ಶ್ರೀನಿವಾಸಪುರ : ತಾಲ್ಲೂಕಿನ ತಾಲ್ಲೂಕು ಕಛೇರಿಯ ಅವ್ಯವಸ್ಥೆ ಕಂಡ ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿ ಅಕ್ರಮ್ ಪಾಷ ತಮ್ಮ ಅಸಮದಾನ ವ್ಯಕ್ತಪಡಿಸಿದ್ದಾರೆ. ಕೋಲಾರ ಜಿಲ್ಲೆಗೆ ನೂತನವಾಗಿ ಆಗಮಿಸಿರುವ ಜಿಲ್ಲಾಧಿಕಾರಿಗಳಾದ ಅಕ್ರಮ್ ಪಾಷ ರವರು ಕಳೆದ ಕೆಲ ದಿನಗಳಿಂದ ಜಿಲ್ಲೆಗೆ ಒಳಪಡುವ ತಾಲ್ಲೂಕುವಾರು ಕೇಂದ್ರಗಳಿಂದ ದಿಢೀರ್ ಭೇಟಿ ನೀಡುವ ಮೂಲಕ ಪರಿಶೀಲನೆ ನಡೆಸುತ್ತಿದ್ದಾರೆ. ಇದೆ ನಿಟ್ಟಿನಲ್ಲಿ ಶುಕ್ರವಾರ ಬೆಳಗ್ಗೆ ಶ್ರೀನಿವಾಸಪುರ ತಾಲ್ಲೂಕು ಕಛೇರಿಗೆ ಡಿ ಸಿ ಅಕ್ರಮ್ ಪಾಷ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದು, ಪರಿಶೀಲನೆ ವೇಳೆ ತಾಲ್ಲೂಕು ಕಛೇರಿಯ […]
ಶ್ರೀನಿವಾಸಪುರ 1 : ಟಮೋಟೋಗೆ ಬೆಲೆ ಇದೆ, ಆದರೆ ಅದಕ್ಕೆ ತಕ್ಕಂತೆ ಫಸಲು ಇಲ್ಲದೆ ರೈತ ನಷ್ಟವನ್ನು ಅನುಭವಿಸುತ್ತಿದ್ದು, ತಾಲೂಕಿನ ಸುಮಾರು 700 ಹೆಕ್ಟೇರ್ ನಷ್ಟು ಟಮೋಟೋ ಬೆಳೆದಿದ್ದಾರೆ. ರಾಯಲ್ಪಾಡು ಬಳಿಯ ಯಂಡಗುಟ್ಟಪಲ್ಲಿಯ ಸುಬ್ಬರಾಮು ತೋಟಕ್ಕೆ , ತಾಡಿಗೋಳ್‍ನ ತಿಪ್ಪನ್ನ ತೋಟಕ್ಕೆ ವಿಜ್ಞಾನಿಗಳ ತಂಡ ಬೇಟಿ ನೀಡಿ ಪರಿಶೀಲಿಸಿದರು.ಬಹುತೇಕ ಟಮೋಟೋ ಬೆಳೆಯು ನುಸಿ ರೋಗ ಪೀಡಿತವಾಗಿದ್ದು, ರೋಗ ನಿರ್ಮೂಲನೆಗಾಗಿ ರೈತರು ಅನುಭವಿ ರೈತರ ಹಾಗೂ ಔಷಧಿ ಅಂಗಡಿಗಳ ಸಲಹೆ ಪಡೆದು ಔಷಧಿಗಳಿಗಾಗಿ ಸಾವಿರಾರು ರೂಗಳನ್ನು ವ್ಯಯ ಮಾಡಿ […]
ವಡ್ಡಹಳ್ಳಿ, ಜು.21: ನಲಗುಂದ ನವಿಲಗುಂದ 43ನೇ ವರ್ಷದ ಹುತಾತ್ಮ ದಿನಾಚರಣೆಯನ್ನು ಪ್ರಗತಿಪರ ರೈತ ದರ್ಮರವರ ತೋಟದಲ್ಲಿ ಗೋ ಪೂಜೆ ಮಾಡುವ ಮುಕಾಂತರ ಹುತಾತ್ಮ ರೈತರಿಗೆ ಗೌರವ ಸಲ್ಲಿಸಿ ಪ್ರಗತಿ ಪರ ಹಿರಿಯ ರೈತರಿಗೆ ಗಿಡ ನೀಡುವ ಮುಖಾಂತರ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.ಕೃಷಿ ಎಂಬ ಪೇಪರ್‍ನಲ್ಲಿ ಇಂಕು ಎಂಬ ಬಿತ್ತನೆ ಬೀಜ ರಸಗೊಬ್ಬರ ಚಲ್ಲಿ ಬಿಸಲು ಗಾಳಿ ಮಳೆಗೆ ಮೈಯನ್ನು ಬಗ್ಗಿಸಿ ದುಡಿಯುವ ರೈತನ ಬೆವರ ಹನಿಗೆ ತಕ್ಕ ಬೆಲೆ ಇಲ್ಲದಂತಾಗಿದೆ. ತಿಂಗಳ ಸಂಬಳ ಬರದೆ ಇದ್ದರೆ, ಆಕಾಶವೇ […]
