ಬೀಜಾಡಿ:ರೋಟರಿ ಸಮುದಾಯದಳ ಮೂಲಕ ಗ್ರಾಮೀಣ ಭಾಗದಲ್ಲಿ ಸಮಾಜಸೇವಾ ಚಟುವಟಿಕೆ ಮಾಡಬಹುದಾಗಿದ್ದು, ಇದರಿಂದ ಸಮಾಜದ ಅಶಕ್ತರಿಗೆ ಸಹಾಯವಾಗಲಿದೆ ಎಂದು ರೋಟರಿ ಕ್ಲಬ್ ಕುಂದಾಪುರ ರಿವರ್ ಸೈಡ್ ಅಧ್ಯಕ್ಷ ಜಗನ್ನಾಥ ಮೊಗೇರ ಹೇಳಿದರು.ಅವರು ಬೀಜಾಡಿ-ಗೋಪಾಡಿ ರೋಟರಿ ಸಮುದಾಯದಳ ನೂತನ ಪದಾಧಿಕಾರಿಗಳಿಗೆ ಪದಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ್ ಹೆಬ್ಬಾರ್ ಶುಭ ಹಾರೈಸಿದರು. ರೋಟರಿ ಸಮುದಾಯ ದಳದ ಹಿಂದಿನ ಅಧ್ಯಕ್ಷ ಬಿ.ಜಿ.ನಾಗರಾಜ್ ಅನಿಸಿಕೆ ಹಂಚಿಕೊಂಡರು. ನೂತನ ಅಧ್ಯಕ್ಷ ಪ್ರದೀಪ್ ದೇವಾಡಿಗ,ಕಾರ್ಯದರ್ಶಿ […]

ಬೆಂಗಳೂರು, ಜು.೨೮: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದ್ದು, ಇನ್ನೂ ಎರಡು ದಿನಗಳ ಕಾಲ ಭಾರಿಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ 14 ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ವರುಣಾರ್ಭಟ ಮುಂದುವರೆಯಲಿದೆ. ಕರಾವಳಿ ಜಿಲ್ಲೆಗಳು, ಉತ್ತರ ಒಳನಾಡಿನ ಹಲವೆಡೆಗಳಲ್ಲಿ ಭಾರಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ,ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಬೆಳಗಾವಿ, ಬೀದರ್, ಕಲಬುರ್ಗಿ,ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಮಳೆಯಾಗಲಿದೆ ಎಂದು ತಿಳಿಸಲಾಗಿದೆ. ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣ ಇರಲಿದ್ದು, ಅಲ್ಲಲ್ಲಿ […]

ಬೆಂಗಳೂರು: ಕನಕಪುರ ರಸ್ತೆಯ ಪಕ್ಕದ ನೈಸ್ ರಸ್ತೆಯ ಬಳಿಯ ಪೊದೆಯಲ್ಲಿ ಸೂಟ್ ಕೇಸ್ ಹಾಗೂ ಎರಡು ರಟ್ಟಿನ ಕಾರ್ಟುನ್ಗಳಲ್ಲಿ ಎರಡು ಸಾವಿರ ಮುಖಬೆಲೆಯ ಜೆರಾಕ್ಸ್ ನೋಟುಗಳು ಪತ್ತೆಯಾಗಿವೆ. ಬಾಕ್ಸ್ ಮತ್ತು ಸೂಟ್ ಕೇಸ್ ಬಿಚ್ಚಿ ನೋಡಿದಾಗ ₹2000 ಮುಖಬೆಲೆಯ ಜೆರಾಕ್ಸ್ ಮಾಡಿದ ನೋಟುಗಳು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ₹2000 ಮುಖಬೆಲೆಯ ಒಟ್ಟು ಮೊತ್ತ ₹10 ಕೋಟಿ ಯಾಗಿದ್ದು, ಅಸಲಿ ನೋಟುಗಳ ಜೊತೆ ಸೇರ್ಪಡೆ ಮಾಡಿ ಚಲಾವಣೆ ಮಾಡುವ ಜಾಲದ ಕೈವಾಡ ಇದಾಗಿದೆ ಎಂದು ಅನುಮಾನಿಸಲಾಗಿದೆ. ₹2000 […]

