ಕುಂದಾಪುರ: ಕೋಟೇಶ್ವರದ ಮನೆಯೊಂದರಲ್ಲಿ ಬಾಗಿಲು ಮುರಿದು ಚಿನ್ನಾಭರಣ ದೋಚಿದ ಪ್ರಕರಣದ ಸಂಬಂಧ ಇಬ್ಬರು ಆರೋಪಿಗಳನ್ನು ಕುಂದಾಪುರ ವೃತ್ತನಿರೀಕ್ಷಕರು, ಉಪನಿರೀಕ್ಷಕರ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ಇದು ಕಳೆದ ಮೂರು ತಿಂಗಳ ಹಿಂದೆ ನಡೆದ ಪ್ರಕರಣವಾಗಿದೆ.ಕಾಸರಗೋಡಿನ ಹೊಸದುರ್ಗ ಪೆರಿಯಾಟಡುಕಂ ನಿವಾಸಿ ಹಾಶಿಮ್ ಎ.ಎಚ್ (42) ಮತ್ತು ಕುಂಬಳೆ ಮಂಜೇಶ್ವರದ ಅಬೂಬಕ್ಕರ್ ಸಿದ್ದಿಕ್ (48) ಹಾಶಿಮ್ ನನ್ನು ಕೇರಳದ ಕಾಸರಗೋಡಿನಲ್ಲಿ ಹಾಗೂ ಇನ್ನೋರ್ವ ಆರೋಪಿ ಅಬೂಬಕ್ಕರ್ ಸಿದ್ದಿಕ್ ನನ್ನು ಮಡಿಕೇರಿಯಲ್ಲಿ ಬಂಧಿಸಲಾಗಿದೆ. ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ಪಡೆದುಕೊಂಡ ತನಿಖಾಧಿಕಾರಿ ವೃತ್ತನಿರೀಕ್ಷಕ […]
ಕೋಲಾರ,ಜ.6: ಸಮಾಜದಲ್ಲಿ ಆಟೋ ಚಾಲಕರು ಶ್ರಮಜೀವಿಗಳು ಅವರ ಸೇವೆಯನ್ನು ಗುರ್ತಿಸುವ ಮೂಲಕ ಗೌರವಿಸುವುದು ಪ್ರತಿಯೊಬ್ಬರ ಅದ್ಯ ಜವಾಬ್ದಾರಿಯಾಗಬೇಕು ಎಂದು ಜೆ.ಡಿ.ಎಸ್ ಅಭ್ಯರ್ಥಿ ಸಿ.ಎಂ.ಆರ್.ಶ್ರೀನಾಥ್ ಹೇಳಿದರು.ನಗರದ ಜಮೀರ್ ಪಾಷ ಅವರ ನಿವಾಸದಲ್ಲಿ ಆಟೋ ಚಾಲಕರಿಗೆ ಲೈಸನ್ಸ್ ವಿತರಿಸಿ ಮಾತನಾಡಿ, ಆಟೋ ಚಾಲಕರು ಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಅವರ ಬಳಿ ಎಲ್ಲಾ ದಾಖಲೆಗಳು ಸಮರ್ಪಕವಾಗಿ ಇರಬೇಕೆಂಬ ಉದ್ದೇಶದಿಂದ ನೆಮ್ಮದಿ ಜೀವನ ನಡೆಸಲು ಅನಕೂಲವಾಗಲೆಂದು ತಮ್ಮ ಕೈಲಾದ ಅಳಿಲು ಸೇವೆ ಮಾಡುತ್ತಿದ್ದೇನೆ ಎಂದರು.ಈ ಬಾರಿ ಜೆ.ಡಿ.ಎಸ್.ಅಧಿಕಾರಕ್ಕೆ ಬರಲಿದ್ದು, ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಲಿದ್ದಾರೆ. ಕೋಲಾರ […]
ಕುಂದಾಪುರ,ಡಿ20: “ಕರ್ನಾಟಕದ ಜನ ಭ್ರಷ್ಟ ಬಿಜೆಪಿ ಸರಕಾರವನ್ನು ಕಿತ್ತೊಗೆಯುವ ಮನಸ್ಸಿನಲ್ಲಿದ್ದಾರೆ ಜನ ಬದಲಾವಣೆ ಬಯಸುತ್ತಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಂಘಟನೆಯನ್ನು ಬಲಗೊಳಿಸಲು ಶ್ರಮವಹಿಸಬೇಕಾಗಿದೆ” ಎಂದು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ಝೋಝಿ ಜಾನ್ ಹೇಳಿದರು. ಅವರು ಇಲ್ಲಿನ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಪಕ್ಷ ಸಂಘಟನೆ ಸಭೆಯಲ್ಲಿ ಮಾತನಾಡಿ ಕಾಂಗ್ರೆಸ್ ಪಕ್ಷದ ಎದುರು ಕಠಿಣ ಸವಾಲುಳಿದ್ದು ಎಲ್ಲವನ್ನೂ ಚುನಾವಣೆಯಲ್ಲಿಯಲ್ಲಿ ಗೆಲುಪು ಸಾಧಿಸುವ ಹೊಣೆಗಾರಿಕೆ ಇದೆ. ರಾಜ್ಯದಲ್ಲಿ ಕಾಂಗ್ರೆಸ್ ಜಯ ನಿಶ್ಚಿತವಾಗಿದೆ […]
