ವರದಿ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ : ಬಡ ಮಕ್ಕಳು , ಕಾಲೇಜು ವಿದ್ಯಾಥಿಗಳಿಗೆ ಉಚಿತ ವಿದ್ಯಾಭ್ಯಾಸ ಹಾಗು ವೃದ್ಧರಿಗೆ ಮಾಶಾಸನವನ್ನು ನಮ್ಮ ತಂದೆಯ ಜ್ಞಾಪಕಾರ್ತ ಮಹಮದ್ ಬಾಷಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಮಾಜಮುಖಿ ಕಾರ್ಯಕ್ರಮಗಳು ಮುಂದುವರಿಸುತ್ತಿದ್ದೇನೆ ಎಂದು ತಲುಗು ಮೇರು ಹಾಸ್ಯ ನಟ ಆಲಿ ರವರು ತಿಳಿಸಿದರು . ತಾಲ್ಲೂಕಿನ ನಂಬಿಹಳ್ಳಿ ಗ್ರಾಮದಲ್ಲಿ ಉಸಿರೇ ಉಸಿರೇ ಚಿತ್ರದ ಚಿತ್ರೀಕರಣ ವೇಳೆಯ ವಿರಾಮದ ಸಮಯದಲ್ಲಿ ವೈಕುಂಟ ಏಕಾದಶಿ ಪ್ರಯುಕ್ತ ಶ್ರೀ ಬೈರವೇಶ್ವರ ವಿದ್ಯಾ ಸಂಸ್ಥೆಯಲ್ಲಿನ ಶಾಲಾ ಮಕ್ಕಳಿಗೆ […]
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಯಿತು. ದೇವತಾ ವಿಗ್ರಹಗಳಿಗೆ ವಿವಿಧ ಅಲಂಕಾರ ಮಾಡಲಾಗಿತ್ತು.ತಾಲ್ಲೂಕಿನ ಗನಿಬಂಡ ಗ್ರಾಮದ ವೆಂಕಟರಮಣಸ್ವಾಮಿ ದೇವಾಲಯ, ಯಲ್ದೂರಿನ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯ, ಸಿ.ಹೊಸೂರಿನ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯ, ಯಲ್ದೂರಿನ ಕೋದಂಡರಾಮಸ್ವಾಮಿ ದೇವಾಲಯ, ವೈ.ಹೊಸಕೋಟೆಯ ವೆಂಕಟರಮಣಸ್ವಾಮಿ ದೇವಾಲಯ, ಜೆವಿ ಕಾಲೋನಿಯ ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯ, ಶ್ರೀನಿವಾಸಪುರದ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ, ಹಳೆಪೇಟೆಯ ನರಸಿಂಹಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು.ಈ ಎಲ್ಲ ದೇವಾಲಯಗಳಲ್ಲೂ ಕೋವಿಡ್ ನಿಯಮ ಪಾಲನೆ ದೃಷ್ಟಿಯಿಂದ ಸರಳವಾಗಿ ಪೂಜಾ ಕಾರ್ಯ ಮುಗಿಸಲಾಯಿತು. […]
ವರದಿ : ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಕೋಲಾರ : ವೇಮಗಲ್ – ಕುರುಗಲ್ ಗ್ರಾಮ ಪಂಚಾಯಿತಿಗಳನ್ನು ಒಟ್ಟುಗೂಡಿಸಿ ಪಟ್ಟಣ ಪಂಚಾಯಿತಿಯನ್ನಾಗಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಸಂಬಂಧ ಜ .೭ ರಂದು ಕರ್ನಾಟಕ ರಾಜ್ಯ ಪತ್ರದಲ್ಲಿ ಅಂತಿಮ ಅಧಿಸೂಚನೆ ಪ್ರಕಟಿಸಿದ್ದು , ಈ ಭಾಗದ ಜನತೆಯಲ್ಲಿ ಹರ್ಷ ಮನೆ ಮಾಡಿದೆ.ವೇಮಗಲ್ ಕುರಗಲ್ಅನ್ನು ಪಟ್ಟಣ ಪಂಚಾಯಿತಿಯಾಗಿ ೨೦೨೧ ರ ಮಾರ್ಚ್ ೫ ರಂದೇ ಸರ್ಕಾರ ಅಧಿಸೂಚನೆ ಹೊರಡಿಸುವ ಮೂಲಕ ಅಸ್ಥಿತ್ವಕ್ಕೆ ತಂದಿತ್ತು. ಆದರೆ ಈ ಭಾಗದ ಕೆಲವರು […]