ಕೋಲಾರ,ಜು.26: ಮಹಿಳೆಯೋರ್ವರು ಆಟೋದಲ್ಲಿ ಮರೆತು ಬಿಟ್ಟು ಹೋಗಿದ್ದ ಹಣ ಮತ್ತು ಬೆಲೆ ಬಾಳುವ ವಸ್ತುಗಳಿದ್ದ ಬ್ಯಾಗನ್ನು ಕೇವಲ 1 ತಾಸಿನಲ್ಲೇ ಆಟೋ ಪತ್ತೆ ಹಚ್ಚಿ, ಬ್ಯಾಗನ್ನು ಮರಳಿ ವಾರಸುದಾರರಿಗೆ ನೀಡುವಲ್ಲಿ ನಗರದ ಗಲ್ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.ಬೆಂಗಳೂರಿನ ಖಾಸಗಿ ಆಸ್ಪತ್ರೆ ಉದ್ಯೋಗಿ ಭಾರತಿ (ಹೆಸರು ಬದಲಿಸಲಾಗಿದೆ) ಎಂಬ ಮಹಿಳೆ 23 ರಂದು ತನ್ನ ತಾಯಿಯನ್ನು ನಂಗಲಿ ಗ್ರಾಮದ ಮನೆಯಲ್ಲಿ ಬಿಟ್ಟು ಮರಳಿ ಬಸ್ನಲ್ಲಿ ನಗರದ ಹಳೇ ಬಸ್ ನಿಲ್ದಾಣದಲ್ಲಿ ಮಕ್ಕಳ ಸಮೇತ ಇಳಿದುಕೊಂಡಿದ್ದಾರೆ. ನಂತರ ಇಲ್ಲಿ ಆಟೋ ಹತ್ತಿದ […]
ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘ ನೀಡುವ 2020-2023 ಸಾಲಿನ ಉಮಾದೇವಿ ಶಂಕರ್ ರಾವ್ ದತ್ತಿ ಪ್ರಶಸ್ತಿಯು ಕುಂದಾಪುರದ ಉಮಾಪ್ರಕಾಶ್ ಶೆಟ್ಟಿ ಅವರ ‘ತೆರೆಯೋ… ಬಾಗಿಲನು’ ಸಣ್ಣ ಕಥೆಗೆ ಲಭಿಸಿದೆ. ಬೆಂಗಳೂರಿನ ನಯನ ಸಭಾಂಗಣದಲ್ಲಿ ಜು.23ರ ಭಾನುವಾರ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.ಬಾಲ್ಯದಿಂದಲೂ ಪರಿಸರ ಮತ್ತು ಸಾಹಿತ್ಯ ಪ್ರೇಮಿಯಾಗಿರುವ ಉಮಾ ಪ್ರಕಾಶ್ ಶೆಟ್ಟಿ ಅವರು ತಮ್ಮ ತಂದೆ ದಿವಂಗತ ದಾಸರಬೆಟ್ಟು ವೆಂಕಪ್ಪಶೆಟ್ಟಿ ಅವರ ಜೀವಮಾನದ ಸಾಧನೆ ಕುರಿತ ನೈಜ ಕಥೆ ಆಧರಿಸಿ ‘ತೆರೆಯೋ… ಬಾಗಿಲನು’ ಕಥೆ ಬರೆದಿದ್ದಾರೆ. ಕರ್ನಾಟಕ […]
ಬೆಂಗಳೂರು, ಜು.೧೬:”ಹವಾಮಾನ ಇಲಾಖೆಯು ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಠಾತ್ ಪ್ರವಾಹ (ಫ್ಲ್ಯಾಷ್ ಫ್ಲಡ್) ಮುನ್ಸೂಚನೆ ನೀಡಿರುವುದರಿಂದ ಜಿಲ್ಲಾಡಳಿತ ಎಚ್ಚರಿಕೆಯಿಂದ ಇರಬೇಕು’ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಉಡುಪಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಈ ಕುರಿತು ಉಡುಪಿಯ ಜಿಲ್ಲಾಧಿಕಾರಿ ಹಾಗೂ ಇತರ ಹಿರಿಯ ಅಧಿಕಾರಿಗಳಿಗೆ ಸಚಿವರು ಸಂದೇಶ ರವಾನಿಸಿದ್ದಾರೆ. ಉಡುಪಿ, ಉತ್ತರ ಕನ್ನಡ, ಮಹಾರಾಷ್ಟ್ರದ ಸಿಂಧುದುರ್ಗ, ರತ್ನಾಗಿರಿ, ಉತ್ತರ ಹಾಗೂ ದಕ್ಷಿಣ ಗೋವಾ […]