ಮುಳಬಾಗಿಲು, ಜು-20, ವಡ್ಡಹಳ್ಳಿ ಟೆಮೋಟೋ ಮಾರುಕಟ್ಟೆಯಲ್ಲಿ ಕಾನೂನು ಬಾಹಿರವಾಗಿ 100 ರೂಪಾಯಿಗೆ 10 ರೂಪಾಯಿ ಕಮೀಷನ್ ಹಾವಳಿ ಹಾಗೂ ಬಾಕ್ಸ್ ಗಾತ್ರ ಹೆಚ್ಚಳ ಮಾಡಿರುವ ಮಂಡಿ ಮಾಲೀಕರ ವಿರುದ್ದ ಕ್ರಮ ಕೈಗೊಂಡು ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ರೈತ ಸಂಘದಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಮುಂದೆ ಕೊಳತ ಟೆಮೋಟೋ ಸಮೇತ ಹೋರಾಟ ಮಾಡಿ ಕಾರ್ಯದರ್ಶಿಯವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.ಟೆಮೊಟೋಗೆ ಬಂಗಾರದ ಬೆಲೆ ಬಂದಿದೆ ಆದರೆ ರೈತರ ಬೆಳೆದ ಟೆಮೋಟೋಗೆ ಬಾದಿಸುತ್ತಿರುವ ರೋಗ ನಿಯಂತ್ರಣ ವಿಲ್ಲದೆ ಕೇವಲ ಶೇಕಡ […]
ಕೋಲಾರ:- ಜಿಲ್ಲೆಯ ಕೌಶಲ್ಯ ಅಭಿವೃಧ್ಧಿ ಚಟುವಟಿಕೆಗಳ ಸಮಗ್ರ ಅಭಿವೃದ್ಧಿಗಾಗಿ ಎಲ್ಲಾ ಇಲಾಖೆಗಳ ಕೌಶಲ್ಯ ಚಟುವಟಿಕೆಗಳ ಸಮನ್ವಯತೆ ಅಗತ್ಯವಾಗಿದ್ದು, ಹೆಚ್ಚಿನ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿ ನೀಡಿ ಉತ್ತಮ ಮಾನವ ಸಂಪನ್ಮೂಲ ಅಭಿವೃದ್ಧಿಗೊಳಿಸಲು ಎಲ್ಲರೂ ಶ್ರಮಿಸಬೇಕೆಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಕರೆ ನೀಡಿದರು.ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಆಯೋಜಿಸಲಾಗಿದ್ದ, ಜಿಲ್ಲಾ ಕೌಶಲ್ಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಕೌಶಲ್ಯ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಅಪ್ರೆಂಟಿಸ್‍ಶಿಪ್ ಹಾಗೂ ಉದ್ಯೋಗ ಮೇಳಗಳನ್ನು ಆಯೋಜಿಸಿ ಉದ್ಯೋಗ ಅವಕಾಶ ಕಲ್ಪಿಸಲು […]
ಶ್ರೀನಿವಾಸಪುರ: ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಮಂಗಳವಾರ ಟೊಮೆಟೊ ವಹಿವಾಟು ಜೋರಾಗಿ ನಡೆಯಿತು. 15 ಕೆಜಿ ತೂಗುವ ಟೊಮೆಟೊ ಬಾಕ್ಸೊಂದು ರೂ.1800 ರಿಂದ ರೂ.2000 ದವರೆಗೆ ಮಾರಾಟವಾಯಿತು.ಮಾರುಕಟ್ಟೆಗೆ ಟೊಮೆಟೊ ತಂದಿದ್ದ ರೈತರು ಬೆಲೆಯಿಂದ ಹರ್ಷಚಿತ್ತರಾಗಿದ್ದರು. ಆದರೆ ಮುದುಡು ರೋಗದಿಂದ ಇಳುವರಿ ಕುಸಿದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.‘1 ಎಕರೆಯಲ್ಲಿ ಟೊಮೆಟೊ ಬೆಳೆದಿದ್ದೇನೆ. ಪ್ರಾರಂಭದಲ್ಲಿ 60 ಬಾಕ್ಸ್ ಸಿಕ್ಕಿದೆ. ಒಳ್ಳೆ ಬೆಲೆ ಬಂದಿದೆ. ತೋಟ ರೋಗಪೀಡತವಾಗದೆ ಇದ್ದಲ್ಲಿ, ಈ ಹಿಂದೆ ಬೆಲೆ ಕುಸಿತದಿಂದ ಕಳೆದುಕೊಂಡಿದ್ದ ಬಂಡವಾಳ ವಾಪಸ್ ಬರುತ್ತಿತ್ತು. ಸಧ್ಯ ಇಷ್ಟಾದರೂ ಸಿಗುತ್ತಿದೆ. […]
