ಶ್ರೀನಿವಾಸಪುರದ ಬಾಲಾಂಜನೇಯಸ್ವಾಮಿ ದೇವಾಲಯದಲ್ಲಿ ಶ್ರಾವಣ ಶನಿವಾರದ ಪ್ರಯುಕ್ತ ದೇವರ ವಿಗ್ರಹಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಶ್ರೀನಿವಾಸಪುರದಲ್ಲಿ ಶನಿವಾರ ತಾಲ್ಲೂಕು ವಿಶ್ವಕರ್ಮ ಸಮುದಾಯದ ವತಿಯಿಂದ ನವನಾಗರ ಮಂಡಲ ಪೂಜೆ ಏರ್ಪಡಿಸಲಾಗಿತ್ತು. ಸಮುದಾಯದ ಮುಖಂಡರಾದ ಕೆ.ಮೋಹನಾಚಾರಿ, ಕೆ.ರಾಧಮ್ಮ ಭಾಗವಹಿಸಿದ್ದರು.
ಶ್ರೀನಿವಾಸಪುರದ ಎಂಜಿ ರಸ್ತೆಯಲ್ಲಿ ಶನಿವಾರ ಕಂದಾಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ತ್ರಿವರ್ಣ ಧ್ವಜ ಮಾರಾಟ ಕಾರ್ಯಕ್ರಮವನ್ನು ತಹಶೀಲ್ದಾರ್ ಶಿರಿನ್ ತಾಜ್ ಉದ್ಘಾಟಿಸಿದರು. ಅವರು ಪ್ರತಿ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಲು ಮನವಿ ಮಾಡಿದರು.
ಕೋಲಾರ ಆ.6 : ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷ್ ಸರ್ಕಾರದ ವೈಸ್‍ರಾಯ್‍ರವರ ನೇತೃತ್ವದಲ್ಲಿನ ಕಾರ್ಯಕಾರಿ ಮಂಡಳಿಯಲ್ಲಿ ನೀರಾವರಿ ಸದಸ್ಯರಾಗಿ ಅನೇಕ ಡ್ಯಾಂಗಳ ನಿರ್ಮಾಣದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದಂತಹ ಡಾ|| ಬಿ.ಆರ್. ಅಂಬೇಡ್ಕರ್ ರವರ ಹೆಸರನ್ನು ಯರಗೋಳ್ ಬಳಿ ನಿರ್ಮಿಸಿರುವ ಡ್ಯಾಂಗೆ “ಡಾ|| ಬಿ.ಆರ್.ಅಂಬೇಡ್ಕರ್ ಡ್ಯಾಂ” ಎಂದು ನಾಮಕರಣ ಮಾಡುವಂತೆ ಒತ್ತಾಯಿಸಿ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ ರವರಿಗೆ ಭಾರತೀಯ ದಲಿತ ಸೇನೆಯ ರಾಜ್ಯಾಧ್ಯಕ್ಷರಾದ ಎಂ.ನಾರಾಯಣಸ್ವಾಮಿ ಮನವಿ ಪತ್ರದ ಮೂಲಕ ಕೋರಿರುತ್ತಾರೆ.ಕೋಲಾರ ಜಿಲ್ಲೆಯು ದಲಿತ ಹೋರಾಟಗಳಿಗೆ ತವರೂರಾಗಿದ್ದು, ಇಲ್ಲಿ […]
ಶ್ರೀನಿವಾಸಪುರ : ಈ ಬಾರಿ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಬೇಕು . ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಆಚರಣೆ ಅರ್ಥಪೂರ್ಣವಾಗಿ ಇರುವಂತೆ ನೋಡಿಕೊಳ್ಳಬೇಕು ಎಂದು ತಹಶೀಲ್ದಾರ್ ಶಿರಿನ್ ತಾಜ್ ಹೇಳಿದರು . ಪಟ್ಟಣದ ಎಂಜಿ ರಸ್ತೆಯಲ್ಲಿ ತಾಲ್ಲೂಕು ಕಂದಾಯ ಇಲಾಖೆ ವತಿಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ ತ್ರಿವರ್ಣ ಧ್ವಜ ಮಾರಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು , ಆ .೧೩ , ೧೪ , ೧೫ ರಂದು ನಾಗರಿಕರು ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಬೇಕು ಎಂದು ಹೇಳಿದರು […]
