ಶ್ರೀನಿವಾಸಪುರ:ಶ್ರದ್ದೆ ಭಕ್ತಿಗಳಿಂದ ಪೂಜೆ ಮಾಡುವ ಮೂಲಕ ಮೇಲ್‍ಮರವತ್ತುರ್ ಅದಿಪರಾಶಕ್ತಿಯನ್ನು ನೋಡಲು ಮತ್ತು ಹರಿಕೆ ತೀರಿಸಲು ಹೋಗುವ ಎಲ್ಲಾ ಭಕ್ತರಿಗೆ ಅವರ ಕುಟುಂಬಗಳಿಗೆ ಸುಖ, ಶಾಂತಿ, ಸಂತೋಷ ನೆಮ್ಮದಿ ಜೊತೆಗೆ ಅರ್ಥಿಕವಾಗಿ ಅಭಿವೃದ್ದಿಯಾಗಲು ಓಂ ಶಕ್ತಿ ತಾಯಿ ಶಕ್ತಿ ನೀಡಲಿ ಎಂದು ಸಮಾಜ ಸೇವಕ ಹಾಗೂ ಕಾಂಗ್ರೇಸ್ ಮುಖಂಡ ಜಿ.ಕೆ. ಶ್ರೀರಾಮರೆಡ್ಡಿ ತಿಳಿಸಿದರು.ತಾಲ್ಲೂಕಿನ ಕಸಬಾ ಹೋಬಳಿ ಕೇತಗಾನಹಳ್ಳಿ ಗ್ರಾಮದಲ್ಲಿ ಓಂ ಶಕ್ತಿ ದೇವರ ದರ್ಶನ ಪಡೆಯಲು ಬಸ್ ವ್ಯವಸ್ಥೆ ಮಾಡಿ ಮಾತನಾಡಿದ ಶ್ರೀರಾಮರೆಡ್ಡಿ ಇತ್ತೀಚಿನ ದಿನಗಳಲ್ಲಿ ಅನೇಕ ಗ್ರಾಮಗಳಿಂದ […]

Read More

ಕೋಲಾರ; ಜ.17: ಕಳಪೆ ಕಲ್ಲಂಗಡಿ ಬಿತ್ತನೆಬೀಜ ವಿತರಣೆ ಮಾಡಿರುವ ಯುನಿಜೆನ್ ಸೀಡ್ಸ್ ಕಂಪನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ನಷ್ಟವಾಗಿರುವ ರೈತನ ಪ್ರತಿ ಎಕರೆಗೆ 3 ಲಕ್ಷರೂ ಪರಿಹಾರ ನೀಡಬೇಕೆಂದು ಜಿಲ್ಲಾಡಳಿತವನ್ನು ನೊಂದ ರೈತ ಪರವಾಗಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಒತ್ತಾಯಿಸಿದರು.ಕೋಲಾರ ತಾಲೂಕು ಹೋಳೂರು ಹೋಬಳಿ ಕಮ್ಮಸಂದ್ರ ಗ್ರಾಮದ 3 ಎಕರೆ ಜಮೀನಿನಲ್ಲಿ ಬೆಳೆದಿರುವ ಯುನಿಜೆನ್ ಕಂಪನಿಯ ನರ್ಗೀಸ್ ತಳಿಯ ಕಲ್ಲಂಗಡಿ ತೋಟಕ್ಕೆ ಭೇಟಿ ನೀಡಿ ಮಾತನಾಡಿದ ಅವರು, 2 ವರ್ಷ ಕೊರೊನಾ, ಮತ್ತೆರೆಡು […]

Read More

ಕೋಲಾರ:- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‍ನ ಕೆಲವು ಸ್ಥಳೀಯ ನಾಯಕರು ಕೋಲಾರಕ್ಕೆ ಕರೆತಂದು ಹರಕೆಯ ಕುರಿಯಾಗಿ ಮಾಡಲು ಹೊರಟಿದ್ದಾರೆ, ಕೋಲಾರದ ಜನ ಬುದ್ದಿವಂತರು ಅವರಿಗೆ ತಕ್ಕಪಾಠ ಕಲಿಸಿ ಕಳುಹಿಸಿಕೊಡಲಿದ್ದಾರೆ ಎಂದು ಹಾಸನದ ಸಂಸದ ಪ್ರಜ್ವಲ್ ರೇವಣ್ಣ ವ್ಯಂಗ್ಯವಾಡಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಲಾರಕ್ಕೆ ಬಂದು ಸ್ಪರ್ಧೆ ಮಾಡುವುದು ಅವರ ವೈಯಕ್ತಿಕ ಹಾಗೂ ಅವರ ಪಕ್ಷದ ವಿಚಾರ. ಆದರೆ ಅವರ ಪಕ್ಷದ ಕೆಲವು ನಾಯಕರೇ ಕೋಲಾರಕ್ಕೆ ಕರೆತಂದು ಹರಕೆಯ ಕುರಿ ಮಾಡುತ್ತಿರುವುದು ವಾಸ್ತವದ ಸಂಗತಿ ಎಂದರು.ಮಾಜಿ […]

