
ಶ್ರೀನಿವಾಸಪುರದಲ್ಲಿ, ಗುಜರಾತಿನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಗುರುವಾರ ವಿಜಯೋತ್ಸವ ಆಚರಿಸಿದರು. ಬಿಜೆಪಿ ತಾಲ್ಲೂಕು ಅಧ್ಯಕ್ಷ ಅಶೋಕ್‍ರೆಡ್ಡಿ, ಮುಖಂಡರಾದ ಎಸ್‍ಎಲ್‍ಎನ್ ಮಂಜುನಾಥ್, ರಾಮಾಂಜಿ, ರಮೇಶ್, ರೆಡ್ಡಪ್ಪ, ಸುರೇಶ್ ನಾಯಕ್ ಇದ್ದರು.

ಶ್ರೀನಿವಾಸಪುರ: ಮಾವು ಬೆಳೆಗಾರರಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಪರಿಹಾರ ನೀಡುವಂತೆ ಆಗ್ರಹಿಸಿ ಪಟ್ಟಣದಲ್ಲಿ ಸಂಪೂರ್ಣ ಶಾಂತಿಯುತ ಬಂದ್ ಆಚರಿಸಲಾಯಿತು.ಜಿಲ್ಲಾ ಮಾವು ಬೆಳೆಗಾರರ ಸಂಯುಕ್ತ ಹೋರಾಟ ಸಮಿತಿ ನೀಡಿದ್ದ ಬಂದ್ ಪ್ರಯುಕ್ತ ಶ್ರೀನಿವಾಸಪುರದಲ್ಲಿ ಅಂಗಡಿ ಮುಂಗಟ್ಟು ಮುಚ್ಚಲಾಗಿತ್ತು. ವಾಹನ ಸಂಚಾರ ಸ್ಥಗಿತಗೊಂಡಿತ್ತು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಬಸ್‍ಗಳಿಲ್ಲದೆ ಬಿಕೋ ಎನ್ನುತ್ತಿತ್ತು. ಸರ್ಕಾರಿ ಕಚೇರಿಗಳು ಹಾಗೂ ಬ್ಯಾಂಕ್‍ಗಳು ತೆರೆದಿದ್ದವಾದರೂ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು. ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ […]

ಕೋಲಾರ:- ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಇಬ್ಬರು ಮಕ್ಕಳಿಗೆ ತಾಯಿಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಹೃದಯ ವಿದ್ರಾವಕ ಘಟನೆ ಮಂಗಳವಾರ ತಡರಾತ್ರಿ ನಡೆದಿದ್ದು, ಓರ್ವ ಪುತ್ರಿ ಸುಟ್ಟು ಕರಕಲಾಗಿದ್ದು, ಮತ್ತೊಬ್ಬ ಮಗಳ ಸ್ಥಿತಿ ಚಿಂತಾಜನಕವಾಗಿದೆ.ಓರ್ವ ಮಗಳು ಅಕ್ಷಯ(8) ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಮಗಳು ಉದಯಶ್ರೀ(6) ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ವಿವರ ಬುಧವಾರ ಮುಂಜಾನೆ ವಾಯುವಿಹಾರಕ್ಕೆಂದು ಅಂಜನಾದ್ರಿ ಬೆಟ್ಟದ ಬಳಿ ಜನ ಹೋದಾಗ ಚೀರಾಡುವ ಶಬ್ದ ಕೇಳಿಸಿದ್ದು, […]

ಶ್ರೀನಿವಾಸಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆ 10:00 ಗಂಟೆಗೆ ಡಾll B R ಅಂಬೇಡ್ಕರ್ ರವರ ಪರಿವರಣ ದಿನಾಚರಣೆಯನ್ನು ಹಂಬಿಕೊಂಡಿದ್ದು ಹಾಗೂ SFI ಹೊಸ ಘಟಕ ವನ್ನು ರಚನೆ ಮಾಡಲಾಯಿತು ಈ ಸಂಧರ್ಭದಲ್ಲಿ ಸಭೆಯ ಅಧ್ಯಕ್ಷಯೆಯನ್ನು ಸರ್ಕಾರಿ ಬಾಲಕರ ಪದವೀ ಪೂರ್ವ ಕಾಲೀಜು ಪ್ರಾಂಶುಪಾಲರಾದ ಶೋಭಾ ಮೇಡಂ ವಯಿಸಿಕೊಂಡಿದ್ದು, ಅವರು ಅಂಬೇಡ್ಕರ್ ರವರ ಸಿಧಾಂತದ ಬಗ್ಗೆ ಮಾತನಾಡಿದರು ಈ ಸಂದರ್ಭದಲ್ಲಿ ರಾಜ್ಯ ಕಾರ್ಯಧರ್ಶಿ ವಾಸುದೇವರೆಡ್ಡಿ ಎಸ್ ಎಫ್ ಐ ಕುರಿತು ಸುಧೀರ್ಘ ಮಾಹಿತಿಯನ್ನು ನೀಡಿದರು ಈ […]

ಶ್ರೀನಿವಾಸಪುರ : ತಾಲೂಕಿನ ಯರಂವಾರಿಪಲ್ಲಿ ಪಂಚಾಯಿತಿಯ ಪಿಡಿಒ ಅಧಿಕಾರಿ ಮನೆಯನ್ನೇ ಪಂಚಾಯಿತಿ ಕಚೇರಿಯನ್ನೇ ಮಾಡಿಕೊಂಡು ಕಚೇರಿಗೆ ಬಾರದೇ ಪಂಚಾಯಿತಿ ಹಣವನ್ನು ಗುಳಂ ಮಾಡಿಕೊಂಡು ಸರ್ಕಾರವನ್ನು , ಸಾರ್ವಜನಿಕರನ್ನ ಮೋಸ ಮಾಡುತ್ತಿದ್ದಾರೆ ಎಂದು ಗ್ರಾ.ಪಂ. ಉಪಾಧ್ಯಕ್ಷ ವೈ.ಆರ್. ಶ್ರೀನಿವಾಸರೆಡ್ಡಿ ಪಿಡಿಒ ಅಧಿಕಾರಿ ವಿರುದ್ಧ ಸರ್ಕಾರವು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು. ಯರಂವಾರಿಪಲ್ಲಿ ಗ್ರಾಮಪಂಚಾಯಿತಿ ಉಪಾಧ್ಯಕ್ಷರಿಂದ ಹಾಗೂ ಸದಸ್ಯರಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕಾರ್ಯಪ್ರವೃತ್ತಿ ವಿರುದ್ಧ ಗ್ರಾ.ಪಂ ಕಚೇರಿ ಮುಂದೆ ಪ್ರತಿಭಟಿಸಿ ಮಾತನಾಡಿದರು , ಸರ್ಕಾರವು ಗ್ರಾಮೀಣ ಭಾಗದ ಹಳ್ಳಿಗಳು ಅಭಿವೃದ್ಧಿ […]

ನವ ಕರ್ನಾಟಕ ಸ್ವಾಭಿಮಾನಿ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಶ್ರೀನಿವಾಸಪುರದ ಸಾದಿಕ್ ಅಹ್ಮದ್ ಅವರನ್ನು, ವೇದಿಕೆಯ ರಾಜ್ಯಾಧ್ಯ್ಕಷ ರಾಮಚಂದ್ರಪ್ಪ ಆಯ್ಕೆ ಮಾಡಿದ್ದಾರೆ. ಮುಖಂಡರಾದ ಮಂಜುನಾಥ್, ನರಸಿಂಹಯ್ಯ, ಬರೀದ್, ಸಾಬೀರ್ ಇದ್ದರು

ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಡಿ.9 ರಂದು ಏರ್ಪಡಿಸಿರುವ 12ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯ ಸಾಹಿತ್ಯ ಪ್ರೇಮಿಗಳು ಭಾಗವಹಿಸುವುದರ ಮೂಲಕ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ ಮನವಿ ಮಾಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 8.30ಕ್ಕೆ ಧ್ವಜಾರೋಹಣದ ಬಳಿಕ, ಗ್ರಾಮದಲ್ಲಿ ಸಮ್ಮೇಳನಾಧ್ಯಕ್ಷ ಸಾಹಿತಿ ಪಾತಮುತ್ತಕಪಲ್ಲಿ ಎಂ.ಚಲಪತಿಗೌಡ ಅವರ ಮೆರವಣಿಗೆ ಏರ್ಪಡಿಸಲಾಗಿದೆ ಎಂದು ಹೇಳಿದು.ಸಮ್ಮೇಳನದ ಉದ್ಘಾಟನೆ ಬಳಿಕ ವಿಚಾರ […]

ಕೋಲಾರ:- ಸರಕಾರಿ ಶಾಲೆಯಲ್ಲಿ ಓದಿದ್ದರಿಂದಲೇ ತಮಗೆ ಸಮಾಜದ ವಿವಿಧ ವರ್ಗಗಳ ಜನರ ಕಷ್ಟ ಅರಿತುಕೊಳ್ಳಲು ಸಹಕಾರಿಯಾಯಿತೆಂದು ರೋಟರಿ ಸೆಂಟ್ರಲ್ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಹೇಳಿದರು.ತಾಲೂಕಿನ ಮಣಿಘಟ್ಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಸೆಂಟ್ರಲ್‍ವತಿಯಿಂದ ಬರೆಯುವ ಫಲಕಗಳನ್ನು ಬುಧವಾರ ಕೊಡುಗೆಯಾಗಿ ನೀಡಿ ಅವರು ಮಾತನಾಡುತ್ತಿದ್ದರು.ವಿವಿಧ ವರ್ಗದ ಮಕ್ಕಳೊಂದಿಗೆ ಬೆರೆತು ಕಲಿಯುವ ಅವರ ನೋವು ನಲಿವಿನಲ್ಲಿ ಭಾಗಿಯಾಗುವ, ಕಷ್ಟ ಸುಖದಲ್ಲಿ ತೊಡಗಿಸಿಕೊಳ್ಳುವ ಸರಕಾರಿ ಶಾಲೆ ಮಕ್ಕಳು ಭಾಗ್ಯವಂತರೆಂದು ಅವರು ವಿವರಿಸಿದರು.ಸರಕಾರಿ ಶಾಲೆ ಮಕ್ಕಳ ವಿದ್ಯಾಭ್ಯಾಸ ಅನುಕೂಲಕ್ಕಾಗಿರೋಟರಿ ಸೆಂಟ್ರಲ್‍ವತಿಯಿಂದ ಡೆಸ್ಕ್ ಸೇರಿದಂತೆ […]

ಕೋಲಾರ ಡಿಸೆಂಬರ್ 7 : ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೋಲಾರ ಜಿಲ್ಲೆಯ ಯುವ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕೋಲಾರ ಟಿ. ಚನ್ನಯ್ಯ ರಂಗಮಂದಿರದಲ್ಲಿ ನಡೆದ 2022-23ನೇ ಸಾಲಿನ ಕೋಲಾರ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ವೀಣೆ ಸ್ಪರ್ಧೆಯಲ್ಲಿ ಕೋಲಾರ ನಗರದ ಪಿ.ಸಿ. ಬಡಾವಣೆಯ ಕಿಶೋರ್ ಕುಮಾರ್.ಎಸ್ ರವರು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಅಯ್ಕೆಯಾಗಿರುತ್ತಾರೆ.ಕಿಶೋರ್ ಕುಮಾರ್ ರವರು ಪ್ರಸ್ತುತ ವೀಣಾಶಾಸ್ತ್ರಿ ಎಂದೇ ಪ್ರಸಿದ್ಧರಾಗಿದ್ದ ದಿವಂಗತ ಲಕ್ಷ್ಮೀನಾರಾಯಣ ಶಾಸ್ತ್ರಿ […]