
ಶ್ರೀನಿವಾಸಪುರ: ಪಟ್ಟಣದ ಚಿಂತಾಮಣಿ ವೃತ್ತದಲ್ಲಿ ಮಂಗಳವಾರ ರಾತ್ರಿ ಎಸ್ಬಿಐ ಎಟಿಎಂ ಒಡೆದು ರೂ.11 ಲಕ್ಷ ಹಣ ದೋಚಲಾಗಿದೆ.ಎಟಿಎಂನಲ್ಲಿ ಅಳವಾಡಿಸಲಾಗಿದ್ದ ಸಿಸಿ ಕ್ಯಾಮೆರಾಗೆ ಕಪ್ಪು ಪೈಟ್ ಬಳಿದು, ವೆಲ್ಡಿಗ್ ಕಟ್ಟರ್ನಿಂದ ಎಟಿಎಂ ಯಂತ್ರ ಕತ್ತರಿಸಿ ಹಣ ಕಳವು ಮಾಡಲಾಗಿದೆ ಎಂದು ಹೇಳಲಾಗಿದೆ. ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬೆಂಗಳೂರು:ಆ.22: ಕರ್ನಾಟಕದ ಕರಾವಳಿಯ ಏಲ್ಲಾ ಜಿಲ್ಲೆಗಳಲ್ಲೂ ಇಂದಿನಿಂದ ಒಂದು ವಾರದ ತನಕ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾಗೆಯೇ ದಕ್ಷಿಣ ಹಾಗೂ ಉತ್ತರ ಒಳನಾಡಿನಲ್ಲಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ತಿಳಿಸಿದೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ರಾಮನಗರ, ಶಿವಮ್ನಗ್ಗ ಜಿಲ್ಲೆಗಳಲ್ಲಿ ಮಳೆಯಾಗಲಿದೆ.ಮಂಕಿ, ಅಜ್ಜಂಪುರ, ಉಡುಪಿ, ಕಾರ್ಕಳ, […]

ಉಡುಪಿ, ಆ. 19: ಜಿಲ್ಲಾ ಲಯನ್ಸ್ 317C ಇದರ ಸಂಪುಟ ಮತ್ತು ಗವರ್ನರ್ ಪದ ಪ್ರಧಾನ ಸಮಾರಂಭ ಆ.19ರಂದು ಮಧ್ಯಾಾಹ್ನ 3ಕ್ಕೆ ಉಡುಪಿಯ ಅಂಬಾಗಿಲಿನ ಅಮೃತ್ ಗಾರ್ಡನ್ನಲ್ಲಿ ಜರಗಲಿದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಲ. ಡಾ. ನೇರಿ ಕರ್ನೇಲಿಯೊ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಉಡುಪಿ ಬಿಷಪ್ ಡಾ ಜೆರಾಲ್ಡ್ ಐಸಾಕ್ ಲೋಬೊ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಲಿದ್ದಾಾರೆ. ಲಯನ್ಸ್ ಕ್ಲಬ್ನ ಪ್ರಮುಖರಾದ ರಾಮಕೃಷ್ಣ ಮೂರ್ತಿ, ಕೆ. ವಂಶಿಧರ್ ಬಾಬು, ಜಿ. ಶ್ರೀನಿವಾಸ್ ಮೊದಲಾದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾಾರೆ. […]

ನಿಘಂಟು ಬ್ರಹ್ಮ, ಭಾಷಾ ತಜ್ಞ ಕೀರ್ತಿಶೇಷ ಜಿ. ವೆಂಕಟಸುಬ್ಬಯ್ಯ ಅವರ ಸ್ಮರಣಾರ್ಥ, ಅವರ ಹೆಸರಿನಲ್ಲಿ ‘ಕಥೆಕೂಟ’ ಪ್ರಶಸ್ತಿಯೊಂದನ್ನು ಆರಂಭಿಸುತ್ತಿದೆ. ಭಾಷೆಯಲ್ಲಿ ವಿಶಿಷ್ಟ ಪ್ರಯೋಗಗಳನ್ನು ಮಾಡಿದ, ಭಾಷೆಗೆ ಸೃಜನಶೀಲ ಕೊಡುಗೆ ನೀಡಿದ ಮತ್ತು ಭಾಷೆಯ ಸಾಧ್ಯತೆಗಳನ್ನು ವಿಸ್ತರಿಸುವ ಕೆಲಸದಲ್ಲಿ ನಿರತರಾಗಿರುವ ಪ್ರತಿಭಾವಂತರಿಗೆ ಪ್ರತಿವರ್ಷ ಜಿ.ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್ ಪುರಸ್ಕಾರ ನೀಡಿ ಗೌರವಿಸಲು ಕಥೆಕೂಟ ನಿರ್ಧರಿಸಿದೆ. ಈ ಪ್ರಶಸ್ತಿಯು ರೂ.10,000 ನಗದು ಮತ್ತು ಫಲಕವನ್ನು ಒಳಗೊಂಡಿರುತ್ತದೆ. 2023ನೇ ಸಾಲಿನ ಜಿ.ವೆಂಕಟಸುಬ್ಬಯ್ಯ ಭಾಷಾ ಸಮ್ಮಾನ್ ಪುರಸ್ಕಾರವನ್ನು `ಕುಂದಾಪ್ರ ಕನ್ನಡ’ ನಿಘಂಟು ಸಂಪಾದಕ […]

ಉಡುಪಿ: ತನ್ನ ಕಣ್ಣುಗಳನ್ನು ದಾನ ಮಾಡುವ ಮೂಲಕ ಹೋಟೆಲ್ ಸಿಬ್ಬಂದಿಯೊಬ್ಬರು ಸಾವಿನಲ್ಲು ಸಾರ್ಥಕತೆ ಮೆರೆದ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ. ಕಾಪು ತಾಲೂಕು ಶಿರ್ವ ಮಂಚಕಲ್ ನಿವಾಸಿ ಪಾಂಡುರಂಗ ಪ್ರಭು ಕೆಲವು ವರ್ಷಗಳಿಂದ ಬಂಟಕಲ್ ನ ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದರು. ಅಲ್ಪಕಾಲದ ಅನಾರೋಗ್ಯದಿಂದ ಪಾಂಡುರಂಗ ಪ್ರಭು ಕೊನೆಯುಸಿರೆಳೆದಿದ್ದಾರೆ. ಜೀವಿತಾವಧಿಯಲ್ಲೇ ಪ್ರಭು ಅವರು ತನ್ನ ಕಣ್ಣುಗಳನ್ನು ದಾನ ಮಾಡುವುದಾಗಿ ಹೇಳಿಕೊಂಡಿದ್ದರು. ತನ್ನ ನಿರ್ಧಾರದಂತೆ ಕುಟುಂಬಸ್ಥರ ಇಚ್ಛೆಯಂತೆ ಈ ವಿಚಾರವನ್ನು ಉಡುಪಿಯ ಪ್ರಸಾದ್ ನೇತ್ರಾಲಯ ಆಸ್ಪತ್ರೆಗೆ ತಲುಪಿಸಲಾಯ್ತು. ಮೃತ […]

ಬೆಂಗಳೂರು, ಆ 17 ಬಿಯರ್ ಪ್ರಿಯರು ಬಹುಮುಖ್ಯವಾದ ವಿಚಾರ ಇದಾಗಿದ್ದು, ಪ್ರತಿಷ್ಠಿತ ಕಿಂಗ್ ಫಿಶರ್ ಬಿಯರ್ನಲ್ಲಿ ಅಪಾಯಕಾರಿ ಅಂಶ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಮೈಸೂರಿನ ನಂಜನಗೂಡಿನ ಘಟಕದಲ್ಲಿ ತಯಾರಿಸಲಾಗಿದ್ದ ಯುನೈಟೆಡ್ ಬ್ರಿವರೀಸ್ ಕಂಪನಿಯ ಕಿಂಗ್ ಫಿಶರ್ ಬಿಯರ್ನಲ್ಲಿ ಈ ಅಪಾಯಕಾರಿ ಅಂಶ ಪತ್ತೆಯಾಗಿದ್ದು, 25 ಕೋಟಿ ರೂ. ಮೌಲ್ಯದ 78,678 ಬಾಕ್ಸ್ ಬಿಯರ್ ಅನ್ನು ಅಬಕಾರಿ ಪೊಲೀಸರು ಜಪ್ತಿ ಮಾಡಿದ್ದಾರೆ. ಗುಣಮಟ್ಟದ ಬಿಯರ್ ತಯಾರಿಸದ ಈ ಕಂಪನಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಈ ಬಿಯರ್ನಲ್ಲಿ ಸೆಡಿಮೆಂಟ್ ಪತ್ತೆಯಾಗಿತ್ತು. […]

ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ಶೈಕ್ಷಣಿಕ ನೀತಿ ( NEP) ರದ್ದುಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಅವರು ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಸಮಿತಿಯ ಸದಸ್ಯರ ಸಭೆಯನ್ನು ಉದ್ಘಾಟಿಸಿ, ಮಾತನಾಡಿ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ NEP ಮುಂದಿನ ಶೈಕ್ಷಣಿಕ ವರ್ಷದಿಂದ ಸಂಪೂರ್ಣವಾಗಿ ರದ್ದುಗೊಳಿಸಲಾಗುವುದು ಎಂದರು. ಅಗತ್ಯವಾದ ಕೆಲವೊಂದು ಸಿದ್ಧತೆಗಳನ್ನು ಮಾಡಿಕೊಂಡು NEP ರದ್ದುಗೊಳಿಸಬೇಕಾಗಿದೆ. ಅದಕ್ಕೆ ಈ ವರ್ಷ ಸಮಯ ಇರಲಿಲ್ಲ ಚುನಾವಣೆ ಫಲಿತಾಂಶದ ಬಂದು ಸರಕಾರ ರಚನೆ ಆಗುವ ವೇಳೆಗೆ ಶೈಕ್ಷಣಿಕ ವರ್ಷ ಆರಂಭವಾಗಿತ್ತು. […]

ಕುಂದಾಪುರ: 2022 23ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 600ಕ್ಕೂ ಹೆಚ್ಚು ಅಂಕ ಪಡೆದ ಕುಂದಾಪುರ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶ್ರೇಯಶ್ರೀ ಇವರಿಗೆ ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶಣೈ ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಇವರು ಅಂಕದಕಟ್ಟೆ ಉದಯ ಮತ್ತು ಉಮಾ ದಂಪತಿಗಳ ಪುತ್ರಿಯಾಗಿದ್ದಾಳೆ

ಮಂಗಳೂರು, ಆಗಸ್ಟ್ 8, 2023: ಅರ್ಪಿತ ಡಿಸೊಜಾ, ಮಂಗಳೂರಿನ ಸಿಟಿ ಕಾಲೇಜ್ ಆಫ್ ಫಿಜಿಯೊಥೆರಪಿಕಾಲೇಜಿನ ವಿದ್ಯಾರ್ಥಿಯಾಗಿರುವ ಇವರು ಪ್ರತಿಷ್ಠಿತ ರಾಜೀವ್ ಗಾಂಧಿ ವಿಶ್ವವಿದ್ಯಾಲಯ ಪರೀಕ್ಷೆಗಳಲ್ಲಿಮನೋವಿಜ್ಞಾನ ಮತ್ತು ಸಮಾಜಶಾಸ್ತ್ರ ವಿಷಯಗಳಲ್ಲಿ ನಾಲ್ಕನೇ ರ್ಯಾಂಕ್ ಪಡೆದಿದ್ದಾರೆ. ಇವರು ಡೊಡ್ಡ ಮೂಲೆ ಹೌಸ್, ಕಯ್ಯಾರ್, ಕಾಸರಗೋಡು ನಿವಾಸಿಗಳಾದ ಅಲ್ಬರ್ಟ್ ಡಿಸೊಜಾ ಮತ್ತು ಸೆಲೀನ್ ಮಚಾದೊವರ ಮಗಳಾಗಿದ್ದಾರೆ.