ವರದಿ : ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ : ಸ್ವಾಮಿ ವಿವೇಕಾನಂದರ ಆದರ್ಶ ಪಾಲನೆ ಇಂದಿನ ಅಗತ್ಯವಾಗಿದೆ ಎಂದು ತಿಮ್ಮಸಂದ್ರ ನಂದಗೋಕುಲ ಆಶ್ರಮದ ಸುಧೀರ ಚೈತನ್ಯ ಸ್ವಾಮೀಜಿ ಹೇಳಿದರು . ಪಟ್ಟಣದ ಕರ್ನಾಟಕ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಸ್ವಾಮಿ ವಿವೇಕಾನಂದರ ಜಯಂತಿ ಸಮಾರಂಭದಲ್ಲಿ ಮಾತನಾಡಿ , ಧರ್ಮ ಮತ್ತು ಧಾರ್ಮಿಕ ಆಚರಣೆ ಕುರಿತು ಸ್ವಾಮಿ ವಿವೇಕಾನದರ ಅಭಿಪಾಯ ಎಲ್ಲ ಧರ್ಮಗಳ ಜನರ ಮೆಚ್ಚುಗೆಗೆ ಪಾತ್ರವಾಗಿದೆ . ಶಿಕ್ಷಣದ ಬಗ್ಗೆ ಅವರು […]
ವರದಿ :ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಕೋಲಾರ : ಹಲವಾರು ವರ್ಷಗಳ ನಂತರ ಕೋಲಾರ ಜಿಲ್ಲೆಗೆ ಬಂದಿದ್ದ ಉತ್ತಮ ಜಿಲ್ಲಾಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ , ಆಡಳಿತ ಪಕ್ಷವಾದ ಬಿಜೆಪಿಯವರು ಈ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ವಿಧಾನಪರಿಷತ್ ಸದಸ್ಯ ಇಂಚರ ಗೋವಿಂದರಾಜು ಕಿಡಿಕಾರಿದ್ದಾರೆ . ಈ ಕುರಿತು ಹೇಳಿಕೆ ನೀಡಿರುವ ಅವರು , ಡಿ.ಕೆ.ರವಿಯವರ ನಂತರ ಜಿಲ್ಲೆಗೆ ಡಾ.ಆರ್.ಸೆಲ್ವಮಣಿಯವರು ಓರ್ವ ಉತ್ತಮ ಜಿಲ್ಲಾಧಿಕಾರಿಯಾಗಿ ಆಗಮಿಸಿದ್ದರು , ಆದರೆ ಕೇವಲ ೧೦ […]
ವರದಿ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಕೋಲಾರ : ನಗರ ಪ್ರದೇಶದ ಬಡ ಜನತೆ ಮತ್ತು ಗುಂಪುಗಳಿಗೆ ಅವರಲ್ಲಿನ ಕುಶಲತೆ , ತರಬೇತಿ , ಆಸಕ್ತಿ ಆಧರಿಸಿ ಮತ್ತು ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಕಿರು ಉದ್ದಿಮೆ ಗಳನ್ನು ಸ್ಥಾಪಿಸಲು ಆರ್ಥಿಕ ನೆರವು ನೀಡುವ ಮೂಲಕ ಬಡತನ ನಿರ್ಮೂಲನೆಗೆ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಬ್ಯಾಂಕ್ ಅಧಿಕಾರಿಗಳಿಗೆ ಕರೆ ನೀಡಿದರು . ದೀನದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ( ಡೇ – ನಲ್ ) […]