ಶ್ರೀನಿವಾಸಪುರ: ಸಾರ್ವಜನಿಕರು ಪ್ಲಾಸ್ಟಿಕ್ ಮುಕ್ತ ಪಟ್ಟಣವನ್ನಾಗಿ ಮಾಡಲು ಸಹಕರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಹೇಳಿದರು.ಪಟ್ಟಣದ ಪುರಸಭೆ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪ್ಲಾಸ್ಟಿಕ್ ಮುಕ್ತ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ಲಾಸ್ಟಿಕ್ ಜಾನುವಾರುಗಳ ಪಾಲಿಗೆ ಯಮಪಾಷವಾಗಿದೆ. ಪಟ್ಟಣದಲ್ಲಿ ಸ್ವಚ್ಛ ಪರಿಸರ ನಿರ್ಮಾಣಕ್ಕೆ ಅಡ್ಡಿಯಾಗಿದೆ ಎಂದು ಹೇಳಿದರು.ಪುರಸಭೆ ಆರೋಗ್ಯ ನಿರೀಕ್ಷಕ ಕೆ.ಜಿ.ರಮೇಶ್ ಮಾತನಾಡಿ, ಸಾರ್ವಜನಿಕರು ಪ್ಲಾಸ್ಟಿಕ್ ಕವರ್‍ಗೆ ಬದಲಾಗಿ ಬಟ್ಟೆ ಚೀಲ ಬಳಸಬೇಕು. ಮಾಂಸ, ಮೀನು ಖರೀದಿಸಿ ಕೊಂಡೊಯ್ಯಲು ಸ್ಟೀಲ್ ಕ್ಯಾರಿಯರ್ ಬಳಸುವುದು ಕ್ಷೇಮಕರ. ಪ್ಲಾಸ್ಟಿಕ್ ವಸ್ತು ಸುಡುವುದರಿಂದ […]
ಕೋಲಾರ ತಾಲ್ಲೂಕಿನ ಹೊಗರಿ ಗೊಲ್ಲಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಶಿಕ್ಷಕ ಹಾಗೂ ದಾನಿ ಎಸ್.ಆರ್.ಧರ್ಮೇಶ್ ಸಮವಸ್ತ್ರ ನೀಡಿದರು.ಕೋಲಾರ: ಪ್ರತಿಯೊಬ್ಬರೂ ಮಕ್ಕಳಲ್ಲಿ ದೇವರನ್ನು ಕಾಣಬೇಕು. ಅವರ ಶೈಕ್ಷಣಿಕ ಅಭಿವೃದ್ಧಿಗೆ ಕೈಲಾದ ನೆರವು ನೀಡಬೇಕು ಎಂದು ಶಿಕ್ಷಕ ಹಾಗೂ ದಾನಿ ಎಸ್.ಆರ್.ಧರ್ಮೇಶ್ ಹೇಳಿದರು.ತಾಲ್ಲೂಕಿನ ಹೊಗರಿ ಗೊಲ್ಲಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ಓದುವ ಹೆಚ್ಚಿನ ಸಂಖ್ಯೆಯ ಮಕ್ಕಳು ಬಡ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಅವರಿಗೆ ಸರ್ಕಾರದಿಂದ […]
ಕೋಲಾರ : ಕೋಲಾರ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಜುಲೈ 17 , 2023 ರಿಂದ 24 , 2023 ರವರೆಗೆ ಆಟೋ ಪ್ರಚಾರ ಮೂಲಕ ಬಾಲ ಕಾರ್ಮಿಕ ಅನಿಷ್ಠ ಪದ್ದತಿಯನ್ನು ನಿರ್ಮೂಲನೆ ಮಾಡಲು ಜನ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು , ಈ ಸಂಬಂಧ ಇಂದು ಅಕ್ರಂ ಪಾಷ ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು , ಬಾಲಕಾರ್ಮಿಕ ಯೋಜನಾ ಸೊಸೈಟಿ , ಕೋಲಾರ ಜಿಲ್ಲೆ , ಕೋಲಾರ ಹಾಗೂ ಶ್ರೀಮತಿ ಪದ್ಮ ಬಸವಂತಪ್ಪ , ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ […]