ಬೆಂಗಳೂರು : ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ನೀಡುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ಪ್ರೆಸ್ ಕ್ಲಬ್ ಮತ್ತು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಜಂಟಿಯಾಗಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕೆಯುಡಬ್ಲ್ಯೂಜೆ ಅಧ್ಯಕ್ಷ ಶಿವಾನಂದ ತಗಡೂರು ಅವರು ಗ್ರಾಮೀಣ ಪತ್ರಕರ್ತರ ಬಗ್ಗೆ ನನ್ನ ಬಳಿ ಪ್ರಸ್ತಾಪಿಸಿದ್ದಾರೆ. ಈ ಬಾರಿ ಗ್ಯಾರಂಟಿ ಯೋಜನೆ ಜಾರಿ ಆದ್ಯತೆ ಆಗಿದ್ದರಿಂದ ಇದೆಲ್ಲಾ ಸಾಧ್ಯವಾಗಲಿಲ್ಲ. ಚರ್ಚೆ […]
ಕೋಲಾರ:- ನಗರದ ಶ್ರೀ ದೇವರಾಜ್ ಅರಸ್ ಕಾಲೇಜ್ ಆಫ ನರ್ಸಿಂಗ್ ಸಂಶೋಧನಾ ಮತ್ತು ಅಭಿವೃದಿ ಇಲಾಖೆ ಮತ್ತು ಸಹಯೋಗದಿಂದ ಶ್ರೀ ದೇವರಾಜ್ ಅರಸ್ ವಿಶ್ವವಿದ್ಯಾಲಯರವರ ಶೈಕóಣಿಕ ಹಿರಿಯ ಶಿಕ್ಷಣ ಸಂಶೋಧನಾ ಕೆಂದ್ರ ಟಮಕ ಕೋಲಾರ ಸಂಸ್ಥೆಯವರ ಕಡೆಯಿಂದ ಭೌದ್ದಿಕ ಆಸ್ತಿ ಹಕ್ಕುಗಳ ಅರಿವು ಮಂಡಿಸುವ ಬಗ್ಗೆ ಕುರಿತು ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಲಾಗಿತ್ತು.ಈ ಕಾರ್ಯಕ್ರಮವನ್ನು ಲೀಗಲ್ ಅಡೈಸರ್ ಸ್ಥಾಪಕರು ಹಾಗೂ ಸಿಇಓ ಆಫ್ ಲೈಫ್ಮ ಇಂಟಲೇಕಟ್ ಕನ್ಸಲ್ಟೇನ್ಸಿ (ಪ್ರೈ,ಲಿ.) ಲಿಪಿಕಾ ಸಾಹು ಗಿಡಕ್ಕೆ ನೀರುಣಿಸುವ ಮೂಲಕ ಉದಾಟಿಸಿ, ಭೌದ್ದಿಕ […]
ಶ್ರೀನಿವಾಸಪುರ, ಜು.23: ಜಿಲ್ಲಾದ್ಯಂತ ಒತ್ತುವರಿ ಆಗಿರುವ ಅರಣ್ಯ ಭೂಮಿ ಹಗರಣವನ್ನು ಸಿ.ಬಿ.ಐಗೆ ಒಪ್ಪಿಸುವಂತೆ ಅರಣ್ಯ ಸಚಿವರನ್ನು ಒತ್ತಾಯಿಸಿ ಜು.26 ರ ಬುದವಾರ ಅರಣ್ಯ ಇಲಾಖೆ ಮುತ್ತಿಗೆ ಹಾಕಲು ತೆರ್ನಹಳ್ಳಿ ಪ್ರಗತಿಪರ ರೈತ ತಾಲ್ಲೂಕದ್ಯಕ್ಷ ಆಂಜಿನಪ್ಪರವರ ತೋಟದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.ಅರಣ್ಯ ರಕ್ಷಕರೇ ಅರಣ್ಯ ಭಕ್ಷಕರಾದರೆ ಇನ್ನೂ ಸರ್ಕಾರದ ಅರಣ್ಯ ಭೂಮಿಯನ್ನು ಉಳಿಸುವವರು ಯಾರು? ಒಂದು ಕಡೆ ಸಾವಿರಾರು ಎಕರೆ ಅರಣ್ಯ ಭೂಮಿ ಒತ್ತುವರಿ ಮತ್ತೊಂದು ಕಡೆ ಅರಣ್ಯದಲ್ಲಿ ಬೆಳೆದಿರುವ ಮರಗಳ ಆಕ್ರಮ ಕಟಾವು ದಂದೆಗೆ […]
