ಕೋಲಾರ : ಕೋಲಾರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಡಾ.ಎಂ.ಆರ್. ರವಿ ಅವರು ಇಂದು ಬೆಳಗ್ಗೆ ನಗರದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಅಧಿಕಾರ ಸ್ವೀಕರಿಸಿದರು. ಅಪರ ಜಿಲ್ಲಾಧಿಕಾರಿ ಮಂಗಳ, ನೂತನ ಜಿಲ್ಲಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು. 2012ರ ಐ.ಎ.ಎಸ್ ಬ್ಯಾಚ್‌ನ ಅಧಿಕಾರಿಯಾಗಿರುವ ಡಾ.ಎಂ.ಆರ್ ರವಿಯವರು ಶೈಕ್ಷಣಿಕವಾಗಿ ಎಂ.ಎ (ಇತಿಹಾಸ) ಎಂ.ಎ (ಇಂಗ್ಲೀಷ್) ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಇತಿಹಾಸ ವಿಷಯದಲ್ಲಿ ಪಿ.ಎಚ್.ಡಿ ಪದವಿ ಪಡೆದಿರುತ್ತಾರೆ. ಇಂಗ್ಲೀಷ್ ಎಂ.ಎ ಪದವಿಯಲ್ಲಿ ಚಿನ್ನದ ಪದಕ ಪಡೆದಿರುವ ಇವರು […]

Read More

ಶ್ರೀನಿವಾಸಪುರ : ಶಾಲೆಗಾಗಿ ನಾವು ಇದ್ದೇವೆ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಯತ್ತಾ ಕೊಂಡ್ಯೂವುದು ಶಿಕ್ಷಕರ ಜವಾಬ್ದಾರಿ ಎಂದು ಟ್ರಸ್ಟ್ನ ಅಧ್ಯಕ್ಷ ಅಬ್ದುಲ್ ಮುಜೀದ್ ಹೇಳಿದರು.ಪಟ್ಟಣದ ಜಡ್.ಹೆಚ್.ಮೊಹುಲ್ಲಾ ದ ಸರ್ಕಾರಿ ಉರ್ದು ಹಾಗೂ ಇಂಗ್ಲೀಷ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಎ.ಪಿ.ಜೆ ಅಬ್ದುಲ್ ಕಲಾಂ ವೆಲ್‌ಫೇರ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತವಾಗಿ ಗುರುತಿನ ಚೀಟಿ ಹಾಗು ಅಂಕ ಪಟ್ಟಿ ಲೇಖನಿ ಮತ್ತು ನೂತನ ವರ್ಷದ ಕ್ಯಾಲೆಂಡರ್ ವಿತರಿಸಿ ಮಾತನಾಡಿದರು. ಪೋಷಕರು ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು. ಸರ್ಕಾರಿ ಶಾಲೆಯಲ್ಲಿ […]

Read More

ಶ್ರೀನಿವಾಸಪುರ : ಪ್ರತಿ ಪಂಚಾಯಿತಿಗೊಂದು ರಾಗಿ ಹಾಗೂ ಭತ್ತ ಕಟಾವು ಯಂತ್ರೋಪಕರಣಗಳನ್ನು ಕೃಷಿ ಇಲಾಖೆಯಿಂದ ಉಚಿತವಾಗಿ ನೀಡುವ ಜೊತೆಗೆ ಖಾಸಗಿ ಉಯಂತ್ರಗಳ ದುಬಾರಿ ಬೆಲೆ ನಿಯಂತ್ರಣಕ್ಕೆ ಕಡಿವಾಣ ಹಾಕಿ ರೈತರ ರಕ್ಷಣೆ ಮಾಡಬೇಕು ಪತ್ರಿಕಾ ಹೇಳಿಕೆ ಮುಖಾಂತರ ಕೃಷಿ ಅಧಿಕಾರಿಗಳನ್ನು ರೈತ ಸಂಘದಿಂದ ಕೃಷಿ. ಅಧಿಕಾರಿಗಳಿಗೆ ರೈತ ಸಂಘದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ ಒತ್ತಾಯಿಸಿದರು.ಪಟ್ಟಣದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಭಾನುವಾರ ರೈತ ಸಂಘದ ವತಿಯಿಂದ ನಡೆದ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.ಜಿಲ್ಲೆಯಲ್ಲಿ ರಾಗಿ ಹಾಗೂ ಭತ್ತ ಬೆಳೆದಿರುವ […]