Read More

ಕೋಲಾರ:- ಕಾರಾಗೃಹ ವಾಸವನ್ನು ಮನಃಪರಿವರ್ತನೆಗೆ ಸದ್ಬಳಕೆ ಮಾಡಿಕೊಂಡು ಜೀವನದ ಕೆಟ್ಟ ಘಳಿಗೆಯಲ್ಲಿ ಮಾಡಿರುವ ತಪ್ಪುಗಳು ಮರುಕಳಿಸದಂತೆ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದಲಾಗಬೇಕೆಂದು ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್ ಹೇಳಿದರು.ನಗರದ ಉಪಕಾರಾಗೃಹದಲ್ಲಿ ಭಾರತ ಸೇವಾದಳವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಮನಃಪರಿವರ್ತನ ಕಾರ್ಯಾಗಾರದ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಿದ್ದರು.ಜೀವನದ ಕೆಟ್ಟ ಘಳಿಗೆಯಲ್ಲಿ ಮಾಡಿರುವ ತಪ್ಪುಗಳಿಂದಾಗಿ ಕಾರಾಗೃಹವಾಸ ಅನುಭವಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ, ಆದರೆ, ಕಾರಾಗೃಹವಾಸವನ್ನು ಶಿಕ್ಷೆ ಎಂದು ಭಾವಿಸದೆ ತಮ್ಮದೇ ಮನಸ್ಸಿನೊಂದಿಗೆ ಗೆಳೆತನ ಬಯಲು ಸಿಕ್ಕ ಅಪೂರ್ವ ಅವಕಾಶ ಎಂದು ಭಾವಿಸಿ ಧ್ಯಾನ, ಯೋಗ, […]

Read More

ಶ್ರೀನಿವಾಸಪುರ: ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಆದರ್ಶ ಪಾಲಿಸಬೇಕು ಎಂದು ಜಿಲ್ಲಾ ವಿಶ್ವ ಹಿಂದೂ ಪರಿಷತ್ತಿನ ಉಪಾಧ್ಯಕ್ಷ ಎಂ.ವೇಮಣ್ಣ ಹೇಳಿದರು.ಪಟ್ಟಣದ ಸರ್ಕಾರಿ ಕರ್ನಾಟಕ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬಯಲು ರಂಗಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ರಾಷ್ಟ್ರೀಯ ಯುವ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿ ಯುವ ಜನರು ದೇಶದ ನಿಜವಾದ ಶಕ್ತಿ. ತಮ್ಮ ಬುದ್ಧಿವಂತಿಕೆ ಮತ್ತು ಸಾಮಥ್ರ್ಯ ದೇಶದ ಅಭಿವೃದ್ಧಿಗೆ ನೆರವಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.ಶಾಲಾ ಮುಖ್ಯ ಶಿಕ್ಷಕ ಎಂ.ಬೈರೇಗೌಡ ಮಾತನಾಡಿ, ಮನುಷ್ಯ ಎಷ್ಟು ಕಾಲ ಜೀವಿಸುತ್ತಾನೆ […]

Read More

ಕೋಲಾರ,ಜ.10: ನಾಮಪತ್ರ ಸಲ್ಲಿಸಿ ನೀವು ಹೋಗಿ ನಿಮ್ಮನ್ನು ನಾವು 1 ಲಕ್ಷ ಮತಗಳಿಂದ ಗೆಲ್ಲಿಸುವುದಾಗಿ ಎಂಎಲ್ಸಿ ನಜೀರ್ ಅಹಮದ್ ಸಿದ್ದರಾಮಯ್ಯರಿಗೆ ಭರವಸೆ ನೀಡಿದ್ದಾರೆ. ಸಿದ್ದರಾಮಯ್ಯ ಬಂದು ಹೋದರೆ ಸ್ಥಳೀಯರ ಸಮಸ್ಯೆಗಳನ್ನು ಆಲಿಸುವವರು ಯಾರು ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಯಾರಬ್ ಪ್ರಶ್ನಿಸಿದರು.ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ನಜೀರ್ ಅಹಮದ್ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ಪ್ರತಿಕ್ರಿಯೆ ನೀಡಿದ ಅವರು, ನಾಮಪತ್ರ ಹಾಕಿ ಹೊರಟರೆ, ಅಭ್ಯರ್ಥಿಯಾದವರು ಕ್ಷೇತ್ರದ ಜನರ ಬಳಿಗೆ ಹೋಗುವುದು ಬೇಡವೇ? ಇಂತಹ ನಾಯಕರುಗಳಿಂದಲೇ ಅಲ್ಪಸಂಖ್ಯಾತರಿಗೆ […]

