
ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ: ಮಾದಿಗ ದಂಡೋರ ಸಂಘಟನೆಯ ಅಧ್ಯಕ್ಷ ಜಿ.ಶಂಕರ ಅವರ ಮೇಲೆ ಈಚೆಗೆ ಹಲ್ಲೆ ನಡೆಸಿರುವ ಎಲ್ಲ ಆರೋಪಿಗಳನ್ನೂ ಬಂಧಿಸುವಂತೆ ಸರ್ಕಾರವನ್ನು ಆಗ್ರಹಿಸಿ, ಆವಲಕುಪ್ಪ ಗ್ರಾಮದಿಂದ ಕಾಲ್ನಡಿಗೆಯಲ್ಲಿ ಬಂದ ಸಂಘಟನೆಯ ಮಖಂಡರು ಹಾಗೂ ಕಾರ್ಯಕರ್ತರು ಬುಧವಾರ ಶ್ರೀನಿವಾಸಪುರದ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು. ರಾಜ್ಯ ಮಾದಿಗ ದಂಡೋರ ಹಾಗೂ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಜೆ.ಎಂ.ದೇವರಾಜ್ ಪ್ರತಿಭಟನ ನಿರತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಪೊಲೀಸರು ಜಿ.ಶಂಕರ ಅವರ ಮೇಲೆ […]

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ:- ನಗರದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಅಧೀಕ್ಷಕರಾಗಿದ್ದ ಗೋಪಿನಾಥ್ ನಿವೃತ್ತಿ ನಂತರ ಪೂರ್ಣಪ್ರಮಾಣದ ರೈತರಾಗಿದ್ದು, ಇದೀಗ ಅವರು ಮುಳಬಾಗಿಲು ತಾಲ್ಲೂಕಿನ ಎಸ್.ಕೆಂಚನಹಳ್ಳಿಯ ತಮ್ಮ ಹೊಲದಲ್ಲಿ ಶೇಂಗಾ ಬಂಪರ್ ಬೆಳೆ ಪಡೆಯುವ ಮೂಲಕ ಮಾದರಿ ರೈತರೆನಿಸಿದ್ದಾರೆ.ಸರ್ಕಾರಿ ಸೇವೆಯಿಂದ ನಿವೃತ್ತಿ ನಂತರ ಇದೀಗ ಕೃಷಿಕರಾಗಿರುವ ಗೋಪಿನಾಥ್ ನಿವೃತ್ತಿ ಅಂಚಿನಲ್ಲಿ ತಮ್ಮ ಪಡೆದ ಮೊದಲಬೆಳೆಯೇ ಬಂಪರ್ ಆಗಿದ್ದು, ಶೇಂಗಾ ಅತ್ಯಂತ ಸೊಂಪಾಗಿ ಬೆಳೆದಿದ್ದು, ಪ್ರತಿ ಗಿಡದಲ್ಲೂ ನೂರಾರು ಶೇಂಗಾ ಬೆಳೆಯುವ ಮೂಲಕ ಮಾದರಿ ರೈತರಾಗಿದ್ದಾರೆ.ನಿವೃತ್ತಿ ಜೀವನ […]

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ:- ಜಿಲ್ಲೆಯ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ವಕ್ತಾರರಾಗಿ ನೇಮಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶ ಹೊರಡಿಸಿದ್ದಾರೆ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕ ವಿಷಯಗಳ ಕುರಿತು ಅತ್ಯಂತ ಉತ್ತಮ ಸ್ಪಂದನೆ ನೀಡುವ ಮೂಲಕ ಹೆಸರು ಗಳಿಸಿರುವ ನೀವು ಪಕ್ಷದ ಸಂಘಟನೆಗೆ ವಕ್ತಾರರಾಗಿ ಕೆಲಸ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ.ಮಾಧ್ಯಮಗಳ ಮೂಲಕ ತಮ್ಮ ವಿಚಾರ, ದೃಷ್ಟಿಕೋನ ಪರಿಣಾಮಗಾರಿಯಾಗಿ ಬಿಂಬಿತವಾಗಬೇಕಾಗಿರುವುದು ಅವಶ್ಯವಾಗಿದ್ದು, ತಮ್ಮ ಅನುಭವ, ಸಮರ್ಥವಾಗಿ ವಿಷಯ ಮಂಡನೆಯ […]