Read More

ಶ್ರೀನಿವಾಸಪುರ: ವಿದ್ಯಾಕೇಂದ್ರಗಳು ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ದೇವಾಲಯಗಳಾಗಬೇಕೆ ಹೊರತು ಅಂಕಪಟ್ಟಿಗಳನ್ನು ತಯಾರಿಸುವ ಯಂತ್ರಗಳಾಗಬಾರದು ಎಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ. ವಿ. ಗೋಪಿನಾಥ್ ಹೇಳಿದರು. ಶ್ರೀನಿವಾಸಪುರ ತಾಲೂಕಿನ ಯಲ್ಡೂರು ಗ್ರಾಮದ ಶ್ರೀ ಪ್ರೀತಿವಿದ್ಯಾಮಂದಿರ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಎಂಟನೇ ವರ್ಷದ ಅಂತರ ಶಾಲಾ ಗೀತಾ ಕಂಠಪಾಠ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡುತ್ತಾ, ನಮ್ಮ ಭಾರತೀಯ ಸಂಸ್ಕೃತಿಯ ಮೂಲಾಧಾರವಾದ ಭಗವದ್ಗೀತೆಯನ್ನು ಮಕ್ಕಳು ಪ್ರತಿದಿನವೂ ಪಠಣ ಮಾಡಿ ಅರ್ಥನ್ನು ಗ್ರಹಿಸಬೇಕು. ಇದರಿಂದ ಮಕ್ಕಳಲ್ಲಿ ಓದುವ ಹವ್ಯಾಸ ಹೆಚ್ಚಾಗಿ […]

Read More

ಶ್ರೀನಿವಾಸಪುರ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2024-25ನೇ ಸಾಲಿನ ರಾಜ್ಯ ಮಟ್ಟದದಿಂದ ರಾಷ್ಟ್ರ ಮಟ್ಟಕ್ಕೆ ಕಬಡ್ಡಿ ಪಂದ್ಯಾವಳಿಯ ಮಹಿಳಾ ವಿಭಾಗದಲ್ಲಿ ಶಿಕ್ಷಕಿ ಎನ್.ಮಾದವಿ ಆಯ್ಕೆಯಾಗಿದ್ದು.ಇವರು ಜನವರಿ ದಿ. 3ರಿಂದ 8ನೇ ತಾರೀಖಿನವರೆಗೂ ದೆಹಲಿಯ ತ್ಯಾಗರಾಜ ಸ್ಟೇಡಿಯಂ ನಡೆಯಲಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಂದಲೂ ಕ್ರೀಡಾಪಟುಗಳು ಪಾಲ್ಗಳ್ಳಲಿದ್ದಾರೆ ಎಂದು ಕ್ರೀಡಾಪಟು ಎನ್.ಮಾದವಿ ಮಾಹಿತಿ ನೀಡಿದರು.

Read More

ಬೆಂಗಳೂರು: ಕಲ್ಪತರ ನಾಡು ತುಮಕೂರಿನಲ್ಲಿ ಜ.18 ಮತ್ತು 19 ರಂದು ನಡೆಯಲಿರುವ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದ ಲಾಂಛನವನ್ನು ಗೃಹ ಸಚಿವ ಜಿ.ಪರಮೇಶ್ವರ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಗೃಹ ಕಚೇರಿ ಕೃಷ್ಣಾದಲ್ಲಿ ಬಿಡುಗಡೆ ಮಾಡಿದರು.ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಆಯೋಜಿಸುತ್ತಿರುವ ರಾಜ್ಯ ಸಮ್ಮೇಳನದ ಉದ್ಘಾಟನೆಗೆ ಆಗಮಿಸಬೇಕು ಎಂದು ಸ್ವಾಗತ ಸಮಿತಿ ಅಧ್ಯಕ್ಷರು ಮತ್ತು ಗೃಹ ಸಚಿವರಾದ ಜಿ.ಪರಮೇಶ್ವರ್ ಅವರು ಆಹ್ವಾನಿಸಿದಾಗ ಮುಖ್ಯಮಂತ್ರಿಗಳು ಸಮ್ಮತಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕಳೆದ […]

