
ಶ್ರೀನಿವಾಸಪುರ : ಹನ್ನೊಂದನೆಯ ಶತಮಾನದ ಆದಿಕವಿ. ಪ್ರಥಮ ವಚನಕಾರ , ಬಸವಪೂರ್ವ ಯುಗದ ಶಿವಶರಣ, ಸಾಮಾಜಿಕ ನ್ಯಾಯದ ಆದಿ ಸಿದ್ದಾಂತಿ, ಹೆಣ್ಣು-ಗಂಡು ಮೇಲು-ಕೀಳು, ಜಾತಿ-ಪಂಥ ಆಚರಣೆಗಳ ಭೇದಗಳನ್ನು ಗುರುರ್ತಿಸಿ, ಸಾಮಾಜಿಕ ವ್ಯವಸ್ಥೆಯ ಅನ್ಯಾಯಗಳನ್ನು ಧಿಕ್ಕರಿಸಿ , ಎಳೆಎಳೆಯಾಗಿ ಬಿಡಿಸಿ ತೋರಿಸಿದ ವಚನಕಾರ ಇಂತಹ ಮಾಹಾ ಪುರಷರು ಸಮಾಜದ ಉದ್ದಾರಕ್ಕಾಗಿ ಅನೇಕ ರೀತಿಯಾದ ವಚನಗಳ ಮೂಲಕ ತಿಳಿ ಹೇಳಿ ಸಮಾಜವನ್ನು ತಿದ್ದುವ ಕೆಲಸ ಮಾಡಿದ್ದು, ಎಲ್ಲರೂ ಸಹ ಇಂತಹ ಮಹಾನ್ ವ್ಯಕ್ತಿಯ ಆದರ್ಶಗಳನ್ನು ತಮ್ಮ ಜೀವನಕ್ಕೆ ಅಳವಡಿಸಿಕೊಳ್ಳಬೇಕು ಎಂದು […]

ಶ್ರೀನಿವಾಸಪುರ : ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್‍ರವರು ಈ ದೇಶದಲ್ಲಿ ಅತಿ ಹೆಚ್ಚು ವಿದ್ಯಾವಂತರಾಗಿ, ಪದವಿಧರರಾಗಿ, ಈ ದೇಶಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯು ಮುನ್ನೆಡೆಯಲು ಸಂವಿಧಾನವನ್ನು ರಚಿಸಿ, ಮಹನೀಯ , ಮಹಾನುಭಾವನಿಗೆ ಶತಕೋಟಿ ನಮನಗಳು ತಿಳಿಸುತ್ತಾ, ಅವರ ಜಯಂತಿಯನ್ನು ಅದ್ದೂರಿಯಾಗಿ ನಾವೆಲ್ಲರೂ ಆಚರಣೆ ಮಾಡಬೇಕು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಎಂದರು.ಪಟ್ಟಣದ ಪುರಸಭೆ ಕಚೇರಿಯಲ್ಲಿ ಬುಧವಾರ ರಾಷ್ಷ್ರೀಯ ಹಬ್ಬಗಳ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಬಾಬು ಜಗಜೀವನ್‍ರಾಮ್ ಹಾಗು ಡಾ|| ಬಿ.ಆರ್.ಅಂಬೇಡ್ಕರ್‍ರವರ ಜಯಂತಿಗಳನ್ನು ಆಚರಣೆಯ ಬಗ್ಗೆ ಪೂರ್ವಬಾವಿ ಸಭೆಗೆ ಚಾಲನೆ ನೀಡಿ ಮಾತನಾಡಿದರು.ಸಧ್ಯ ಇರುವ […]

ಶ್ರೀನಿವಾಸಪುರ: ಪಟ್ಟಣದಲ್ಲಿ ಈದ್-ಉಲ್-ಫಿತರ್ ಹಬ್ಬವನ್ನು ಭಕ್ತಿಭಾವದಿಂದ ಹಾಗೂ ಅದ್ಧೂರಿಯಾಗಿ ಆಚರಿಸಲಾಯಿತು. ನಗರದ ವಿವಿಧ ಭಾಗಗಳಿಂದ ಸಾವಿರಾರು ಮುಸ್ಲಿಮರು ಪಾದಯಾತ್ರೆಯ ಮೂಲಕ ಈದ್ಗಾ ಮೈದಾನವನ್ನು ತಲುಪಿದರು ಮತ್ತು ಬೆಳಿಗ್ಗೆ 9:45ಕ್ಕೆ ಸಾಮೂಹಿಕ ನಮಾಜ್ ಸಲ್ಲಿಸಿದರು.ಜಾಮಿಯಾ ಮಸೀದಿಯ ಇಮಾಮ್ ಮೌಲಾನಾ ಮುಹಮ್ಮದ್ ಆಸಿಫ್ ಅವರು ಧಾರ್ಮಿಕ ಪ್ರವಚನ ನೀಡುತ್ತಾ, ಈದ್-ಉಲ್-ಫಿತರ್‌ನ ಮಹತ್ವ ಮತ್ತು ಪ್ರವಾದಿ ಮುಹಮ್ಮದ್ (ಸ) ಅವರ ಆದರ್ಶಗಳನ್ನು ವಿವರಿಸಿದರು. ಇಸ್ಲಾಮ್ ಧರ್ಮ ಶಾಂತಿ ಮತ್ತು ಸಹೋದರತ್ವದ ಸಂದೇಶ ಸಾರುತ್ತದೆಯೆಂದು ಹೇಳಿದರು. ಅವರು ರೋಜಾ (ಉಪವಾಸ) ಮತ್ತು ಜಕಾತ್ […]

