ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಇಲ್ಲಿನತಾಲ್ಲೂಕು ಕಚೇರಿ ಎದುರು ಬುಧವಾರ ಜಿಲ್ಲಾ ಮಾಜಿ ಯೋಧರ ಟ್ರಸ್ಟ್ ಸದಸ್ಯರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಆಗ್ರಹಿಸಿ ಧರಣಿ ನಡೆಸಿದರು. ಟ್ರಸ್ಟ್ನ ಜಿಲ್ಲಾ ಘಟಕದ ಅಧ್ಯಕ್ಷ ಜಗನ್ನಾಥ್ ಧರಣಿ ನಿರತ ನಿವೃತ್ತ ಯೋಧರನ್ನು ಉದ್ದೇಶಿಸಿ ಮಾತನಾಡಿ, ದೇಶಕ್ಕಾಗಿ ಜೀವದ ಮೇಲಿನ ಹಂಗು ತೊರೆದು ಹೋರಾಡಿ ನಿವೃತ್ತರಾದ ಯೋಧರ ಪರಿಸ್ಥಿತಿ ತೃಪ್ತಿಕರವಾಗಿಲ್ಲ. ಸರ್ಕಾರ ನಿವೃತ್ತ ಯೋಧರ ಕ್ಷೇಮಾಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಹಾಕಿಕೊಳ್ಳುತ್ತಿಲ್ಲ. ಇದು ದುರದೃಷ್ಟಕರ ಎಂದು ಹೇಳಿದರು. ದೇಶಕ್ಕಾಗಿ ಶ್ರಮಿಸಿದ […]
ವರದಿ: ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ: ದೇಶದ ಆರ್ಥಿಕ ಅಭಿವೃದ್ಧಿಗೆ ಎಲ್ಐಸಿ ಕೊಡುಗೆ ಅಪಾರ. ಗಳಿಸಿದ ಲಾಭಾಂಶದ ಬಹು ದೊಡ್ಡ ಮೊತ್ತವನ್ನು ದೇಶದ ಜನರ ಕ್ಷೇಮಾಭಿವೃದ್ಧಿಗಾಗಿ ಕೊಡುಗೆಯಾಗಿ ನೀಡಿದೆ ಎಂದು ಎಲ್ಐಸಿ ವಿಭಾಗೀಯ ಹಿರಿಯ ವ್ಯವಸ್ಥಾಪಕ ಆಸೀಸ್ ಕುಮಾರ್ ಹೇಳಿದರು.ಪಟ್ಟಣದ ಎಲ್ಐಸಿ ಉಪ ಕಚೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ತಾಲ್ಲೂಕು ಎಲ್ಐಸಿ ಪ್ರತಿನಿಧಿಗಳ ಸಭೆಯಲ್ಲಿ ಗಣನೀಯ ಸಾಧನೆ ಮಾಡಿದ ಪ್ರತಿನಿಧಿಗಳನ್ನು ಸನ್ಮಾನಿಸಿ ಮಾತನಾಡಿ, ಸಂಸ್ಥೆ ಕಳೆದ ಆರ್ಥಿಕ ವರ್ಷದಲ್ಲಿ ರೂ.53 ಸಾವಿರ ಕೋಟಿ ಲಾಭ ಗಳಿಸಿದೆ. ಆ […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಶಾಲೆಗಳಿಗೆ ಬೇಕಾಗಿರುವ ಮೂಲ ಸೌಕರ್ಯಗಳನ್ನು ಗುರುತಿಸಿ, ಪಟ್ಟಿ ತಯಾರಿಸಿ ಕೊಡಬೇಕು ಎಂದು ಜಿಲ್ಲಾ ಪಂಚಾಯಿತಿ ತಾಂತ್ರಿಕ ಉಪ ವಿಭಾಗದ ಎಂಜಿನಿಯರ್ ಅಪ್ಪಿರೆಡ್ಡಿ ಹೇಳಿದರು. ತಾಲ್ಲೂಕಿನ ಅಡ್ಡಗಲ್ ಗ್ರಾಮದಲ್ಲಿ ಏರ್ಪಡಿಸಿದ್ದ ಜಲ ಜೀವನ್ ಮಿಷನ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರ, ಸರ್ಕಾರಿ ಶಾಲೆಗಳಿಗೆ ಮೂಲ ಸೌಲಭ್ಯ ಒದಗಿಸಲು ಯೋಜನೆ ರೂಪಿಸಿದೆ. ಪ್ರತಿ ಶಾಲೆಗೂ ಕುಡಿಯವ ನೀರು, ಶೌಚಾಲಯ, ಕಾಂಪೌಂಡ್, ಗೋಡೆ ಬರಹದಂಥ ಸೌಲಭ್ಯ ನೀಡಲಾಗುತ್ತಿದೆ. ಈಗ ಅಗತ್ಯ ಇರುವ ಸೌಲಭ್ಯಗಳ […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಪಟ್ಟಣದ ಪುರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಸೋಮವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್ನ ಎಂ.