ಕೋಡಿ ಹಾಜಿ ಕೆ ಮೊಹಿದ್ದಿನ್ ಬ್ಯಾರಿ ಅನುದಾನಿತ ಪ್ರೌಢಶಾಲೆಯ ಮುಖ್ಯ ಶಿಕ್ಷಕ,ರಾಜ್ಯ ಸಂಪನ್ಮೂಲ ವ್ಯಕ್ತಿ ಕಂದಾವರ ಜಯಶೀಲ ಶೆಟ್ಟಿ ಅವರಿಗೆ ಶಿಕ್ಷಣ ಜ್ಞಾನ ಪತ್ರಿಕೆ ಕೊಡಮಾಡುವ ಪ್ರತಿಷ್ಠಿತ ಜ್ಞಾನ ಸಿಂಧು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಪ್ರಸ್ತುತ ಇವರು ಉಡುಪಿ ಜಿಲ್ಲಾ ಅನುದಾನಿತ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಶಸ್ತಿಯನ್ನು ಡಿ.17ರಂದು ಶನಿವಾರ ಹೊಸದುರ್ಗದಲ್ಲಿ ನಡೆಯವ ಪತ್ರಿಕೆ ರಾಜ್ಯ ಸಮಾವೇಶದಲ್ಲಿ ಸ್ವೀಕರಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕುಂದಾಪುರ ಘಟಕ, ಬಿ. ಡಿ. ಶೆಟ್ಟಿ ಕಾಲೇಜ್ ಮಾಬುಕಳ,Lions club Brahmavara- Barkur, Royal club Brahmavara ಮತ್ತು HDFC ಬೇಂಕ್ ಇವರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಕಾಲೇಜಿನಲ್ಲಿ ಆಯೋಜಿಸಲಾಯಿತು. ಈ ಕಾರ್ಯಕ್ರಮ ದಲ್ಲಿ, ಸಭಾಪತಿ ಎಸ್ ಜಯಕರ ಶೆಟ್ಟಿ, ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಸಮಿತಿಯ ಸದಸ್ಯರಾದ ಸದಾನಂದ ಶೆಟ್ಟಿ ಉಪಸ್ಥಿತ ರಿದ್ದರು. ಅಲ್ಲದೇ ಕಾಲೇಜಿನ ಪ್ರಾಂಶುಪಾಲರು, ಮಾಜಿ ಪ್ರಾಂಶುಪಾಲರು, ಲಯನ್ಸ್ ಅಧ್ಯಕ್ಷರು ಮತ್ತು ಸದಸ್ಯರು, […]
ಬೆಂಗಳೂರು, ಡಿ. 9 : ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಚಂಡಮಾರುತವಾಗಿ ಮಾರ್ಪಾಡಾಗುತ್ತಿರುವ ರಾಜ್ಯದಲ್ಲಿ ಮಳೆ ಆರ್ಭಟ ಶುರುವಾಗಲಿ ಬೆಂಗಳೂರು ಸೇರಿ 4 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಚಂಡಮಾರುತವಾಗಿ ಮಾರ್ಪಾಡಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಮೂರ್ನಾಲ್ಕು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆಗಳಿವೆ.ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ಸೃಷ್ಟಿಯಾಗುತ್ತಿದೆ. ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆ ಇದ್ದು, ರಾಜ್ಯ ಸೇರಿದಂತೆ ತಮಿಳುನಾಡಿನ ಹಲವೆಡೆ ಭಾರಿ ಮಳೆಯಾಗಲಿದೆ ಎಂದು ಮುನ್ಸೂಚನೆ […]
