ನಾನು ಪ್ರಸಿದ್ಧಿ, ಹೆಣ್ಣು ಮಕ್ಕಳಿಗೆ ತಂದೆ ಎಂದರೆ ಬಹಳ ಮುದ್ದು ಬಡ ರಾಜನ ಶ್ರೀಮಂತ ರಾಜಕುಮಾರಿ ನಾನು ಅಪ್ಪನ ಪ್ರೀತಿಯ ಸ್ಫೂರ್ತಿ,ಧೈರ್ಯ ತುಂಬುವ ಮಾತುಗಳಿದ್ದರೆ ಸಾಕು ಆಕಾಶವನ್ನೇ ಮುಟ್ಟುವಂತ ಧೈರ್ಯದ ನನ್ನ ಅಪ್ಪನ ಮಗಳು ನಾನು. ಅಪ್ಪನ ಅಕ್ಕರೆಯ ಒಂದು ನುಡಿ ಸಾಕು ಎಲ್ಲ ಹೆಣ್ಣು ಮಕ್ಕಳಿಗೂ ಸಾಧನೆಯ ದಾರಿಯಲ್ಲಿ ನಡೆದು ಹೋಗಲು ಆಸೆಗಳು ಅದುಮಿಟ್ಟುಕೊಂಡು ಯಾವುದೇ ನಿರೀಕ್ಷೆಯಿಲ್ಲದೆ ನಮ್ಮ ಕನಸು ನನಸು ಮಾಡುವ ಒಂದು ತ್ಯಾಗದ ಮೂರ್ತಿ ಅಪ್ಪ, ಅಂತಹ ತ್ಯಾಗದ ಮೂರ್ತಿಯ ಅಪ್ಪನ ಅಕ್ಕರೆಯ […]

Read More

ಜನನುಡಿ ಕಥಾ ವಿಭಾಗ ‘ನನ್ನ ಬರಹದ ಕಥೆ-ವ್ಯಥೆ’       ಲೇಖಕಿ: ಕೆರೊಲ್ ಗೊನ್ಸಾಲ್ವಿಸ್ ಎಲ್ಲರಿಗೂ ಒಂದಿಲ್ಲೊಂದು ಹವ್ಯಾಸ ಇದ್ದೇ ಇರುತ್ತದೆ, ಇದಕ್ಕೆ ನಾನೂ ಹೊರತಲ್ಲ. ಓದುವುದು ನನ್ನ ನೆಚ್ಚಿನ ಹವ್ಯಾಸ; ಅದು ಕಥೆ, ಕವನ, ವಾರ್ತೆ, ಲೇಖನ, ಹೀಗೆ ಏನೇ ಆಗಿರಬಹುದು ಒಟ್ಟಿನಲ್ಲಿ, ಓದಲಿಕ್ಕಿದ್ದರೆ ಸಾಕು.ಯಾವತ್ತೂ ಬೇರೆಯವರು ಬರೆದಿದ್ದನ್ನು ಓದುತ್ತಿದ್ದ ನನಗೆ ಒಂದು ದಿನ, ನಾನೂ ಯಾಕೆ ಬರೆಯಲು ಪ್ರಯತ್ನಿಸಬಾರದು ಎಂಬ ಆಲೋಚನೆ ಬಂತು. ಆಲೋಚನೆ ಬಂದಿದ್ದೇ ತಡ, ಇನ್ನು ಕಾರ್ಯರೂಪಕ್ಕೆ ತರುವುದೇ ಎಂದು ಬರೆಯಲು ಕುಳಿತರೆ, ‘ಏನು […]

Read More

ಸುರಿವ ಬೆಳಕಿಗೆ ಗುಡಿಸಲು ಅರಮನೆ ಬೇಧವಿಲ್ಲ ಬೆಳಗುವುದರ ಹೊರತು   ಸುರಿವ ಬೆಳಕಿಗೆ ಗುಡಿಸಲು ಅರಮನೆ ಬೇಧವಿಲ್ಲ ಬೆಳಗುವುದರ ಹೊರತು      ಬಿರಿವ ಹೂವಿಗೆ ದೇವಳ ಸ್ಮಶಾನ ಬೇರೆಯಲ್ಲ ಅರಳುವುದರ ಹೊರತು ಹಿಟ್ಟಿಗೆ ಹೊಟ್ಟೆ ಸೇರಿ ಉಪವಾಸ ನೀಗಿಸುವುದಷ್ಟೇ ಗೊತ್ತು ಬಡಿವ ರೊಟ್ಟಿಗೆ ಚಿನ್ನ ತಾಮ್ರದ ತಟ್ಟೆಯ ಹಂಗಿಲ್ಲ ಹಸಿವು ನೀಗಿಸುವುದರ ಹೊರತು ಬಿರುಕು ಚಪ್ಪರದ ಕಿಂಡಿಯಿಂದ ನಗು ನರಳಿಕೆಗೂ ದಾರಿಯಿದೆ ಗಟ್ಟಿ ಗೋಡೆಗೆ ಕಿವಿಗಳಿಲ್ಲ ಹುಟ್ಟಿಗೂ ಸಾವಿಗೂ ಮೌನವಾಗುವುದರ ಹೊರತು ಒಡಲ ಬೆಂಕಿಗೆ ಸುರಿದುಕೊಂಡ […]

