
ಶ್ರೀನಿವಾಸಪುರ: ಕ್ಷೇತ್ರದ ಅಭಿವೃದ್ಧಿಗೆ ನನ್ನ ಕೊಡುಗೆ ನೋಡಿ ಚುನಾವಣೆಯಲ್ಲಿ ಆಶೀರ್ವಾದ ಮಾಡಿ ಎಂದು ರಮೇಶ್ ಕುಮಾರ್ ಹೇಳಿದರು.ತಾಲ್ಲೂಕಿನ ಅರಿಕೆರೆ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸೂಟು ಬೂಟು ಹಾಕಿಕೊಂಡು ಬಂದು ಮತ ಕೇಳುತ್ತಾರೆ. ಕ್ಷೇತ್ರಕ್ಕೆ ಅವರ ಕೊಡುಗೆ ಏನೂ ಇರುವುದಿಲ್ಲ. ಎಂದೂ ನಿಮ್ಮ ಕಷ್ಟಕ್ಕೆ ಸ್ಪಂದಿಸಿದವರು ಅವರಲ್ಲ ಎಂದು ಹೇಳಿದರು.ಸಂವಿಧಾನ ಸಮಾಜದ ಭಾವ ಬೆಸೆದಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆಯಾದ ಸಂವಿಧಾನ ಶಾಂತಿಯುತ ಸಹಬಾಳ್ವೆಗೆ ಅನುವು ಮಾಡಿಕೊಟ್ಟಿದೆ. […]

ಮುಳಬಾಗಿಲು-ಏ-20, ಬೇಸಿಗೆಯಲ್ಲಿ ರೈತರ ಬೆಳೆ ರಕ್ಷಣೆಗೆ 10 ತಾಸು ಗುಣಮಟ್ಟದ ವಿದ್ಯುತ್ ನೀಡುವ ಜೊತೆಗೆ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಹ್ಮಾಂಡ ಭ್ರಷ್ಟಾಚಾರ ತನಿಖೆ ಮಾಡಲು ವಿಶೇಷ ತಂಡ ರಚನೆ ಮಾಡಬೇಕೆಂದು ರೈತ ಸಂಘದಿಂದ ನಷ್ಠ ಬೆಳೆ ಸಮೇತ ಬೈರಕೂರು ವಿದ್ಯುತ್ ಉಪ ಕೇಂದ್ರದ ಮುಂದೆ ಹೋರಾಟ ಮಾಡಿ ಬೆಸ್ಕಂ ಅಧಿಕಾರಿ ಸಂತೋಷ್ ರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.ದೇವರು ವರ ಕೊಟ್ಟರು ಪೂಜಾರಿ ನೀಡಲಿಲ್ಲ ಎಂಬ ಗಾದೆಯಂತೆ ಸರ್ಕಾರ ಬೇಸಿಗೆಯಲ್ಲಿ ರೈತರು ಬೆಳೆದ ಬೆಳೆಗಳ ರಕ್ಷಣೆಗೆ ನೀರು ಹಾಯಿಸಲು ಗುಣಮಟ್ಟದ […]

ಶ್ರೀನಿವಾಸಪುರ, ಏ.19: ಮಾವು ಮಾರುಕಟ್ಟೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಮಾವು ಪಸಲಿಗೆ ಬಾಧಿಸುತ್ತಿರುವ ನುಸಿ, ಕಪ್ಪುಚುಕ್ಕೆ, ಹಾಗೂ ಜಿಗಣಿ ಹುಳಗಳ ನಿಯಂತ್ರಣಕ್ಕೆ ಉಚಿತ ಔಷಧಿ ನೀಡಬೇಕೆಂದು ಏ.22 ರ ಶನಿವಾರ ರೋಗ ಮಾವು ಸಮೇತ ತಾಲ್ಲೂಕಾಡಳಿತ ಮುತ್ತಿಗೆ ಹಾಕಲು ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಕರೆದಿದದ್ದ ರೈತ ಸಂಘದ ಸಭೆಯಲ್ಲಿ ಮಾತನಾಡಿದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಇಡೀ ಪ್ರಪಂಚಕ್ಕೆ ಮಾವನ್ನು ಕೊಡುವ ಮಾವಿನ ಮಡಿಲು ಶ್ರೀನಿವಾಸಪುರ ಮಾವು ಬೆಳೆಗಾರರಿಗೆ ಮೂಲಭೂತ ಸೌಕರ್ಯಗಳುಳ್ಳ […]

ಕೋಲಾರ:ನನ್ನನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿ ಹೊರ ಹಾಕಿದರೂ ಹೆದರುವುದಿಲ್ಲ ನಾನು ಮತ್ತೆ ಮತ್ತೆ ಕೇಳುತ್ತೇನೆ ಪ್ರಧಾನಿ ಮತ್ತು ಆದಾನಿ ಬೇನಾಮಿ ಕಂಪನಿಗಳಲ್ಲಿ 20ಸಾವಿರ ಕೋಟಿ ಎಲ್ಲಿಯದು’ ಎಂದು, ಉತ್ತರ ಸಿಗುವವರೆವಿಗೂ ಹೋರಾಟ ಮುಂದುವರೆಸುತ್ತೇನೆ ಅನರ್ಹಗೊಳಿಸಿ, ಜೈಲಿನಲ್ಲಿಡಿ ಹೆದರುವುದಿಲ್ಲ’ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಆಕ್ರೋಷ ವ್ಯಕ್ತಪಡಿಸಿದರು.ನಗರದಲ್ಲಿ ನಡೆದ ಕಾಂಗ್ರೆಸ್ನ ಜೈಭಾರತ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 21 ನೇ ಶತಮಾನದಲ್ಲಿ ಕೇವಲ ಒಬ್ಬ ಮನುಷ್ಯನ ಕೈಯಲ್ಲಿ ಭಾರತದ ಮೂಲ ಸೌಕರ್ಯ ಇರುವಂತಾಗಿದೆ, ಸಾವಿರಾರು […]

