ಶ್ರೀನಿವಾಸಪುರ: ಮೊಟ್ಟ ಮೊದಲಬಾರಿಗೆ ಪುರಸಭಾ ವಾಣಿಜ್ಯ ಮಳಿಗೆಗಳ ಸಂಕೀರ್ಣದಲ್ಲಿ ಹಿಂದೂ ಮುಸ್ಲೀಂ ಬಾಂದವ ವ್ಯಾಪಾರಿಗಳು ಗಣೇಶ ಮೂರ್ತಿಯನ್ನು ಪೂಜಿಸಿ ವಿಜೃಂಭಣೆಯಿಂದ ಮೆರವಣಿಗೆ ಮಾಡಿ ಜಲವಿಸರ್ಜನೆ ಮಾಡಿದರು.ಇದೇ ಪ್ರಥಮಬಾರಿಗೆ ಪುರಸಭಾ ಮಾರುಕಟ್ಟೆ ವಾಣಿಜ್ಯ ಮಳಿಗೆಗಳ ಸಂಕೀರ್ಣ ವರ್ತಕರ ಸೇವಾ ಟ್ರಸ್ಟ್ ವತಿಯಿಂದ ಗೌರಿ ಗಣೇಶ ಹಬ್ಬದಪ್ರಯುಕ್ತ ವಿನಾಯಕನ ಮೂರ್ತಿಯನ್ನು ಆವರಣದಲ್ಲಿ 5 ದಿನಗಳು ಪೂಜಿಸಿ ಎಲ್ಲಾ ವರ್ತಕರು ಮತ್ತು ಮುಸ್ಲೀಂ ಬಾಂದವ ವ್ಯಾಪಾರಸ್ಥರು ಶಾಂತಿ ಸೌಹಾರ್ದತೆಯಿಂದ ಒಗ್ಗಟ್ಟಿನಿಂದ ಅಂಗಡಿಗಳನ್ನು ಮುಚ್ಚುವುದರಮೂಲಕ ಡೋಳ್ಳು ಕುಣಿತಗಳೊಂದಿಗೆ ಟ್ಯಾಕ್ಟರ್ ಮೂಲಕ ಗಣಪತಿಯನ್ನು ವಿಶೇಷ […]
ಶ್ರೀನಿವಾಸಪುರ ತಾಲೂಕಿನ ಆರಿಕುಂಟೆ ಗ್ರಾಮದ ಲಕ್ಷ್ಮಣರೆಡ್ಡಿ ಪತ್ನಿ ಆರ್.ಅನುಷಾ ರವರಿಗೆ ಬೆಂಗಳೂರಿನ ವಿಶ್ವವಿದ್ಯಾನಿಯದಲ್ಲಿನ ಕನ್ನಡ ಅಧ್ಯಾಯನ ಕೇಂದ್ರದ ಪ್ರಾದ್ಯಾಪಕರಾದ ಡಾ. ಡಿ. ಡೋಮಿನಿಕ್ ರವರ ಮಾರ್ಗದರ್ಶನದಲ್ಲಿ ದಲಿತ ಆತ್ಮ ಕಥನಗಳಲ್ಲಿ ನಿರೂಪಿತವಾಗಿರುವ ಪ್ರಜ್ಞೆಯ ಸ್ವರೂಪ ಎಂಬ ಸಂಶೋಧನಾ ಮಹಾಪ್ರಬಂದಕ್ಕೆ ಪಿಎಚ್‍ಡಿ ಪದವಿ ಪ್ರದಾನ ಮಾಡಿದೆ.ಪೋಟೋ ಆರ್.ಅನುಷಾ
ಶ್ರೀನಿವಾಸಪುರ : ಮೊದಲನೇ ಬಾರಿಗೆ ಕೋಲಾರ ಜಿಲ್ಲೆಗೆ ಬೇಟಿ ನೀಡಿದ್ದೇನೆ. ಜಿಲ್ಲಾಧಿಕಾರಿಗೆ ಮಾಹಿತಿ ನೀಡಿ ಅಧಿಕಾರಿಗಳು ಕರೆಸಿಕೊಳ್ಳುವ ಪರಿಸ್ಥಿತಿ. ಎಲ್ಲರಿಗೂ ಮಾಹಿತಿ ಹೋಗಿದೆ ಆದರೆ ಯಾರು ಬಂದಿಲ್ಲ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಡಾ|| ನಾಗಲಕ್ಷ್ಮಿ ಚೌದರಿ ಬೇಸರ ವ್ಯಕ್ತಪಡಿಸಿದರು. ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಾಗೂ ಹಕ್ಕಿ ಪಿಕ್ಕಿ ಕಾಲೋನಿಗೆ ಬುಧವಾರ ಬೇಟಿ ನೀಡಿ ಕುಂದುಕೂರತೆಗಳ ಬಗ್ಗೆ ಸಾರ್ವಜನಿಕರೊಂದಿಗೆ ಮಾಹಿತಿ ಪಡೆದು ಚರ್ಚಿಸಿ ಮಾತನಾಡಿದರು.ಸ್ಥಳೀಯ ಅಧಿಕಾರಿಗಳು ಗ್ರಾಮಕ್ಕೆ ಬೇಟಿ ನೀಡಿ ಕಾರ್ಯಕ್ರಮದ […]