(ಲೇಖನ 🖋️ ಶಬ್ಬೀರ್ ಅಹ್ಮದ್ ಪತ್ರಕರ್ತ ಶ್ರೀನಿವಾಸಪುರ) ಗ್ರಾಮೀಣ ಭಾರತದ ಹೃದಯವೆಂದೇ ಗ್ರಾಮ ಪಂಚಾಯತಿಗಳನ್ನು ಪರಿಗಣಿಸಬಹುದು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಗ್ರಾಮಾಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸುತ್ತಿವೆ. ಈ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿಯು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಓ) ಮೇಲಿದೆ. ಒಬ್ಬ ಸಮರ್ಪಿತ ಮತ್ತು ದೃಢನಿಶ್ಚಯ ಹೊಂದಿರುವ ಪಿಡಿಓ ತನ್ನ ಗ್ರಾಮವನ್ನು ಮಾದರಿ ಗ್ರಾಮ ಪಂಚಾಯತಿಯಾಗಿ ರೂಪಿಸಬಲ್ಲನು. ಮಾದರಿ ಗ್ರಾಮ ಪಂಚಾಯತಿ ಎಂದರೇನು? ಮಾದರಿ ಗ್ರಾಮ ಪಂಚಾಯತಿ ಎಂದರೆ ಸಾರ್ವಜನಿಕ ಸೌಲಭ್ಯಗಳು ಸಮರ್ಪಕವಾಗಿ ಲಭ್ಯವಿರುವ, ಸಮಗ್ರ […]

ಕೋಲಾರ : ಜಿಲ್ಲೆಯಾದಾದ್ಯಂತ ಸುಮಾರು 10ಸಾವಿರ ಎಕರೆ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಅಂದಾಜಿಸಲಾಗಿದೆ, ಒತ್ತುವರಿ ತೆರವು ಕಾರ್ಯ ಮುಂದುವರೆಸಲಾಗಿದೆ ಮತ್ತು ತೇರಹಳ್ಳಿ ಬೆಟ್ಟ ಹಾಗೂ ಅಂತರಗಂಗೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ದಿಪಡಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅನುದಾನ ಬಿಡುಗಡೆಯಾದರೆ ಕ್ರಮವಹಿಸುವುದಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗಾರ್ ತಿಳಿಸಿದರು. ಕೋಲಾರ ನಗರ ಹೊರವಲಯದ ಉಪ ಅರಣ್ಯ ಸಂರಕ್ಷಣಾ ಇಲಾಖೆ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೇರಹಳ್ಳಿ ಬೆಟ್ಟದಲ್ಲಿ ಅರಣ್ಯ ಒತ್ತುವರಿಯಾಗಿದ್ದರೆ ಅಲ್ಲಿಯೂ ತೆರವುಗೊಳಿಸಲು ಬದ್ದವಾಗಿರುವುದಾಗಿ ತಿಳಿಸಿದರು. […]

ಶ್ರೀನಿವಾಸಪುರ : 2025-26 ನೇ ಸಾಲಿಗೆ ಸರ್ಕಾರಿ ಸುತ್ತೋಲೆಯಂತೆ ಆಸ್ತಿ ತೆರಿಗೆ ಪರಿಷ್ಕರಣೆ, ವಿವಿಧ ಬಾಬ್ತುಗಳ ಮೊತ್ತವನ್ನು ಸ್ಥಿರೀಕರಣ ಮಾಡುವ ಬಗ್ಗೆ , ಕಟ್ಟೆಕೆಳಗಿನ ಪಾಳ್ಯವನ್ನು ಕೊಳಚೆ ನಿರ್ಮೂಲನ ಪ್ರದೇಶ ಎಂದು ಘೋಷಣೆ ಮಾಡುವ ವಿಚಾರ, ಪಟ್ಟಣ ವ್ಯಾಪ್ತಿಯ ಪ್ರಮುಖ ರಸ್ತೆಗಳಿಗೆ ಪುಟ್‍ಪಾತ್ ನಿರ್ಮಾಣ ಮಾಡುವ ವಿಚಾರವಾಗಿ ಚರ್ಚೆ ಹಮ್ಮಿಕೊಳ್ಳಲಾಗಿತ್ತು. ಈಸಭೆಯಲ್ಲಿ 87.56ಲಕ್ಷ ಉಳಿತಾಯ ಬಜೆಟ್‍ನ್ನು ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್ ಮಂಡಿಸಿದರು.ಪಟ್ಟಣದ ಪುರಸಭಾ ಕಚೇರಿಯಲ್ಲಿ ಬುಧವಾರ 2025-26 ನೇ ಸಾಲಿನ ಆಯ-ವ್ಯಯ ಸಭೆ ಹಾಗು ಸಾಮಾನ್ಯ ಸಭೆಗೆ […]