ಎನ್.ಲಲಿತಾ ಶ್ರೀನಿವಾಸ್ ಹಾಗೂ ಆಯಿಷಾ ನಯಾಜ್ ಕ್ರಮವಾಗಿ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷೆಯಾಗಿ ಚುನಾಯಿತರಾದರು. ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಮಹಿಳೆ ಹಾಗೂ ಉಪಾಧ್ಯ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಾಗಿತ್ತು. ಚುನಾವಣೆಯಲ್ಲಿ ಪುರಸಭೆಯ ಒಟ್ಟು 23 ಸ್ಥಾನಗಳ ಪೈಕಿ ಜೆಡಿಎಸ್ 11, ಕಾಂಗ್ರೆಸ್ 8 ಹಾಗೂ ಪಕ್ಷೇತರರು 4 ಮಂದಿ ಚುನಾಯಿತರಾಗಿದ್ದರು. ಪಕ್ಷೇತರರಲ್ಲಿ ಕಾಂಗ್ರೆಸ್ನ 3 […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ : ಡಿಸೆಂಬರ್ 1 ರಿಂದ ಬೈಕ್ ಸವಾರರು ಮತ್ತು ಹಿಂಬದಿ ಸವಾರರು ಕಡ್ಡಾಯವಾಗಿ ಹೆಲೈಟ್ ಧರಿಸಬೇಕು ಹಾಗೂ ಆಟೋಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸಬೇಕು , ಈ ಕಾನೂನು ಪಾಲಿಸದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಾರಿಗೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ ಅವರು ಸೂಚಿಸಿದರು . ಇಂದು ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಸಾರಿಗೆ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ , ಸ್ಥಳಿಯವಾಗಿ ಜೀವ ವಿಮಾ ಪ್ರತಿನಿಧಿಗಳು ಕಳೆದ ವರ್ಷದಲ್ಲಿ ಉತ್ತಮವಾಗಿ ವಹಿವಾಟು ನಡೆಸಿ ಹೆಚ್ಚಿನ ಪಾಲಿಸಿಗಳು ಮಾಡಿಸಲಾಗಿದೆ . ಈ ವರ್ಷ ಕೋವಿಡ್ ನಿಂದ ವಹಿವಾಟ ಕಡಿಮೆ ಯಾಗಿದ್ದು ಇರುವ 5 ತಿಂಗಳಲ್ಲಿ ಹೆಚ್ಚಿನಪಾಲಿಸಿಗಳು ಮಾಡಿಸಿ ತಮ್ಮ ಕರ್ತವ್ಯಶಿಸ್ತುಬದ್ಧವಾಗಿ ನಿರ್ವಹಿಸಬೇಕೆಂದು ವ್ಯವಸ್ಥಾಪಕರು ಎಸ್.ಸತಿಶ್ ಹೇಳಿದರು.ಪಟ್ಟಣದ ಎಲ್ಐಸಿ ಕಚೇರಿ ಸಭಾಂಗಣದಲ್ಲಿ ಎಲ್ಐಸಿ ತಾಲೂಕು ಆಭಿವೃದ್ಧಿಅಧಿಕಾರಿ ಆರ್. ವಿ. ಕುಲಕರ್ಣಿ ಏರ್ಪಡಿಸಿದ್ದ ಪ್ರತಿನಿಧಿಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು . ಯಾತ್ರಿಕ ಕೌಶಲ್ಯ ಮುಂದುವರೆದ […]
