ ಮತದಾರರನ್ನು ಕಾಂಗ್ರೆಸ್ ತನ್ನ ಬುಟ್ಟಿಗೆ ಹಾಕಿಕೊಂಡಿತ್ತು. ಈಗ ಅದೇ ಸೂತ್ರವನ್ನು ಲೋಕ ಸಮರದಲ್ಲಿ ವರಿಷ್ಠರು ಮುಂದುವರೆಸಿ ಇಡೀ ದೇಶಾದ್ಯಂತ 25 ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಚುನಾವಣೆ ಮುನ್ನ ಕೆಲ ರಾಜ್ಯದಲ್ಲಿ ಘೋಷಿಸಿದ ಗ್ಯಾರಂಟಿ ಹಾಗೂ ಚುನಾವಣ ತಂತ್ರದಿಂದ ಮತದಾರರು ಕೈ ಹಿಡಿದು ಅಧಿಕಾರ ಕೊಟ್ಟಿದ್ದಾರೆ ಈಗ […]

ಮುಂಬಯ್,ಮಾ. 3: ಮಹಾರಾಷ್ಟ್ರದ ಔರಂಗಾಬಾದ್‌ನ ಕಂಟೋನ್ಮೆಂಟ್‌ನ ದಾನಾ ಬಜಾರ್ ಪ್ರದೇಶದಲ್ಲಿ ಮನೆಗೆ ಬೆಂಕಿ ತಗುಲಿ ಒಂದೇ ಕುಟುಂಬದ ಎಂಟು ಮಂದಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.ಬೆಂಕಿ ಹೊತ್ತಿಕೊಂಡ ಅಂಗಡಿಯಲ್ಲಿ ಮಲಗಿದ್ದ ಎಂಟನೇ ವ್ಯಕ್ತಿಯನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ ಎಂದು ರಕ್ಷಣಾ ಸಿಬ್ಬಂದಿ ಹೇಳಿದ್ದು ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಮೃತರನ್ನು ಹಮೀದಾ ಬೇಗಂ (49), ಅವರ ಇಬ್ಬರು ಮಕ್ಕಳಾದ ವಸೀಂ (29), ಸೋಹೆಲ್ (27), ಅವರ ಪತ್ನಿಯರಾದ ತನ್ವೀರ್ (25), ರೇಷ್ಮಾ (23) ಮತ್ತು ಐದು […]