
ಬೆಂಗಳೂರು : ಕಳೆದ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿರುವ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಶೇ.12 ರಷ್ಟು ಜಾಹೀರಾತು ದರವನ್ನು ಶೀಘ್ರವೇ ಹೆಚ್ಚಳ ಮಾಡಲಾಗುವುದೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಸೂರಳ್ಕರ್ ವಿಕಾಸ್ ಕಿಶೋರ್ ಭರವಸೆ ನೀಡಿದರು. ಕರ್ನಾಟಕ ಕಾರ್ಯನಿರತ ದಿನಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸಿ.ತಿಪ್ಪೇಸ್ವಾಮಿ ಅವರ ನೇತೃತ್ವದಲ್ಲಿ ಶನಿವಾರ ಮಧ್ಯಾಹ್ನ ಆಯುಕ್ತರನ್ನು ಭೇಟಿ ಮಾಡಿ ಈ ಹಿಂದಿನ ಆಯುಕ್ತರೊಂದಿಗೆ ಸಂಘದ ಪದಾಧಿಕಾರಿಗಳು ಸಭೆ ನಡೆಸಿ ಸಲ್ಲಿಸಲಾದ ಮನವಿಯಲ್ಲಿನ ಬೇಡಿಕೆಗಳ ಕುರಿತು ಆಯುಕ್ತರ […]

ಕೋಲಾರ; ಮೇ.6: ರೈತರ ಹೈನೋದ್ಯಮದ ಕ್ಷೀರಭಾಗ್ಯ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಿ ಬರದಿಂದ ತತ್ತರಿಸಿರುವ ರೈತರ ರಕ್ಷಣೆಗೆ ಸಹಕಾರ ಸಚಿವರು ನಿಲ್ಲಬೇಕೆಂದು ರೈತ ಸಂಘದಿಂದ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್.ಗೋಪಾಲಮೂರ್ತಿ ಅವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.ರೇಷ್ಮೆ, ಮಾವು, ಟೊಮೇಟೊ ಬೆಳೆಗಳಿಗೆ ಬಾದಿಸುತ್ತಿರುವ ರೋಗಗಳಿಂದ ತತ್ತರಿಸಿ ಹಾಕಿದ ಬಂಡವಾಳ ಕೈಗೆ ಸಿಗದೆ ಸಂಕಷ್ಟದಲ್ಲಿದ್ದ ರೈತರ ಕೈ ಹಿಡಿದ ಹೈನೋದ್ಯಮ ಇಂದು ದಿನೇ ದಿನೇ ನಷ್ಟದ ಸುಳಿಯಲ್ಲಿ ಸಿಲುಕುತ್ತಿದೆ. ಹೈನೋದ್ಯಮದ ರಕ್ಷಣೆಗೆ ನಿಲ್ಲಬೇಕಾದ ಸರ್ಕಾರ ಮೀನಾಮೇಷ ಎಣಿಸುತ್ತಿದೆ ಎಂದು ರೈತ […]

ಶ್ರೀನಿವಾಸಪುರ : ತಾಲೂಕಿನ ದಳಸನೂರು ಗ್ರಾಮದಲ್ಲಿ ಶುಕ್ರವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿಯಿಂದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿಯಿಂದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಯಾವುದೇ ಸರ್ಕಾರಕ್ಕೂ ಸಿದ್ಧಾಂತಗಳಿಲ್ಲ, ಜನಪರ ಕೆಲಸಗಳಿಗೆ ಸರ್ಕಾರ ಸ್ಪಂದಿಸುತ್ತಿಲ್ಲ, ರೈತರ ನೆರವಿಗೆ ಬರುತ್ತಿಲ್ಲ, ಕೇವಲ ಅಧಿಕಾರ ದಾಹಕ್ಕಾಗಿ ಏನೆಲ್ಲಾ ಮಾಡಬೇಕು ಅದನ್ನು ಮಾಡುತ್ತಿರುವುದು ಬಿಟ್ಟರೆ ಯಾವುದೇ ಅಭಿವೃದ್ಧಿ ಕೆಲಸಗಳು ರಾಜ್ಯದಲ್ಲಿ […]