ಶ್ರೀನಿವಾಸಪುರ: ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಕ್ರೀಡಾಸಕ್ತಿ ಬೆಳೆಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಲ್.ವಿ.ಗೋವಿಂದಪ್ಪ ಹೇಳಿದರು.ತಾಲ್ಲೂಕಿನ ತಾಡಿಗೋಳ್ ಗ್ರಾಮದಲ್ಲಿ ಶನಿವಾರ ಏರ್ಪಡಿಸಿದ್ದ ನೆಲವಂಕಿ ಹೋಬಳಿ ಮಟ್ಟದ ದಸರಾ ಕ್ರೀಡಾ ಕೂಟದಲ್ಲಿ ವಿಜೇತರಾಗಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಪಾರಿತೋಷಕ ವಿತರಿಸಿ ಮಾತನಾಡಿ, ಆಟೋಟಗಳಲ್ಲಿ ಉತ್ತಮ ಪ್ರದರ್ಶನ ಮುಖ್ಯವೇ ಹೊರತು ಸೋಲು ಗೆಲುವಲ್ಲ ಎಂದು ಹೇಳಿದರು.ಕ್ರೀಡೆ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಮೂಡಿಸುತ್ತದೆ. ಮೇಲು ಕೀಳು ಭಾವನೆ ಅಳಿಸುತ್ತದೆ. ಸಮಾಜದಲ್ಲಿ […]
ಶ್ರೀನಿವಾಸಪುರ: ಅರ್ಹ ಮಹಿಳೆಯರು ಯೋಜನೆ ಲಾಭ ಪಡೆದುಕೊಳ್ಳಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ತಾಲ್ಲೂಕಿನ ಲಕ್ಷ್ಮೀಸಾಗರ ಗ್ರಾಮದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಶನಿವಾರ ಏರ್ಪಡಿಸಿದ್ದ ಗೃಹಲಕ್ಷ್ಮಿ ಯೋಜನೆ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು ಎಂದು ಹೇಳಿದರು.ವಿವಿಧ ಇಲಾಖೆಗಳ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಯೋಜನೆ ದುರುಪಯೋಗ ನಡೆಯದಂತೆ ನೋಡಿಕೊಳ್ಳಬೇಕು. ಯೋಜನೆ ಫಲಾನುಭವಿಗಳಿಗೆ […]
ಶ್ರೀನಿವಾಸಪುರ : ತಾಲ್ಲೂಕಿನ ತಾಲ್ಲೂಕು ಕಛೇರಿಯ ಅವ್ಯವಸ್ಥೆ ಕಂಡ ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿ ಅಕ್ರಮ್ ಪಾಷ ತಮ್ಮ ಅಸಮದಾನ ವ್ಯಕ್ತಪಡಿಸಿದ್ದಾರೆ. ಕೋಲಾರ ಜಿಲ್ಲೆಗೆ ನೂತನವಾಗಿ ಆಗಮಿಸಿರುವ ಜಿಲ್ಲಾಧಿಕಾರಿಗಳಾದ ಅಕ್ರಮ್ ಪಾಷ ರವರು ಕಳೆದ ಕೆಲ ದಿನಗಳಿಂದ ಜಿಲ್ಲೆಗೆ ಒಳಪಡುವ ತಾಲ್ಲೂಕುವಾರು ಕೇಂದ್ರಗಳಿಂದ ದಿಢೀರ್ ಭೇಟಿ ನೀಡುವ ಮೂಲಕ ಪರಿಶೀಲನೆ ನಡೆಸುತ್ತಿದ್ದಾರೆ. ಇದೆ ನಿಟ್ಟಿನಲ್ಲಿ ಶುಕ್ರವಾರ ಬೆಳಗ್ಗೆ ಶ್ರೀನಿವಾಸಪುರ ತಾಲ್ಲೂಕು ಕಛೇರಿಗೆ ಡಿ ಸಿ ಅಕ್ರಮ್ ಪಾಷ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದು, ಪರಿಶೀಲನೆ ವೇಳೆ ತಾಲ್ಲೂಕು ಕಛೇರಿಯ […]