ಶ್ರೀನಿವಾಸಪುರದಲ್ಲಿ ಶುಕ್ರವಾರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಂಘದ ತಾಲ್ಲೂಕು ಘಟಕದ ವತಿಯಿಂದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಸಂಘದ ಅಧ್ಯಕ್ಷ ಎಸ್.ಮುನಿವೆಂಕಟಪ್ಪ, ಗೌರವಾಧ್ಯಕ್ಷ ವಿ.ಹನುಮಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ಆಂಜಪ್ಪ, ಉಪಾಧ್ಯಕ್ಷ ಟಿ.ರಮೇಶ್ ಇದ್ದರು.

ಶ್ರೀನಿವಾಸಪುರದಲ್ಲಿ ಶುಕ್ರವಾರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ ಬಿಜೆಪಿ ಅಭ್ಯರ್ಥಿ ಗುಂಜೂರು ಶ್ರೀನಿವಾಸರೆಡ್ಡಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.ಮುಖಂಡರಾದ ಎನ್.ರಾಜೇಂದ್ರ ಪ್ರಸಾದ್, ರಾಜಶೇಖರರೆಡ್ಡಿ, ಎ.ಅಶೋಕರೆಡ್ಡಿ, ಬೈರಪ್ಪ, ವೆಂಕಟೇಗೌಡ ಇದ್ದರು.

ಶ್ರೀನಿವಾಸಪುರ: ಸಾಮಾಜಿಕ ಸಹಬಾಳ್ವೆ ಹಾಗೂ ಅಭಿವೃದ್ದಿಗೆ ಸಂವಿಧಾನ ಪೂರಕವಾಗಿದೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಉದ್ಯಾನದಲ್ಲಿ ಶುಕ್ರವಾರ ಅಂಬೇಡ್ಕರ್ ಜಯಂತಿ ಅಂಗವಾಗಿ, ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಅಂಬೇಡ್ಕರ್ ಅವರು ಮೌಲ್ಯಯುತವಾದ ಸಂವಿಧಾನ ನೀಡುವುದರ ಮೂಲಕ ಸಮಾಜದ ಎಲ್ಲ ಸಮುದಾಯಗಳ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಹೇಳಿದರು.ಸಮಾಜದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ನೆಲೆಸಬೇಕಾದರೆ ಸಂವಿಧಾನ ಪಾಲಿಸಬೇಕು. ಹಕ್ಕುಗಳು ಹಾಗೂ ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖ ಇದ್ದಂತೆ. […]

ಶ್ರೀನಿವಾಸಪುರ: ಸಂವಿಧಾನ ರಕ್ಷಣೆ ಎಲ್ಲರ ಹೊಣೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ಉದ್ಯಾನದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ, ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಹೊರತುಪಡಿಸಿ ಭಾರತ ಅಥವಾ ಜಗತ್ತಿನ ಇತಿಹಾಸ ಬರೆಯಲಾಗದು ಎಂದು ಹೇಳಿದರು.ಆರ್ಎಸ್ಎಸ್, ಮನುವಾದಿಗಳು, ಪ್ರಧಾನಿ ಮೋದಿ, ಅಮಿತ್ ಷಾ ಸಮುದ್ರದ ಅಲೆಗಳನ್ನು ಹಿಂದಿರುಗಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಹಾಗೆ ಮಾಡುವುದು ಅವರಿಂದ ಸಾಧ್ಯವಿಲ್ಲ. ಅಲೆಗಳ ರಭಸಕ್ಕೆ ಕೊಚ್ಚಿಕೊಂಡು […]

ಶ್ರೀನಿವಾಸಪುರ: ಮತದಾನ ಪ್ರಜಾಪ್ರಭುತ್ವದ ಹಬ್ಬ. ಪ್ರತಿ ಮತದಾರನೂ ತಪ್ಪದೆ ಮತದಾನ ಮಾಡಬೇಕು. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಆಶಯ ಎತ್ತಿಹಿಡಿಯಬೇಕು ಎಂದು ಪುರಸಭೆ ಕಂದಾಯಾಧಿಕಾರಿ ವಿ.ನಾಗರಾಜು ಹೇಳಿದರು.ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಪುರಸಭಾ ವಾಪ್ತಿಯ ವಿಕಲಚೇತನ ಮತದಾರರಿಗೆ ಬುಧವಾರ ಏರ್ಪಡಿಸಿದ್ದ ಮತದಾನದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತದಾನ ಒಂದು ಪವಿತ್ರವಾದ ಕರ್ತವ್ಯ. ದೇಶದ ಉತ್ತಮ ಭವಿಷ್ಯ ಮತದಾರರ ಕೈಯಲ್ಲಿದೆ. ಪ್ರತಿಯೊಬ್ಬ ಮತದಾರನೂ ಮತದಾನ ಮಾಡಿದಾಗ ಮಾತ್ರ ಜನಸತ್ತೆ ಬಲಗೊಳ್ಳುತ್ತದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಹಾಜರಿದ್ದ ಮತದಾರರಿಗೆ, ಮತದಾರರ […]