ಕೋಲಾರ/04 ಮೇ : ಕೋಲಾರ ನಗರದ ಗೌರಿಪೇಟೆಯ ಮೂರನೇ ಕ್ರಾಸ್ ಸಿ.ಎಂ.ಸಿ. ಕಾಂಪೌಂಡ್‍ನಲ್ಲಿ ಸುಮಾರು ಇಪ್ಪತ್ತು ಕುಟುಂಬಗಳು ವಾಸವಾಗಿದ್ದು, ಈ ಕುಟುಂಬಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಆರ್.ಮಂಜುನಾಥ್ ಮತ್ತು ಆರ್.ವೆಂಕಟಾಚಲಪತಿ ಎಂಬುವರು ದೌರ್ಜನ್ಯದಿಂದ ಅಕ್ರಮವಾಗಿ ರಸ್ತೆ ಒತ್ತುವರಿ ಮಾಡಿಕೊಂಡು ಆ ಸ್ಥಳದಲ್ಲಿ ಮನೆಗಳಿಗೆ ಹೋಗುವ ರಸ್ತೆಯನ್ನು ಮುಚ್ಚಿ ಗೋಡೆ ನಿರ್ಮಾಣ ಮಾಡಿ ಓಡಾಡಲು ತೊಂದರೆ ನೀಡಿದ್ದರು.ಈ ವಿಚಾರವಾಗಿ ಸಿ.ಎಂ.ಸಿ. ಕಾಂಪೌಂಡಿನ ವಾಸಿ ಕೆ.ಆರ್.ಶೋಭ ರವರು ಕೋಲಾರ ನಗರಸಭೆಯ ಪೌರಾಯುಕ್ತರಿಗೆ ದೂರು ಅರ್ಜಿ ನೀಡಿ ರಸ್ತೆ ಒತ್ತುವರಿ ಮಾಡಿಕೊಂಡಿರುವ […]

ಕೋಲಾರ, ಮೇ 04 ಜೂ.3ರಂದು ನಡೆಯಲಿರುವ ಆಗ್ನೇಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಒಟ್ಟು 4142 ಮಂದಿ ಶಿಕ್ಷಕ ಮತದಾರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ಇಂದು ಮನ್ನಣೆ ಪಡೆದ ರಾಜಕೀಯ ಪಕ್ಷಗಳ ಸಭೆ ನಡೆಸಿದ ನಂತರ ಮಾತನಾಡಿದ ಅವರು, ಚುನಾವಣೆಗೆ ನಿಯೋಜನೆಗೊಂಡಿರುವ ಸಿಬ್ಬಂದಿಗೆ ಈಗಾಗಲೇ ತರಬೇತಿ ನೀಡಲಾಗಿದ್ದು, ಜೂ.3ರಂದು ಮತದಾನ ಹಾಗೂ ಜೂ.6ರಂದು ಮತಗಳ […]

ಕೋಲಾರ: ಕೋಲಾರ ಜಿಲ್ಲಾಧಿಕಾರಿ ಅಕ್ರಂಪಾಷ ಅವರ ನೇತೃತ್ವದಲ್ಲಿ ಇಡೀ ಕರ್ನಾಟಕ ರಾಜ್ಯದಲ್ಲಿ 28ನೇ ಸ್ಥಾನದಲ್ಲಿದ್ದ ಕೋಲಾರ ಜಿಲ್ಲೆ ಅಟಲ್ ಜನಸ್ನೇಹಿ ಕೇಂದ್ರದಲ್ಲಿ ಸಾರ್ವಜನಿಕರ ಅರ್ಜಿಗಳನ್ನು ಸ್ವೀಕರಿಸಿ ಸಕಾಲದಲ್ಲಿ ಸರ್ಕಾರಿ ಸೌಲಭ್ಯಗಳನ್ನು ಜನರಿಗೆ ಒದಗಿಸುವ ಮೂಲಕ ರಾಜ್ಯದಲ್ಲಿಯೇ ಸತತವಾಗಿ 2ನೇ ಬಾರಿಗೆ ಅಗ್ರಸ್ಥಾನಕ್ಕೇರಿದೆ. ಕೋಲಾರ ಜಿಲ್ಲಾಧಿಕಾರಿ ಅಕ್ರಂಪಾಷ ಅವರೊಂದಿಗೆ ಕಂದಾಯ ಇಲಾಖೆಯ ಸಿಬ್ಬಂದಿ ಮತ್ತು ಅಧಿಕಾರಿ ವರ್ಗದವರು ಸಂಪೂರ್ಣವಾಗಿ ಸಹಕಾರ ಮತ್ತು ಬೆಂಬಲ ನೀಡುವ ಮೂಲಕ ಕೋಲಾರ ಜಿಲ್ಲೆಯನ್ನು ಕರ್ನಾಟಕ ರಾಜ್ಯದ ಭೂಪಟದಲ್ಲಿ ಮಿಂಚುವಂತೆ ಮಾಡಿದ್ದಾರೆ. 45 ವಿಧವಾದ […]

ಕೋಲಾರ:- ಕೆರೆಗಳ ಪುನರುಜ್ಜೀವನದ ಮೂಲಕ ಬರಪೀಡಿತ ಕೋಲಾರ ಜಿಲ್ಲೆಯಲ್ಲಿ ಅಂತರ್ಜಲ ವೃದ್ದಿಗೆ ಕೊಡುಗೆ ನೀಡಲು ಮುಂದಾಗಿರುವ ಪುಣೆಯ ಭಾರತೀಯ ಜೈನ ಸಂಘಟನೆ `ಬರಮುಕ್ತ ಕರ್ನಾಟಕ ಅಭಿಯಾನ’ ದಡಿ ಪೆಮ್ಮಶೆಟ್ಟಿಹಳ್ಳಿ ಕೆರೆ ಹೂಳೆತ್ತುವ ಕಾರ್ಯದ ಮೂಲಕವೇ ಜಲಕ್ರಾಂತಿಗೆ ಮುನ್ನುಡಿ ಇಟ್ಟಿದೆ ಎಂದು ಸೂಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್ ಧನ್ಯವಾದ ಸಲ್ಲಿಸಿದರು.ಪುಣೆಯ ಭಾರತೀಯ ಜೈನ ಸಂಘಟನೆವತಿಯಿಂದ ತಾಲ್ಲೂಕಿನ ಪೆಮ್ಮಶೆಟ್ಟಿಹಳ್ಳಿಯಲ್ಲಿ ಊರ ಮುಂದಿನ ಕೆರೆಯಲ್ಲಿ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.ಭಾರತೀಯ ಜೈನ ಸಂಘಟನೆ […]

ಶ್ರೀನಿವಾಸಪುರ : ತಾಲೂಕಿನ ೨೬ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು , ೨೬ ಬೋರ್ ವೆಲ್ ಬೇಡಿಕೆ ಇದ್ದು, ಆ ಗ್ರಾಮಗಳಲ್ಲಿ ಅತಿ ಶೀಘ್ರವಾಗಿ . ಮತ್ತು ವಾಟರ್ ಬೋರ್ಡ್ ವತಿಯಿಂದ ಬೋರ್ ವೆಲ್ ಕೊರೆಸುವ ವ್ಯವಸ್ಥೆ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಹಾಗೂ ತಾಲೂಕು ಪಂಚಾಯಿತಿ ವತಿಯಿಂದ ಗ್ರಾಮದಲ್ಲಿ ಪ್ರದೇಶದಲ್ಲಿ ಪರಿಶೀಲಿಸಿ 56 ಕೊಳವೆ ಬಾವಿ ದುರಸ್ತಿ ಪಡಿಸಬೇಕೆಂದು ಸೂಚಿಸಿದರು ನೀವು ಹಮ್ಮಿಕೊಂಡಿರುವ ಪ್ರಗತಿ ಕಾರ್ಯಗಳ ಬಗ್ಗೆ ಇದೇ ತಿಂಗಳು ೧೪ ತಾರೀಖಿನ ಒಳಗೆ […]

ಶ್ರೀನಿವಾಸಪುರ ; ಕಾರ್ಮಿಕರನ್ನು ಗೌರವಿಸುವ ಮತ್ತು ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದ ದಿನವಾಗಿದೆ ಎಂದು ತಾ.ಪಂ ಮಾಜಿ ಸದಸ್ಯ ಕೆ.ಕೆ.ಮಂಜುನಾಥರೆಡ್ಡಿ ಹೇಳಿದರು. ಬುಧವಾರ ಪಟ್ಟಣದ ತಹಶೀಲ್ದಾರ್ ಆವರಣದಲ್ಲಿನ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.ದಲಿತ ಮುಖಂಡರಾದ ಶ್ರೀನಿವಾಸ್, ಚಲಪತಿ, ನರಸಿಂಹ ಇದ್ದರು