
ಶ್ರೀನಿವಾಸಪುರ: ಕೋಲಾರದಲ್ಲಿ ಅ.3 ರಂದು ಏರ್ಪಡಿಸಿದ್ದ ಬಿಜೆಪಿ ಪ್ರತಿಭಟನಾ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್, ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರ ಬಗ್ಗೆ ಹಗುರವಾಗಿ ಮಾತನಾಡಿರುವುದು ಖಂಡನೀಯ ಎಂದು ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ ಅಶೋಕ್ ಹೇಳಿದರು.ಪಟ್ಟಣದ ಪಿಎಲ್‍ಡಿ ಬ್ಯಾಂಕ್ ಸಭಾಂಗಣದಲ್ಲಿ ಕಾಂಗ್ರೆಸ್ ಮುಖಂಡರು ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್.ರವಿಕುಮಾರ್ ಮಾತಿನ ಭರದಲ್ಲಿ ರಮೇಶ್ ಕುಮಾರ್ ಅವರ ಜಮೀನು ಕುರಿತು ಪ್ರಸ್ತಾಪಿಸಿ ‘ರಮೇಶ್ ಕುಮಾರ್ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದರೂ ಜಿಲ್ಲಾ ಅರಣ್ಯಾಧಿಕಾರಿ […]

ಕೋಲಾರ,ಅ.03: ಸೈನಿಕರು, ಪೊಲೀಸರ ರೀತಿ ಮಾಧ್ಯಮದವರು ಕೆಲಸ ಮಾಡುತ್ತಿದ್ದಾರೆ. ಅವರ ಸೇವೆ ಅನನ್ಯವಾದುದು, ತಮ್ಮ ಆರೋಗ್ಯ ಲೆಕ್ಕಿಸದೆ ಅಪರಾಧ ನಡೆದ ಜಾಗದಲ್ಲಿ ಪೆÇಲೀಸರಿಗಿಂತ ಮೊದಲೇ ಪತ್ರಕರ್ತರು ಹೋಗಿರುತ್ತಾರೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ನಾರಾಯಣ್ ಪ್ರಶಂಶಿಸಿದರು.ಜಿಲ್ಲಾ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಾರಾಯಣ ಹೃದಯಾಲಯದಿಂದ ನಗರದ ಜಾಲಪ್ಪ ಹೊರರೋಗಿಗಳ ವಿಭಾಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.ಪತ್ರಕರ್ತರು ಸರಿಯಾಗಿ ಊಟ, ನಿದ್ದೆ ಮಾಡಲ್ಲ. ಪೊಲೀಸರಿಗಿಂತ ಮೊದಲೇ ಅಪಘಾತ, ಅಪರಾಧ ನಡೆದ ಜಾಗದಲ್ಲಿದ್ದು, ವರದಿ […]

ಶ್ರೀನಿವಾಸಪುರ 1 : ಕ್ಷೇತ್ರದ ಅಭಿವೃದ್ದಿಯೇ ನನ್ನ ಮೂಲ ಮಂತ್ರ, ನನಗೆ ಮತ ಹಾಕಿದ ಜನತೆಯ ಅಭಿವೃದ್ದಿಯೇ ನನ್ನ ಗುರಿ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ಪಟ್ಟಣದ ಪುರಸಭೆ ಕಛೇರಿಯಲ್ಲಿ ಮಂಗಳವಾರ ಪಟ್ಟಣ ಹಾಗು ತಾಲೂಕಿಗೆ ಸಂಬಂದಿಸಿದಂತೆ ಕುಂದುಕೊರತೆ ಸಭೆಯಲ್ಲಿ ಅರ್ಜಿಗಳನ್ನು ಸ್ವೀಕರಿಸಿ ಮಾತನಾಡಿದರು.ಜನತೆ ನನ್ನ ಮೇಲಿನ ಪ್ರೀತಿ ವಿಶ್ವಾಸಕ್ಕೆ ಮತ ಹಾಕಿ ನನ್ನನ್ನು ಗೆಲ್ಲಿಸಿಕೊಟ್ಟಿದ್ದಾರೆ ಅದಕ್ಕಾಗಿ ಇಂದು ನಾನು ಅವರ ಋಣ ತೀರಿಸುವ ಉದ್ದೇಶದಿಂದ ಕ್ಷೇತ್ರದಾದ್ಯಂತ ಬಡವರಿಗೆ ಮನೆಗಳ ನಿರ್ಮಾಣ, ಶುದ್ದ ಕುಡಿಯುವ ನೀರಿನ ಸೌಲಭ್ಯ, ಸುಸಜ್ಜಿತ […]

ಶ್ರೀನಿವಾಸಪುರ ಪುರಸಭೆ ವತಿಯಿಂದ ಏರ್ಪಡಿಸಿದ್ದ ಪರಿಸರ ಚಿತ್ರ ರಚನಾ ಸ್ಪರ್ಧೆಯಲ್ಲಿ ವಿಜೇತರಾದ ಅಭ್ಯರ್ಥಿಗೆ ಪ್ರಮಾಣ ಪತ್ರ ನೀಡಲಾಯಿತು.