ಕೋಲಾರ : ಗೌರವಾನ್ವಿತ ಲೋಕಾಯುಕ್ತರು , ಕರ್ನಾಟಕ ಲೋಕಾಯುಕ್ತ , ಬೆಂಗಳೂರು ರವರು ದಿನಾಂಕ : 05-08-2022 ರಂದು ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಾಣ ಮಾಡಿರುವ ಶ್ರೀ ದೇವರಾಜ ಅರಸು ಬಡಾವಣೆಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಲ್ಲಿ ವಿಫಲವಾಗಿರುವ ಬಗ್ಗೆ ವಿಚಾರಣೆ ನಡೆಸಿ ಬಡಾವಣೆ ನಿರ್ಮಾಣಗೊಂಡು ಸುಮಾರು 30 ವರ್ಷಗಳು ಕಳೆದಿದ್ದರೂ , ಸಮರ್ಪಕ ಮೂಲಭೂತ ಸೌಕರ್ಯಗಳನ್ನು ಓದಗಿಸುವಲ್ಲಿ ವಿಫಲಾಗಿರುವ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ಹಾಗೂ ಸರ್ಕಾರದ ಕಾರ್ಯದರ್ಶಿಗಳು , ನಗರಾಭಿವೃದ್ಧಿ ಇಲಾಖೆ , ವಿಕಾಸ ಸೌಧ […]
ಕೋಲಾರ : ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ರೈತರ ಬೆಳೆಗಳಾದ ರಾಗಿ , ಹೂಕೋಸು ಹಾಗೂ ಟೊಮೊಟೋ ಬೆಳೆಗಳಿಗೆ ತೀವ್ರ ಹಾನಿಯಾಗಿದ್ದು , ಪರಿಹಾರ ಒದಗಿಸಲಾಗುವುದು ಎಂದು ತೋಟಗಾರಿಕೆ ಮತ್ತು ಯೋಜನೆ , ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ ಅವರು ತಿಳಿಸಿದರು . ಇಂದು ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಣೆ ಮಾಡಿ ಮಾತನಾಡಿದ ಅವರು ಜಿಲ್ಲಾದ್ಯಂತ ಅವಿರತವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜಿಲ್ಲೆಯಲ್ಲಿ 250 […]
ಶ್ರೀನಿವಾಸಪುರ: ಕೋಲಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ.ಡಿ.ದೇವರಾಜ , ಐ.ಪಿ.ಎಸ್ . , ಮತ್ತು ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ ಸಚಿನ್ ಪಿ ಘೋರ್ಪಡೆ , ಕೆ.ಎಸ್.ಪಿ.ಎಸ್ , ರವರ ಮಾರ್ಗದರ್ಶದಲ್ಲಿ ಮುಳಬಾಗಿಲು ಉಪ – ವಿಭಾಗದ ಪ್ರಭಾರ ಡಿ.ಎಸ್.ಪಿ ಶ್ರೀ ಪಿ.ಮುರಳಿಧರ್ ರವರ ಮುಂದಾಳತ್ವದಲ್ಲಿ ಶ್ರೀನಿವಾಸಪುರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಿ.ಸಿ.ನಾರಾಯಣಸ್ವಾಮಿ ರವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ತಮ್ಮ ಠಾಣೆಯ ಅಪರಾಧ ವಿಭಾಗದ ಎ.ಎಸ್.ಐ ಅಮೀದ್‌ಖಾನ್ ಹಾಗೂ ಸಿಬ್ಬಂದಿಗಳಾದ ಮಂಜುನಾಥ , ಸುರೇಶ , […]
ರಾಯಲ್ಪಾಡು 1 : ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ಮತ್ತು ಡಾಕ್ಟರ್ ಸ್ವಾಮಿನಾಥನ್ ಶಿಪಾರಸ್ಸುಗಳನ್ನು ಜಾರಿ ಮಾಡಲು ಒತ್ತಾಯಿಸಿ ಹೋರಾಟಗಳನ್ನು ಬಲಿಷ್ಠವಾಗಿ ಮಾಡಲು ಸಂಘಟಿತರಾಗಬೇಕು ಎಂದು ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಪಾತಕೋಟ ನವೀನ್ ತಿಳಿಸಿದರು.ಗೌನಿಪಲ್ಲಿಯ ಗಣಪತಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಕರ್ನಾಟಕ ಪ್ರಾಂತ ರೈತ ಸಂಘವತಿಯಿಂದ ನೂತನ ಸಂಘ ರಚನೆ ಹಾಗೂ ರೈತ ಕೃಷಿ ಉಳಿವಿಗಾಗಿ , ರೈತರ ಕೃಷಿ ಕೂಲಿಕಾರರ ರಕ್ಷಣೆಗಾಗಿ ಪ್ರದೇಶವಾರು ಸಮಾವೇಶದಲ್ಲಿ ಮಾತನಾಡಿದರು.ತಾಲ್ಲೂಕು ಉಪಾಧ್ಯಕ್ಷ […]