ವರದಿ : ಕೆ.ಜಿ.ವೈದ್ಯ,ಕುಂದಾಪುರ ಕುಂದಾಪುರ : ಹಿರಿಯ ಯಕ್ಷಗಾನ ಕಲಾವಿದ ವಾಸುದೇವ ಸಾಮಗರ ನಿಧನಕ್ಕೆ ಕೋಟೇಶ್ವರದ ಮೋಡರ್ನ್ ಮಹಾಭಾರತ ಚಲನ ಚಿತ್ರ ತಂಡ ಅತೀವ ಸಂತಾಪ ವ್ಯಕ್ತಪಡಿಸಿದೆ. ಸಾಂಸಾರಿಕ ಕಥಾನಕ ಹೊಂದಿರುವ ಕನ್ನಡ ಚಲನ ಚಿತ್ರ ‘ಮೋಡರ್ನ್ ಮಹಾಭಾರತ’ ದಲ್ಲಿ ಸಾಮಗರು ಹರಿಕಥಾ ಕೀರ್ತನಕಾರರ ಪಾತ್ರದಲ್ಲಿ ಅಭಿನಯಿಸಿದ್ದರು. ಅವರ ಚೊಚ್ಚಲ ಸಿನಿಮಾ ನಟನೆಯಿಂದಾಗಿ ಅವರು ಬಹಳ ಉತ್ಸಾಹದಿಂದಲೇ ತಮ್ಮ ಪಾತ್ರ ನಿರ್ವಹಿಸಿದ್ದರು. ಅವರ ಅಭಿನಯದ ಈ ಭಾಗವನ್ನು ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಾಲಯದ ಆವರಣದಲ್ಲಿ ಚಿತ್ರೀಕರಿಸಲಾಗಿತ್ತು. ಖ್ಯಾತ ಚಿತ್ರನಟ […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮದ ಕೆರೆಯಲ್ಲಿ ಶನಿವಾರ ಅಕ್ರಮವಾಗಿ ಮಣ್ಣು ತೆಗೆದು ಸಾಗಿಸುತ್ತಿದ್ದ 2 ಟ್ರ್ಯಾಕ್ಟರ್, 1500ಟನ್ ಮಣ್ಣು ಹಾಗೂ 2 ಜೆಸಿಬಿ ಯಂತ್ರಗಳನ್ನು ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ವಶಪಡಿಸಿಕೊಂಡಿದ್ದಾರೆ. ಕೆಲವು ವ್ಯಕ್ತಿಗಳು ಕೆರೆಯಲ್ಲಿನ ಬೆಲೆಬಾಳುವ ಮಣ್ಣು ತೆಗೆದು ಬೇರೆಡೆಗೆ ಸಾಗಿಸುತ್ತಿರುವುದಾಗಿ ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ತಹಶೀಲ್ದಾರ್ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಿ ಮಣ್ಣು ತೆಗೆದು ಸಾಗಿಸುತ್ತಿದ್ದ ಯಂತ್ರಗಳನ್ನು ವಶಕ್ಕೆ ಪಡೆದರು. ಉಪ ತಹಶೀಲ್ದಾರ್ ಚಂದ್ರಪ್ಪ, ಕಂದಾಯ ನಿರೀಕ್ಷಕ ಸಿ.ಎನ್್.ವಿನೋದ್ ಇದ್ದರು.
ವರದಿ : ಕೆ.ಜಿ.ವೈದ್ಯ,ಕುಂದಾಪುರ ಕುಂದಾಪುರ : ಕುಂದಾಪುರ ತಾಲೂಕು ದ್ರಾವಿಡ ಬ್ರಾಹ್ಮಣ ಪರಿಷತ್ ನ 2020 – 22 ನೇ ಸಾಲಿನ ಅಧ್ಯಕ್ಷರಾಗಿ ಬೆಳ್ವೆ ವಲಯದ ಪ್ರಗತಿಪರ ಕೃಷಿಕ, ಹೈನುಗಾರ ಅನಂತಪದ್ಮನಾಭ ಬಾಯಿರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಾಲಯದಲ್ಲಿ ನಡೆದ ಪರಿಷತ್ ನ 26 ನೇ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಗೌರವಾಧ್ಯಕ್ಷರಾಗಿ ಪರಿಷತ್ ನ ನಿಕಟಪೂರ್ವ ಅಧ್ಯಕ್ಷ ರಾಘವೇಂದ್ರ ಅಡಿಗ ಕಲ್ಕಟ್ಟೆ, ಉಪಾಧ್ಯಕ್ಷರುಗಳಾಗಿ ಪ್ರಕಾಶ್ ಐತಾಳ್ ಕಿರಿಮಂಜೇಶ್ವರ ಹಾಗೂ […]