ಶ್ರೀನಿವಾಸಪುರ 1 : ನಾನು ಶಾಸಕನಾಗಿದ್ದ ಸಮಯದಲ್ಲೇ ಆಗಲಿ, ನಂತರ ದಿನಗಳಲ್ಲಿಯೇ ಆಗಲಿ ಎಲ್ಲಾ ಸಮುದಾಯದವರಿಗೂ ಕಷ್ಟ , ಸುಖಗಳಿಗೆ ಸ್ಪಂದಿಸಿ ಜನರೊಂದಿಗೆ ಉತ್ತಮ ಭಾಂದವ್ಯವನ್ನು ಹೊಂದಿದ್ದೇನೆ ಎಂದು ಜೆಡಿಎಸ್ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ತಾಲೂಕಿನ ರಾಯಲ್ಪಾಡು ಹೋಬಳಿಯ ಗುಡಿಪಲ್ಲಿ ಗ್ರಾಮದಲ್ಲಿ ಮಂಗಳವಾರ ನಡೆದ ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆ ಹಾಗೂ ಕಾಂಗ್ರೆಸ್ ಪಕ್ಷದಿಂದ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಪಕ್ಷವು ಪಂಚರತ್ನ ಯೋಜನೆ ಮುಖಾಂತರ ಧರ್ಮಾತೀತ, ಜ್ಯಾತ್ಯಾತೀತವಾಗಿ ಶಿಕ್ಷಣ, ಉದ್ಯೋಗ, ಕೃಷಿ ಆರೋಗ್ಯ […]
ಶ್ರೀನಿವಾಸಪುರ ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದ ವೈ.ವಿ.ನರಸಿಂಹಮೂರ್ತಿ ಅವರನ್ನು, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಶ್ರೀನಿವಾಸಪುರದ ಪುರಸಭಾ ಕಚೇರಿಯಲ್ಲಿ ಮಂಗಳವಾರ ಪುರಸಭಾ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ನೃತೃತ್ವದಲ್ಲಿ ಭಗವಾನ್ ಮಹಾವೀರ ಜನಯಂತಿ ಆಚರಿಸಲಾಯಿತು.
ಶ್ರೀನಿವಾಸಪುರ: ಮತದಾರರು ತಪ್ಪದೆ ಮತದಾನ ಮಾಡಬೇಕು. ಅತ್ಯಮೂಲ್ಯವಾದ ಮತ ವ್ಯರ್ಥವಾಗಲು ಬಿಡಬಾರದು ಎಂದು ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಹೇಳಿದರು.ಪಟ್ಟಣದಲ್ಲಿ ಪುರಸಭೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಮತದಾರರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾಗೃತ ಮತದಾರರಿಂದ ಮಾತ್ರ ಉತ್ತಮ ಅಭ್ಯರ್ಥಿ ಆಯ್ಕೆ ಸಾಧ್ಯವಾಗುತ್ತದೆ ಎಂದು ಹೇಳಿದರು.ಚುನಾವಣಾ ಆಯೋಗ ಮತದಾನಕ್ಕೆ ಅಗತ್ಯವಾದ ಎಲ್ಲ ಸಿದ್ಧತೆ ಮಾಡುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಮತದಾರನೂ ಮತ ಚಲಾಯಿಸಿದಾಗ ಮಾತ್ರ ವ್ಯವಸ್ಥೆ ಘನತೆ ಹೆಚ್ಚುತ್ತದೆ. ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಈ ಹಬ್ಬದಲ್ಲಿ ಮತದಾರರು […]