ವರದಿ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ : ಹಾಲು ಉತ್ಪಾದಕರು ಕಡ್ಡಾಯವಾಗಿ ಕೋವಿಡ್ ನಿಯಮ ಪಾಲಿಸಬೇಕು ಎಂದು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಹೇಳಿದರು .ಶಿಬಿರ ಕಚೇರಿ ಸಭಾಂಗಣದಲ್ಲಿ ಹಾಲು ಉತ್ಪಾದಕರಿಗೆ ಮೃತಪಟ್ಟ ರಾಸುಗಳ ವಿಮಾ ಪರಿಹಾರ ಚೆಕ್ ವಿತರಿಸಿ ಮಾತನಾಡಿ , ೧೨ ಫಲಾನುಭವಿಗಳಿಗೆ ರೂ .೬.೫೦ ಲಕ್ಷ ಮೌಲ್ಯದ ಚೆಕ್ ವಿತರಿಸಲಾಗಿದೆ ಎಂದು ಹೇಳಿದರು.ಕಚೇರಿ ಉಪ ವ್ಯವಸ್ಥಾಪಕ ಕೆ.ಎಸ್. ನರಸಿಂಹಯ್ಯ ಮಾತನಾಡಿ , ಹಾಲಿನ ಗುಣಮಟ್ಟ ಹೆಚ್ಚಿಸಲು ಹಸಿರು ಮತ್ತು ಒಣ ಮೇವಿನ ಜತೆಗೆ ಪಶು […]
ವರದಿ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ ಕೋಲಾರ: ಶೈಕ್ಷಣಿಕ ರಂಗದಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಗುರುತಿಸಿ ಅಕ್ಷರದವ್ವ ಫಾತಿಮಾ ಷೇಕ್ರ ಸ್ಮರಣಾರ್ಥ ಪ್ರಶಸ್ತಿ ಪ್ರದಾನ ನಡೆಯುವಂತಾಗಲಿ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯಉಪ ನಿರ್ದೇಶಕ ರೇವಣ್ಣ ಸಿದ್ದಪ್ಪ ಹೇಳಿದರು.ಪತ್ರಕರ್ತರ ಭವನದಲ್ಲಿ ಕರ್ನಾಟಕ ರಾಜ್ಯಶಿಕ್ಷಕರ ಸಾಹಿತ್ಯ ಪರಿಷತ್ ಹಾಗೂ ಅಕ್ಷರದವ್ವ ಫಾತಿಮಾ ಶೇಕ್ರ ಪ್ರತಿಷ್ಠಾನ ಬಂಗಾರಪೇಟೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಫಾತಿಮಾ ಶೇಕ್ ಪುಸ್ತಕ ಬಿಡುಗಡೆ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಸುಮಾರು ೧೯೧ ವರ್ಷಗಳ ಹಿಂದೆ ಜನಿಸಿ ಮೊದಲ ಶಿಕ್ಷಕಿ […]
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ : ಕೋಲಾರ ಜಿಲ್ಲೆಯ ಕೆ.ಜಿ.ಎಫ್ ತಾಲ್ಲೂಕಿನಾದ್ಯಂತ ಮನೆ ಮನೆಗೆ ಜನವರಿ 17 ಮತ್ತು 18 ರಂದು ಆರೋಗ್ಯ ಕಾರ್ಯಕರ್ತರು ಭೇಟಿ ನೀಡಿ ಹೆಚ್.ಐ.ವಿ / ಏಡ್ಸ್ ಕುರಿತು ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ.ಆರ್.ಸೆಲ್ವಮಣಿ ಅವರು ತಿಳಿಸಿದರು . 2 ಇಂದು ತಮ್ಮ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು . ಜನಸಾಮಾನ್ಯರಿಗೆ ಹೆಚ್ಐವಿ / ಏಡ್ಸ್ ನಿಯಂತ್ರಣ , ಕಳಂಕ ಮತ್ತು […]