ಶ್ರೀನಿವಾಸಪುರ: ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳು ಪಟ್ಟಣದ ಪುರಸಭೆ ಆವರಣದಲ್ಲಿ ಸ್ಥಾಪಿಸಲಾಗಿರುವ ಎರಡು ದಾಖಲಾತಿ ಕೇಂದ್ರಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪುರಸಭೆ ಕಂದಾಯ ಅಧಿಕಾರಿ ವಿ.ನಾಗರಾಜ್ ಹೇಳಿದರು.ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಭಾಗ್ಯಲಕ್ಷಿ ಯೋಜನೆ ಫಲಾನುಭವಿಗಳಿಗೆ, ಫಲಾನುಭವಿ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಯೋಜನೆ ಲಾಭ ಪಡೆಯುವ ಉದ್ದೇಶದಿಂದ ಎಲ್ಲ ಬ್ರೌಸಿಂಗ್ ಕೇಂದ್ರಗಳ ಮುಂದೆ ಮಹಿಳೆಯರು ಜಾತ್ರೆಯಂತೆ ನೆರೆದಿದ್ದಾರೆ. ದಟ್ಟಣೆ ತಪ್ಪಿಸುವುದಕ್ಕಾಗಿಯೇ ಇಲ್ಲಿ ಎರಡು ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಹೇಳಿದರು.ಫಲಾನುಭವಿಗಳು ತಲಾ ರೂ.12 ನೀಡಿ […]

ಶ್ರೀನಿವಾಸಪುರ: ದಿನಾಂಕ 23.07 2023 ರಂದು ಸಂಜೆ ಶ್ರೀನಿವಾಸಪುರ ನಗರದ ಜಗಜೀವನ್ ರಾಮ್ ಪಾಳ್ಯ ಮುಳ್ಬಾಗಲು ರಸ್ತೆಯ ದರ್ಗಾ ಬಳಿ ದಾಳಿ ಮಾಡಿ ಸಲ್ಮಾನ್ ಎಂಬುವರು TATA ACE tempo ವಾಹನದಲ್ಲಿ 430 gm ಒಣ ಗಾಂಜ ಹಾಗೂ ಮೊಹಮ್ಮದ್ ಹುಸೇನ್ ಸಾಬ್ ಎಂಬುವವರು TVS 50 ದ್ವಿಚಕ್ರವಾಹನದಲ್ಲಿ ಅಕ್ರಮವಾಗಿ 300 gm ಒಣಗಿದ ಗಾಂಜಾ ವನ್ನು ಗಿರಾಕಿಗಳಿಗೆ ಮರಾಟಕ್ಕಾಗಿ ಸಾಗಾಟ ಮಾಡುತ್ತಿದ್ದದ್ದನ್ನು ಪತ್ತೆ ಹಚ್ಚಿ ಆರೋಪಿಗಳ ವಿರುದ್ಧ NDPS ಕಾಯ್ದೆ 1985 ರಡಿ 2 ಪ್ರತ್ಯೇಕ […]

ಕುಂದಾಪುರ: ಇತ್ತೀಚೆಗೆ ಕುಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟೇಶ್ವರ, ಕಾಳಾವರ ಪರಿಸರದಲ್ಲಿ ಮಕ್ಕಳನ್ನು ಅಪಹರಿಸಿಕೊಂಡು ಹೋಗುವ ಪ್ರಯತ್ನ ನಡೆದಿದೆ ಎಂಬ ವದಂತಿ ಹಾಗೂ ಫೋಟೋ ವೀಡಿಯೋಗಳು ಹರಿದಾಡುತ್ತಿದ್ದುಇದು ಸತ್ಯಕ್ಕೆ ದೂರವಾಗಿದೆ ಎಂದು ಕುಂದಾಪುರ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು ತಿಳಿಸಿದ್ದಾರೆ. ಕಾರಿನಲ್ಲಿ ಮಕ್ಕಳ ಅಪಹರಣಕ್ಕೆ ಯತ್ನಿಸಲಾಗಿದೆ ಎಂಬ ವದಂತಿ ಹಬ್ಬುತ್ತಿದ್ದಂತೆಯೇ ತಕ್ಷಣ ಕಾರ್ಯಪ್ರವೃತ್ತರಾದ ಕುಂದಾಪುರ ನಗರ ಠಾಣಾ ಪೊಲೀಸರು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ವಾಹನವನ್ನು ಪತ್ತೆಹಚ್ಚಿ ಸೂಕ್ತ ಕಾನೂನು ಕ್ರಮವನ್ನು ತೆಗೆದುಕೊಂಡಿದ್ದಾರೆ. ಸಾರ್ವಜನಿಕರು ಇಂತಹ ವದಂತಿಗಳಿಗೆ ಕಿವಿಗೊಡದೆ ಏನೇ ಮಾಹಿತಿ […]