ಕೋಲಾರ:- ವಿಶ್ವಕ್ಕೆ ಅಹಿಂಸೆ ಹಾಗೂ ಶಾಂತಿಯ ಸಂದೇಶ ಸಾರಿದ ಭಗವಾನ್ ಮಹಾವೀರರ ಜಯಂತಿಗೂ ಚುನಾವಣಾ ನೀತಿ ಸಂಹಿತೆಯ ಬಿಸಿ ತಟ್ಟಿತ್ತಾದರೂ, ಸಮುದಾಯದ ಜನತೆ ಅನುಮತಿ ಪಡೆದುಕೊಂಡು ಸಂಪ್ರದಾಯಬದ್ದವಾಗಿ ಮಂಗಳವಾರ ಶ್ರದ್ಧಾ-ಭಕ್ತಿಯಿಂದ ಜಯಂತಿ ಆಚರಿಸಿದರು.ಪ್ರತಿವರ್ಷದ ಸಂಪ್ರದಾಯದಂತೆ ಜೈನ ಬಂಧುಗಳು ಇಡೀ ಮೆರವಣಿಗೆಯ ಉಸ್ತುವಾರಿಯನ್ನು ವಹಿಸಿದ್ದು, ಕೇಸರಿ ಪೇಟ ತೊಟ್ಟ ನೂರಾರು ಜೈನ ಬಂಧುಗಳು, ಮಹಿಳೆಯರೊಂದಿಗೆ ವೀರ ಮತ್ತು ರಾಜ ಎರಡು ಕುದುರೆಗಳೊಂದಿಗೆ ಮಹಾವೀರರ ಬೆಳ್ಳಿರಥದ ಭವ್ಯ ಮೆರವಣಿಗೆಗೆ ಜಿಲ್ಲಾ ಜೈನ ಸಂಘದ ಅಧ್ಯಕ್ಷ ಜಯಂತಿಲಾಲ್ ಚಾಲನೆ ನೀಡಿದರು.ಸಮಾಜದಲ್ಲಿ ಶಾಶ್ವತ […]
ಕೋಲಾರ / ಏಪ್ರಿಲ್ 4 : ಕೋಲಾರ ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳ ಫಲಾನುಭವಿಗಳಿಗೆ ನೀಡುತ್ತಿರುವ ಮೊಟ್ಟೆಯ ಧರ ಇಲಾಖೆಯಿಂದ ರೂ.6 ನೀಡುತ್ತಿದ್ದು, ಸದರಿ ಧರವನ್ನು 7.50ಕ್ಕೆ ಹೆಚ್ಚಿಸಲು ಕೋರಿ ಪ್ರಜಾ ಸೇವಾ ಸಮಿತಿ ಸಂಯೋಜಿತ ಕರ್ನಾಟಕ ರಾಜ್ಯ ಅಂಗವನಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಕ್ಷೇಮಾಭಿವೃದ್ಧಿ ಸಮಿತಿಯು ಕೋಲಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ, ಗರ್ಭಿಣಿ, ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳ ಮೂಲಕ ಮೊಟ್ಟೆ, ಫಲಾನುಭವಿಗಳಾದ […]
ಶ್ರೀನಿವಾಸಪುರ ; ಪಟ್ಟಣದ ಎಂಜಿ ರಸ್ತೆಯಲ್ಲಿ ಎಎಪಿ ಪಕ್ಷದವತಿಯಿಂದ ಸೋಮವಾರ ಪಕ್ಷದ ಅಭ್ಯರ್ಥಿ ಡಾ.ವೈ.ವೆ.ವೆಂಕಟಾಚಲ ಮನೆ ಮನೆಗೆ ಬೇಟಿ ನೀಡಿ ಪಕ್ಷವು ರಾಜ್ಯದಲ್ಲ ಹಮ್ಮಿಕೊಳ್ಳಲಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತದಾರರಿಗೆ ವಿವರಿಸುತ್ತಾ ಮತಯಾಚನೆ ನಡೆಸಿದರು. ಕಾರ್ಯಕರ್ತರಾದ ಸತ್ಯಣ್ಣ, ನವೀನ್, ರಾಮರೆಡ್ಡಿ, ಗಂಗಪ್ಪ, ನಾಗರಾಜ್, ಮಮತ, ಸಂಜೀವಪ್ಪ ಇದ್ದರು.