ಶ್ರೀನಿವಾಸಪುರ ; ಪಟ್ಟಣದಲ್ಲಿ ಬೀದಿ ನಾಯಿಗಳ ಕಾಟ ಜೋರಾಗಿದ್ದು, ಕೆಲ ಕಡೆ ಜನರು ಸಂಚರಿಸುವುದೇ ಕಷ್ಟವಾಗಿದೆ ಪಟ್ಟಣದಲ್ಲಿನ ಬಹುತೇಕ ರಸ್ತೆಗಳಲ್ಲಿ ಬೀದಿ ನಾಯಿಗಳು ಹೆಚ್ಚಿವೆ. ಹೆಜ್ಜೆ ಹೆಜ್ಜೆಗೂ ಗುರ್ ಎನ್ನುವ ನಾಯಿಗಳು ಸಹಜವಾಗಿಯೇ ಸಾರ್ವಜನಿಕರಲ್ಲಿ ಭೀತಿ ಸೃಷ್ಟಿಸುತ್ತಿವೆ. ಬೀದಿ ನಾಯಿಗಳ ಹಾವಳಿಯಿಂದ ಜನರು ರೋಸಿ ಹೋಗಿದ್ದಾರೆ. ಪಾದಚಾರಿಗಳು ಮತ್ತು ದ್ವಿ ಚಕ್ರ ವಾಹನಗಳ ಸವಾರರ ಸಂಚಾರಕ್ಕೆ ಸಂಚಕಾರ ಎದುರಾಗಿದೆ. ಬಡಾವಣೆಗಳಲ್ಲಿತಿಂಡಿ, ತಿನಿಸುಗಳನ್ನು ಹಿಡಿದು ಸಾಗುವ ಪುಟ್ಟ ಮಕ್ಕಳ ಮೈಮೇಲೆ ಬೀದಿ ನಾಯಿಗಳು ದಾಳಿ ಇಡುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ […]
ಕೋಲಾರ,ಸೆ.10: ಕಳೆದ ಆಗಸ್ಟ್-2024ರಲ್ಲಿ ನಡೆದ ಕಂಪ್ಯೂಟರ್ ಪರೀಕ್ಷೆಯಲ್ಲಿ ನಗರದ ರಾಜರಾಜೇಶ್ವರಿ ವಾಣಿಜ್ಯ ಮತ್ತು ಕಂಪ್ಯೂಟರ್ವಿದ್ಯಾಸಂಸ್ಥೆಗೆ ಕಂಪ್ಯೂಟರ್ ಪರೀಕ್ಷೆಯಲ್ಲಿ ಶೇಕಡ 100ರಷ್ಟು ಫಲಿತಾಂಶ ಲಭಿಸಿದೆ.20 ಅತ್ಯುತ್ತಮ ಶ್ರೇಣಿ, 05 ಪ್ರಥಮ ಶ್ರೇಣಿ, 06 ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಶಾಲೆಗೆ ಉತ್ತಮ ಫಲಿತಾಂಶ ತಂದುಕೊಟ್ಟ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಮತ್ತು ಬೋಧಕ ವೃಂದದವರು ಅಭಿನಂದಿಸಿದ್ದಾರೆ ಎಂದು ಪ್ರಾಂಶುಪಾಲ ಟಿ.ಎಸ್.ರಾಜಶೇಖರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋಲಾರ,ಸೆ.10: ನಗರದ ಸಹ್ಯಾದ್ರಿ ಪದವಿ ಕಾಲೇಜು ವತಿಯಿಂದ 2021-24ನೇ ಸಾಲಿನ ಪದವಿಯನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸರ್ಕಾರಿ ಮಹಿಳಾ ಕಾಲೇಜು ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕ ಪ್ರಕಾಶ್ ಎನ್, ವಿದ್ಯಾರ್ಥಿಗಳು ತಾವು ಇಲ್ಲಿಂದ ನಿರ್ಗಮಿಸುತ್ತಿದ್ದೀರ ಎಂದರೆ ನಿಮ್ಮ ಜೀವನವನ್ನು ನೀವೇ ರೂಪಿಸಿಕೊಳ್ಳುತ್ತಿದ್ದೀರ ಹಾಗೂ ಜವಾಬ್ದಾರಿಗಳು ಹೆಚ್ಚಾಗುತ್ತದೆ ಎಂದು ತಿಳಿಸಿದರು. ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ.ಎ.ಕುಲಕರ್ಣಿ ಮಾತನಾಡಿ, ವಿದ್ಯಾರ್ಥಿಗಳು ಮುಂದಿನ ಜೀವನವನ್ನು ಹೇಗೆ ಛಲದಿಂದ ಬದುಕಬೇಕು. ಛಲ ಇದ್ದರೆ ಗುರಿ […]
ಕೋಲಾರ,ಸೆ.10: ನಗರದ ಹೊರವಲಯದಲ್ಲಿರುವ ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಆವರಣದಲ್ಲಿ ಮನೋರೋಗ ವಿಭಾಗದಿಂದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಅಧೀಕ್ಷಕ ಡಾ.