Read More

ಕವನ:  ಸಾವನ್ ಕೆ ಸಿಂಧನೂರು ಕಳೆದ ಯಾರನ್ನೋ ಹುಡುಕುವ ಬರೀ ತಿರುಗಾಟಕ್ಕೆ ಕೊನೆ ಇಲ್ಲ ಜಾಣ ********************************************* ಕಳೆದ ಯಾರನ್ನೋ ಹುಡುಕುವ ಬರೀ ತಿರುಗಾಟಕ್ಕೆ ಕೊನೆ ಇಲ್ಲ ಜಾಣ ಕತ್ತಲ ಗರ್ಭದಲ್ಲೂ ಮಿಂಚಿನ ಸೆಳಕಿದೆ ಕಣ್ಣ ನೋಟಕ್ಕೆ ಕೊನೆ ಇಲ್ಲ ಜಾಣ. ಬೆನ್ನುಹುರಿಯ ಹಳೆ ಸರಪಳಿಗೆ ಬಂಧನದ ಹೊಸ ವಜಾ ಸಿಕ್ಕುತ್ತಿಲ್ಲ ಹೊಸೆವ ಮಜಬೂತ್ ಹೆಜ್ಜೆಗಳೇ ಮೂಡದ ಜಾಗಕ್ಕೆ ಕೊನೆ ಇಲ್ಲ ಜಾಣ. ಇರುವಷ್ಟು ದಿನ ಕಾಲನ ರಸ್ತಾ ನೋಡುವ ಬದಲಿಗೆ ಇನ್ನೇನಿದೆ ಇಲ್ಲಿ ದುತ್ತನೆ ಎದುರಾಗಿ ಬೆತ್ತಲಾಗುವ […]

Read More

ಕವಿತೆ :ಸಾವನ್ ಕೆ ಸಿಂಧನೂರು  ಕನಸುಗಳಿಗೆ ಬಣ್ಣಗಳೇ ಇಲ್ಲ  ಯಾರಿಗೋ ಇಲ್ಲಿ ಅತಿ ಜರೂರಿ ಕೆಲಸವಿದೆ ಮತ್ತೊಬ್ಬ ಜಾಗ ಖಾಲಿ ಮಾಡಬೇಕಿದೆ. ಥೇಟ್ ದ್ರವ್ಯವೊಂದು ಸ್ಥಳ ಅಕ್ರಮಿಸಿದಂತೆ.. ಭೂಮಿಗೆ ನಾನೇ ಬೇಲಿ ಹಾಕಬಹುದಿತ್ತು  ಮೊದಲಿಗೆ ನಾನೇ ಹುಟ್ಟಿದ್ದರೆ ಎಂದುಕೊಳ್ಳುತ್ತಲೇ ಯುದ್ಧಕ್ಕೆ ಹೊರಟವರ ಬೆನ್ನ ಹಿಂದಿನ   ಸ್ಮಶಾನ ನೆನಪಾಗುತ್ತದೆ. ಒಡೆದ ಬಳೆಗಳ ಚೂರು ಕಣ್ಣಿಗೆ ತಾಕಿ  ನನ್ನ ಕತ್ತಿ, ಗುರಾಣಿ ತುಕ್ಕು ಹಿಡಿದಿವೆ. ಗಾಂಧಿ ನೋಟಿನ ಹಿಂದೆ ಬಿದ್ದ ನನಗೆ  ಅದಕ್ಕಂಟಿದ ಬೆವರು, ರಕ್ತ, ವೀರ್ಯ ಮಿಶ್ರಣದ  ಹೊಚ್ಚ […]

Read More