Read More

ಕೋಲಾರದ : (ಜನವರಿ9) ಕೋಲಾರದ ಟಿ. ಚೆನ್ನಯ್ಯರಂಗಮಂದಿರದಲ್ಲಿ ನಡೆದ ಬೆಂಗಳೂರು ಮಾಂಟೆಸರಿ ಶಾಲೆಯ (ಬಿಎಂಎಸ್) ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಹಿರಿಯ ಶಿಕ್ಷಕ-ಶಿಕ್ಷಕಿಯರಾದ ವೆಂಕಟೇಶ್, ಪ್ರೇಮಾ, ಶಾಹಿನ್ ಮತ್ತು ಮಮತಾಕುಂದಾಪುರಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ದೇವರಾಜ್, ಡಿಡಿಪಿಐಕೃಷ್ಣಮೂರ್ತಿ, ಭಾರತ ಸ್ಕೌಟ್ ಮತ್ತುಗೈಡ್ಸ್‍ಕಮಿಷನರ್ ಕೆ.ವಿ. ಶಂಕರಪ್ಪ, ಎಸ್‍ಎಸ್‍ಎಲ್‍ಸಿ ನೋಡಲ್‍ಅಧಿಕಾರಿ ಸಿ.ಆರ್. ಅಶೋಕ್, ಮಾಜಿಕೌನ್ಸಿಲರ್ ನದೀಂ ಹೈದರ್, ಸೈಯದ್ ಶಾಲಿ, ಬಿಎಂಎಸ್ ಕಾರ್ಯದರ್ಶಿ ಅ.ಮು. ಲಕ್ಷ್ಮೀನಾರಾಯಣ, ಮುಖ್ಯ ಶಿಕ್ಷಕ ಶ್ರೀನಿವಾಸ, ಮುಖ್ಯ ಶಿಕ್ಷಕಿ ರತ್ನಾಕುಮಾರಿ, ಜಲಜಾ ಮತ್ತು […]

Read More

ಶ್ರೀನಿವಾಸಪುರ; ಜ.9: ಅವರೆಕಾಯಿ ವಹಿವಾಟನ್ನು ಪಟ್ಟಣದಿಂದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರಿಸಿ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕೆಂದು ಜ.12ರಂದು ಅವರೇಕಾಯಿ ಸಮೇತ ತಾಲೂಕು ಕಚೇರಿ ಮುತ್ತಿಗೆ ಹಾಕಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ರೈತಸಂಘದ ಸಭೆಯಲ್ಲಿ ಮಾತನಾಡಿದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಕೃಷಿ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಲು ಪರವಾನಗಿ ಪಡೆದ ಮಂಡಿ ಮಾಲೀಕರು ನಿಯಮಗಳನ್ನು ಉಲ್ಲಂಘನೆ ಮಾಡಿ ಪ್ರತಿ ವರ್ಷ ಪಟ್ಟಣದಲ್ಲಿ ಅವರೇಕಾಯಿ ವಹಿವಾಟನ್ನು ನಡೆಸುವ ಮುಖಾಂತರ ವಾಹನ ಸಂಚಾರಕ್ಕೆ ಅಡಚಣೆ ಹಾಗೂ […]

Read More

ಶ್ರೀನಿವಾಸಪುರ: ಬಡ್ಡಿರಹಿತ ಸಾಲ ವಿತರಣೆ ಮಾಡುವಲ್ಲಿ ಶಾಸಕ ಕೆ.ಅರ್.ರಮೇಶ್ ಕುಮಾರ್ ಮತದಾರರ ದಾರಿ ತಪ್ಪಿಸುತ್ತಿದ್ದಾರೆ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಆಪಾದಿಸಿದರು.ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ನಬಾರ್ಡ್ ಮೂಲಕ ಡಿಸಿಸಿ ಬ್ಯಾಕ್‍ಗೆ ನೀಡಿದ ಹಣದಲ್ಲಿ ಸ್ತ್ರೀಶಕ್ತಿ ಸಂಘದ ಸದಸ್ಯರಿಗೆ ಸಾಲ ನೀಡಲಾಗುತ್ತಿದ್ದೆ. ಸಾಲ ನೀಡುವುದಕ್ಕೆ ನನ್ನ ಆಕ್ಷೇಪವಿಲ್ಲ. ಆದರೆ ಶಾಸಕರು ತಮ್ಮ ಜೇಬಿನಿಂದ ಹಣ ತೆಗೆದು ಸಾಲ ನೀಡಿದಂತೆ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು […]

Read More