ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ರಾಯಲ್ಪಾಡು : ಜೀವನವೆಂದ ಮೇಲೆ ಸುಖ, ಕಷ್ಟ, ಸ್ವಾಸ್ಥ್ಯ , ರೋಗರುಜಿನಗಳು ಇದ್ದೇ ಇರುತ್ತವೆ . ರೋಗಗಳು ಬಾಧಿಸಲು ಆರಂಭಿಸಿದಾಗ ಔಷಧವನ್ನು ಪರಮಶತ್ರುವಿನಂತೆ ಕಾಣುವ ಅದೆಷ್ಟೋ ಜನರಿರುತ್ತಾರೆ. ಇದಲ್ಲದೆ ಗ್ರಾಮೀಣ ಭಾಗದಲ್ಲಿ ಕೆಲವರು ಆಸ್ಪತ್ರೆಯನ್ನು ಸಹ ಪರಮಶತ್ರುವಿನಂತೆ ಕಾಣುವಂತವರು ಇದ್ದಾರೆ. ಗ್ರಾಮೀಣ ಭಾಗದ ನಾಗರೀಕರಲ್ಲಿ ಆಸ್ಪತ್ರೆ ಎಂದರೆ ಇಂಜಕ್ಷನ್ ಕೊಡುವಂತಹ, ಆಪರೇಷನ್ ಮಾಡುವಂತಹ ಸ್ಥಳ ಎಂಬ ಭಯದ ವಾತವರಣ ಹಾಗು ಆಸ್ಪತ್ರೆಗೆ ಹೋದರೆ ಇಲ್ಲಸಲ್ಲದ ಪರೀಕ್ಷೆಗಳನ್ನು ಮಾಡಿ ಮಾನಸಿಕವಾಗಿ […]
ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ ಜು.17 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ನೂತನ ಶಿಶು ಅಭಿವೃದ್ಧಿ ಯೋಜನಾಧಿಕಾರಿಯಾಗಿ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನವರಾದ ವಿಜಯಕುಮಾರ್ ರವರನ್ನು ಬೆಂಗಳೂರು ನಗರ ಜಿಲ್ಲೆಯ ಯಲಹಂಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪದವೀಧರ ಅಂಗನವಾಡಿ ಕಾರ್ಯಕರ್ತೆಯರ ಕ್ಷೇಮಾಭಿವೃದ್ಧಿ ಸಮಿತಿಯ ರಾಜ್ಯ ಸಂಸ್ಥಾಪಕ ಅಧ್ಯಕ್ಷರಾದ ಕಲ್ವಮಂಜಲಿ ಸಿ. ಶಿವಣ್ಣ, ರಾಜ್ಯಾಧ್ಯಕ್ಷರಾದ ಮದ್ದೂರು ಬಿ.ಎನ್. ತಜುಜ ಹಾಗೂ ರಾಜ್ಯ ಪ್ರಧಾನ […]
ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಹಾಲನ್ನು ಶೀಥಲೀಕರಿಸಿ ಒಕ್ಕೂಟಕ್ಕೆ ಸರಬರಾಜು ಮಾಡುವ ಉದ್ದೇಶಕ್ಕೆ ಅಗತ್ಯವಾದ ವ್ಯವಸ್ಥೆ ಮಾಡಿಕೊಳ್ಳಲು ಸಹಾಯ ಧನ ನೀಡಲಾಗುತ್ತಿದೆ ಎಂದು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಹೇಳಿದರು. ಪಟ್ಟಣದ ಕೋಚಿಮುಲ್ ಶಿಬರ ಕಚೇರಿಯಲ್ಲಿ ಗುರುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಬಿಎಂಸಿ ಘಟಕ ಅಳವಡಿಸಲು ಸಿವಿಲ್ ಕಾಮಗಾರಿ ಕೈಗೊಳ್ಳಲು ಹಾಗೂ ವಿವಿಧ ಕಾರಣಗಳಿಂದ ಮರಣ ಹೊಂದಿದ ಹಸುಗಳ ಮಾಲೀಕರಿಗೆ ಆರ್ಥಿಕ ನೆರವಿನ ಚೆಕ್ ವಿತರಿಸಿ ಮಾತನಾಡಿ, ಚೌಡನಹಳ್ಳಿ, ಕೂಳುಗುರ್ಕಿ, ನಾರವಮಾಕಲಹಳ್ಳಿ, ದೊಡ್ಡ ಬಂದಾರ್ಲಹಳ್ಳಿ ಹಾಗೂ […]
ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಬೆಳಗಿನ ಜಾವ ಪ್ರಾಮಾಣಿಕತೆಯಿಂದ ಚಳಿ, ಗಾಳಿ ಲೆಕ್ಕವಿಲ್ಲದೆ ಮನೆ ಮನೆಗೂ ಪತ್ರಿಕೆಗಳನ್ನು ಹಂಚುವ ಹುಡುಗರನ್ನು ಶ್ರೀನಿವಾಸಪುರರೋಟರಿ ಸಂಸ್ಥೆ ಗುರ್ತಿಸಿ ಆಹಾರ ಕಿಟ್ ಅನ್ನು ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಪ್ರಭಾರಿ ಪಿ.ಎಸ್.ಐ ನಾರಾಯಣಪ್ಪ ತಿಳಿಸಿದ್ದಾರೆ. ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ರೋಟರಿ ಸೆಂಟ್ರಲ್ ಶ್ರೀನಿವಾಸಪುರ ವತಿಯಿಂದ ಪತ್ರಿಕಾ ಹಂಚುವ ಹುಡುಗರಿಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಪಿ.ಎಸ್.ಐ. ನಾರಾಯಣಪ್ಪ, ಪತ್ರಿಕಾ ಹಂಚುವ ಹುಡುಗರನ್ನು […]
ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ:- ನಗರದ ಸೆಂಟ್‍ಆನ್ಸ್ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಫಿಮುಸ್ಕಾನ್ ದ್ವಿತೀಯ ಪಿಯುಸಿಯಲ್ಲಿ 463 ಅಂಕಗಳೊಂದಿಗೆ ಶೇ.77.16 ಫಲಿತಾಂಶ ಪಡೆದಿದ್ದಾರೆ. ಈ ವಿದ್ಯಾರ್ಥಿನಿ ಇಂಗ್ಲೀಷ್‍ನಲ್ಲಿ 73, ಹಿಂದಿಯಲ್ಲಿ 76, ವಾಣಿಜ್ಯ ಶಾಸ್ತ್ರದಲ್ಲಿ 80, ಲೆಕ್ಕಶಾಸ್ತ್ರದಲ್ಲಿ 70, ಸಂಖ್ಯಾಶಾಸ್ತ್ರದಲ್ಲಿ 71 ಹಾಗೂ ಕಂಪ್ಯೂಟರ್ ಸೈನ್ಸ್‍ನಲ್ಲಿ 63 ಅಂಕ ಪಡೆದಿದ್ದಾರೆ.
ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಪತ್ರಿಕಾ ವಿತರಕರು ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಸಮಾಜ ಸೇವಾ ಸಂಸ್ಥೆಗಳು ಅವರ ನೆರವಿಗೆ ಬರಬೇಕು ಎಂದು ರೋಟರಿ ಸೆಂಟ್ರಲ್ ಶ್ರೀನಿವಾಸಪುರ ಅಧ್ಯಕ್ಷ ಎಸ್.ಶಿವಮೂರ್ತಿ ಹೇಳಿದರು. ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ರೋಟರಿ ಸೆಂಟ್ರಲ್ ಶ್ರೀನಿವಾಸಪುರ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಸಭೆಯಲ್ಲಿ ಪತ್ರಿಕಾ ವಿತರಕರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿ, ಕೊರೊನಾ ಭಯದ ನಡುವೆ ಸೈನಿಕರಂತೆ ಪತ್ರಿಕಾ ವಿತರಕರು ಮನೆ ಮನೆಗೆ ತೆರಳಿ ಪತ್ರಿಕೆ […]
ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ: ಜಿಲ್ಲೆಯ ಈ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಗಂಟಲು ದ್ರವ ಮಾದರಿ ಸಂಗ್ರಹ. ಜಿಲ್ಲಾದ್ಯಾಂತ 59 ಕೋವಿಡ್-19 ಮಾದರಿ ಸಂಗ್ರಹಣಾ ಕೇಂದ್ರಗಳು ಐ.ಸಿ.ಎಂ.ಆರ್ ವೆಬ್‍ನಲ್ಲಿ ನೋಂದಣಿಯಾಗಿದ್ದು, ಗರ್ಭೀಣಿಯರು, 10 ವರ್ಷದ ಒಳಗಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ ವಯೋವೃದ್ಧರಿಂದ ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ಆಯ್ದ ನೋಂದಣಿ ಕೇಂದ್ರಗಳಲ್ಲಿ ಕೋವಿಡ್ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ. ಅನಗತ್ಯ ಪ್ರಯಾಣವನ್ನು ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ತಡೆಯಲು ಈ ಸೇವೆ ನಿಡಲಾಗುತ್ತಿದ್ದು, […]
ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ:- ಬೆಂಗಳೂರಿನ ಲೇಕ್‍ಸೈಡ್ ರೋಟರಿ ಸಂಸ್ಥೆ ಹಾಗೂ ಕೋಲಾರ ರೋಟರಿ ಸಂಸ್ಥೆ ಸಹಯೋಗದೊಂದಿಗೆ ಕೋವಿಡ್-19 ನಿಯಂತ್ರಣ ಹಿನ್ನಲೆಯಲ್ಲಿ ಸುಮಾರು 80 ಸಾವಿರ ಮೌಲ್ಯದ ಅರೆವೈದ್ಯಕೀಯ ಸಲಕರಣೆಗಳನ್ನು ಜಿಲ್ಲಾಆರೋಗ್ಯ ಇಲಾಖೆಗೆ ಸಮರ್ಪಿಸಲಾಯಿತು. ನಗರ ಸಮೀಪದಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ 50 ಪಿಪಿಇ ಕಿಟ್, 600 ನೈಟ್‍ರಯಲ್ ಗ್ಲೌಸ್, 600 ತ್ರಿಪ್ಲೇಯರ್ ಮಾಸ್ಕ್, 100 ಪೇಸ್‍ಶೀಲ್ಡ್, 2 ಡಿಜಿಟ¯ ïಥರ್ಮೋಮೀಟರ್, 2 ಆಕ್ಸೀಮೀಟರ್ […]
ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ,ಜು.13: ಶೀಥಲಗೊಂಡಿರುವ ಅಂಗನವಾಡಿ ಕೇಂದ್ರಗಳನ್ನು ಅಬಿವೃಧ್ಧಿಪಡಿಸಿ ಮಕ್ಕಳ ಆಹಾರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ ಜೊತೆಗೆ ನಕಲಿ ಬಿಲ್‍ಗಳನ್ನು ಸೃಷ್ಠಿಮಾಡುವ ಟೆಂಡರ್‍ದಾರರ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದಿನಾಂಕ; 21-07-2020ರ ಮಂಗಳವಾರ ಮಹಿಳಾ ಮತ್ತು ಮಕ್ಕಳ ಇಲಾಖೆಗೆ ಮುತ್ತಿಗೆ ಹಾಕಲು ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು ಸಭೆಯಲ್ಲಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಒಂದು ಕಡೆ ಕೋರೋನಾ ವೈರಸ್ ಹಾವಳಿ ಮತ್ತೊಂದು ಕಡೆ ಮಕ್ಕಳ ಆಹಾರ ಕಾಳಸಂತೆಯಲ್ಲಿ ಮಾರಾಟ, […]