ಶ್ರೀನಿವಾಸಪುರ ತಾಲ್ಲೂಕಿನ ಕುಪ್ಪಳ್ಳಿ ಗ್ರಾಮದ ಶತಾಯುಷಿ ಮಹಿಳೆ ಮುನಿಯಮ್ಮ(103) ಅವರನ್ನು ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮತಿ ವತಿಯಿಂದ ತಹಶೀಲ್ದಾರ್ ಶಿರಿನ್ ತಾಜ್ ಸನ್ಮಾನಿಸಿದರು.

ಶ್ರೀನಿವಾಸಪುರದಲ್ಲಿ ಆಟೋ ಚಾಲಕರ ಸಂಘದ ವತಿಯಿಂದ ಗಾಂಧಿ ಜಯಂತಿ ಆಚರಿಸಲಾಯಿತು. ಸಂಘದ ಅಧ್ಯಕ್ಷ ಜಗನ್, ರಾಘವೇಂದ್ರ, ರಿಜ್ವಾನ್, ಜಹೀರ್, ಜಾವಿದ್, ಸುರೇಶ್, ಮಾರಪ್ಪ ವೆಂಕಟೇಶ್, ಅಶೋಕ್, ನಾಗರಾಜ್ ಇದ್ದರು.

ಶ್ರೀನಿವಾಸಪುರದ ಪುರಸಭಾ ಕಚೇರಿಯಲ್ಲಿ ಸೋಮವಾರ ಗಾಂಧಿ ಜಯಂತಿ ಆಚರಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ, ವ್ಯವಸ್ಥಾಪಕ ನವೀನ್ ಚಂದ್ರ, ಕೆ.ಜಿ.ರಮೇಶ್, ವಿ.ನಾಗರಾಜ್, ಎಂ.ಶಂಕರ್, ಕೆ.ಎಸ್.ಲಕ್ಷ್ಮೀಶ, ಸಂತೋಷ್, ಸುರೇಶ್, ಶಿವಪ್ರಸಾದ್, ಶ್ರೀನಾಥ್, ಬಿ.ವೆಂಕಟರೆಡ್ಡಿ, ನಾಗರಾಜ್, ಆಯಿಷಾ ನಯಾಜ್, ವಿ.ನಾಗರಾಜ್ ಇದ್ದರು.

ಶ್ರೀನಿವಾಸಪುರ ಪಟ್ಟಣದ ಹೈದರ್ ಆಲಿ ಮೊಹಲ್ಲ ಹಾಗೂ ಜಾಕಿರ್ ಹುಸೆನ್ ಮೊಹಲ್ಲಾ ಉರ್ದು ಶಾಲೆಗಳಿಗೆ ಶಾಸಕ ಜಿ.ಕೆ ವೆಂಕಟಶಿವಾರೆಡ್ಡಿ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ, ದುರಸ್ತಿ ಕಾಮಗಾರಿಗಳು ಹಾಗೂ ಶಾಲಾ ನಿರ್ವಹಣೆ ವೀಕ್ಷಣೆ ಮಾಡಿದರು.

ಶ್ರೀನಿವಾಸಪುರ 1 : ಸ್ವಚ್ಚ ಭಾರತ ಅಭಿಯಾನವು ಭಾರತವು ಸ್ವಚ್ಚ ಮತ್ತು ಉತ್ತಮವಾಗಲು ಸಾಧಿಸಲು ಸಾಕಷ್ಟು ಗುರಿಗಳನ್ನು ಹೊಂದಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾದೀಶರಾದ ಬಿ.ಕೆ.ಮನು ಹೇಳಿದರು.ಪಟ್ಟಣ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ, ಸಹಯೋಗದಲ್ಲಿ ಪುರಸಭೆ ವತಿಯಿಂದ ಶನಿವಾರ ನಡೆದ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಸ್ವಚ್ಚ ಭಾರತ ಅಭಿಯಾನವು ಭಾರತಕ್ಕೆ ಹೆಚ್ಚು ಅಗತ್ಯವಿರುವ ಉಪಕ್ರಮವಾಗಿದೆ. ಏಕೆಂದರೆ ಕಳಪೆ ಶುಚಿತ್ವ ದಿಂದ ಪರಿಸರ ಹಾಗು ಆರೋಗ್ಯದ ಮೇಲೆ ಅನೇಕ ಪರಿಣಾಮ […]