ಕೋಲಾರ:- ರಾಜ್ಯ ಸರ್ಕಾರ 7ನೇ ವೇತನ ಆಯೋಗ ರಚಿಸುವ ಮೂಲಕ ನೌಕರ ಸ್ನೇಹಿ ಕೆಲಸ ಮಾಡಿದೆ, ಇದೀಗ ಆಯೋಗದ ಮುಂದೆ ಮಂಡಿಸಬೇಕಾದ ತಮ್ಮ ಇಲಾಖೆಯ ವಿಷಯ, ಸಮಸ್ಯೆಗಳನ್ನು ಲಿಖಿತ ದಾಖಲೆಗಳೊಂದಿಗೆ ಜಿಲ್ಲಾ ಸಂಘಕ್ಕೆ ಸಲ್ಲಿಸುವಂತೆ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್ಬಾಬು ವಿವಿಧ ಇಲಾಖೆಗಳ ವೃಂದ ಸಂಘಗಳ ಪದಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅವರು, ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ನಿರಂತರ ಪ್ರಯತ್ನದಿಂದ ನಮ್ಮೆಲ್ಲರ ನಿರೀಕ್ಷೆಯ 7ನೇ ವೇತನ ಆಯೋಗವನ್ನು ಸರ್ಕಾರ ರಚಿಸಿ, ಅದು ಕಾರ್ಯನಿರ್ವಹಿಸಲು ಅಗತ್ಯವಾದ […]
ಕೋಲಾರ ಡಿಸೆಂಬರ್ 4 : ಕೆ.ಎಸ್.ನಿಸಾರ್ ಅಹಮ್ಮದ್ ಕನ್ನಡದ ಶ್ರೇಷ್ಠ ಕವಿಗಳಲ್ಲಿ ಒಬ್ಬರು. ಅವರು ಕನ್ನಡವನ್ನು ಬಳಸಿದಷ್ಟು ಚೆನ್ನಾಗಿ ಬೇರಾರೂ ಬಳಸಲಿಲ್ಲ ಎಂದು ಹಿರಿಯ ಕವಿ ಸ.ರಘುನಾಥ ಅಭಿಪ್ರಾಯ ಪಟ್ಟರುಕೋಲಾರದ ಅಲ್-ಅಮೀನ್ ಅಂಜುಮನ್ ಪ್ರೌಢಶಾಲೆಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೋಲಾರ ಜಿಲ್ಲಾ ಘಟಕವು ಕರ್ನಾಟಕ ರಾಜ್ಯ ಶಿಕ್ಷಕರ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ಕಾವ್ಯ ಕಲರವ ಕಾರ್ಯಕ್ರಮದಲ್ಲಿ ಕೆ.ಎಸ್.ನಿಸಾರ್ ಅಹಮ್ಮದ್ ಅವರ ನಿತ್ಯೋತ್ಸವ ಕನ್ನಡ ಕವಿತೆ ಮತ್ತು ಉರ್ದು ಅನುವಾದದ ಕವಿತೆಗಳ ಪುಸ್ತಿಕೆಯನ್ನು […]
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ವತಿಯಿಂದ ಇತ್ತೀಚಿಗೆ ಪಟ್ಟಣದ ಕಸ್ತೂರಿಬಾ ಜ್ಞಾನವಿಕಾಶ ಕೇಂದ್ರದಲ್ಲಿ ಕೇಂದ್ರದ ಸದಸ್ಯರಿಗೆ ನಿಮೂನೀಯಾ ರೋಗದ ಲಕ್ಷಣಗಳ ಬಗ್ಗೆ ಹಾಗೂ ರೋಗ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜ್ಞಾನ ವಿಕಾಶ ಕೇಂದ್ರದ ಸಮನ್ವಯಾಧಿಕಾರಿ ಈರಮ್ಮ ನಾಗನಾಳ ವಿವರಿಸಿದರು. ಸೇವಾಪ್ರತಿನಿದಿ ಉಮಾ ಹಾಗೂ ಸದಸ್ಯರು ಇದ್ದರು