ಶ್ರೀನಿವಾಸಪುರ 1 : ಟಮೋಟೋಗೆ ಬೆಲೆ ಇದೆ, ಆದರೆ ಅದಕ್ಕೆ ತಕ್ಕಂತೆ ಫಸಲು ಇಲ್ಲದೆ ರೈತ ನಷ್ಟವನ್ನು ಅನುಭವಿಸುತ್ತಿದ್ದು, ತಾಲೂಕಿನ ಸುಮಾರು 700 ಹೆಕ್ಟೇರ್ ನಷ್ಟು ಟಮೋಟೋ ಬೆಳೆದಿದ್ದಾರೆ. ರಾಯಲ್ಪಾಡು ಬಳಿಯ ಯಂಡಗುಟ್ಟಪಲ್ಲಿಯ ಸುಬ್ಬರಾಮು ತೋಟಕ್ಕೆ , ತಾಡಿಗೋಳ್‍ನ ತಿಪ್ಪನ್ನ ತೋಟಕ್ಕೆ ವಿಜ್ಞಾನಿಗಳ ತಂಡ ಬೇಟಿ ನೀಡಿ ಪರಿಶೀಲಿಸಿದರು.ಬಹುತೇಕ ಟಮೋಟೋ ಬೆಳೆಯು ನುಸಿ ರೋಗ ಪೀಡಿತವಾಗಿದ್ದು, ರೋಗ ನಿರ್ಮೂಲನೆಗಾಗಿ ರೈತರು ಅನುಭವಿ ರೈತರ ಹಾಗೂ ಔಷಧಿ ಅಂಗಡಿಗಳ ಸಲಹೆ ಪಡೆದು ಔಷಧಿಗಳಿಗಾಗಿ ಸಾವಿರಾರು ರೂಗಳನ್ನು ವ್ಯಯ ಮಾಡಿ […]
ವಡ್ಡಹಳ್ಳಿ, ಜು.21: ನಲಗುಂದ ನವಿಲಗುಂದ 43ನೇ ವರ್ಷದ ಹುತಾತ್ಮ ದಿನಾಚರಣೆಯನ್ನು ಪ್ರಗತಿಪರ ರೈತ ದರ್ಮರವರ ತೋಟದಲ್ಲಿ ಗೋ ಪೂಜೆ ಮಾಡುವ ಮುಕಾಂತರ ಹುತಾತ್ಮ ರೈತರಿಗೆ ಗೌರವ ಸಲ್ಲಿಸಿ ಪ್ರಗತಿ ಪರ ಹಿರಿಯ ರೈತರಿಗೆ ಗಿಡ ನೀಡುವ ಮುಖಾಂತರ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.ಕೃಷಿ ಎಂಬ ಪೇಪರ್‍ನಲ್ಲಿ ಇಂಕು ಎಂಬ ಬಿತ್ತನೆ ಬೀಜ ರಸಗೊಬ್ಬರ ಚಲ್ಲಿ ಬಿಸಲು ಗಾಳಿ ಮಳೆಗೆ ಮೈಯನ್ನು ಬಗ್ಗಿಸಿ ದುಡಿಯುವ ರೈತನ ಬೆವರ ಹನಿಗೆ ತಕ್ಕ ಬೆಲೆ ಇಲ್ಲದಂತಾಗಿದೆ. ತಿಂಗಳ ಸಂಬಳ ಬರದೆ ಇದ್ದರೆ, ಆಕಾಶವೇ […]
ಮುಳಬಾಗಿಲು, ಜು-20, ವಡ್ಡಹಳ್ಳಿ ಟೆಮೋಟೋ ಮಾರುಕಟ್ಟೆಯಲ್ಲಿ ಕಾನೂನು ಬಾಹಿರವಾಗಿ 100 ರೂಪಾಯಿಗೆ 10 ರೂಪಾಯಿ ಕಮೀಷನ್ ಹಾವಳಿ ಹಾಗೂ ಬಾಕ್ಸ್ ಗಾತ್ರ ಹೆಚ್ಚಳ ಮಾಡಿರುವ ಮಂಡಿ ಮಾಲೀಕರ ವಿರುದ್ದ ಕ್ರಮ ಕೈಗೊಂಡು ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ರೈತ ಸಂಘದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಮುಂದೆ ಕೊಳತ ಟೆಮೋಟೋ ಸಮೇತ ಹೋರಾಟ ಮಾಡಿ ಕಾರ್ಯದರ್ಶಿಯವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.ಟೆಮೊಟೋಗೆ ಬಂಗಾರದ ಬೆಲೆ ಬಂದಿದೆ ಆದರೆ ರೈತರ ಬೆಳೆದ ಟೆಮೋಟೋಗೆ ಬಾದಿಸುತ್ತಿರುವ ರೋಗ ನಿಯಂತ್ರಣ ವಿಲ್ಲದೆ ಕೇವಲ ಶೇಕಡ […]