ಶ್ರೀನಿವಾಸಪುರದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ವತಿಯಿಂದ ಶುಕ್ರವಾರ ಡಿವಿಜಿ ಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಡಿವಿಜಿ ಬದುಕು ಬರಹ ಸರ್ವಕಾಲಿಕ ಮಾದರಿಶ್ರೀನಿವಾಸಪುರ: ಡಿವಿಜಿ ಅವರು ವಿದ್ವತ್ತು ಹಾಗೂ ಪ್ರಾಮಾಣಿಕತೆಗೆ ಹೆಸರಾಗಿದ್ದರು. ಸಾಹಿತ್ಯ ಹಾಗೂ ಪತ್ರಿಕಾ ಕ್ಷೇತ್ರಕ್ಕೆ ಅವರು ಸಲ್ಲಿಸಿರುವ ಸೇವೆ ಸರ್ವಕಾಲಿಕ ಮಾದರಿಯಾಗಿದೆ ಎಂದು ಉಪನ್ಯಾಸಕ ಹಾಗೂ ಸಾಹಿತಿ ಎನ್.ಶಂಕರೇಗೌಡ ಹೇಳಿದರು.ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಡಿವಿಜಿ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಧುನಿಕ ಸರ್ವಜ್ಞ […]

ಶ್ರೀನಿವಾಸಪುರ : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಕುಪ್ಪಹಳ್ಳಿ ಗ್ರಾಮದ 14 ವರ್ಷದ ಯುವ ಈಜುಗಾರ್ತಿ ಡಿಂಪಲ್ ಸೋನಾಕ್ಷಿ ಎಂ ಗೌಡ ಅವರು ಗುಜರಾತ್‌ನ ಅದ್ರಿ ಬೀಚಿನಿಂದ ವೀರವಾಲ್ ಜೆಟ್ಟಿಯವರೆಗೆ ನಡೆದ 30 ಕಿಮೀ ಸಮುದ್ರ ಈಜು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಶ್ರೇಯಸ್ಸು ಸಾಧಿಸಿದ್ದಾರೆ. ಡಿಂಪಲ್ ಅವರು 2023ರಲ್ಲಿ ರಾಷ್ಟ್ರಮಟ್ಟದ 10 ಕಿಮೀ ಈಜು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು, ಹಾಂಕಾಂಗ್‌ನಲ್ಲಿ ನಡೆದ ಏಷ್ಯನ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಅಲ್ಲದೆ, ವಿಜಯದುರ್ಗ, ಮಾಲ್ವನ್ ಮತ್ತು […]

ಶ್ರೀನಿವಾಸಪುರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರೀನಿವಾಸಪುರ 1 ತಾಲೂಕು ವ್ಯಾಪ್ತಿಯ ರಾಯಲ್ಪಾಡು ವಲಯದ ಚಿಂತಮನಪಲ್ಲಿ ಗ್ರಾಮದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ “ವಾತ್ಸಲ್ಯ ಮನೆ” ಹಸ್ತಾಂತರ ಕಾರ್ಯಕ್ರಮ ಜರುಗಿತು. ಈ ಸಂದರ್ಭ ಬೆಂಗಳೂರು ಪ್ರಾದೇಶಿಕ ನಿರ್ದೇಶಕರಾದ ಶೀನಪ್ಪ ಮಾತನಾಡುತ್ತಾ, ವಾತ್ಸಲ್ಯ ಫಲಾನುಭವಿಗಳಾದ ವೆಂಕಟರಮಣ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷರಾದ ಮಾತೃಶ್ರೀ ಹೇಮಾವತಿ ಅಮ್ಮನವರ ಪ್ರೀತಿಯ ಕಾರ್ಯಕ್ರಮವಾದ “ವಾತ್ಸಲ್ಯ ಮನೆ” ನಿರ್ಮಿಸಲಾಗಿದೆ. ಇದರಿಂದ ಅವರ ಇಳಿವಯಸ್ಸಿನಲ್ಲಿ […]