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ,ಸೆ.5: ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಪ್ರತಿ ವರ್ಷ ಸಾಹಿತ್ಯ ಕಾರ್ಯಕ್ರಮ ನಡೆಯಲು ಒಂದು ಲಕ್ಷರೂಗಳ ದತ್ತಿಯನ್ನು ದಿವಂಗತ ವಿಜಯಮ್ಮ – ನಿವೃತ್ತ ಶಿರಸ್ತೇದಾರ್ ದಿವಂಗತ ಕಡಗಟ್ಟೂರು ಇ.ಕೃಷ್ಣಪ್ಪ ರವರ ಸ್ಮರಣೆಯ ದತ್ತಿ ನಿಡಲಾಯಿತು.ಇವರ ಮಕ್ಕಳಾದ ಪ್ರೇಮನಾಗಾನಂದ, ಸೋಮಶೇಖರ್, ವಿಜಯಕುಮಾರ್ ರವರು ಕೋಲಾರ ಜಿಲ್ಲೆಯ ಯುವ ಸಾಹಿತಿಗಳಿಗೆ (ವಯೋಮಿತಿ ನಲವತ್ತು ವರ್ಷಗಳೊಳಗೆ) ಪ್ರೋತ್ಸಾಹಿಸಲು ಒಂದು ಲಕ್ಷರೂಗಳ ದತ್ತಿಯನ್ನಿಡಲಾಗಿದ್ದು, ಪ್ರತಿವರ್ಷವೂ ಜಿಲ್ಲೆಯ ಒಬ್ಬ ಯುವ ಸಾಹಿತಿಯನ್ನು “ಸಾಹಿತ್ಯ ಕಣ್ಮಣಿ” ಬಿರುದನ್ನು ನೀಡಿ […]

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ: ಸಾಮಾಜಿಕ ಹೊಣೆಗಾರಿಕೆ ಸೇವಾ ಅಡಿಯಲ್ಲಿ ಬೆಂಗಳೂರಿನ ಯು.ಎಸ್.ಟಿ ಗ್ಲೋಬಲ್ ಕಂಪನಿ ವತಿಯಿಂದ ಕೋಲಾರದ 400 ಮಂದಿ ತ್ರಿಲಿಂಗಿ ಸಮುದಾಯದವರಿಗೆ ಆಹಾರದ ಕಿಟ್ಗಳನ್ನು ವಿತರಿಸಲಾಯಿತು.ಕೊರೊನ ಸಂಕಷ್ಟದಲ್ಲಿ ಸುಮಾರು ಆರು ತಿಂಗಳಿನಿಂದ ಜೀವನೋಪಾಯಕ್ಕಾಗಿ ಪರಿತಪ್ಪಿಸುತ್ತಿದ್ದ ಈ ನಿರ್ಲಕ್ಷಿತ ಸಮುದಾಯದ ಬವಣೆಯನ್ನು ಅರಿತ ಯು.ಎಸ್.ಟಿ. ಗ್ಲೋಬಿಲ್ ಐ.ಟಿಕಂಪನಿಯು, ಈ ರೀತಿ ಸಹಾಯ ಹಸ್ತ ಚಾಚುವ ಮೂಲಕ ಒಂದು ತಿಂಗಳಿಗಾಗುವಷ್ಟು ವಿವಿಧ ಪದಾರ್ಥಗಳ ದಿನಸಿಯನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಯು.ಎಸ್.ಟಿ.ಗ್ಲೋಬಲ್ ಕಂಪನಿಯ ಸಿ.ಎಸ್.ಆರ್. ವಿಭಾಗದ ಸ್ಮಿತ, ಲತಾ,ವಿಶ್ವಾಸ್,ಅರವಿಂದ್,ಶಿವಕುಮಾರ್ […]

ಕೋಲಾರ,ಸೆ.2: ಕೋಲಾರ ನಗರದ ಲಯನ್ಸ್ ಕ್ಲಬ್ನಲ್ಲಿ ಇತ್ತೀಚೆಗೆ ಕೋಲಾರ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ಸಂಘದ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಸತತವಾಗಿ 9ನೇ ಬಾರಿಗೆ ಅಧ್ಯಕ್ಷರಾಗಿ ಎನ್ ದೇವರಾಜ್ ಅಧಿಕ ಮತಗಳನ್ನು ಗಳಿಸಿ ಚುನಾಯಿತರಾಗಿದ್ದಾರೆ.ಉಪಾಧ್ಯಕ್ಷರಾಗಿ ಟಿ.ಎಂ ನಾರಾಯಣಸ್ವಾಮಿ, ಕಾರ್ಯದರ್ಶಿಯಾಗಿ ಎಸ್.ಕೆ ರವೀಂದ್ರ, ಖಜಾಂಚಿಯಾಗಿ ಕೆ.ಆರ್ ನರಸಿಂಹಮೂರ್ತಿ ಚುನಾಯಿತರಾಗಿದ್ದಾರೆ. ಒಟ್ಟು ಜಿಲ್ಲೆಯ 30 ಮಂದಿ ಮತ ಚಲಾಯಿಸಿದ್ದರು.ಇದಕ್ಕೂ ಮುನ್ನಾ ನಡೆದ ವಾರ್ಷಿಕ ಸಭೆಯಲ್ಲಿ ಎನ್.ದೇವರಾಜ್ ಪ್ರಾರ್ಥಿಸಿ, ನಾಗೆಗೇಂದ್ರ ಪ್ರಸಾದ್ ಸ್ವಾಗತಿಸಿ, ಲೆಕ್ಕ ಪರಿಶೋಧನಾ ವರದಿಯನ್ನು […]