ಕೃಷ್ಣಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಆತ್ಮಹತ್ಯೆ ತಡೆಗಟ್ಟುವಲ್ಲಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಪಾತ್ರ ಮುಖ್ಯವಾಗಿರುತ್ತದೆ. ನಾವು ಆತ್ಮಸ್ಥೈರ್ಯ ಮತ್ತು ದೈರ್ಯವನ್ನು ಕೊಡುವುದರಿಂದ ಆತ್ಮಹತ್ಯೆಯನ್ನು ತಕ್ಕಮಟ್ಟಿಗೆ ತಗ್ಗಿಸಬಹುದು ಎಂದರು.ಮನೋರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮೋಹನರೆಡ್ಡಿ ಮಾತನಾಡಿ, ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಪದೇಪದೇ ಸಾಯುವ ಕುರಿತು ಮಾತನಾಡುತ್ತಾ ಇರುತ್ತಾನೆ. ಅಂತಹ ವ್ಯಕ್ತಿಗಳನ್ನು ಶೀಘ್ರವಾಗಿ ಮನೋವೈದ್ಯರಲ್ಲಿ […]
ಶ್ರೀನಿವಾಸಪುರ : ನಮ್ಮ ದೇಶದಲ್ಲಿ ಎಲ್‍ಐಸಿ ಸಂಸ್ಥೆಯಲ್ಲಿ ಒಂದು ಲಕ್ಷ ಉದ್ಯೋಗಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. 18 ಲಕ್ಷ ಏಜೆಂಟರು ಕಾರ್ಯನಿರ್ವಹಿಸುತ್ತಿದ್ದಾರೆ. ಇಡೀ ದೇಶದಲ್ಲಿನ 27 ಖಾಸಗಿ ಕಂಪನಿಗಳ ಪೈಕಿ ಎಲ್‍ಐಸಿ ಮಾರುಕಟ್ಟೆ ಷೇರಲ್ಲಿ 69.91% ಪ್ರಸ್ತುತ ಷೇರಗಳನ್ನು ಹೊಂದಿದೆ. ಎಲ್‍ಐಸಿ ಶಾಶ್ವತ ನಿಧಿ 63ಲಕ್ಷ ಕೋಟಿ ಮೀಸಲು ಇಟ್ಟಿದೆ ಎಂದು ಉಪಶಾಖೆ ವ್ಯವಸ್ಥಾಪಕ ಎಸ್.ವಿ.ಪ್ರಸಾದ್ ಹೇಳಿದರು..ಪಟ್ಟಣದ ಎಲ್‍ಐಸಿ ಉಪಶಾಖೆಯಲ್ಲಿ ಶುಕ್ರವಾರ ಎಲ್‍ಐಸಿ 68 ನೇ ವರ್ಷದ ಸಪ್ತಾಹ ಪ್ರಯುಕ್ತ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಕ್ರೈಮ್ ನಿಧಿಗೆ […]
ಶ್ರೀನಿವಾಸಪುರ : ಸಾಕ್ಷರತೆಯು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಬಹುಮುಖ್ಯ ಅಂಶವಾಗಿದ್ದು, ಸಾಕ್ಷರತೆ ವ್ಯಕ್ತಿಯನ್ನು ಸಮಾಜದಲ್ಲಿ ಘನತೆಯಿಂದ ಬದಕಲು ಸಹಾಯ ಮಾಡುವುದರ ಜೊತೆಗೆ ಸ್ವಾವಲಂಭಿಯಾಗಿ ಬದುಕಲು ಸಹಕರಿಸುತ್ತದೆ ಎಂದು ಬಿಆರ್‍ಸಿ ಕೆ.ಸಿ.ವಸಂತ ಹೇಳಿದರು.ಪಟ್ಟಣದ ಬಿಆರ್‍ಸಿ ಕೇಂದ್ರದಲ್ಲಿ ಶುಕ್ರವಾರ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.ಸಾಕ್ಷರತೆಯು ಉದ್ಯೋಗ ಮತ್ತು ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ಇದು ಜನರನ್ನು ಬಡತನ ಮತ್ತು ನಿರುದ್ಯೋಗದಿಂದ ಹೊರಬರಲು ಸಹಾಯ ಮಾಡುತ್ತದೆ. ಸಾಕ್ಷರತಾ ಪ್ರಮಾಣ ಹಾಗೂ ಇನ್ನೂ ಹೆಚ್ಚಿನ ರೀತಿಯಲ್ಲಿ ನಾವು ಸಾಕ್ಷರತೆಯನ್ನು ಸಾಧಿಸಬೇಕಾದ ಜವಾಬ್ದಾರಿ […]