ರಾಯಲ್ಪಾಡು ಪೊಲೀಸ್ ಠಾಣಾ ವ್ಯಾಪ್ತಿಯ ಗೌಡತಾತಗಡ್ಡ ಗ್ರಾಮದಲ್ಲಿ ಶನಿವಾರ ಸಂಜೆ ಕ್ಷುಲಕ್ಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ .ರಾಜ್ಯದಲ್ಲಿಯೇ ಅತಿ ಹೆಚ್ಚು ಸೂಕ್ಷ್ಮ ಮತ ಗಟ್ಟೆಗಳನ್ನು ಹೊಂದಿರುವ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರವು ಚುನಾವಣೆಯು ಹತ್ತಿರ ಬರುದಿದ್ದಂತೆ ಶಾಸಕ ಕೆ.ಆರ್.ರಮೇಶ್ಕುಮಾರ್ ಹಾಗೂ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಬೆಂಬಲಿಗರ ಮಧ್ಯೆ ಹೊಡಿ-ಬಡಿ ರಾಜಕೀಯ ಶುರುವಾಗಿದೆ.ಕ್ಷುಲಕ ವಿಚಾರಕ್ಕೆ ಮಾತಿಗೆ ಮಾತು ಬೆಳೆದು ಗುಂಪು ಕಟ್ಟಿಕೊಂಡು ಕಾಂಗ್ರೆಸ್ ಮುಖಂಡರಿಂದ ಹಲ್ಲೆ. ಗೌಡತಾತಗಡ್ಡ ಗ್ರಾಮದ ತಾ.ಪಂ. ಮಾಜಿ ಉಪಾಧ್ಯಕ್ಷೆ ಬಾಲಾವತಿ ಹಾಗು ಕುಟುಂಬಸ್ಥರು […]
ಶ್ರೀನಿವಾಸಪುರ 1 : 9 ವರ್ಷದಿಂದಲೂ ನರೇಂದ್ರ ಮೋದಿ ಸರ್ಕಾರವು ಸುಳ್ಳು ಭರವಸೆಗಳಿಂದ ದೇಶದ ಜನರನ್ನು ಮೋಸ ಮಾಡುತ್ತಿದ್ದಾರೆ ಶಾಸಕ ಕೆ.ಆರ್.ರಮೇಶ್ಕುಮಾರ್ ಹೇಳಿದರು .ಪಟ್ಟಣದ ಮಿಲನ್ ಸಾರ್ ಮ್ಯಾಂಗೋ ಮಂಡಿಯಲ್ಲಿ ಭಾನುವಾರ ಅಲ್ಪಸಂಖ್ಯಾತ ಸಮುದಾಯದ ಸಮಾವೇಶ ಮತ್ತು ಕಾರ್ಯಕರ್ತರ ಸಭೆಯನ್ನು ಉದ್ಗಾಟಿಸಿ ಮಾತನಾಡಿದರು.ರಾಹುಲ್ಗಾಂದಿರವರು ಕಳೆದ ನಾಲ್ಕು ವರ್ಷಗಳ ಹಿಂದೆ ಪಕ್ಷದ ಸಮಾವೇಶದಲ್ಲಿ ಮಾತನಾಡಿ ಲಲಿತ್ ಮೋದಿ, ವಿಜಯಮಲ್ಯ ರಂತಹ ಅನೇಕರು ಬ್ಯಾಂಕ್ಗಳಲ್ಲಿ ಸಾಲವನ್ನು ಪಡೆದು ಸಾಲವನ್ನು ಹಿಂತಿರಗಿಸದೆ ದೇಶ ಬಿಟ್ಟು ಹೋಗಿದ್ದು, ಮೋದಿ ಸರ್ಕಾರವು ದೇಶದಲ್ಲಿ ಹಣದುಬ್ಬರ […]