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ: ಮಹಾತ್ಮಾ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮ ದಿನಾಚರಣೆ ಪ್ರಯುಕ್ತ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದ ಸುತ್ತಲೂ ರೋಟರಿ ಸಂಸ್ಥೆ, ಶ್ರೀನಿವಾಸಪುರ ಇವರ ವತಿಯಿಂದ ಗಿಡ ನೆಡುವ ಕಾರ್ಯಕ್ರಮಕ್ಕೆ ತಾಲ್ಲೂಕು ಪಂಚಾಯಿತಿ ಇ.ಒ. ಆನಂದ್ ಚಾಲನೆ ನೀಡಿದರು.ಈ ಸಮಯದಲ್ಲಿ ಶ್ರೀನಿವಾಸಪುರ ರೋಟರಿ ಸಂಸ್ಥೆಯ ಅಧ್ಯಕ್ಷರಾದ ಎಸ್. ಶಿವಮೂರ್ತಿ, ಮಾಧ್ಯಮ ಕಾರ್ಯದರ್ಶಿ ಎನ್. ಕೃಷ್ಣಮೂರ್ತಿ, ಖಜಾನ್ಸಿ ಎಸ್.ಎನ್. ಮಂಜುನಾಥರೆಡ್ಡಿ, ಸದಸ್ಯರಾದ ಕುಲಕರ್ಣಿ, ಮತ್ತು ಗೊರವಿಮಾಕಲಹಳ್ಳಿ ಶ್ರೀನಿವಾಸ […]

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಇಂದು ಜಿಲ್ಲಾಡಳಿತ ಹಾಗೂ ನಗರಸಭೆ ವತಿಯಿಂದ ನಗರದ ಗಾಂಧೀವನದಲ್ಲಿ ಹಮ್ಮಿಕೊಂಡಿದ್ದ ಗಾಂಧೀಜಿ ಅವರ 152 ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗಾಂಧೀಜಿಯವರು ಜಗತ್ತಿಗೆ ಶಾಂತಿ , ಸತ್ಯ ಹಾಗೂ ಅಹಿಂಸೆಯನ್ನು ಸಾರಿದರು. ಇದಕ್ಕೂ ಮೊದಲು ಭಗವಾನ್ ಬುದ್ದ ಶಾಂತಿಯ ಸಂದೇಶ ಸಾರಿದ್ದರೂ , ನಾವೆಲ್ಲರೂ ಅದನ್ನು ಮರೆತಿದ್ದವು . ಗಾಂಧೀಜಿಯವರು ಶಾಂತಿ ಮಂತ್ರವನ್ನು ಪುನಃ ಚಾಲನೆಗೆ ತಂದರು ಎಂದು ತಿಳಿಸಿದರು . ಜಗತ್ತಿನ ಹಲವು ದೇಶಗಳು ಸ್ವಾತಂತ್ರ್ಯವನ್ನು […]

ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ : ಶಿಕ್ಷಣದ ವ್ಯಾಪಾರೀಕರಣ ನಿಲ್ಲಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಾ. ವೈ.ಎ.ನಾರಾಯಣಸ್ವಾಮಿ ಹೇಳಿದರು. ಪಟ್ಟಣದ ಹೊರ ವಲಯದ ಕೆಂಪೇಗೌಡ ಬಡಾವಣೆಯಲ್ಲಿ ವಿಜಯಾದ್ರಿ ಎಜ್ಯುಕೇಷನಲ್ ಟ್ರಸ್ಟ್ ವತಿಯಿಂದ ಗುರುವಾರ ಏರ್ಪಡಿಸಿದ್ದ ವಿಜಯಾದ್ರಿ ವಿದ್ಯಾ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದರು. ಜ್ಞಾನಾರ್ಜನೆ ಕಾರ್ಯದಲ್ಲಿ ಶಿಕ್ಷಕರು ಹಾಗೂ ಪೋಷಕರು ಮಕ್ಕಳನ್ನು ಪ್ರೋತ್ಸಾಹಿಸಬೇಕು. ಬದಲಾದ ಪರಿಸ್ಥಿತಿಯಲ್ಲಿ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುವುದು ಸವಾಲಿನ ಕೆಲಸವಾಗಿದೆ. ಆ ಕೆಲಸವನ್ನು ಶಿಕ್ಷಕರು ಸಮರ್ಥವಾಗಿ ನಿರ್ವಹಿಸಬೇಕು ಎಂದು ಹೇಳಿದರು. ಕ್ಷೇತ್ರ ಶಿಕ್ಷಣಾಧಿಕಾರಿ […]