Read More

ಕೋಲಾರ.ಡಿ.20, ಶ್ರೀನಿವಾಸಪುರ ತಾಲೂಕು ಹೊಸಗುಡ್ಯ ಅರಣ್ಯದ ಜಂಗಾಲಕುಂಟೆ ಸ.ನಂ. 1 ಮತ್ತು 2 ರಲ್ಲಿನ ಜಂಟಿ ಸರ್ವೆಗೆ ಗೈರಾಜರಾಗಿರುವ ಕಂದಾಯ ಮತ್ತು ಸರ್ವೆ ಅಧಿಕಾರಿಗಳ ವಿರುದ್ದ ರೈತ ಸಂಘದ ರಾಜ್ಯ ಮುಖಂಡ ಮರಗಲ್ ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.ನಗರದಲ್ಲಿ ಮಾತನಾಡಿದ ಅವರು, ಜಿಲ್ಲೆಯ ಜನರನ್ನು ದಿಕ್ಕುತಪ್ಪಿಸಿ ಡಿ-20 ರಂದು ಜಂಟಿ ಸರ್ವೆ ಮಾಡಿ ಕಾನೂನನ್ನು ಗೌರವಿಸುತ್ತೇವೆಂದು ಹೇಳಿಕೆ ನೀಡುತ್ತಿದ್ದ ಜಿಲ್ಲಾಡಳಿತ ಇಂದು ಜಂಟಿ ಸರ್ವೆಗೆ ಕಂದಾಯ, ಸರ್ವೆ ಅಧಿಕಾರಿಗಳು ಗೈರು ಹಾಜರಾಗಿ ಜ-2 ಕ್ಕೆ ಆರ್.ಸಿ ಆದೇಶದಂತೆ ಜಂಟಿ […]

Read More

ಕೋಲಾರ; ಡಿ.19: ಡಿಸೆಂಬರ್ 30ಕ್ಕೆ ಸಾವಿರ ದಿನ ಪೂರ್ಣಗೊಳ್ಳುತ್ತಿರುವ ಚನ್ನರಾಯಪಟ್ಟಣ ಭೂಸ್ವಾಧೀನಾ ವಿರೋಧಿ ಹೋರಾಟದ ಪ್ರತಿಭಟನೆಗೆ ಕೋಲಾರ ಜಿಲ್ಲೆಯಿಂದ 200 ಜನ ರೈತರು ಭಾಗವಹಿಸಲು ಗಾಜಲದಿನ್ನೆ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಕರೆದಿದ್ದ ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.ರೈತರ ಕೃಷಿ ಜಮೀನನ್ನು ಕೈಗಾರಿಕೆ, ರಸ್ತೆ, ನಿವೇಶನದ ಹೆಸರಿನಲ್ಲಿ ಭೂಸ್ವಾಧೀನ ಮಾಡಿಕೊಂಡು ಸ್ಥಳೀಯ ರೈತ ಮಕ್ಕಳಿಗೆ ಉದ್ಯೋಗ ನೀಡುತ್ತೇವೆಂದು ನಂತರ ಯಾವುದೇ ಕೈಗಾರಿಕೆಗಳನ್ನು ಮಾಡದೆ ಬಹುರಾಷ್ಟ್ರೀಯ ಕಂಪನಿಗಳ ಹೆಸರಿನಲ್ಲಿ ರಿಯಲ್ ಎಸ್ಟೇಟ್ ದಂಧೆ ಮಾಡಿಕೊಂಡು, ಕೃಷಿಯನ್ನೇ ನಂಬಿರುವ ರೈತರ ಕುಟುಂಬಗಳನ್ನು […]

Read More

ಶ್ರೀನಿವಾಸಪುರ : ಎಂ.ಜಿ. ರಸ್ತೆಯ ಎರಡೂ ಕಡೆ ಇವರು ನಡೆಸುವ ವ್ಯಾಪಾರ ವಹಿವಾಟಿನಿಂದ ಪ್ರತಿವರ್ಷ ಸುಮಾರು ಅಪಘಾತಗಳಾಗಿದ್ದು, ಪ್ರತಿನಿತ್ಯ ಟ್ರಾಫಿಕ್ ಜಾಮ್ ನಂತಹ ಸಮಸ್ಯೆಗಳು ಕೂಡ ಸಾರ್ವಜನಿಕರು ಅನುಭವಿಸಬೇಕಾಗಿದೆ. ಪ್ರತಿ ವರ್ಷವು ಕೂಡ ಇವರ ಬಗ್ಗೆ ಸಾರ್ವಜನಿಕರು ಧ್ವನಿ ಎತ್ತುತ್ತಿದ್ದರೂ ತಾಲ್ಲೂಕು ಆಡಳಿತ ಜಾಣಕುರಡರಂತೆ ವರ್ತಿಸುತ್ತಿದೆ ಎಂದು ಎಂದು ಮಾವು ಬೆಳೆಗಾರರ ಕ್ಷೇಮಾಭವೃದ್ಧಿ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ ದೂರಿದರು.ಪಟ್ಟಣದ ಎಂಜಿ ರಸ್ತೆಯಲ್ಲಿ ಅವರ ಕಾಯಿ ಮಂಡಿ ತೆರೆವುಗೊಳಿಸುವ ಬಗ್ಗೆ ಮಂಗಳವಾರ ತಹಶೀಲ್ದಾರ್ ರವರಿಗೆ ಮನವಿ ಪತ್ರ […]

Read More
1 3 4 5 6 7 334